ಸದಸ್ಯ:Omshivaprakash/ಯೋಜನೆಗಳು/ಕನ್ನಡ ವಿಕಿಮೀಡಿಯ ಯೋಜನೆಗಳನ್ನು ಡಿಜಿಟಲ್ ಲೈಬ್ರರಿಗಳೊಂದಿಗೆ ಬೆಳಸುವುದು
ಈ ಯೋಜನೆ ವಿಕಿಮೀಡಿಯದ ವೈಯುಕ್ತಿಕ ಅನುದಾನ ಯೋಜನೆ ಅಡಿ ಅನುದಾನ ಪಡೆದಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿ ಮೆಟಾ ಪುಟ Grants:IEG/Growing Kannada-language Wikimedia projects with a digital library ಇಲ್ಲಿ ಲಭ್ಯವಿದೆ.
ಯೋಜನೆಯ ಕಲ್ಪನೆ
[ಬದಲಾಯಿಸಿ]ನಾವು ಯಾವ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ?
[ಬದಲಾಯಿಸಿ]ಕನ್ನಡ ವಿಕಿಪೀಡಿಯ ಯೋಜನೆಗಳು ವಿಕಿ ಲೇಖನಗಳನ್ನು ನಂಬಲರ್ಹ ಮೂಲಗಳೊಂದಿಗೆ ಉನ್ನತ ಮಟ್ಟಕ್ಕೇರಿಸುವಲ್ಲಿ ಅವಶ್ಯವಿರುವ ಧೃಡ ಪ್ರಯತ್ನಗಳ ಕೊರತೆಯನ್ನು ಎದುರಿಸುತ್ತಿವೆ. ನಮ್ಮ ಈ ಮೊದಲಿನ ಹೆಜ್ಜೆಗಳಿಂದ ನಾವು ಅರ್ಥ ಮಾಡಿಕೊಳ್ಳುವುದೇನೆಂದರೆ, ಸಮುದಾಯ ಸಹಭಾಗಿತ್ವದ ಮೂಲಕ ಕನ್ನಡ ಯೋಜನೆಗಳು ಅತ್ಯುತ್ತಮ ಲೇಖನಗಳು, ಉಲ್ಲೇಖಗಳು, ಕೃತಿಸಾಮ್ಯದ ರಹಿತ ಪುಸ್ತಕಗಳನ್ನು ವಿಕಿಮೀಡಿಯದ ಮುಕ್ತ ಜ್ಞಾನದ ಪ್ರಪಂಚಕ್ಕೆ ತರಬಲ್ಲವು.
ನಮ್ಮ ಪರಿಹಾರವೇನು?
[ಬದಲಾಯಿಸಿ]ನಮ್ಮ ಐಇಜಿ ಯೋಜನೆ ಕನ್ನಡ ವಿಕಿಪೀಡಿಯವನ್ನು ಸಮುದಾಯ-ಸಹಭಾಗಿತ್ವದ ವಿಶೇಷ ತಂಡದ ಮೂಲಕ ಅಪೂರ್ವ ಮತ್ತು ಪ್ರಮುಖ ಕನ್ನಡ ಸಾಹಿತ್ಯದ ಕೆಲಸಗಳನ್ನು ಸಂಪಾದನೆಗೆ ಒಳಪಡಿಸಲು ಇಚ್ಛಿಸುತ್ತಿದ್ದು, ನಮ್ಮ ಪುಸ್ತಕ ಸಂಚಯ ಯೋಜನೆಯ ಹಿಂದಿನ ಅನುಭವವನ್ನು ಹಂಚಿಕೊಳ್ಳ ಬಯಸುತ್ತದೆ. ಈ ಯೋಜನೆ ನಮ್ಮ ಸಮೂಹ ಸಂಚಯ ಸಮೂಹ ಸಹಭಾಗಿತ್ವ ವೇದಿಕೆಯ ಮೂಲಕ ಪುಸ್ತಕದ ಹೆಸರು ಮತ್ತು ಇತರೆ ಮೆಟಾಡೇಟಾವನ್ನು ಲಿಪ್ಯಂತರಿಸುವ ಗುರಿಯನ್ನು ಹೊಂದಿತ್ತು. ಈ ಯೋಜನೆಯಲ್ಲಿ ವಿಶ್ವದಾದ್ಯಂತ ನೆಲೆಸಿರುವ ಅನೇಕ ಕನ್ನಡಿಗರು ಪಾಲ್ಗೊಂಡು ಈ ಕೆಲಸವನ್ನು ಯಶಸ್ವಿಯಾಗಿ ಮುಗಿಸುವಲ್ಲಿ ಒಂದಾಗಿದ್ದರು. ಈ ಒಂದು ಒಗ್ಗಟ್ಟಿನ ಪ್ರಯತ್ನ ಕನ್ನಡ ವಿಕಿಪೀಡಿಯಕ್ಕೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮತ್ತು ಓಸ್ಮಾನಿಯ ಡಿಜಿಟಲ್ ಲೈಬ್ರರಿಯಲ್ಲಿನ ಪುಸ್ತಕಗಳ ಬಗ್ಗೆ ಲೇಖನಗಳನ್ನು ಬರೆಯುವುದರ ಜೊತೆಗೆ ಅಮೂಲ್ಯ ಆಕರಗಳನ್ನು ಒದಗಿಸಲಿದೆ. ಏಕೆಂದರೆ ಇವುಗಳಲ್ಲಿನ ಅನೇಕ ಪುಸ್ತಕಗಳು ಕೃತಿಸಾಮ್ಯದ ಹೊರಗಿದ್ದು, ಮೊದಲ ಹಂತದಲ್ಲಿ ಕನ್ನಡ ವಿಕಿಸೋರ್ಸ್ಗೆ ಯೋಗ್ಯವಾದ ಆಕರಗಳನ್ನು ಹುಡುಕಿ ಸೇರಿಸಲೂ ಕೂಡ ನೆರವಾಗಲಿದೆ. ಆದ್ದರಿಂದ ಈ ಯೋಜನೆ ಕೇವಲ ವಿಕಿಪೀಡಿಯಕ್ಕಷ್ಟೇ ನೆರವಾಗದೆ, ವಿಕಿಸೋರ್ಸ್ಗೂ ಕೂಡ ತನ್ನ ಕೊಡುಗೆ ನೀಡಲಿದೆ. (ವಿಕಿಸೋರ್ಸ್ನಲ್ಲಿ ಮೊದಲ ಹಂತದಲ್ಲಿ ಸೇರಿಸಲಾದ ನಿರಂಜನರ ಪುಸ್ತಕಗಳನ್ನು ಈ ಡಿಜಿಟಲ್ ಲೈಬ್ರರಿಗಳಿಂದ ಹುಡುಕಲು ಸಾಧ್ಯವಾಗಿಸಿದ್ದು ನಮ್ಮ ಪುಸ್ತಕ ಸಂಚಯ ಯೋಜನೆ ಎನ್ನುವುದಕ್ಕೆ ನಮಗೆ ಹೆಮ್ಮೆ).
ಯೋಜನೆ ಗುರಿಗಳು
[ಬದಲಾಯಿಸಿ]ಮೂಲ ಸೌಕರ್ಯಗಳನ್ನು ಬಲಗೊಳಿಸುವುದು: ನಾವು ನಮ್ಮ ಪುಸ್ತಕ ಸಂಚಯದಲ್ಲಿ ಸೃಷ್ಟಿಸಿರುವ ಡಿಜಿಟಲ್ ಲೈಬ್ರರಿ ಪರಿವಿಡಿಯನ್ನು ಬಳಸಿ ಈ ವೇದಿಕೆಯಲ್ಲಿ
- ಅಪೂರ್ವ ಕನ್ನಡ ಪುಸ್ತಕಗಳ, ಲೇಖಕರ ಮತ್ತು ಪ್ರಕಾಶಕರ ವಿಕಿ ಪುಟಗಳಿಗೆ ಬೇಕಿರುವ ಇನ್ಫೋಬಾಕ್ಸ್ಗಳು, ವಿಕಿ ಟೆಂಪ್ಲೇಟುಗಳು ಇತ್ಯಾದಿಗಳನ್ನು ಸೃಷ್ಟಿಸುತ್ತೇವೆ.
- ಈಗಾಗಲೇ ಲಭ್ಯವಿರುವ ಪುಸ್ತಕಗಳ ವಿಕಿ ಪುಟಗಳನ್ನು ಪುಸ್ತಕ ಪ್ರಿಯರಿಗೆ ಲಭ್ಯವಾಗಿಸಲಾಗುವುದು.
- ಆನ್ಲೈನ್ನಲ್ಲಿ ಈಗಾಗಲೇ ಲಭ್ಯವಿರುವ ಇತರೆ ಪ್ರಥಮ ದರ್ಜೆ ಆಕರಗಳನ್ನು ಹುಡುಕಲು ಸಾಧ್ಯವಾಗಿಸಲಾಗುವುದು (ಮೀಡಿಯಾ/ವೃತ್ತಪತ್ರಿಕೆಗಳ ಜೊತೆಗಿನ ಸಹಯೋಗವನ್ನು ಕೆಳಗೆ ವಿವರಿಸಲಾಗಿದೆ).
- ವಿಕಿಯಲ್ಲಿ ಹೊಸ ಲೇಖನಗಳನ್ನು ಸೃಷ್ಟಿಸುವಾಗ ಅಥವಾ ಲಭ್ಯ ಲೇಖನಗಳನ್ನು ಉತ್ತಮ ಪಡಿಸುವಾಗ ಆಕರಗಳನ್ನು ಬಳಸುವುದನ್ನು ಹೇಗೆ ಎಂದು ಕಲಿಸಬಹುದಾಗಿದೆ.
ಪಾಲ್ಗೊಳ್ಳುವಿಕೆ ಹೆಚ್ಚಿಸುವುದು: ಈ ಐಇಜಿಗೆ ಕನ್ನಡ ತಾಂತ್ರಿಕ ಮತ್ತು ಡಿಜಿಟಲ್ ಆಸಕ್ತರನ್ನು (ಮುಖ್ಯವಾಗಿ ಹೊಸ ವಿಕಿಪೀಡಿಯನ್ನರನ್ನು) ಒಂದು ವೇದಿಕೆ ಅಡಿ ತಂದು ಸಮುದಾಯ ಸಹಭಾಗಿತ್ವದ ಮೂಲಕ DLI ಮತ್ತು OUDLನಲ್ಲಿನ ಪುಸ್ತಕಗಳಿಗೆ ವಿಕಿ ಪುಟಗಳನ್ನು ಹೆಣೆಯುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ.
