ಸದಸ್ಯ:Harsha 12345 salian/sandbox
ಭೂಕಂಪ (ಇದಕ್ಕೆ ಭೂಮಿಯ ಅದಿರಾಟ ಅಥವಾ ಹೊಯ್ದಾಡುವಿಕೆ ಎಂದೂ ಹೆಸರಿದೆ) ಎಂಬುದು ಭೂಮಿಯ ಹೊರಪದರದಲ್ಲಿ ಶಕ್ತಿಯು ಇದ್ದಕ್ಕಿದ್ದಂತೆ ಬಿಡುಗಡೆಯಾದಾಗ ಅದು ಉಂಟುಮಾಡುವ ಭೂಕಂಪದ ತರಂಗಗಳ ಪರಿಣಾಮ ಎನ್ನಬಹುದು. ಭೂಕಂಪಗಳನ್ನು ಭೂಕಂಪಮಾಪಕದ ಸಹಾಯದಿಂದ ದಾಖಲಿಸಲಾಗುತ್ತದೆ. ಇದಕ್ಕೆ ಭೂಕಂಪಲೇಖಿ (ಸೈಸ್ಮಗ್ರಾಫ್) ಎಂಬ ಹೆಸರೂ ಇದೆ. ಭೂಕಂಪವೊಂದರ ಕ್ಷಣದ ಪ್ರಮಾಣವನ್ನು ಅಥವಾ ಸಂಬಂಧಿತ ಮತ್ತು ಬಹುತೇಕ ಬಳಕೆಯಲ್ಲಿಲ್ಲದ ೩ರಷ್ಟು ಪ್ರಮಾಣದೊಂದಿಗಿನ ರಿಕ್ಟರ್ ಪ್ರಮಾಣವನ್ನು, ಅಥವಾ ಬಹುತೇಕ ಗ್ರಹಿಸಲು ಅಸಾಧ್ಯವಾದ ಕೆಳಮಟ್ಟದ ಭೂಕಂಪಗಳನ್ನು ಮತ್ತು ವಿಶಾಲವ್ಯಾಪ್ತಿಯಲ್ಲಿ ಗಂಭೀರ ಸ್ವರೂಪದ ಹಾನಿಯನ್ನುಂಟುಮಾಡುವ ೭ರಷ್ಟು ಪ್ರಮಾಣದ ಭೂಕಂಪವನ್ನು ಪ್ರಚಲಿತ ವಿಧಾನದಂತೆ ಅಥವಾ ರೂಢಿಯಂತೆ ದಾಖಲಿಸಲಾಗುತ್ತದೆ. ಮಾರ್ಪಡಿಸಲಾಗಿರುವ ಮೆರ್ಕ್ಯಾಲಿ ಮಾಪಕದಲ್ಲಿ ಅಲುಗಾಟದ ತೀವ್ರತೆಯನ್ನು ಅಳೆಯಲಾಗುತ್ತದೆ. ಭೂಮಿಯ ಮೇಲ್ಮೈಯಲ್ಲಿ ಅಲುಗಾಟವನ್ನು ಉಂಟುಮಾಡುವ ಹಾಗೂ ಕೆಲವೊಮ್ಮೆ ನೆಲವನ್ನು ಸ್ಥಾನಪಲ್ಲಟಗೊಳಿಸುವ ಮೂಲಕ ಭೂಕಂಪಗಳು ಸ್ವತಃ ಸ್ಪಷ್ಟವಾಗಿ ಗೋಚರಿಸುತ್ತವೆ. ಕಡಲತೀರದಾಚೆಗೆ ಭೂಕಂಪದ ಒಂದು ದೊಡ್ಡ ಅಧಿಕೇಂದ್ರವು ಸ್ಥಿತವಾಗಿದ್ದಾಗ, ಕೆಲವೊಮ್ಮೆ ಸಾಕಷ್ಟು ಸ್ಥಾನಪಲ್ಲಟಕ್ಕೆ ಈಡಾಗುವ ಸಮುದ್ರತಳದ ಭೂಮಿಯು ಸುನಾಮಿಯೊಂದನ್ನು ಉಂಟುಮಾಡುತ್ತದೆ. ಭೂಕಂಪಗಳ ಸಮಯದಲ್ಲಿ ಕಂಡುಬರುವ ಅಲುಗಾಟಗಳು, ಭೂಕುಸಿತಗಳನ್ನು ಹಾಗೂ ಕೆಲವೊಮ್ಮೆ ಜ್ವಾಲಾಮುಖಿಯಂತಹ ಚಟುವಟಿಕೆಯನ್ನೂ ಪ್ರಚೋದಿಸಬಲ್ಲವು. ಅದರದೇ ಆದ ಅತ್ಯಂತ ಸಾರ್ವತ್ರಿಕ ಅರ್ಥದಲ್ಲಿ ಹೇಳುವುದಾದರೆ, ಭೂಕಂಪದ ಅಲೆಗಳನ್ನು ಹುಟ್ಟುಹಾಕುವ- ಅದು ಒಂದು ನೈಸರ್ಗಿಕ ವಿದ್ಯಮಾನವಿರಬಹುದು ಅಥವಾ ಮನುಷ್ಯರಿಂದ ಉಂಟಾದ ಒಂದು ಘಟನೆಯೇ ಆಗಿರಬಹುದು- ಯಾವುದೇ ಭೂಕಂಪ ಘಟನೆಯನ್ನು ವಿವರಿಸಲು ಭೂಕಂಪ ಎಂಬ ಪದವನ್ನು ಬಳಸಲಾಗುತ್ತದೆ. ಭೂಕಂಪಗಳು ಬಹುತೇಕವಾಗಿ ಭೂವೈಜ್ಞಾನಿಕ ದೋಷಗಳ (ಭೂಸ್ತರದ ಅಖಂಡತೆಗೆ ಉಂಟಾಗಿರುವ ಊನ) ಛಿದ್ರವಾಗುವಿಕೆಯಿಂದಾಗಿ ಉಂಟಾಗುತ್ತವೆಯಾದರೂ, ಜ್ವಾಲಾಮುಖಿಯ ಚಟುವಟಿಕೆ, ಭೂಕುಸಿತಗಳು, ಗಣಿಯಲ್ಲಿನ ಸ್ಫೋಟಗಳು ಹಾಗೂ ಪರಮಾಣು ಪರೀಕ್ಷಾ ಪ್ರಯೋಗಗಳಿಂದಲೂ ಅವು ಸಂಭವಿಸಲು ಸಾಧ್ಯವಿದೆ. ಭೂಕಂಪವೊಂದರ ಆರಂಭಿಕ ಛಿದ್ರವಾಗುವಿಕೆಯ ಬಿಂದುವನ್ನು ಅದರ ಕೇಂದ್ರಸ್ಥಾನ ಅಥವಾ ಅಡಿಯ ಕೇಂದ್ರ ಎಂದು ಕರೆಯಲಾಗುತ್ತದೆ. ಅಡಿಯ ಕೇಂದ್ರಕ್ಕೆ ನೇರವಾಗಿ ಮೇಲ್ಭಾಗದಲ್ಲಿರುವ, ನೆಲದ ಮಟ್ಟದಲ್ಲಿನ ಬಿಂದುವನ್ನು ಅಧಿಕೇಂದ್ರ ಎಂದು ಕರೆಯಲಾಗುತ್ತದೆ
ಭೂಕಂಪ ದೋಷದ ವಿಧಗಳು
ಭೂಕಂಪವನ್ನು ಉಂಟುಮಾಡಬಹುದಾದ ಮುಖ್ಯ ದೋಷಗಳಲ್ಲಿ ಮೂರು ವಿಧಗಳಿವೆ. ಅವುಗಳೆಂದರೆ, ಸಾಮಾನ್ಯ, ಹಿಮ್ಮುಖ (ನೂಕುವಿಕೆ) ಮತ್ತು ಹೊಡೆಯುವ-ಜಾರುವ ವಿಧಗಳು. ಸಾಮಾನ್ಯ ಮತ್ತು ಹಿಮ್ಮುಖ ದೋಷಗಾರಿಕೆಗಳು ಇಳುಕಲು-ಜಾರಿಕೆಯ ಉದಾಹರಣೆಯಾಗಿದ್ದು, ದೋಷದಾದ್ಯಂತದ ಜರುಗುವಿಕೆಯು ಇಳುಕಲಿನ ದಿಕ್ಕಿನಲ್ಲಿ ಇರುತ್ತದೆ ಮತ್ತು ಅವುಗಳ ಮೇಲಿನ ಚಲನೆಯು ಒಂದು ಲಂಬ ಘಟಕವನ್ನು ಒಳಗೊಂಡಿರುತ್ತದೆ. ಬೇರೆದಿಕ್ಕಿಗೆ ತಿರುಗುವ ಗಡಿಯೊಂದರಂತೆ ಹೊರಪದರವು ವಿಸ್ತರಿಸಲ್ಪಟ್ಟಿರುವ ಅಥವಾ ಚಾಚಿರುವ ಪ್ರದೇಶಗಳಲ್ಲಿ ಸಾಮಾನ್ಯ ದೋಷಗಳು ಮುಖ್ಯವಾಗಿ ಸಂಭವಿಸುತ್ತವೆ. ಒಮ್ಮುಖವಾಗಿರುವ ಗಡಿಯೊಂದರಲ್ಲಿ ಇರುವಂತೆ ಹೊರಪದರವು ಮೊಟುಕಾಗಿರುವ ಪ್ರದೇಶಗಳಲ್ಲಿ ಹಿಮ್ಮುಖ ದೋಷಗಳು ಸಂಭವಿಸುತ್ತವೆ. ಹೊಡೆಯುವ-ಜಾರುವ ದೋಷಗಳು ಕಡಿದಾದ ರಚನೆಗಳಾಗಿದ್ದು, ದೋಷದ ಎರಡು ಭಾಗಗಳು ಪರಸ್ಪರ ಅಡ್ಡಡ್ಡಲಾಗಿ ಅಥವಾ ಸಮತಲದಲ್ಲಿ ಒಂದರ ಪಕ್ಕ ಒಂದು ಹಾದುಹೋಗುವಂತೆ ಇರುತ್ತವೆ. ರೂಪಾಂತರ ಸ್ವರೂಪದ ಗಡಿಗಳು ಹೊಡೆಯುವ-ಜಾರುವ ದೋಷದ ಒಂದು ನಿರ್ದಿಷ್ಟ ವಿಧವಾಗಿದೆ. ಅನೇಕ ಭೂಕಂಪಗಳು ದೋಷಗಳ ಮೇಲಿನ ಚಲನೆಯಿಂದಾಗಿ ಸಂಭವಿಸುತ್ತವೆ. ಈ ಚಲನೆಗಳು ಇಳುಕಲು-ಜಾರಿಕೆ ಮತ್ತು ಹೊಡೆಯುವ-ಜಾರಿಕೆಗಳೆರಡರ ಘಟಕಗಳನ್ನು ಹೊಂದಿರುತ್ತವೆ. ಇದಕ್ಕೆ ವಾಲಿದ ಅಥವಾ ಓರೆಯಾದ ಜಾರಿಕೆ ಎಂದು ಹೆಸರು.