ವಿಷಯಕ್ಕೆ ಹೋಗು

ಸದಸ್ಯ:BEVAN DEVAIAH/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಳಿತಾಯ ಬ್ಯಾಂಕ್ ಖಾತೆಗಳು (SAVINGS BANK ACCOUNT)

ಜನಸಾಮಾನ್ಯರಲ್ಲಿ ಉಳಿತಾಯ ಮತ್ತು ಮಿತವ್ಯಯವನ್ನು ಪ್ರೋತ್ಸಾಹಿಸಲು ಉಳಿತಾಯ ಖಾತೆಗಳನ್ನು ತೆರೆಯಲಾಗುತ್ತದೆ. ಎಲ್ಲ ವರ್ಗದ ಜನರೂ ಈ ಖಾತೆಗಳನ್ನು ತೆರೆಯಬಹುದು. ಈ ಸೌಲಬ್ಯವನ್ನು ಅಂಚೆ ಕಚೆರಿಗಳು ಹಾಗೂ ಸಹಕಾರ ಬ್ಯಾಂಕುಗಳು ಸಹ ಜನರಿಗೆ ಒದಗಿಸುತ್ತಿವೆ. ಉಳಿತಾಯ ಖಾತೆಯನ್ನು ಸಾಮಾನ್ಯವಾಗಿ ವ್ಯಕ್ಥಿಗಳೇ ತೆರಯಬೇಕು. ಉಳಿತಾಯ ಮಾಡುವವರು ಕೇವಲ ವ್ಯಕ್ತಿಗಳೆಂದೂ, ಸರಕಾರಿ ಇಲಾಖೆಗಳು, ಸರಕಾರದ ಅನುದಾನ ಪಡೆದ ಸಂಸ್ಥೆಗಳು, ನಗರಸಭೆಗಳು, ರಾಜ್ಯ ಗೃಹ ನಿರ್ಮಾಣ ಮಂಡಳಿಗಳು ಅಥವಾ ಸರಕಾರದ ಇತರ ಸಂಸ್ಥೆಗಳು ಉಳಿತಾಯ ಖಾತೆಗಳನ್ನು ತೆರೆಯಬಾರದೆಂದೂ ನಿರ್ಭಂದವನ್ನು ರೆಸೆರ್ವ್ ಬ್ಯಾಂಕ್ ಹೇರಿದೆ. ಆದರೆ ಟ್ರುಷ್ಟುಗಳು, ಶಿಕ್ಷಣ ಸಂಸ್ಥೆಗಳು, ಕ್ಲಬ್ಬುಗಳು, ಸಹಕಾರಿ ಸಂಘಗಳು ಮೊದಲಾದ ಸಂಘ ಸಂಸ್ಥೆಗಳ ಹೆಸರಿನಲ್ಲಿ ಉಳಿತಾಯ ಖಾತೆ ತೆರೆಯಲು ಅವಕಾಶವಿದೆ. ಉಳಿತಾಯ ಖಾತೆಯ ಮುಖ್ಯ ಲಕ್ಷಣಗಳನ್ನು ಇಲ್ಲಿ ವಿವರಿಸಲಾಗಿದೆ.