ಗುಣಮಟ್ಟವನ್ನು ಹೆಚ್ಚಿಸುವುದು: ಈ ಯೋಜನೆ ಅಡಿ ಸೃಷ್ಟಿಸಲಾಗುವ ಎಲ್ಲ ಲೇಖನಗಳು ಉಲ್ಲೇಖ ಮತ್ತು ಇತರೆ ಆಕರಗಳನ್ನು ಒಳಗೊಂಡಿರುತ್ತವೆ. ಇದಕ್ಕಿಂತ ಮುಖ್ಯವಾಗಿ ಈ ಲೇಖನಗಳು ಮತ್ತಷ್ಟು ವಿಷಯಾಧಾರಿತ ಹೊಸ ಪುಟಗಳಿಗೆ ಪುಸ್ತಕದ ವಿಷಯ, ಪುಸ್ತಕದ ಪ್ರಾಮುಖ್ಯತೆ, ಮೆಟಾಡೇಟಾ ಇತ್ಯಾದಿಗಳನ್ನು ಒದಗಿಸುವುದರೊಂದಿಗೆ ಮೂಲ ಆಕರಗಳಾಗಿ ಕೆಲಸ ಮಾಡುತ್ತವೆ. ಕೃತಿಸಾಮ್ಯ ಹೊಂದಿರದ ಪುಸ್ತಕಗಳನ್ನು ವಿಕಿಸೋರ್ಸ್ಗೆ ಅಪ್ಲೋಡ್ ಮಾಡಲಾಗುವುದು ಮತ್ತು ಇದು ಇಡೀ ಪುಸ್ತಕವನ್ನು ಉಲ್ಲೇಖನ ಅಥವಾ ಆಕರವನ್ನಾಗಿ ಬಳಸಿಕೊಳ್ಳವುದನ್ನು ಸಾಧ್ಯವಾಗಿಸುತ್ತದೆ.
ಪ್ರಸರಣೆ ಹೆಚ್ಚಿಸುವುದು: ಸಾಮಾನ್ಯ ಓದುಗರಿಗೆ ಕನ್ನಡದ ಅತ್ಯಮೂಲ್ಯ ಪುಸ್ತಕಗಳ ಬಗ್ಗೆ ಓದುವುದನ್ನು ಮತ್ತು ಅವುಗಳ ಸುತ್ತ ಸಂಶೋಧನೆ ಮಾಡುವುದರ ಸಾಧ್ಯತೆಗಳನ್ನು ಒತ್ತಿ ಹೇಳಲು ನಮ್ಮ ಯೋಜನೆ ಆಶಿಸುತ್ತದೆ. ವಿಕಿಪೀಡಿಯದಲ್ಲಿ ಮಾಹಿತಿಯ ಲಭ್ಯತೆ ಹೊಸ ಸಂಪಾದಕರನ್ನು ಸೆಳೆದು ತರುವಲ್ಲಿ ಪಾದರಸದಂತೆ ಕೆಲಸ ಮಾಡುತ್ತದೆ. ಸಾಂಸ್ಕೃತಿಕವಾಗಿಯೂ ಮತ್ತು ಸಾಹಿತ್ಯದ ದೃಷ್ಟಿಯಿಂದಲೂ ಈ ಪಠ್ಯಗಳು ಪ್ರಾಮುಖ್ಯತೆಯನ್ನು ಪಡೆದಿರುತ್ತವೆ ಮತ್ತು ಸಂಸ್ಕೃತಿಯ ಬೆಳವಣಿಗೆಯನ್ನು ರೂಪಿಸುವಲ್ಲಿ ಕಾಣಿಕೆ ನೀಡಿರುತ್ತವೆ. ಈ ಮಾಹಿತಿಯನ್ನು ಕನ್ನಡ ವಿಕಿಪೀಡಿಯದಲ್ಲಿ ಲಭ್ಯವಾಗಿಸುವ ಮೂಲಕ, ವಿಕಿಪೀಡಿಯ ಫ್ರೌಡ ಶಿಕ್ಷಣದ ತರಗತಿಗಳಲ್ಲಿ ಮತ್ತು ಸಂಶೋಧನಾ ವೇದಿಕೆಗಳಲ್ಲಿ ತನ್ನ ಸ್ಥಾನ ವನ್ನು ಪಡೆದು ಹೊಸ ಓದುಗರನ್ನು ಮತ್ತು ವಿಕಿ ಸಂಪಾದಕರನ್ನು ತಲುಪಬಹುದಾಗಿದೆ.
