ವಿಷಯಕ್ಕೆ ಹೋಗು

ಸದಸ್ಯ:ವೆಂಕಟೇಶ ತರೀಕೆರೆ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾವಯವ ರಸಾಯನಶಾಸ್ತ್ರದಲ್ಲಿ ಹೈಡ್ರೋಕಾರ್ಬನ್ ಎಂದರೆ ಕೇವಲ ಹೈಡ್ರೋಜನ್ ಮತ್ತು ಕಾರ್ಬನ್‍ಗಳನ್ನು ಒಳಗೊಂಡ ಒಂದು ಸಂಯುಕ್ತ ವಸ್ತು[]. ಆಲ್‍ಕೇನ್, ಆಲ್‍ಕೀನ್, ಆಲ್‍ಕೈನ್ ಮತ್ತು ಆರೋಮಾಟಿಕ್ ವಿಧಧ ಸಂಯುಕ್ತಗಳು ಈ ಗುಂಪಿಗೆ ಸೇರುತ್ತವೆ. ಇವುಗಳು ಭೂಮಿಯಲ್ಲಿ ಪ್ರಮುಖವಾಗಿ ಕಚ್ಚಾತೈಲದ ರೂಪದಲ್ಲಿ ದೊರಕುತ್ತವೆ. ಕಾರ್ಬನ್ನಿಗಿರುವ ಕ್ಯಾಟಿನೇಷನ್ ಎಂಬ ವಿಶೇಷ ಗುಣದಿಂದಾಗಿ ಅನಿಯಮಿತ ಸಂಖ್ಯೆಯ ಹೈಡ್ರೋಕಾರ್ಬನ್‍ಗಳು ನೈಸರ್ಗಿಕವಾಗಿ ಹಾಗು ಕೃತಕವಾಗಿ ತಯಾರಿಸಲು ಸಾಧ್ಯವಾಗಿದೆ.

ಹೈಡ್ರೋಕಾರ್ಬನ್ ವಿಧಗಳು

[ಬದಲಾಯಿಸಿ]
  1. ಸ್ಯಾಚುರೇಟಡ್ ಹೈಡ್ರೋಕಾರ್ಬನ್‍ಗಳು (ಆಲ್‍ಕೇನ್‌ಗಳು) ಅತ್ಯಂತ ಸರಳ ಹೈಡ್ರೋಕಾರ್ಬನ್‍ಗಳಾಗಿದ್ದು, ಇವುಗಳಲ್ಲಿ ಕಾರ್ಬನ್‍ಗಳ ನಡುವೆ ಕೇವಲ ಒಂದು ಬಾಂಡ್ ಇರುತ್ತದೆ. ಇವುಗಳ ಸಾಮಾನ್ಯ ಸೂತ್ರ CnH2n+2 ಆಗಿರುತ್ತದೆ[]. ಪೆಟ್ರೋಲಿಯಂ ಇಂಧನಗಳಲ್ಲಿ ಪ್ರಮುಖವಾಗಿ ಕಾಣಸಿಗುವ ಆಲ್‍ಕೇನ್‌ಗಳು ಶಕ್ತಿಯ ಪ್ರಮುಖ ಆಕರಗಳಾಗಿವೆ. ಇವುಗಳು ರಚನೆಯಲ್ಲಿ ನೇರ ಅಥವಾ ಟಿಸಿಲಾದ ಕಾರ್ಬನ್‍ ಸರಪಳಿಯನ್ನು ಹೊಂದಿರುತ್ತವೆ.
  2. ಅನ್‍ಸ್ಯಾಚುರೇಟಡ್ ಹೈಡ್ರೋಕಾರ್ಬನ್‍ಗಳಲ್ಲಿ ಕಾರ್ಬನ್‍ಗಳ ನಡುವೆ ಎರಡು ಅಥವಾ ಮೂರು ಬಾಂಡ್‍ಗಳಿರುತ್ತವೆ. ಎರಡು ಬಾಂಡ್‍ಗಳನ್ನು ಹೊಂದಿರುವ ಹೈಡ್ರೋಕಾರ್ಬನ್‍ಗಳನ್ನು ಆಲ್‍ಕೀನ್ಗಳೆಂದೂ, ಮೂರು ಬಾಂಡ್‍ಗಳನ್ನು ಹೊಂದಿರುವ ಹೈಡ್ರೋಕಾರ್ಬನ್‍ಗಳನ್ನು ಆಲ್‍ಕೈನ್‍ಗಳೆಂದೂ ಕರೆಯಲಾಗುತ್ತದೆ. ಆಲ್‍ಕೀನ್‍ಗಳ ಸಾಮಾನ್ಯ ಸೂತ್ರ CnH2n [] ಆದರೆ, ಆಲ್‍ಕೈನ್‍ಗಳ ಸಾಮಾನ್ಯ ಸೂತ್ರ CnH2n-2 [] ಆಗಿದೆ.
  3. ಸೈಕ್ಲೋಆಲ್‍ಕೇನ್‌ಗಳಲ್ಲಿ ಹೈಡ್ರೋಜನ್‍ಗಳಿಗೆ ಬಾಂಡ್ ಆಗಿರುವ ಕಾರ್ಬನ್ನಿನ ಒಂದಾದರೂ ಚಕ್ರವಿರಬೇಕು.
  4. ಆರೋಮಾಟಿಕ್ ಹೈಡ್ರೋಕಾರ್ಬನ್‍ಗಳಲ್ಲಿ ಒಂದಾದರೂ ಆರೋಮಾಟಿಕ್ ಚಕ್ರವಿರಬೇಕು.

ಸಾಮಾನ್ಯ ಹೈಡ್ರೋಕಾರ್ಬನ್‍ಗಳು

[ಬದಲಾಯಿಸಿ]
ಶಿರೋಲೇಖ ಶಿರೋಲೇಖ ಶಿರೋಲೇಖ ಶಿರೋಲೇಖ
ಕಾರ್ಬನ್‍ಗಳ ಸಂಖ್ಯೆ ಆಲ್‍ಕೇನ್ ಆಲ್‍ಕೀನ್ ಆಲ್‍ಕೈನ್‍ಗಳು
ಮೀಥೇನ್ - -
ಈಥೇನ್ ಈಥೀನ್ ಈಥೈನ್
ಪ್ರೋಪೇನ್ ಪ್ರೋಪೀನ್ ಪ್ರೊಪೈನ್
ಬ್ಯೂಟೇನ್ ಬ್ಯೂಟೀನ್ ಬ್ಯೂಟೈನ್
ಪೆಂಟೇನ್ ಪೆಂಟೀನ್ ಪೆಂಟೈನ್
ಹೆಕ್ಸೇನ್ ಹೆಕ್ಸೀನ್ ಹೆಕ್ಸೈನ್
ಹೆಪ್ಟೇನ್ ಹೆಪ್ಟೀನ್ ಹೆಪ್ಟೈನ್
ಆಕ್ಟೇನ್ ಆಕ್ಟೀನ್ ಆಕ್ಟೈನ್
  1. Silberberg, 620
  2. Silderberg, 623
  3. Silderberg, 628
  4. Silderberg, 631