   ಉಳಿತಾಯ ಖಾತೆಗಳು ಎರಡು ವಿಧ : ಚೆಕ್ ಸೌಲಬ್ಯ ಇರುವ ಖಾತೆ ಹಾಗೂ ಚೆಕ್ ಸೌಲಬ್ಯ ಇಲ್ಲದಿರುವ ಖಾತೆ. ಚೆಕ್ ಸೌಲಭ್ಯ ಇಲ್ಲದ ಖಾತೆಗಳಲ್ಲಿ ಠೇವಣೆದಾರರು ಬ್ಯಾಂಕು ವಿಧಿಸಿರುವ ಕನಿಷ್ಠ ಮೊತ್ತದ ಹಣವು ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಬೇರೆ ಬೇರೆಯಾಗಿರುತ್ತದೆ. ಸಾಮಾನ್ಯವಾಗಿ ಬ್ಯಾಂಕುಗಳು ಚೆಕ್ ಸೌಲಭ್ಯ ಖಾತೆಗಳಿಗೆ ೫೦೦/- ರಿಂದ ೧೦೦೦/- ರೂ. ವರೆಗೆ ಕನಿಷ್ಠ ಶಿಲ್ಕನ್ನು ನಿಗದಿಪಡಿಸುತ್ತವೆ. ಭಾರತದಲ್ಲಿ ಕಾರ್ಯ ನಿರ್ವಹಿಸುವ ವಿದೇಶೀ ಬ್ಯಾಂಕುಗಳು ಈ ಕನಿಷ್ಠ ಮೊತ್ತವನ್ನು ರೂ. ೨೫೦೦೦/- ಎಂದು ನಿಗದಿ ಮಾಡಿವೆ. ಕಾಲಕಾಲಕ್ಕೆ ಈ ಕನಿಷ್ಠ ಶಿಲ್ಕಿನ ಮೊತ್ತದಲ್ಲಿ ಬದಲಾವಣೆಗಳಾಗುತ್ತವೆ. ಈಚೆಗೆ ಭಾರತೀಯ ಸ್ಟೇಟ್ ಬ್ಯಾಂಕು ಉಳಿತಾಯ ಖಾತೆಗಳಿಗೆ ಕನಿಷ್ಠ ನಿಯಮವನ್ನು ತೆಗೆದು ಹಾಕಿದೆ.
   ಉಳಿತಾಯ ಖಾತೆಗಳ ಶಿಲ್ಕುಗಳಿಗೆ ಬ್ಯಾಂಕುಗಳು ಈಗ ಶೇ. ೪ ರಷ್ಟು ಬಡ್ಡಿ ನೀಡುತ್ತಿವೆ. ಇದು ಕಾಲಕಾಲಕ್ಕೆ ಬದಲಾವಣೆ ಆಗಬಹುದು. ಉಳಿತಾಯ ಖಾತೆಗಳ ದೈನಂದಿನ ಶಿಲ್ಕುಗಳ ಮೇಲೆ ಲೆಕ್ಕ ಹಾಕಲಾಗುವ ಈ ಬಡ್ಡಿಯನ್ನು ಆರು ತಿಂಗಳಿಗೊಮ್ಮೆ ಖಾತೆಗೆ ಜಮಾ ಮಾಡಲಾಗುವುದು.
   ಚೆಕ್ ಪುಸ್ತಕವನ್ನು ಬ್ಯಾಂಕಿನವರಿಂದ ಕೇಳಿ ಪಡೆಯಬೇಕು. ಈ ಚೆಕ್ಕುಗಳ ಮೂಲಕ ಖಾತೆಯಿಂದ ಹಣ ಪಡೆಯಬಹುದು ಅಥವಾ ಇತರರಿಗೆ ಹಣ ಪಾವತಿ ಮಾಡಬಹುದು.
   ಚೆಕ್ ಪುಸ್ತಕವನ್ನು ನೀಡಲು ಶುಲ್ಕ ವಿಧಿಸಲಾಗುವುದು.
   ಉಳಿತಾಯ ಖಾತೆಯಲ್ಲಿ ಮೀರೆಳೆತದ ಸೌಲಭ್ಯ ಇರುವುದಿಲ್ಲ.
   ಬಹುತೇಕ ಎಲ್ಲ ಬ್ಯಾಂಕುಗಳೂ ಈಗ ಎ.ಟಿ.ಎಂ .ಗಳನ್ನು ಹೊಂದಿವೆ. ಗ್ರಾಹಕರು ಈ ಯಂತ್ರಗಳ ಮೂಲಕ ಹಣ ಪಡೆಯಲು ಎ.ಟಿ.ಎಂ . ಕಾರ್ಡ್ ಗಳನ್ನು ನೀಡಲಾಗುವುದು. ಎ.ಟಿ.ಎಂ . ಕಾರ್ಡ್ಗಳಿಂದ ಇತರ ಅನುಕೂಲಗಳೂ ಇರುತ್ತವೆ.
   ವಾಣಿಜ ಬ್ಯಾಂಕುಗಳಲ್ಲಿ ಗ್ರಾಹಕರಿಗೆ ಅಂತರಜಾಲ ಬ್ಯಾಂಕಿಂಗ್ ಸೌಲಬ್ಯಾವೂ ಉಂಟು. ಖ್ಹಾತೆಗಳಲ್ಲಿನ ಶಿಲ್ಕನ್ನು / ವಹಿವಾಟುಗಳನ್ನು ತಿಳಿದುಕೊಳ್ಳಲು, ವಹಿವಾಟುಗಳ ತಃಕ್ತಗಳನ್ನು ಮುದ್ರಿಸಿಹೊಳ್ಳಲು, ಚೆಕ್ ಪುಸ್ತಕ ಅಥವಾ ಡ್ರಾಫ್ಟ್ ಗೆ ಕೋರಿಕೆ ಸಲ್ಲಿಸಲು ಮತ್ತು ಅದೇ ಬ್ಯಾಂಕಿನಲ್ಲಿ ಅಥವಾ ಬೇರೆ ಬ್ಯಾಂಕುಗಳಲ್ಲಿರುವ ತನ್ನ ಅಥವಾ ಇತರರ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡುವುದು, ವಿದ್ಯುತ್, ಫೋನು ಹಾಗೂ ನೀರಿನ ಬಿಲ್ಲುಗಳ ಪಾವತಿ ಮುಂತಾದ ಸೌಲಬ್ಯಗಳು ಅಂತರಜಾಲ ಬ್ಯಾಂಕಿಂಗ್ ಮೂಲಕ ದೊರೆಯುತ್ತದೆ. ಗ್ರಾಹಕರು ಬ್ಯಾಂಕಿಗೆ ಹೋಗುವ ಅಗತ್ಯವಿಲ್ಲದ ತಮ್ಮ ಮನೆ ಅಥವಾ ಕಚೇರಿಯಲ್ಲಿ ಕುಳಿತು ಗಣಕದ ನೆರವಿನಿಂದ ಅಂತರಜಾಲದ ಮೂಲಕ ಈ ಕೆಲಸಗಳನ್ನು ತಾವೇ ಮಾಡಿಕೊಳ್ಳಬಹುದು.