ಹೊಸ ಕಲ್ಪನೆಗಳನ್ನು ಬೆಂಬಲಿಸುವುದು: ಈ ಯೋಜನೆಯು ಸಂಪಾದಕರನ್ನು ಹೊಸ ಕಲಿಕೆಯ ಆಯಾಮಗಳನ್ನು ಅಭಿವೃದ್ಧಿಪಡಿಸಲು ಹುರಿದುಂಬಿಸುತ್ತದೆ ಮತ್ತು ಇದು ಹೊಸ ಸಂಪಾದಕರಿಗೆ ಈ ಯೋಜನೆ ಮುಗಿದ ನಂತರವೂ ಇಂತಹ ವಿಷಯಾದಾರಿತ ಲೇಖನಗಳನ್ನು ಸೇರಿಸುವುದನ್ನು ಮುಂದುವರೆಸಲು ಸಹಾಯಕವಾಗುತ್ತದೆ.
ಹೊಸಶೋಧ ಮತ್ತು ಕಲಿಕೆ: ವಿಕಿಮೀಡಿಯ ಚಳುವಳಿಗಾಗಿ ಮುಖ್ಯ ಸಮಸ್ಯೆ ಒಂದನ್ನು ಬಿಡಿಸಲು ಹೊಸ ಶೋಧನೆಯ ಹಾದಿಯನ್ನು ಯೋಜನೆ ತೆಗೆದುಕೊಳ್ಳುತ್ತದೆಯೇ?: ಹೌದು, ವಿಶ್ವದ ಪ್ರಮುಖವಲ್ಲದ ಭಾಷೆಗಳಲ್ಲಿ ಗುಣಮಟ್ಟದ ಲೇಖನಗಳನ್ನು ಹೊಂದಿರದೇ ಇರುವುದು ವಿಕಿಮೀಡಿಯ ಚಳುವಳಿಯ ಪ್ರಮುಖ ಸಮಸ್ಯೆಗಳಲ್ಲೊಂದು. ಈ ಸಮಸ್ಯೆ ಭಾರತೀಯ ಭಾಷೆಗಳನ್ನು ನೋಡಿದಾಗ ಮತ್ತಷ್ಟು ಗಂಭೀರವಾಗಿರುವುದು ಕಂಡುಬರುತ್ತದೆ. ಉದಾಹರಣೆಗೆ ಕನ್ನಡ ವಿಕಿಯಲ್ಲಿನ ೧೮ ಸಾವಿರ ಲೇಖನಗಳಲ್ಲಿ ಶೇಕಡ ೭೦ ಹೆಚ್ಚು ಲೇಖನಗಳಲ್ಲಿ ಉಲ್ಲೇಖಗಳೇ ಇಲ್ಲ.
ಈ ಮೇಲಿನ ಸಮಸ್ಯೆಯನ್ನು ನಮ್ಮ ಐಇಜಿ ಯೋಜನೆ ಎರಡು ಹಂತಗಳಲ್ಲಿ ಬಿಡಿಸಲು ಸೂಚಿಸುತ್ತದೆ:
- ಸಾರ್ವರ್ತಿಕವಾಗಿ ಒಪ್ಪಿಗೆಯಾಗುವ ಗುಣಮಟ್ಟದ ಲೇಖನಗಳನ್ನು ಸೃಷ್ಟಿಸುವುದು - ಇದರಿಂದ ವಿಕಿಪೀಡಿಯನ್ನರು ಅನುಸರಿಸಬಹುದಾದ ಮಾನದಂಡವೊಂದನ್ನು ಮತ್ತು ನಮೂನೆಯನ್ನು ಸ್ಥಾಪಿಸಿದಂತಾಗುತ್ತದೆ.
- ಯೋಜನೆಯ ಸ್ವರೂಪದಿಂದಾಗಿ, ಇದರಲ್ಲಿನ ಲೇಖನಗಳು ಪಠ್ಯ ಮತ್ತು ಪುಸ್ತಕಗಳಿಗೆ ಸಂಬಂಧಿಸಿದ್ದಾಗಿದ್ದು ಕನ್ನಡ ವಿಕಿಪೀಡಿಯವನ್ನು ಉತ್ತಮಗೊಳಿಸಲು ಬೇಕಿರುವ ಉಲ್ಲೇಖಗಳನ್ನು ಒದಗಿಸುವ ಸೇವೆ ನೀಡುತ್ತವೆ.
ಯೋಜನೆಯ ಸಾಮರ್ಥ್ಯದ ಪ್ರಭಾವ ಸಂಭಾವ್ಯ ನಷ್ಟ/ಹಾನಿಗಿಂತ ಹೆಚ್ಚಿದೆಯೇ? ನಮ್ಮ ದೃಷ್ಟಿಯ ಪ್ರಕಾರ ಯೋಜನೆಯ ಪ್ರಭಾವ ಅನುದಾನದ ಅವಧಿಯ ನಂತರ ಅದೇ ಗತಿಯಲ್ಲಿ ಮುಂದುವರೆಯದಿರಬಹುದು. ಆದರೆ, ಯಾವುದೇ ಯೋಜನೆಗೆ ಅನ್ವಯಿಸುವಂತೆ ಇದು ಉತ್ಸಾಹ ಕುಂದಿಸುವ ಅಂಶವಾಗಲಾರದು.
