ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Dhanush kadri/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತಾರಾಷ್ಟ್ರೀಯ ಪುನಾರಚನೆ ಮತ್ತು ಅಭಿವೃದ್ಧಿ ಬ್ಯಾಂಕು (ಐ.ಬಿ.ಆರ್.ಡಿ)

ಅಂತಾರಾಷ್ಟ್ರೀಯ ಪುನಾರಚನೆ ಮತ್ತು ಅಭಿವೃದ್ಧಿ ಬ್ಯಾಂಕು ವಿಶ್ವಬ್ಯಾಂಕು ಎಂದು ಪ್ರಖ್ಯಾತಿ ಪಡೆದಿರುವ ಈ ಸಂಸ್ಥೆ ಅಂತಾರಾಷ್ಟ್ರೀಯ ದ್ರವ್ಯನಿಧಿಯೊಂದಿಗೆ ವಿಶ್ವಸಂಸ್ಥೆಯ ಒಂದು ಅಂಗವಾಗಿ ಸ್ಥಾಪಿತವಾಯಿತು (ಐ.ಬಿ.ಆರ್.ಡಿ). ಇದು ಅಂತಾರಾಷ್ಟ್ರೀಯಮಟ್ಟದ ಬಂಡವಾಳದ ಸಮಸ್ಯೆಗಳನ್ನು ನಿರ್ವಹಿಸುತ್ತದೆ. 1946ರ ಜೂನ್ ತಿಂಗಳಿನಲ್ಲಿ ತನ್ನ ವ್ಯವಹಾರವನ್ನು ಪ್ರಾರಂಭಿಸಿ ಅರುವತ್ತಕ್ಕೂ ಹೆಚ್ಚು ವರ್ಷಗಳಿಂದ ಕೆಲಸ ಮಾಡುತ್ತಿದ್ದು 185 ರಾಷ್ಟ್ರಗಳ ಸದಸ್ಯತ್ವವನ್ನು ಹೊಂದಿದೆ. ವಿತರಣೆ ಸುಮಾರು 9 ಬಿಲಿಯನ್ ಡಾಲರುಗಳು. ಇದರ ಪ್ರಧಾನ ಕಛೇರಿ ವಾಷಿಂಗ್ಟನ್ನಲ್ಲಿದೆ.

The Gold Room at the Mount Washington Hotel where the IMF and World Bank were established ಮೊದಲು ಈ ಬ್ಯಾಂಕಿನ ಆರ್ಥಿಕ ಬಂಡವಾಳ 10 ಬಿಲಿಯನ್ ಡಾಲರುಗಳಷ್ಟಿತ್ತು. ಬೇರೆ ಬೇರೆ ಘಟ್ಟಗಳಲ್ಲಿ ಬೆಳೆದು ಈಗಿನ ಬಂಡವಾಳ 24 ಬಿಲಿಯನ್ ಡಾಲರುಗಳಾಗಿದೆ. ಪ್ರತಿಯೊಂದು ಸದಸ್ಯ ರಾಷ್ಟ್ರದ ಬಂಡವಾಳ ಈ ಕೆಳಗೆ ಕಂಡ ಅಂಶಗಳ ಆಧಾರದ ಮೇಲೆ ನಿರ್ಣಯವಾಗುತ್ತದೆ. 1. ರಾಷ್ಟ್ರೀಯ ಆದಾಯದ ಶೇ.2 ರಷ್ಟು. 2. ಚಿನ್ನ ಮತ್ತು ಡಾಲರ್ ಉಳಿಕೆಯ ಶೇ.5 ರಷ್ಟು. 3.ಸರಾಸರಿ ಆಮದಿನ ಶೇ.10 ರಷ್ಟು. 4. ರಫ್ತಿನ ಪರಮಾವಧಿ ವ್ಯತ್ಯಾಸದ ಶೇ.10ರಷ್ಟು. 5. ಮೇಲಿನ ನಾಲ್ಕು ಅಂಶಗಳ ಮೊತ್ತಕ್ಕೆ ಸರಾಸರಿ ರಫ್ತು ವರಮಾನದ ಶೇಕಡ ಪ್ರಮಾಣದಷ್ಟನ್ನು ಕೂಡಿಸಿದಷ್ಟು.

