ಸದಸ್ಯ:Shivaprasad 1998/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                      ಸೂಕ್ಷ್ಮ ಜೀವ ವಿಜ್ಞಾನ


ಸೂಕ್ಷ್ಮ ಜೀವವಿಜ್ಞಾನ (ವ್ಯುತ್ಪತ್ತಿ: ಗ್ರೀಕ್‌ನ μῑκρος, ಮೈಕ್ರೋಸ್‌ , "ಚಿಕ್ಕ"; βίος, ಬಯಾಸ್‌ , "ಜೀವ"; ಮತ್ತು -λογία, -ಲಾಜಿಯಾ ) ಎಂಬುದು ಸೂಕ್ಷ್ಮಜೀವಿಗಳ ಅಧ್ಯಯನವಾಗಿದ್ದು, ಈ ಸೂಕ್ಷ್ಮಜೀವಿಗಳು ಏಕಕೋಶೀಯ ಅಥವಾ ಜೀವಕೋಶ-ಗುರ್ಚಛದ ಅತಿಸೂಕ್ಷ್ಮ ಜೀವಿಗಳಾಗಿರುತ್ತವೆ. ಇದು ಶಿಲೀಂಧ್ರಗಳು ಮತ್ತು ಪ್ರೋಟಿಸ್ಟ್‌ ವರ್ಗಕ್ಕೆ ಸೇರಿದ ಜೀವಿಗಳ ರೀತಿಯ ಯೂಕ್ಯಾರಿಯಟ್‌ ಜೀವಿಗಳು ಹಾಗೂ ಪ್ರೋಕ್ಯಾರಿಯಟ್‌ ಜೀವಿಗಳನ್ನು ಒಳಗೊಂಡಿರುತ್ತದೆ. ವೈರಸ್‌‌ಗಳನ್ನು ಬದುಕಿರುವ ಜೀವಿಗಳಂತೆ ಕಟ್ಟುನಿಟ್ಟಾಗಿ ವರ್ಗೀಕರಿಸಿಲ್ಲವಾದರೂ, ಅವುಗಳ ಕುರಿತೂ ಇಲ್ಲಿ ಅಧ್ಯಯನವನ್ನು ನಡೆಸಲಾಗುತ್ತದೆ. ಚಿಕ್ಕದಾಗಿ ಹೇಳಬೇಕೆಂದರೆ; ಬರಿಗಣ್ಣಿಗೆ ಕಾಣಿಸದಷ್ಟು ತುಂಬಾ ಚಿಕ್ಕದಾಗಿರುವ ಜೀವ ಮತ್ತು ಜೀವಿಗಳ ಅಧ್ಯಯನಕ್ಕೆ ಸೂಕ್ಷ್ಮ ಜೀವವಿಜ್ಞಾನ ಎಂದು ಕರೆಯಲಾಗುತ್ತದೆ.

ಸೂಕ್ಷ್ಮ ಜೀವವಿಜ್ಞಾನವು ವಿಶಿಷ್ಟ ರೀತಿಯಲ್ಲಿ ಪ್ರತಿರಕ್ಷಣಾ ವ್ಯವಸ್ಥೆ, ಅಥವಾ ರೋಗರಕ್ಷಾಶಾಸ್ತ್ರದ ಅಧ್ಯಯನವನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ, ಪ್ರತಿರಕ್ಷಣಾ ವ್ಯವಸ್ಥೆಗಳು ರೋಗಕಾರಕ ಸೂಕ್ಷ್ಮಜೀವಿಗಳೊಂದಿಗೆ ಪರಸ್ಪರ ಕಾರ್ಯನಡೆಸುತ್ತವೆ ಅಥವಾ ಪರಸ್ಪರ ಪ್ರಭಾವ ಬೀರುತ್ತವೆ; ಈ ಎರಡೂ ವಿಭಾಗಗಳು ಅನೇಕ ವೇಳೆ ಪರಸ್ಪರ ಅಡ್ಡಹಾಯುವುದರಿಂದಲೇ ಅನೇಕ ಕಾಲೇಜುಗಳು "ಸೂಕ್ಷ್ಮ ಜೀವವಿಜ್ಞಾನ ಮತ್ತು ರೋಗರಕ್ಷಾಶಾಸ್ತ್ರ" ಎಂಬ ಒಂದು ಒಗ್ಗೂಡಿತ ಪದವಿಯನ್ನು ಶಿಕ್ಷಣಾರ್ಥಿಗಳಿಗೆ ನೀಡುತ್ತವೆ. ಸೂಕ್ಷ್ಮ ಜೀವವಿಜ್ಞಾನ ಎಂಬುದು ಒಂದು ವ್ಯಾಪಕ ವಾದ ಪದವಾಗಿದ್ದು, ಇದು ಸೂಕ್ಷ್ಮರೋಗಾಣು ಶಾಸ್ತ್ರ, ಶಿಲೀಂಧ್ರಶಾಸ್ತ್ರ, ಪರಜೀವಿಶಾಸ್ತ್ರ, ಬ್ಯಾಕ್ಟೀರಿಯ ವಿಜ್ಞಾನ ಮತ್ತು ಇತರ ಶಾಖೆಗಳನ್ನು ಒಳಗೊಂಡಿದೆ. ಸೂಕ್ಷ್ಮ ಜೀವವಿಜ್ಞಾನದಲ್ಲಿ ಪರಿಣತಿ ಹೊಂದಿದವನಿಗೆ ಅಥವಾ ವಿಶೇಷಜ್ಞನಿಗೆ ಓರ್ವ ಸೂಕ್ಷ್ಮಜೀವ ವಿಜ್ಞಾನಿ ಎಂದು ಕರೆಯಲಾಗುತ್ತದೆ.