ವರದಿ
[ಬದಲಾಯಿಸಿ]ಡಿಸೆಂಬರ್
[ಬದಲಾಯಿಸಿ]ಪೂರ್ವಭಾವಿ ತಯಾರಿ
- ಪುಸ್ತಕ ಸಂಚಯದಲ್ಲಿರುವ ಪುಸ್ತಕಗಳ ಪಟ್ಟಿ
- ಐ.ಇ.ಜಿ ಯೋಜನಾಪತ್ರದಲ್ಲಿ ತಿಳಿಸಿದಂತೆ ಸಮೂಹ ಮತ್ತು ಪುಸ್ತಕ ಸಂಚಯಗಳನ್ನು ಯೋಜನೆಗೆ ಸಿದ್ಧಪಡಿಸುವ ಕೆಲಸ ಪ್ರಾರಂಭಿಸಲಾಯ್ತು.
- ಪುಸ್ತಕ ಸಂಚಯದ ಮೂಲಕ ವಿಕಿಗೆ ಸೈನ್ಅಫ್ ಆಗಿ, ಪುಸ್ತಕಗಳ ಮಾಹಿತಿ ಪುಟ ಸೇರಿಸುವ ಹೊಸ ಬಳಕೆದಾರರು ಹಂತ ಹಂತವಾಗಿ ಪಾಲ್ಗೊಳ್ಳುವ ವರ್ಕ್ಪ್ಲೋ ತಯಾರಿ.
- ವರ್ಕ್ಪ್ಲೋ ಅನ್ನು ಸಮುದಾಯದ ಸದಸ್ಯರೊಡನೆ ಚರ್ಚಿಸಿ, ಅದಕ್ಕೆ ಬೇಕಿರುವ ತಕ್ಕ ಬದಲಾವಣೆಗಳನ್ನು ಮಾಡಿಕೊಳ್ಳಲಾಯ್ತು.
- ಪುಸ್ತಕ, ಲೇಖಕ ಮತ್ತು ಪ್ರಕಾಶಕರ ಹೆಸರು, ವರ್ಗಗಳ ಜೊತೆಗೆ ಸೇರಿಸಬಹುದಾದ ಮಾಹಿತಿಗಳ ಬಗ್ಗೆ ಚರ್ಚೆ ಮತ್ತು ಅವುಗಳನ್ನು ಯೋಜನೆಗೆ ಅಳವಡಿಸುವ ಬಗ್ಗೆ ಆಲೋಚಿಸಲಾಯ್ತು
- ವರ್ಕ್ಪ್ಲೋ ಜೊತೆಗೆ, ಉಪಯೋಗಿಸಬಹುದಾದ ಪುಸ್ತಕದ ಇನ್ಫೋಬಾಕ್ಸ್ ಇತ್ಯಾದಿಗಳನ್ನು ಡೆವಲಪರ್ಗೆ ಅರ್ಥವಾಗುವಂತೆ ಹಂಚಿಕೊಳ್ಳಲಾಯ್ತು.
- ವರ್ಕ್ಪ್ಲೋ ಅಳವಡಿಕೆಗೆ ಇರುವ ತೊಡಕುಗಳ ಚರ್ಚೆ ಮತ್ತು ಅದಕ್ಕೆ ಸೂಕ್ತ ಉತ್ತರಗಳನ್ನು ಹುಡುಕಿಕೊಳ್ಳಲಾಯ್ತು
ಜನವರಿ
[ಬದಲಾಯಿಸಿ]- ವರ್ಕ್ಪ್ಲೋ ಅನ್ನು ಸಮೂಹ ಮತ್ತು ಪುಸ್ತಕ ಸಂಚಯದ ವೇದಿಕೆಗೆ ಅಳವಡಿಸಿಕೊಳ್ಳುವ ಕೆಲಸ ಪ್ರಾರಂಭಿಸಲಾಯ್ತು
- ವಿಕಿಗೆ ಲೇಖನಗಳನ್ನು ಸೇರಿಸುವ ಮೊದಲು, ಮತ್ತೊಮ್ಮೆ ಪುಸ್ತಕ ಸಂಚಯದ ಪುಸ್ತಕಗಳನ್ನು, ಮೆಟಾಡೇಟಾ ಬದಲಾವಣೆಗೆ ಅವಶ್ಯ ಟೂಲ್ ಸಿದ್ಧತೆ
- ಪುಸ್ತಕಗಳ ವರ್ಗದ ಅನುಸಾರ, ಪರಿಣಿತರ ಮೂಲಕ ವಿಕಿಯಲ್ಲಿರ ಬೇಕಾದ ಪುಸ್ತಕಗಳ ಮಾಹಿತಿ ಪುಟಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡುವ ಮತ್ತು ಸಾಧ್ಯವಾದಲ್ಲಿ ಅಧಿಕ ಮಾಹಿತಿ ಕೊಡುವಂತೆ ವಿನಂತಿ ಮಾಡಲು ತೀರ್ಮಾನಿಸಲಾಯ್ತು. (ಪರಿಣಿತರ ಪಟ್ಟಿ ಪ್ರಕಟಿಸಲಾಗುವುದು ಜೊತೆಗೆ ಸಮುದಾಯ ಕೂಡ ಪ್ರತಿ ವರ್ಗದಲ್ಲಿ ಉತ್ತಮ ಎನಿಸುವ ಪುಸ್ತಕ ಪಟ್ಟಿ ತಯಾರಿಗೂ ಅವಕಾಶ ಕಲ್ಪಿಸಲಾಗುವುದು)
