ಸಾಮಾಜಿಕ ಮಾರುಕಟ್ಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪರಿಕಲ್ಪನೆಯು ನಮಗೆ ಏನನ್ನು ತಿಳಿಸುತ್ತದೆ ಎಂದರೆ ವ್ಯಾಪಾರೊದ್ಯಮಿಯು ಸಂಸ್ಥೆಯ ಯಾವುದೇ ವಸ್ತುವನ್ನಾಗಲಿ ಅಥವಾ ಸೇವೆಯನ್ನಗಲಿ ಸಮಾಜಕ್ಕೆ ಮಾರಾಟ ಮಾಡುವಾಗ ಆ ಒಂದು ವಸ್ತು ಅಥವಾ ಸೇವೆ ಗ್ರಾಹಕರ ಅಗತ್ಯಗಳಸು ಸಂಪೂರ್ಣವಾಗಿ ಪೂರೈಸಬೇಕು. ಕಂಪನಿ ಅಥವಾ ಸಂಸ್ಥೆಯ ಅಗತ್ಯಗಳ ಜೊತೆಗೆ ಸಮಾಜದ ಯೋಗಕ್ಷೇಮದ ಕಡೆಗೂ ಈ ಪರಿಕಲ್ಪನೆ ಗಮನಹರಿಸುತ್ತದೆ. ಸಾಮಾಜೀಕ ಮಾರುಕಟ್ಟೆಯನ್ನು ಬೇರೆರೀತಿಯಲ್ಲಿ ವಿವರಿಸುವುದಾದರೆ,ಸಂಸ್ಥೆಯ ಲಾಭವನ್ನು ಮತ್ತು ಸಮಾಜದ ಸೌಖ್ಯವನ್ನು ಸಮನಾಗಿ ತೂಗುವುದೆ ಈ ಪರಿಕಲ್ಪನೆಯ ಅರ್ಥ. ಸಾಮಾಜೀಕ ಮಾರುಕಟ್ಟೆಯು ಸಮಾಜಿಕ ಜವಾಬ್ದಾರಿಯ ಜೊತೆಗೆ ಒಂದು ಸಂಸ್ಥೆ ಗ್ರಾಹಕರಿಗೆ ಹೇಗೆ ವಸ್ತು ಅಥವಾ ಸೇವೆಯನ್ನು ತಲುಪಿಸುವುದು ಎಂಬುದಕ್ಕೂ ಮಹತ್ವ ನೇಡುತ್ತದೆ. ಇದರಿಂದ ಸಮಾಜ ಹಾಗೂ ಗ್ರಾಹಕರಿಬ್ಬರೂ ಸೌಖ್ಯವಾಗಲು ಕಾರಣವಾಗುತ್ತದೆ.

ಸಾಮಾಜಿಕ ಮಾರುಕಟ್ಟೆ

ಸಾಮಾಜಿಕ ಮಾರುಕಟ್ಟೆಗೆ ಉದಾಹರಣೆ[ಬದಲಾಯಿಸಿ]