ಸದಸ್ಯತ್ವ ಸದಸ್ಯತ್ವ ಪಡೆಯಲು ಪ್ರತಿಯೊಂದು ರಾಷ್ಟ್ರವೂ ತನ್ನ ಭಾಗದ 20ರಷ್ಟನ್ನು (ಶೇ.2 ರಷ್ಟು ಚಿನ್ನ ಅಥವಾ ಅಮೆರಿಕ ಡಾಲರಿನ ರೂಪದಲ್ಲಿ, ಶೇ.18 ರಷ್ಟನ್ನು ತನ್ನ ರಾಷ್ಟ್ರದ ಹಣದ ರೂಪದಲ್ಲಿ ಕೊಟ್ಟು ಉಳಿದ ಶೇ.80 ಭಾಗವನ್ನು ಭರವಸೆಯ ನಿಧಿಗೆ ಕೊಡಬೇಕಾಗುತ್ತದೆ. ತನ್ನ ಜವಾಬ್ದಾರಿಯನ್ನು ಪುರೈಸಲು ಅನಿವಾರ್ಯವಾದಾಗ ಮಾತ್ರ ಈ ಭರವಸೆಯ ನಿಧಿಯ ಹಣವನ್ನು ಬ್ಯಾಂಕು ಬಳಸಿಕೊಳ್ಳುವ ಅಧಿಕಾರ ಹೊಂದಿದೆ. ಬಂಡವಾಳದ ವಿತರಣೆಗೆ ಅನುಕೂಲವಾಗುವಂತೆ ಒಂದು ಮೂಲ ವ್ಯವಸ್ಥೆಯ ರೂಪವನ್ನು ಅಂತಾರಾಷ್ಟ್ರೀಯ ದ್ರವ್ಯನಿಧಿ ಕೊಟ್ಟಿರುವ ಹಾಗೆ ಈ ಬ್ಯಾಂಕು ಯುದ್ಧದ ಪರಿಣಾಮದಿಂದ ಕುಸಿದ ಆರ್ಥಿಕ ವ್ಯವಸ್ಥೆಗೆ ಪುನಾರಚನೆಗೆ ಸಹಾಯ ಮಾಡಿ, ಹಿಂದುಳಿದ ರಾಷ್ಟ್ರಗಳ ಅಭಿವೃದ್ಧಿಗೆ ಉತ್ಪಾದನೆಯ ಉದ್ದೇಶಗಳಿಗೋಸ್ಕರ ಹಣವನ್ನು ಒದಗಿಸಿ, ಸಂಪನ್ಮೂಲಗಳ ಬೆಳವಣಿಗೆಗೆ ನೆರವು ಕೊಡುತ್ತದೆ; ಅಂತಾರಾಷ್ಟ್ರೀಯ ವ್ಯಾಪಾರ ಸುಸಂಗತವಾದ ರೀತಿಯಲ್ಲಿ ಬೆಳೆಯುವುದಕ್ಕೆ ಅನುಕೂಲ ಮಾಡಿಕೊಡುವುದಲ್ಲದೆ ದೀರ್ಘಾವಧಿ ಬಂಡವಾಳ ಹೂಡಿಕೆಗೆ ಉತ್ತೇಜನ ಕೊಟ್ಟು ತನ್ಮೂಲಕ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗೊಳಿಸಿ ಸಲ್ಲಬೇಕಾದ ಸಾಲವನ್ನು ನಿಧಾನವಾಗಿ ತೆಗೆದುಕೊಳ್ಳುತ್ತದೆ. ಇದರಿಂದ ಸದಸ್ಯ ರಾಷ್ಟ್ರಗಳಲ್ಲಿನ ಜೀವನಮಟ್ಟ ಏರುವುದಕ್ಕೂ ಅಲ್ಲಿನ ಕಾರ್ಮಿಕ ವರ್ಗದ ಸ್ಥಿತಿಗತಿಗಳು ಉತ್ತಮಗೊಳ್ಳುವುದಕ್ಕೂ ಸಹಾಯವಾಗಿದೆ.