- ಪ್ರಜಾವಾಣಿಯಲ್ಲಿ ಪ್ರಕಟಗೊಳ್ಳುವ ಡಿಎಲ್ಐ ಮತ್ತು ಓಸ್ಮಾನಿಯ ಪುಸ್ತಕಗಳ ಮಾಹಿತಿಯನ್ನು ಕ್ರಿಯೇಟೀವ್ಕಾಮನ್ಸ್ನಲ್ಲಿ ನೀಡುವಂತೆ ಅಥವಾ ಅವನ್ನು ಜ್ಞಾನ ಹಂಚಿಕೆ ಯೋಜನೆಗಳಲ್ಲಿ ಮುಕ್ತವಾಗಿ ಬಳಸಿಕೊಳ್ಳಲು ಅನುಮತಿಸುವಂತೆ ಪ್ರಜಾವಾಣಿ ಸಂಪಾದಕರಿಗೆ ಕೇಳಿಕೊಳ್ಳಲಾಯ್ತು. - ಜನವರಿ ೨೬, ೨೦೧೬
- ಪುಸ್ತಕ ಸಂಚಯದ ವಿಕಿ ಮಾಡ್ಯೂಲ್ ಸಾರ್ವಜನಿಕಗೊಳಿಸಿ, ವಿಕಿ ಪುಟಗಳನ್ನು ಹೆಣೆಯುವಂತೆ ಪ್ರೇರೇಪಿಸುವುದು
ಫೆಬ್ರವರಿ
[ಬದಲಾಯಿಸಿ]- ಪುಸ್ತಕ ಸಂಚಯ ಮತ್ತು ಸಮೂಹ ಸಂಚಯದ ತಂತ್ರಾಂಶಗಳನ್ನು ಗಿಟ್ಹಬ್ನಲ್ಲಿ ಬಿಡುಗಡೆಗೊಳಿಸಲಾಗಿದೆ
- ಯೋಜನೆಗೆ ಸಂಬಂಧಿಸಿದ ತಂತ್ರಾಂಶ ಪುಟಗಳ ಲೋಕಲೈಸೇಷನ್ ಕಾರ್ಯ ಕೈಗೆತ್ತಿಕೊಳ್ಳಲಾಯಿತು
- ಯೋಜನಾ ಪುಟಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪರೀಕ್ಷಿಸುವ ಕೆಲಸ ಪ್ರಾರಂಭವಾಯಿತು
- ಪುಸ್ತಕ ಸಂಚಯದ ಪುಸ್ತಕ ಪರಿವಿಡಿಯಲ್ಲಿನ ಉಪಯುಕ್ತ ಪುಸ್ತಕಗಳನ್ನು ಆರಿಸಿ ಕೊಡುವಂತೆ ಅನೇಕ ಪುಸ್ತಕಾಸಕ್ತರನ್ನು ಕೇಳಿಕೊಳ್ಳಲಾಯ್ತು
- ಪುಸ್ತಕ ಸಂಚಯವನ್ನು ವಿಕಿ ಸಂಪಾದನೆಗೆ ಚೊಕ್ಕಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.
- ವಿಕಿಸೋರ್ಸ್ಗೆ ಹೋಗಬೇಕಿರುವ ಪುಸ್ತಕಗಳ ಪಟ್ಟಿ ತಯಾರಿಕೆ
- ವಿಕಿಸೋರ್ಸ್ಗೆ ಸೇರುವ ಪುಸ್ತಕಗಳನ್ನು ಅಪ್ಲೋಡ್ ಮಾಡಲು ಬೇಕಿರುವ ಪರವಾನಗಿಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುವ ಕೆಲಸ ಸಾಗಿದೆ
- ಕಾಪಿರೈಟ್ ಇಲ್ಲದ ಪುಸ್ತಕಗಳನ್ನು ಆರ್ಕೈವ್.ಓಆರ್ಜಿ ಮತ್ತು ನಂತರ ಅದನ್ನು ವಿಕಿ ಕಾಮನ್ಸ್ಗೆ ತರುವ ಕೆಲಸ ಜಾರಿಯಲ್ಲಿದೆ.
- ವಿಕಿ ಕಾಮನ್ಸ್ಗೆ ಬರುವ ಪುಸ್ತಕಗಳನ್ನು ವಿಕಿಸೋರ್ಸ್ಗೆ ತರಲು ಸಮುದಾಯದ ಸಹಾಯ ಅಗತ್ಯವಿದೆ.
- ಪ್ರಜಾವಾಣಿಯಲ್ಲಿರುವ ಇ-ಪುಸ್ತಕಗಳ ಮಾಹಿತಿ ಕೊಂಡಿಗಳನ್ನು ಸಂಗ್ರಹಿಸಿ ಅದನ್ನು ಉಲ್ಲೇಖನವನ್ನಾಗಿ ಸೇರಿಸುವ ಕೆಲಸ ಸಾಗಿದೆ.
- ಪ್ರಜಾವಾಣಿಗೆ ಪುಸ್ತಕ ಮಾಹಿತಿಗಳನ್ನು ಹಂಚಿಕೊಳ್ಳಲು ಕೇಳಲಾಗಿತ್ತು, ಅದರ ಬಗ್ಗೆ ಅವರ ನಿಲುವನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಲಾಯಿತು.