  1. ಬಾಡಿ ಶಾಪ್ : ಬಾಡಿ ಶಾಪ್ ಎಂಬುದು ಕಾಂತಿವರ್ದಕ ಮುದ್ರೆಗೆ ಹೆಸರುವಾಸಿಯಾಗಿದೆ. ಇದು ಸಾಮಾಜೀಕ ಮಾರುಕಟ್ಟೆಯ ಪರಿಕಲ್ಪನೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಸಂಸ್ಥೆಯು ಈ ವಸ್ತುಗಳನ್ನು ತಯಾರಿಸಲು ಮೂಲತಃ ಗಿಡಮೂಲಿಕೆಗಳನ್ನೆ ಹೆಚ್ಛಾಗಿ ಬಳಸುತ್ತಿದೆ. ಈ ಸಂಸ್ಥೆಯು ಪ್ರಾಣಿಗಳ ಮೇಲೆ ಪ್ರಯೋಗಿಸುವುದಕ್ಕೆ ವಿರುದ್ದವಾಗಿರುತ್ತದೆ, ಮಾನವನ ಹಕ್ಕನ್ನು ಕಾಪಾಡುತ್ತದೆ,ಸಮುದಾಯದ ವ್ಯಾಪಾರಕ್ಕೆ ಸಯಾನ ಹಸ್ತ ನೀಡುತ್ತದೆ. ಈ ಗ್ರಹವನ್ನು ಸಂರಕ್ಷಿಸುವ ಕೆಲಸ ಮಾಡುತ್ತದೆ. ಇದರಿಂದ ಏನಾದರು ತೊಂದರೆಯಾದಲ್ಲಿ ತಮ್ಮ ಚಾರಿಟಿಯಿಂದಲೆ ಅದಕ್ಕೆ ಪರಿಹಾರ ಕಲ್ಪಿಸುತ್ತಾರೆ.
  2. ಯಾವ ಒಂದು ಸಂಸ್ಥೆ ಪುನರುಪಯೋಗಿಸಬಹುದಾದ ವಸ್ತುಗಳಿಗೆ, ಪರಿಸರಕ್ಕೆ, ಸಾವಾಯುವ ವಸ್ತುಗಳಿಗೆ ಹಾಗು ಪರಿಸರ ಪ್ರೇಮಿ ವಸ್ತುವನ್ನು ತಯಾರಿಸುತ್ತದೋ ಆ ಸಂಸ್ಥೆಯು ಈ ಸಾಲಿಗೆ ಸೇರಿದೆ.
  3. ಆಹಾರ ಸಂಸ್ಥೆಯು ಆರೋಗ್ಯಕರ, ಪೌಷ್ಟಿಕಾಂಶವುಳ್ಳ ನೈಸರ್ಗಿಕ ವಸ್ತುಗಳನ್ನು ತಯಾರಿಸುವುದಾದರೆ ಅದು ಸಹ ಸಾಮಾಜಿಕ ಮಾರುಕಟ್ಟೆಯ ಅಡಿಯಲ್ಲಿ ಬರುತ್ತದೆ.

ಮಾರುಕಟ್ಟೆಯ ಪರಿಕಲ್ಪನೆಗಳು ಮತ್ತು ತತ್ವಗಳು

ಸಾಮಾಜಿಕ ಮಾರುಕಟ್ಟೆ[ಬದಲಾಯಿಸಿ]

ಆಂತರಿಕ ಮಾರುಕಟ್ಟೆಯ ಪರಿನಾಮಕಾರಿಯು ಸಾಮಾಜಿಕ ಜವಾಬ್ದಾರಿಯೊಡನೆ ಹೊಂದಿಕೊಳ್ಳಬೇಕು. ಸಂಸ್ಥೆಯು ತನ್ನ ನೈತಿಕ ಹಾಗು ಸಾಮಾಜೀಕ ತೊಡುಗೆಯನ್ನು ಆಗಿಂದ್ದಾಗೆ ಪರಿಶೀಲಿಸಬೇಕು. ಕೆಲವು ವಿಷಯಗಳು ಸಂಸ್ಥೆಯನ್ನು ಒಂದಾಗಿ ಸಾಮಾಜೀಕ ಜವಾಬ್ದಾರಿಯಲ್ಲಿ ತೊಡಗುವಂತೆ ಮಾಡುತ್ತಿದೆ. ಅವು ಗ್ರಾಹಕರ ನಿರೀಕ್ಷೆಯನ್ನಾಗಲಿ ನೌಕರರ ನಿರೀಕ್ಷೆಯನ್ನು ಹೆಚ್ಚಿಸುವುದುದ್ದಲ್ಲಿ, ಸರ್ಕಾರ ಹಾಗು ಕಾನೂನಿನ ನಿಯಮವಾಗಲಿ ಕೊಡುಗೆದಾರರ ಒಂದು ಆಸಕ್ತಿಯಾಗಿರಲಿ ಇದಕ್ಕೆ ಕಾರಣವಾಗಿ ಇರಬಹುದು.ಸಾಮಾಜಿಕ ಮಾರುಕಟ್ಟೆಯ ಪರಿಕಲ್ಪನೆಯು ಒಂದು ಸಂಸ್ಥೆ ಗ್ರಾಹಕನ ಅಗತ್ಯವನ್ನು ಪರಿಣಾಮಕಾರಿಯಾಗಿ ಸಮರ್ಥವಾಗಿ ಪೂರೈಸಬೇಕು. ತಮ್ಮ ಪ್ರತಿ ಸ್ಪರ್ಧಿಯನ್ನು ಮೀರಿ ಈ ಸೇವೆ ಕೈಗೆತ್ತಿಕೊಂಡಾಗ ಮಾತ್ರ ಗ್ರಾಹಕನ ನಿರೀಕ್ಷೆ ಹಾಗು ಸಮಾಜದ ಸೌಖ್ಯ ಎರಡು ಸಮನಾಗಿ ತೂಗುತ್ತದೆ.[೧]

