ಸದಸ್ಯ:Amitha agnes/sandbox
ಗೋಚರ
ಸಚಿನ್ ತೆಂಡೂಲ್ಕರ್ ಸಚಿನ್ ರಮೇಶ್ ತೆಂಡೂಲ್ಕರ್ (ಜನನ: ೨೪-ಏಪ್ರಿಲ್-೧೯೭೩) ಭಾರತದ ಕ್ರಿಕೆಟ್ ಆಟಗಾರ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ವಿಸ್ಡನ್ ಪತ್ರಿಕೆ ಇವರನ್ನು ಸರ್ ಡಾನ್ ಬ್ರಾಡ್ಮನ್ ನಂತರ ವಿಶ್ವದ ಅತಿ ಶ್ರೇಷ್ಠ ಆಟಗಾರರೆಂದು ಹೆಸರಿಸಿತ್ತು. ಬಾಲಕನಾಗಿದ್ದಾಗಲೇ ಕ್ರಿಕೆಟ್ ಆಟದಲ್ಲಿ ಉತ್ತಮ ಕೌಶಲ್ಯ ತೋರಿದ ಬಲಗೈ ಬ್ಯಾಟ್ಸ ಮನ್ ಸಚಿನ್, ಮುಂಬೈ ತಂಡದ ಪರವಾಗಿ ರಣಜಿ ಪಂದ್ಯಗಳನ್ನಾಡಿದರು. ನಂತರ, ತಮ್ಮ ಹದಿನಾರನೇ ವಯಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ೧೯೮೯ರಲ್ಲಿ ಟೆಸ್ಟ್ ಪಂದ್ಯ ಆಡುವುದರ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರರಾದರು. ಒಂದು ದಿನದ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಬ್ಯಾಟ್ ಮಾಡುವ ಸಚಿನ್, ಟೆಸ್ಟ್ ಪಂದ್ಯಗಳಲ್ಲಿ ನಾಲ್ಕನೆ ಕ್ರಮಾಂಕ ದಲ್ಲಿ ಆಡುವುದು ಸಾಮಾನ್ಯ. ಅವಶ್ಯವೆನಿಸಿದಾಗ, ನಿಧಾನ ವೇಗದ ಬೌಲಿಂಗ್ ಕೂಡ ಮಾಡುವುದುಂಟು. ೧೬ ನವಂಬರ್ ೨೦೧೩ರಂದು, ಸಚಿನ್ ಕ್ರಿಕೆಟ್ ಗೆ ವಿದಾಯ ಹೇಳಿದ ದಿನ, ಭಾರತ ಸರ್ಕಾರವು ಅವರಿಗೆ ಸರ್ವೋಚ್ಚ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಘೋಷಿಸಿತು. ಇದನ್ನು ಅವರು ತಮ್ಮ ತಾಯಿಗೆ ಅರ್ಪಿಸಿದರು.
ವಿಶ್ವ ದಾಖಲೆಗಳು ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು. ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು ಅತಿ ಹೆಚ್ಚು ಟೆಸ್ಟ್ ಪಂದ್ಯಗಳು ಅತಿ ಹೆಚ್ಚು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ರನ್ನುಗಳು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಪುರುಷೋತ್ತಮ ಪ್ರಶಸ್ತಿಗಳು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೨೦೦ ರನ್ ಹೊಡೆದ ಮೊದಲ ಆಟಗಾರ ವಿಶ್ವಕಪ್ ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ನುಗಳು ಟೆಸ್ಟ್ ಪಂದ್ಯಗಳಲ್ಲಿ ೫೦ ಶತಕಗಳಿಸಿದ ವೊದಲನೆ ಆಟಗಾರ