- ವಿಕಿಗೆ ಲೇಖನವನ್ನು ಸೇರಿಸುವಾಗ ಬೇಕಿರುವ ಸೂಕ್ತ ಸಲಹೆಗಳನ್ನು ನೀಡುವ ಕಾರ್ಯವನ್ನು ತಂತ್ರಾಂಶದ ಅಭಿವೃದ್ಧಿಯ ಹಂತದಲ್ಲಿ ಚರ್ಚಿಸಿ, ಅವುಗಳನ್ನು ಬಳಸಿಕೊಳ್ಳುವ ಕಾರ್ಯ ಸಾಗಿದೆ.
- ಮೆಟಾಡೇಟಾ ಅಪ್ಡೇಟ್ ಮಾಡುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ.
ಮಾರ್ಚ್
[ಬದಲಾಯಿಸಿ]- ವಿಕಿಸೋರ್ಸ್ಗೆ ಸೇರಿಸಬೇಕಿರುವ ಪುಸ್ತಕಗಳನ್ನು ಮೊದಲಿಗೆ ಆರ್ಕೈವ್.ಓಆರ್ ಜಿಗೆ ಸೇರಿಸಲು ಪ್ರಾರಂಭಿಸಿದ್ದು - ಓಸ್ಮಾನಿಯಾದ ೨೧೫ - ಕಾಪಿರೈಟ್ ಇಲ್ಲದ ಪುಸ್ತಕಗಳು ಈಗ ಇಲ್ಲಿ ಲಭ್ಯವಿವೆ. ಇದನ್ನು ಕಾಮನ್ಸ್ಗೆ ಸೇರಿಸುವ ಕೆಲಸ ಕೂಡ ಬೇಗ ಮುಗಿಯಲಿದೆ.
- ಡಿಜಿಟಲ್ ಲೈಬ್ರರಿಯಲ್ಲಿನ ಕಾಪಿರೈಟ್ ಇಲ್ಲದ ಪುಸ್ತಕಗಳ ಮೆಟಾಡೇಟಾ ಅಪ್ಡೇಟ್ ಮಾಡಲಾಗುತ್ತಿದೆ. ಇಲ್ಲಿ ೮೦೦ಕ್ಕೂ ಹೆಚ್ಚು ಪುಸ್ತಕಗಳು ಆರ್ಕೈವ್ ಮತ್ತು ಕಾಮನ್ಸ್ಗೆ ನಂತರ ವಿಕಿಸೋರ್ಸ್ಗೆ ಬರಲಿವೆ. ವಿಕಿಸೋರ್ಸ್ಗೆ ಬರುವ ಪುಸ್ತಕಗಳ ಮೆಟಾಡೇಟಾ ಅಪ್ದೇಟ್ ಮಾಡಲು ಸಮುದಾಯದ ಸಹಾಯದ ಅವಶ್ಯಕತೆ ಇದೆ.
ಯೋಜನೆಯ ಸುತ್ತಲಿನ ಕಾರ್ಯಕ್ರಮಗಳು
[ಬದಲಾಯಿಸಿ]ಅ. ಕನ್ನಡ ಪುಸ್ತಕಗಳ ಮೆಟಾಡೇಟಾ ಉತ್ತಮಗೊಳಿಸುವ ಚಟುವಟಿಕೆ - ಸಮೂಹ ಸಂಚಯದಲ್ಲಿ (ಆನ್ಲೈನ್/ಆಫ್ಲೈನ್)
[ಬದಲಾಯಿಸಿ]ಸಮೂಹ ಸಂಚಯದ ಸಮುದಾಯ ಸಹಭಾಗಿತ್ವ ವೇದಿಕೆಯಲ್ಲಿ ಪುಸ್ತಕಗಳ ಮೆಟಾಡೇಟಾ ಉತ್ತಮಗೊಳಿಸುವ ಸೌಕರ್ಯವನ್ನು ಸಿದ್ಧ ಪಡಿಸಲಾಗಿದ್ದು, ಆಸಕ್ತರು ನಮ್ಮೊಡನೆ ಈ ಕಾರ್ಯದಲ್ಲಿ ಕೈಜೋಡಿಸಬಹುದಾಗಿದೆ. ಈ ಕಾರ್ಯ ಎಲ್ಲ ೫೦೦೦ ಪುಸ್ತಕಗಳನ್ನೂ ಒಳಗೊಂಡಿರುತ್ತದೆ. ಭಾಗವಹಿಸಲು ಇಚ್ಛಿಸುವವರಿಗೆ ಅವಶ್ಯ ಮಾಹಿತಿಯನ್ನು ಇಮೇಲ್ ಅಥವಾ ಆನ್ಲೈನ್ ಕಾರ್ಯಾಗಾರದ ಮೂಲಕ ತಿಳಿಸಿಕೊಡಲಾಗುವುದು.