ಪರಿಕಲ್ಪನೆಯು ವ್ಯಾಪಾರೋದ್ಯಮಿಗಳನ್ನು ಸಮಾಜದ ನೈತಿಕ ಮೌಲ್ಯಗಳನ್ನು ಕಟ್ಟಲು ಕರೆಯುತ್ತದೆ. ಸಮಾಜವನ್ನು ಕಟ್ಟುವುದರ ಜೊತೆಗೆ ಸಂಸ್ಥೆ ಲಾಭದ ಕಡೆಗೂ ಇವರ ಗಮನಹರಿಸಬೇಕು. ಎರಡನ್ನು ಸಮನಾಗಿ ಚಮತ್ಕಾರದಿಂದ ಗೆಲ್ಲಬೇಕು. ಗ್ರಾಹಕರ ಅಗಯತ್ಯಳ ಪೂರೈಗೆ ಸಾರ್ವಜನಿಕರ ಹಿತಾಸಕ್ತಿಯನ್ನು ಒಟ್ಟಾಗಿ ಸಾಗಬೇಕು.

ಸಾಮಾಜಿಕ ಮಾರುಕಟ್ಟೆಯ ಪರಿಕಲ್ಪನೆಯು ಪ್ರಬ್ಬುಧ ಮಾರುಕಟ್ಟೆಯ ಪರಿಕಲ್ಪನೆ. ಈ ಒಂದು ವಿಷಯ ಸಂಸ್ಥೆ ಹೇಗೆ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸುತ್ತದೆ. ಸದಾ ಗ್ರಾಹಕರ ಆಗತ್ಯಗಳನ್ನು ಹಾಗು ಸಂಸ್ಥೆಯ ಬೇಕುಬೇಡಗಳನ್ನು ಮತ್ತು ಸಮಾಜದ ಆಸಕ್ತಿತನ್ನು ಗಮನದಲ್ಲಿ ಇಟ್ಟುಕೊಂಡು ವಸ್ತು ಅಥವಾ ಸೇವೆಗಳನ್ನು ಮಾಡಬೇಕು.

ಸಾಮಾಜಿಕ ಕಳಕಳಿಗೆ ಈ ಪರಿಕಲ್ಪನೆ ಹೆಚ್ಚಿನ ಒತ್ತು ನೀಡುತ್ತದೆ, ಅಷ್ಟೆ ಅಲ್ಲದೆ ಸಂಸ್ಥೆಗೆ ಗ್ರಹಕರೊಡನೆ ಹೇಗೆ ಒಳ್ಳೆಯ ಸಂಬಂಧದಲ್ಲಿ ಇರ ಬೇಕು ಎಂದು ಹೇಳಿಕೊಡುತ್ತದೆ. ಇದರಿಂದ ಸಮಾಜಕ್ಕೆ ಮತ್ತು ಗ್ರಾಹಕರ ಯೋಗಕ್ಷೇಮದ ಕಡೆ ಗಮನಹರಿಸಲು ಸಹಾಯಮಾಡುತ್ತದೆ.

ತಮ್ಮ ಸಂಸ್ಥೆಯ ಹೆಸರನ್ನು ಹೆಚ್ಚುಗೊಳಿಸಲು ಈ ರೀತಿಯ ಸಾಮಾಜಿಕ ಕಳಕಳಿಯನ್ನು ಕೈ ಎತ್ತಿದಕೊಂಡು , ಗ್ರಾಹಕರಲ್ಲಿ ಹೂಡಿಕೆದಾರರಲ್ಲಿ, ಹಣಕಾಸಿನ ಸಂಸ್ಥೆಗಳಲ್ಲಿ , ಸಾರ್ವಜನಿಕರಲ್ಲಿ ನೈತಿಕ ಹಾಗು ಸಾಮಾಗಿಕ ಕಳಕಳಿಯನ್ನು ಮಾಡಿಸುತ್ತನ ಸಂಸ್ಥೆಗಳು ತಮ್ಮ ಹೆಸರನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯಲು ಈ ಪರಿಕಲ್ಪನೆ ಸಹಾಯ ಮಾಡುತ್ತದೆ. ಇದರಿಂದ ವ್ಯಾಪರವೂ ಹೆಚ್ಚಾಗುತ್ತದೆ.

