ಸದಸ್ಯ:Bathish786/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವ್ಯಕ್ತಿ ಪರಿಚಯ: ರಾಷ್ಟ್ರಕವಿ ಕುವೆಂಪು

'ಕುವೆಂಪು’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ನಾಡಿನ ಶ್ರೇಷ್ಠಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಹುಟ್ಟಿದ್ದು, 1904ರ ಡಿಸೆಂಬರ್ 29ರಂದು. ಕನ್ನಡ ಕಾದಂಬರಿಕಾರ, ಕವಿ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಅವರು ಸಲ್ಲಿಸಿದ ಸೇವೆ ಅನನ್ಯ. 20 ನೇ ಶತಮಾನದ ಅತ್ಯುತ್ತಮ ಕನ್ನಡ ಕವಿ ಎಂದೇ ಪ್ರಸಿದ್ಧರಾಗಿರುವ ಕುವೆಂಪು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು.

ಕನ್ನಡ ಸಾಹಿತ್ಯ ಲೋಕಕ್ಕೆ ಕುವೆಂಪು ಅವರ ಕೊಡುಗೆಗೆಳನ್ನು ಗಮನಿಸಿ ಕರ್ನಾಟಕ ಸರಕಾರ ಅವರನ್ನು ರಾಷ್ಟ್ರಕವಿ ಎಂದು ಘೋಷಿಸಿತು. ಶ್ರೀ ರಾಮಾಯಣ ದರ್ಶನಂ ಕುವೆಂಪು ಅವರ ಮಹಾಕಾವ್ಯವಾಗಿದ್ದು ಸಾಹಿತ್ಯ ಲೋಕಕ್ಕೆ ಕುವೆಂಪು ನೀಡಿದ ಅಮೂಲ್ಯ ಕೊಡುಗೆ ಎಂದೇ ಪರಿಗಣಿಸಲಾಗುತ್ತದೆ. ಅವರ ಕೊಡುಗೆ "ವಿಶ್ವ ಮಾನವತಾವಾದ" ಎಂದೆದಿಗೂ ಪ್ರಸ್ತುವಾಗಿದ್ದು, ಕುವೆಂಪು ರಚಿಸಿದ "ಜೈ ಭಾರತ ಜನನಿಯ ತನುಜಾತೆ’ ಗೀತೆ ನಾಡಗೀತೆಯಾಗಿ 1988ರಲ್ಲಿ ಸರಕಾರವು ಘೋಷಿಸಿತು.

ಕುವೆಂಪು ಅವರ ತಂದೆಯ ಹೆಸರು ವೆಂಕಟಪ್ಪ ಗೌಡ ಹಾಗೂ ತಾಯಿಯ ಹೆಸರು ಸೀತಮ್ಮ. ಮಲೆನಾಡು ಪ್ರದೇಶವಾದ ತೀರ್ಥಹಳ್ಳಿಯಲ್ಲಿ ಹುಟ್ಟಿಬೆಳೆದ ಕುವೆಂಪು ಪ್ರಕೃತಿ ಸೊಗಸನ್ನು ಆಸ್ವಾದಿಸುತ್ತಾ ಬೆಳೆದವರು. ತೀರ್ಥಹಳ್ಳಿಯಲ್ಲೇ ಪ್ರೌಢಶಿಕ್ಷಣವನ್ನು ಪೂರೈಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪೂರೈಸಿ, 1937ರಲ್ಲಿ ಹೇಮಾವತಿಯವರನ್ನು ಮದುವೆಯಾದರು. ಕುವೆಂಪು ಅವರ ಮಕ್ಕಳು-ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಮತ್ತು ತಾರಿಣಿ.

ಕಾದಂಬರಿಗಳು: ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಮಹಾಕಾವ್ಯ: ಶ್ರೀ ರಾಮಾಯಣ ದರ್ಶನಂ ಕವಿತೆಗಳ ಸಂಗ್ರಹ ಕೊಳಲು, ಪಾಂಚಜನ್ಯ, ನವಿಲು, ಕಿಂದರಿಜೋಗಿ, ಕೋಗಿಲೆ ಮತ್ತು ಸೋವಿಯತ್ ರಷ್ಯಾ (1944), ಶೂದ್ರ ತಪಸ್ವಿ, ಕಿಣಿಕಿಣಿ, ಅಗ್ನಿಹಂಸ, ಪ್ರೇಮ ಕಾಶ್ಮೀರ (1946), ಚಂದ್ರಮಂಚಕೆ ಬಾ ಚಕೋರಿ, ಕಬ್ಬಿಗನ ಕೈಬುಟ್ಟಿ ಇತರೆ.