ಸೂಕ್ಷ್ಮ ಜೀವವಿಜ್ಞಾನ ಕ್ಷೇತ್ರದಲ್ಲಿ ಅಕ್ರಿಯವಾದ ಸಂಶೋಧನೆಗಳು ನಡೆಯುತ್ತಿವೆ, ಮತ್ತು ಈ ಕ್ಷೇತ್ರವು ನಿರಂತರವಾಗಿ ಪ್ರಗತಿ ಹೊಂದುತ್ತಿದೆ. ಪ್ರಾಯಶಃ ನಾವು ಭೂಮಿಯ ಮೇಲಿರುವ ಸೂಕ್ಷ್ಮಜೀವಿ ಜಾತಿಗಳ ಪೈಕಿ ಕೇವಲ ಸುಮಾರು ಶೇಕಡಾ ಒಂದರಷ್ಟನ್ನು ಮಾತ್ರವೇ ಅಧ್ಯಯನ ಮಾಡಿರಬಹುದು ಎನಿಸುತ್ತದೆ.ಸೂಕ್ಷ್ಮಜೀವಿಗಳು ಮುನ್ನೂರು ವರ್ಷಗಳಷ್ಟು ಹಿಂದಿನಿಂದಲೂ ನೇರವಾದ ವೀಕ್ಷಣೆಗೆ ಒಳಗಾಗಿದ್ದರೂ ಸಹ, ಪ್ರಾಣಿವಿಜ್ಞಾನ ಮತ್ತು ಸಸ್ಯವಿಜ್ಞಾನದಂಥ ಹಳೆಯದಾದ, ಜೀವವಿಜ್ಞಾನದ ಶಾಖೆಗಳಿಗೆ ಹೋಲಿಸಿದರೆ ಇನ್ನೂ ತನ್ನ ಶೈಶವಾವಸ್ಥೆಯಲ್ಲಿದೆ ಎಂದೇ ಹೇಳಬಹದು.

ಪ್ರಯೋಜನಗಳು

ಮಾನವನ ಹಲವಾರು ಅಸ್ವಸ್ಥತೆಗಳೊಂದಿಗೆ ಕೆಲವೊಂದು ಸೂಕ್ಷ್ಮಜೀವಿಗಳು ಗುರುತಿಸಿಕೊಂಡಿರುವುದರಿಂದಾಗಿ ಎಲ್ಲಾ ಸೂಕ್ಷ್ಮಜೀವಿಗಳ ಕುರಿತೂ ಕೆಲವೊಬ್ಬರಿಗೆ ಭಯವಿದೆ ಎಂಬುದು ನಿಸ್ಸಂದೇಹವಾದ ವಿಚಾರ. ಆದರೆ ಅನೇಕ ಸೂಕ್ಷ್ಮಜೀವಿಗಳು ಹಲವಾರು ಪ್ರಯೋಜನಕಾರಿ ಪ್ರಕ್ರಿಯೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿವೆ ಎಂಬುದೂ ಮಹತ್ವದ ವಿಚಾರವೇ.ಕೈಗಾರಿಕಾ ಹುದುಗುವಿಕೆ (ಉದಾಹರಣೆಗೆ,ಮದ್ಯಸಾರ, ವಿನೆಗರ್‌ ಮತ್ತು ಹೈನು ಉತ್ಪನ್ನಗಳ ಉತ್ಪಾದನಾ ಕಾರ್ಯ), ಪ್ರತಿಜೀವಕದ ಉತ್ಪಾದನೆ ಮತ್ತು ಸಸ್ಯಗಳಂಥ ಉನ್ನತ ಜೀವಿಗಳ ಲ್ಲಿನ ಅಬೀಜ ಸಂತಾನೋತ್ಪತ್ತಿಯಲ್ಲಿ ವಾಹಕಗಳಾಗಿ ಇವುಗಳ ಬಳಕೆ ಇವೇ ಮೊದಲಾದವುಗಳು ಸೂಕ್ಷ್ಮಜೀವಿಗಳ ಪ್ರಯೋಜಕತೆಗೆ ಒಂದಷ್ಟು ಉದಾಹರಣೆಗಳಾಗಿವೆ.