ಸಾಮಾಜಿಕ ಮಾರುಕಟ್ಟೆಯ ಸಿದ್ದಾಂತ

ಸಂಸ್ಥೆ ಹಾಗು ಸಾಮಾಜಿಕ ಮಾರುಕಟ್ಟೆ[ಬದಲಾಯಿಸಿ]

ಸಂಸ್ಥೆಯ ಮುಖ್ಯ ಉದ್ದೇಶ ಲಾಭಮಾಡಿಕೊಳ್ಳುವುದು, ಸಾಮಾಜೀಕ ಮಾರುಕಟ್ಟೆಯ ಪರಿಕಲ್ಪನೆಯ ಉದ್ದೇಶ ಗ್ರಾಹಕ ಹಾಗು ಸಮಾಜದ ಬಗ್ಗೆ ಕಾಳಜಿ ವಹಿಸಬೇಕು.ಸಂಸ್ಥೆ ಹಾಗು ಸಾಮಾಜೀಕ ಮಾರುಕಟ್ಟೆಯ ಉದ್ದೇಶ ಈ ಎರೆಡರ ಮದ್ಯೆ ಇರುವ ಅಂತರವನ್ನು ಒಂದು ಮಾಡಲ್ಲು ಸೆತುವೆ ಕಟ್ಟುತ್ತದೆ. ಅದು ಯಾವ ರೀತಿ ಎಂದರೆ :

  • ಸಂಸ್ಥೆಯ ಬ್ರಾಂಡ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು.
  • ಬ್ರಾಂಡ್ ದರ್ಜೆಯನ್ನು ಹೆಚ್ಚಿಸುವುದು.
  • ಬ್ರಾಂಡಿನ ವಿಶ್ವಾಸಾರ್ಹತೆ, ನಂಬಿಕೆಯನ್ನು ಸ್ಥಾಪಿಸುವುದು.
  • ಬ್ರಾಂಡ್ ಬಗ್ಗೆ ವಿಚಾರವನ್ನು ಎಲ್ಲಾ ಕಡೆ ಹರಿಸುವುದು.
  • ಬ್ರಾಂಡ್ ಕಮ್ಯುನಿಟಿಯ ಬಗ್ಗೆ ಜ್ಞಾನ ಮೂಡಿಸುವುದು.
  • ಬ್ರಾಂಡ್ ಗೆ ಅವಲಂಬಿತರಾಗುವಂತೆ ಮಾಡುವುದು.[೨]

ಆದರೆ ಕಷ್ಟಕರ ವಿಷಯವೆಂದರೆ ಈ ಮೇಲಿನ ರೀತಿ ಮಾಡಬೇಕಾದರೆ ಬಹಳ ಸಾಧನೆ ಮಾಡಬೇಕು ಆಗ ಮಾತ್ರ ಎಲ್ಲಾ ಸಾಧಿಸಲು ಸಾಧ್ಯ. ಹೀಗೆ ಮಾಡಲು ಹಲವು ಆಯ್ಕೆಗಳಿವೆ.

ಒಂದು,ಸಂಸ್ಥೆಯ ಈ ಕೆಳಗಿನ ಮೂರು ವಿಧಗಳನ್ನು ತನ್ನ ಬ್ರಾಂಡ್ ಬೆಳವಣಿಗೆಗೆ ಅಳವಡಿಸಿಲೊಳ್ಳೂತ್ತದೆ. ಅವು :

  • ತನ್ನ ಸ್ವಂತ ಬ್ರಾಂಡಿಗೆ ತಾನೆ ಪ್ರಚಾರ ಮಾಡುವುದು
  • ಇತರ ಬ್ರಾಂಡಿನ ಜೊತೆ ಕೈ ಜೊಡಿಸುವುದು
  • ಹಲವಾರು ಬ್ರಾಂಡಿನ ಜೊತೆ ಪ್ರಚಾರ ಮಾಡುವುದು

