ಸದಸ್ಯ:PRAMODA M12/sandbox
ಗೋಚರ
ಭಟ್ಟಾಕಳಂಕ:--- ಪ್ರಾಚೀನ ಕನ್ನಡ ವಯ್ಯಾಕರಣರಲ್ಲಿ ಕೊನೆಯವನು ಭಟ್ಟಾಕಳಂಕ. ಇವನ ಕೃತಿ ಕರ್ನಾಟಕ ಶಬ್ದಾನುಶಾಸನ. ಇದು ಸಂಸ್ಕೃತ ಭಾಷೆಯಲ್ಲಿ ಕನ್ನಡ ವ್ಯಾಕರಣವನ್ನು ಹೇಳುವ ಕೃತಿ. ಕನ್ನಡ ವ್ಯಾಕರಣಗಳಲ್ಲೇ ಬೃಹತ್ತಾದುದು. ಈ ಕೃತಿ ೧೭ನೇ ಶತಮಾನದಲ್ಲಿ ರಚಿತವಾಗಿದೆ. ಇವನ ಕಾಲ ನಿರ್ಧಾರ ತೊಡಕಾಗಿಲ್ಲ. ಶಕ ೧೫೨೬ರ ಶೋಭಕೃತ್ ಸಂವತ್ಸರ ಎಂದರೆ ಈ ೧೬೦೪ರಲ್ಲಿ ಈ ಕೃತಿ ರಚಿತವಾಗಿದೆ. ಕೃತಿಯಿಂದ ಇವನ ವ್ಯಕ್ತಿ ಚರಿತ್ರೆ ಹೆಚ್ಚಾಗಿ ತಿಳಿದಿಲ್ಲ. ಇವನನು ಒಬ್ಬ ಜೈನಮುನಿ ಎನ್ನುವುದು ಸ್ಪಷ್ಟ. ಇವನ ಗುರುವಿನ ಹೆಸರು ಅಕಳಂಕ. ಅವನು ಸಂಗೀತಪುರ ಅಥವಾ ಹಾಡುವಳ್ಳಿಯಲ್ಲಿ ಇದ್ದ ಕೊಂಡಕೊಂಡ ಅನ್ವಯಕ್ಕೆ ಸೇರಿದ ಮಹಾ ವಿದ್ವಾಂಸ. ಅವನಿಗೆ ‘ರಾಜಗುರು’, ‘ವಿದ್ವಜ್ಜನ ಚಕ್ರವರ್ತಿ’ ‘ವಾದೀಶ್ವರ’ ಎಂಬ ಬಿರುದುಗಳಿದ್ದವು.ಇಂತಹ ಅಪ್ರತಿಮ ಪಂಡಿತನ ಬಳಿ ಭಟ್ಟಾಕಳಂಕ ಶಾಸ್ತ್ರಾಭ್ಯಾಸ ಮಾಡಿದನು. ಅವನ ಗುರು ವಿಜಯನಗರದ ಪೆನುಗೊಂಡೆಯ ವೆಂಕಟಪತಿರಾಯನ ಕಾಲದಲ್ಲಿ ಇದ್ದನು. (೧೫೮೬-೧೬೧೫)ಭಟ್ಟಾಕಳಂಕ ಈ ಗುರುವಿಗೆ ಒಂದು ನಿಸಿದಿಯನ್ನು ಹಾಕಿಸಿದ ಎನ್ನುವುದು ಬೀಳಗಿ ಶಾಸನದಿಂದ ತಿಳಿಯುತ್ತದೆ. ಗುರುವಿನ ಬಗೆಗೆ ಇಷ್ಟು ವಿವರ ಹೇಳುವ ಅಕಳಂಕ ತನ್ನ ಬಗ್ಗೆ ಹೇಳಿಕೊಂದಿರುವ ವಿವರಗಳು ತುಂಬಾ ಕಡಿಮೆ. ಶಬ್ದಾನುಶಾಸನವನ್ನು ಗಮನಿಸಿದರೆ ಇವನೊಬ್ಬ ಅಪ್ರತಿಮ ವಿದ್ವಾಂಸ ಎಂಬುದು ಸ್ಪಷ್ಟವಾಗುತ್ತದೆ. ಇವನ ತಂದೆ, ತಾಯಿ, ಕಟುಂಬದ ವಿಷಯ ತಿಳಿದಿಲ್ಲ. ಇವನು ಕೂಡ ಹಾಡುವಳ್ಳಿಯಲ್ಲಿ ಇದ್ದ ಎಂದು ತಿಳಿಯುತ್ತದೆ.
[ಬದಲಾಯಿಸಿ]ಕರ್ಣಾಟಕ ಶಬ್ದಾನುಶಾಸನ
[ಬದಲಾಯಿಸಿ]ಕರ್ಣಾಟಕ ಶಬ್ದಾನುಶಾಸನ ಒಂದು ಬೃಹತ್ ಕೃತಿ. ಇದರಲ್ಲಿ ೫೯೨ ಸೂತ್ರಗಳಿವೆ. ಕ