ಚಾಲ್ತಿ ಖಾತೆಗೆ ಅನ್ವಯವಾಗುವ ಉಳಿದ ನಿಯಮಗಳು ಈ ಉಳಿತಾಯ ಖ್ಹಾತೆಗಳಿಗೂ ಅನ್ವಯವಾಗುತ್ತವೆ. ಚೆಕ್ಕುಗಳಿಲ್ಲದ ಉಳಿತಾಯ ಖಾತೆಯಿಂದ ಗ್ರಾಹಕನು ಬ್ಯಾಂಕಿಗೇ ಬಂದು ಹಣವನ್ನು ತೆಗೆಯಬೇಕಾಗಿರುವುದರಿಂದ ಅವನು ಪಾಸ್ ಬುಕ್ಕನ್ನು ತರಲೇಬೇಕು.

ಈ ಉಳಿತಾಯ ಖಾತೆಗಳನ್ನು ತೆರೆಯುವಾಗ ಗ್ರಾಹಕನು ಬ್ಯಾಂಕಿಗೆ ಸಮಾದಾನಕರ ಪರಿಚಯವನ್ನು ಮಾಡಿಕೊಡಬೇಕಾಗುವುದು. ಖಾತೆ ತೆರೆಯುವಾಗ ಖಾತೆದರನ ಎರಡು ಭಾವಚಿತ್ರಗಳನ್ನು ಬ್ಯಾಂಕಿಗೆ ಕೊಡಬೇಕಾಗಿರುವುದು. ಬ್ಯಾಂಕುಗಳ ಎಲ್ಲ ಖಾತೆಗಳ ಹಾಗೆ ಈ ಖ್ಹಾತೆಗಳೂ ರಿಸೆರ್ವ್ ಬ್ಯಾಂಕಿನ 'ನಿಮ್ಮ ಗ್ರಾಹಕನ್ನು ತಿಳಿಯಿರಿ' ಆದೇಶಗಳು ಅನ್ವಯಿಸುತ್ತವೆ. ಉಳಿತಾಯ ಖಾತೆ ಇರಲಿ ಅಥವಾ ಚಾಲ್ತಿ ಖಾತೆ ಇರಲಿ, ಗ್ರಾಹಕನ ಮಾದರಿ ಸಹಿಯನ್ನು ಖಾತೆ ತೆರೆಯುವ ಫಾರ್ಮಿನ ಮೇಲೆ ಬ್ಯಾಂಕ್ ಅಧಿಕಾರಿಯ ಮುಂದೆ ನೀಡಬೇಕಾಗುವುದು. ಪ್ರತಿ ಸಲ ಹಣವನ್ನು ತೆಗೆಯುವಾಗ ಬ್ಯಾಂಕಿನವರು ಈ ಮಾದರಿ ಸಹಿಯೊಂದಿಗೆ ಪರೀಕ್ಷಿಸಿ ನೋಡುತಾರೆ. ಒಮ್ಮೆ ಮಾದರಿ ಸಹಿ ಕೊಟ್ಟ ಮೇಲೆ, ಯಾವುದಾದರೂ ಕಾರಣದಿಂದ ಬದಲಾಗಬಹುದು. ಆಗ ಗ್ರಾಹಕನು ಹೊಸ ಮಾದರಿ ಸಹಿಯನ್ನು ನೀಡಬೇಕಾಗುವುದು. ಒಂದೊಂದು ಸಲ ಖಾತೆದರನು ಬೇರೆ ವ್ಯಕ್ತಿಯ ಮೂಲಕ ನಿರ್ವಹಣೆ ಪತ್ರವನ್ನು ಕೊಟ್ಟು ಖಾತೆಯಿಂದ ಹಣವನ್ನು ಪಡಯಬಹುದು.