ಸಂಸ್ಥೆಯ ಸಾಮಾಜಿಕ ಜವಾಬ್ದಾರಿ[ಬದಲಾಯಿಸಿ]

  1. ಕಾನೂನಿನ ನಡವಳಿಗೆ : ಯಾವುದೇ ಸಾಮಾಜಿಕ ಜವಾಬ್ದಾರಿಯನ್ನು ಸಂಸ್ಥೆ ಕೈಗೆತ್ತಿಕೊಂಡಿದೆ ಎಂದರೆ ಅದು ಕಾನೂನು ಬದ್ಧವಾಗಿರಬೇಕು. ಸಂಸ್ಥೆಯ ಉದ್ಯೋಗಿಗಳು, ಸಂಸ್ಥೆ ಎಲ್ಲವು ಕಾನೂನು ಪ್ರಕಾರವಾಗಿಯೆ ಮಾಡಬೇಕು.
  2. ನೈತಿಕ ಮೌಲ್ಯ : ಸಂಸ್ಥೆಯು ನೈತಿಕ ಮೌಲ್ಯವನ್ನು ಅಳವಡಿಸಕೊಳ್ಳಬೇಕು. ತನ್ನ ಜನರನ್ನು ನೈತಿಕ, ನ್ಯಾಯಬದ್ಧವಾಗಿ ಸಾಮಾಜೀಕ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳುವಂತೆ ಸಂಸ್ಥೆ ನೋಡಿಕೊಳ್ಳಬೇಕು.
  3. ಸಾಮಾಜಿಕ ಜವಾಬ್ದಾರಿ : ಎಲ್ಲಾ ಸಂಸ್ಥೆಗಳಲ್ಲು ಸಾಮಾಜೀಕ ಆತ್ಮಸಕ್ತಿ ಇರಬೇಕು. ಗ್ರಾಹಕರನ್ನು ಹೂಡಿಕೆದಾರರ ಮನವೊಲಿಸಲು ಇದು ಸಹಾಯ ಮಾಡುತ್ತದೆ. ಈ ಮೇಲೆ ಹೇಳಿರುವ ಮೌಲ್ಯಗಳನ್ನು ಈಡೆರಿಸಿದ್ದೇ ಆದಲ್ಲಿ ಸುಲಭವಾಗಿ ತನ್ನ ವಸ್ತು ಅಥವಾ ಸೇವೆಯನ್ನು ಗ್ರಾಹಕರಿಗೆ ಮಾರಾಟ ಮಾಡಬಹುದು.

ಸಾಮಾಜಿಕ ಮಾರುಕಟ್ಟೆ[ಬದಲಾಯಿಸಿ]

ಇದು ಲಾಭಹರಿತ, ಅಥವಾ ಸರ್ಕಾರೇತರ ಸೇವೆಗಳು, ಇದನ್ನು ಸಂಸ್ಥೆಗಳು ತೆಂಗೆ ಕಡಿತಕ್ಕೊಸ್ಕರ ಮಾಡುತ್ತದೆ. ಈ ರೀತಿ ಮಾಡುವುದರಿಂದ ಸಮಾಜಕ್ಕೂ ಲಾಭ, ಸಂಸ್ಥೆಗೂ ಲಾಭ.[೩]

ಇದಕ್ಕೆ ಉದಾಹರಣೆ ಎಂದರೆ ಅರಿವಿನ ಕಾರ್ಯಚರಣೆ -

  • ನಾನ ವಿಧನ ಆಹಾರದಲ್ಲಿರುವ ಪೌಷ್ಟಿಕಾಂಶದ ಬಗ್ಗೆ ಅರಿವು ಮಾಡಿಸುವುದು.
  • ಆ ಆಹರದ ಸೇವೆನೆಯಿಂದ ಆಗುವ ಲಾಭಗಳನ್ನು ತಿಳಿಸುವುದು.