ಆ. ವಿಕಿಸೋರ್ಸ್ಗೆ ಪುಸ್ತಕಗಳನ್ನು ಸೇರಿಸುವ ಚಟುವಟಿಕೆ
[ಬದಲಾಯಿಸಿ]ಕಾಪಿರೈಟ್ ಇಲ್ಲದ ಪುಸ್ತಕಗಳನ್ನು ವಿಕಿಸೋರ್ಸ್/ಆರ್ಕೈವ್.ಓಆರ್ಜಿಗೆ ಸೇರಿಸಲು ಸಮುದಾಯದ ಸಹಾಯ ಅಗತ್ಯವಿದೆ. ಸಹಾಯ ಮಾಡುವವರು ಈ ಕೆಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ನಮ್ಮ ತಂಡ ಈಗಾಗಲೇ ಡಿ.ಎಲ್.ಐ. ಮತ್ತು ಓಸ್ಮಾನಿಯದಿಂದ ಈ ಪುಸ್ತಕಗಳನ್ನು ಡೌನ್ಲೋಡ್ ಮಾಡಿದ್ದು, ಅವುಗಳನ್ನು ಅನುಕ್ರಮವಾಗಿ ವಿಕಿಸೋರ್ಸ್ಗೆ ಅವಶ್ಯವಾದ ರೀತಿಯಲ್ಲಿ ಸೇರಿಸುವ ಕೆಲಸವನ್ನು ಇಲ್ಲಿ ನಿರ್ವಹಿಸಿಸಬೇಕಿದೆ.
ಇ. ವಿಕಿಯಲ್ಲಿ ಲಭ್ಯವಿರುವ ಪುಸ್ತಕ ಪುಟಗಳನ್ನು ಉದ್ಧರಿಸುವುದು
[ಬದಲಾಯಿಸಿ]ನಮ್ಮ ತಂಡದ ಸಮೀಕ್ಷೆಯ ಪ್ರಕಾರ ೨೦೦ ಪುಸ್ತಕ ಪುಟಗಳು ಈಗಾಗಲೇ ವಿಕಿಯಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿತಿಯನ್ನು ಈ ಪುಟಗಳಿಗೆ ಸೇರಿಸಬಹುದಾಗಿದೆ. ಈ ಕೆಲಸಕ್ಕೆ ಸಮುದಾಯದ ಸದಸ್ಯರು ಕೈಜೋಡಿಸಬಹುದು.
ಭಾಗವಹಿಸಲು ಇಚ್ಛಿಸುವವರು
ಯೋಜನೆಯ ಜೊತೆಯಾಗಿ
[ಬದಲಾಯಿಸಿ]ಭಾಗವಹಿಸುವವರು
[ಬದಲಾಯಿಸಿ]- ಓಂಶಿವಪ್ರಕಾಶ್ :- Editor on Kannada Wikimedia projects & Sysop on Kannada Wikipedia. I started editing wiki in 2007 and I have been active on Kannada Wikipedia since 2012 with 23850+ edits. I also contribute to commons. Apart from editing wiki, I have been active in community building activities in and around Kannada Wikipedia in Bangalore & other parts of Karnataka. My articles on wikipedia history, culture and editing have appeared in leading local news papers. Bangalore University's text book for 1st semester Bachelors in Computer Science carries my article on Wikipedia. Kannada Sahitya Parishath's centennial celebration edition of 'History of Modren Kannada Literature' (Kannada: ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ) volume carries my articles on Wikipedia, Free Culture & other Free Knowledge initiatives. I'm also working on digitizing various other Kannada literary work with my team at Sanchaya. Vachana Sanchaya: 11th century Kannada literature to enrich Wikisource blog on Wikimedia talks about our other efforts. Recently participated in Mediawiki Train the Trainer Program at Bangalore. I'm also a FOSS contributor, Kannada technology blogger (Exclusive on FOSS).
- ಪವಿತ್ರ Active contributor for Kannada Wikiquote, Wikipedia. She has worked been an active volunteer contributor (Data scientist) for Open knowledge initiatives at Sanchaya which includes, Vachana Sanchaya, Pustaka Sanchaya & Samooha sanchaya projects. Her python development skills help us work with metadata & also with pywikibot extensively. She has attended Bangalore Language Engineering Meetup November 2012, various Kannada wikipedia meetups, MWTTT - Bangalore 2015 etc.
- ದೇವರಾಜ್ Editor on Kannada wikipedia, Volunteers as a developer behind Open knowledge initiatives of Sanchaya including Vachana Sanchaya, Pustaka Sanchaya & Samooha sanchaya projects, FOSS contributor.
ಸಮುದಾಯ ಪ್ರಕಟಣೆಗಳು
[ಬದಲಾಯಿಸಿ]- ಕನ್ನಡ ವಿಕಿಪೀಡಿಯ ಅರಳಿಕಟ್ಟೆ ಪ್ರಕಟಣೆ: ಪುಸ್ತಕ ಪ್ರಿಯರನ್ನು ಕನ್ನಡ ವಿಕಿಪೀಡಿಯ ಸಂಪಾದಕರನ್ನಾಗಿಸುವ ಯೋಜನೆ (IEG)
- ಮೇಲಿಂಗ್ ಲಿಸ್ಟ್ ಪ್ರಕಟಣೆ: Wikikn-l ಪುಸ್ತಕ ಪ್ರಿಯರನ್ನು ಕನ್ನಡ ವಿಕಿಪೀಡಿಯ ಸಂಪಾದಕರನ್ನಾಗಿಸುವ ಯೋಜನೆ