ಕ್ರಿಯ ಕಾರ್ಯಚರಣೆ -

  • ಪ್ರತಿರಕ್ಷಣೆಯ ಬಗ್ಗೆ ಜನರನ್ನು ಸೆಳೆಯುವುದು
  • ಮತ ಚಳಾಯಿಸುವುದರ ಬಗ್ಗೆ ಜನರಲ್ಲಿ ಅರಿವು ಮಾಡಿಸುವುದು
  • ರಕ್ತ ಧಾನಕ್ಕೆ ಜನರನ್ನು ಪ್ರೋತ್ಸಾಹಿಸುವುದು
  • ಸ್ಥಳಗಳ ರಕ್ಷಣೆಯ ಬಗ್ಗೆ ಸ್ತ್ರೀಯರಲ್ಲಿ ಕಾಳಜಿ ಮಾಡಿಸುವುದು

ವೈಯುಕ್ತಿಯ ಕಾರ್ಯಚರಣೆ -

  • ಧೂಮ್ರಪಾನದ ನಿಷೇದದ ಬಗ್ಗೆ ಅರಿವು ಮಾಡಿಸುವುದು
  • ಕುಡಿತದಿಂದ,ಧೂಮ್ರಪಾನದಿಂದ ಆರೋಗ್ಯಕ್ಕೆ ಆಗುವ ಅನಾಹುತಗಳನ್ನು ತಿಳಿಸುವುದು
  • ಹಿಚ್ಚಿನ ಕುಡಿತವನ್ನು ನಿಷೇಧಿಸಬೇಕು ಎಂಬುದರ ಬಗ್ಗೆ ಅರಿವು ಮಾಡಿಸುವುದು

ಮೌಲ್ಯ ಕಾರ್ಯಾಚರಣೆ -

  • ಗಾರ್ಭಪಾತದಿ ಅನಾಹುತಗಳನ್ನು ಮಹಿಳೆಯರಿಗೆ ತಿಳಿಸಬೇಕು
  • ಧರ್ಮಾಂಧದ ಆಶಯಗಳನ್ನು ಬದಲಾಯಿಸಬೇಕು ಎಂಬುದರ ಬಗ್ಗೆ ಅರಿವು

ಸಮಾಜದ ಕಣ್ಣು ಸಂಸ್ಥೆಯ ಕಡೆ ಸಳೆಯಲು ಈ ಕೆಳಗಿನ ರೀತಿ ಮಾಡಬೇಕು -

  • ಸಂಸ್ಥೆಗೆ ಬೇಕಾದ ಗ್ರಾಹಕರನ್ನು ಮಾತ್ರ ಗುರಿ ಮಾಡಬೇಕು
  • ಅವರಿಂದ ತಮ್ಮ ಸೇವೆಯ ಬಗ್ಗೆ ವಿತ್ತರವನ್ನು ಪಡೆದುಕೊಳ್ಳಬೇಕು
  • ಸೂಕ್ಷ್ಮವಾಗಿ ಸಾಮಾನ್ಯವಾಗಿ ತಮ್ಮ ಬ್ರಾಂಡನ್ನು ಉತ್ತೆಚಿಸಬೇಕು
  • ಅತ್ಯವಶ್ಯಗಳ ಬಗ್ಗೆ ಹೊತ್ತಿ ಹೇಳಬೇಕು
  • ಮಾಧ್ಯಮಗಳನ್ನು ತನ್ನ ಕಡೆಗೆ ಸೆಳೆಯಬೇಕು

ಸಾಮಾಜಿಕ ಮಾರುಕಟ್ಟೆಯ ಅಗತ್ಯಗಳು[ಬದಲಾಯಿಸಿ]

  • ಬೇರೆ ಎಲ್ಲ ಪರಿಕಲ್ಪನೆಗಳ ಹಾಗೆ ಸಾಮಾಜೀಕ ಮಾರುಕಟ್ಟೆಯ ಪರಿಕಲ್ಪನೆಯೂ ಸಂಸ್ಥೆಗೆ ಅಗತ್ಯ. ಕಾರಣ ತನ್ನ ಗುರಿಯನ್ನು ಸಲಭವಾಗಿ ತಲುಪಬಹುದು
  • ಈ ಪರಿಕಲ್ಪನೆಯು ಸಂಸ್ಥೆಯ ಲಾಭಕ್ಕಾಗಿ ಉಪತೋಗಿಸಿಕೊಳ್ಳಬಹುದು
  • ಸಮಾಜದ ಒಳಿತಿಗಾಗಿ ಇದು ಕೆಲಸ ಮಾಡುತ್ತದೆ.

ಉದಾ - ಕಾರಿನಲ್ಲಿ ಹೋಗುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳಲು ಹೇಳುವುದು, ಧೂಮಪಾನ ಮಾದಬಾರದಂದು ಹೇಳುವುದು ಇತ್ಯದಿ

  • ಸಂಸ್ಥೆ ಈ ಕಾರ್ಯ ಕೈ ಎತ್ತಿಕೊಂಡರೆ ಜನರು ಬದಲಾಗುತ್ತಾರೆ
  • ಜನರು ಕೆಟ್ಟ ಅಭಿಪ್ರಾಯವನ್ನು ಸರಿಪಡಿಸಲು ಇದು ಒಳ್ಳೆಯ ವೇದಿಕೆ

ಸಾಮಾಜಿಕ ಮಾರುಕಟ್ಟೆಯ ಪರಿಕಲ್ಪನೆಯ ಪ್ರಕ್ರಿಯೆಯಲ್ಲಿ ೫ ಹಂತಗಳಿವೆ. ಅವು -

  • ಸಂಶೋಧನೆ
  • ಯೋಜನೆ
  • ವಿನ್ಯಾಸ
  • ಕಾಯಿದೆ
  • ಮೌಲ್ಯಪಾಪನ

ಸಾಮಾಜಿಕ ಮಾರುಕಟ್ಟೆಯು ಬ್ರಾಂದಿನ ನಿಷ್ಟೆ, ಹಾಗು ಗ್ರಾಹಕರ ಸೆಳೆತಕ್ಕೆ ಸಹಾಯ ಮಾಡುತ್ತರೆ. ಅದು -

  • ಗ್ರಾಹಕರೊಂದಿಗೆ ಸ್ಂಪರ್ಕಹೊಂದಿರುವುದು
  • ಮಾರುಕಟ್ಟೆಯಲ್ಲಿ ತಾನು ಸ್ಥಾನಿಕರಿಸುವುದು
  • ಬ್ರಾಂಡನ್ನು ಉತ್ತೇಚಿಸುವುದು
  • ವ್ಯಾಪಾರ ಹೆಚ್ಚಿಸುವುದು

ಸಾಮಾಜಿಕ ಮಾರುಕಟ್ಟೆಯ ಉದ್ದೇಶಗಳು[ಬದಲಾಯಿಸಿ]

  • ಸಾರ್ವಜನಿಕರ ಹಿತಾಸಕ್ತಿಗೆ ಕೆಲೆಸಮಾಡುವುದು
  • ಸಂಸ್ಥೆ ಗುರಿ ತಲುಪುವುದು
  • ಹೆಚ್ಚಿನ ಲಾಭದ ಜೊತೆಗೆ ಸಾಮಾಜದ ಲಾಭವನ್ನು ನೋಡಿಕೊಳ್ಳುವುದು
  • ದುಡ್ಡಿನ ಸುರಿಮಳೆ ಸುರಿಸುವುದಲ್ಲದೆ ಅದಕ್ಕೆ ಬರುವ ಲಾಭ ನೋಡುವುದು
  • ಮಾಧ್ಯಮಗಳ ಅನಿಸಿಕೆಯನ್ನು ಕೇಳಿ, ಜನರಲ್ಲಿ ಕಾಳಜಿ ಮಾಡಿಸುವುದು
  • ಸತ್ಯದ ಭಾಷೆ ನೀಡಿ ಸಂಸ್ಥೆಯ ಹೆಸರು ಕಾಪಾಡಿಕೊಳ್ಳುವುದು
  • ಆರೋಗ್ಯಕರ ಸಮಾಜಕ್ಕೆ ದುಡಿಯುವುದು.

ಹೊರಗಿನ ಕೊಂಡಿಗಳು[ಬದಲಾಯಿಸಿ]

  1. ಸಾಮಾಜಿಕ ಮಾರುಕಟ್ಟೆಯ ವಿವರ
  2. ಸಾಮಾಜಿಕ ಮಾರುಕಟ್ಟೆಯ ಉದಾಹರಣೆಗಳು

=='maru kttegalu savali ==

  1. "ಆರ್ಕೈವ್ ನಕಲು". Archived from the original on 2016-01-19. Retrieved 2016-01-13.
  2. http://www.mbaskool.com/business-concepts/marketing-and-strategy-terms/8699-societal-marketing-concept.html
  3. http://marketingsocial.esadeblogs.com/tag/societal-marketing/