ಸಹಾಯ ಬ್ಯಾಂಕಿನ ಸಹಾಯ ಮೂರು ವಿಧವಾಗಿದೆ: 1. ಸಾಮಾನ್ಯ ಹೂಡಿಕೆ ವಿಧಾನಗಳ ಮೂಲಕ ಖಾಸಗಿ ಬಂಡವಾಳಗಾರರು ಮಾಡಿದ ಸಾಲಕ್ಕೆ ನೀಡುವ ಭರವಸೆ. 2. ಅದರ ನಿಧಿಯಿಂದ ನೇರವಾಗಿ ಸಾಲ ನೀಡಿಕೆ. 3. ಬ್ಯಾಂಕಿನ ಸದಸ್ಯ ರಾಷ್ಟ್ರಗಳಲ್ಲಿ ಖಾಸಗಿ ಬಂಡವಾಳಗಾರರಿಂದ ಆ ಬ್ಯಾಂಕು ಪಡೆದ ಸಾಲರೂಪದ ನಿಧಿಯಿಂದ ಸಾಲಕೊಡುವುದು. ಸಾಲವನ್ನು ಪಡೆಯುವ ಸದಸ್ಯ ರಾಷ್ಟ್ರಗಳ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ತಾನು ತೃಪ್ತಿಗೊಂಡ ಮೇಲೆ ಮತ್ತು ಸಾಲವನ್ನು ಕೊಡಲು ನಡೆಸುವ ನಿರ್ದಿಷ್ಟ ಯೋಜನೆಗಳ ಮಹತ್ವವನ್ನು ಕಂಡುಕೊಂಡ ಅನಂತರ ಬ್ಯಾಂಕು ತನ್ನ ಸದಸ್ಯ ರಾಷ್ಟ್ರಗಳಿಗೆ ಸಾಲವನ್ನು ನೀಡುತ್ತದೆ. ಸಾಲವನ್ನು ನೀಡುವುದರಲ್ಲಿ ಬ್ಯಾಂಕ್ ನ್ಯಾಯವಾದ ಜವಾಬ್ದಾರಿಯುತ ಹೊಣೆಯನ್ನು ಹೊರುವುದಕ್ಕೆ ತಯಾರಿದೆ. ಈ ಹಣ ರಚನಾತ್ಮಕವಾಗಿ ಪ್ರಾಯೋಗಿಕ ಕೆಲಸಗಳಿಗೆ ಉಪಯೋಗವಾಗಬೇಕೆಂಬುದು ಅದರ ಅಪೇಕ್ಷೆ. ಯಾವ ಉದ್ದೇಶಕ್ಕಾಗಿ ಹಣವನ್ನು ಒದಗಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಹಣ ಬಳಸಲಾಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಮತ್ತು ನಿಯಂತ್ರಿಸಲು ಬ್ಯಾಂಕು ಅಧಿಕಾರವನ್ನು ಹೊಂದಿದೆ. ಈ ಬ್ಯಾಂಕು ಹಿಂದುಳಿದಿರುವ ರಾಷ್ಟ್ರಗಳಿಗೆ ಸಾಲವನ್ನು ಒದಗಿಸಲು ಒಂದು ಹೊಸ ಪ್ರಯೋಗತಂತ್ರವನ್ನು ರೂಪಿಸಿದೆ. ಸದಸ್ಯ ರಾಷ್ಟ್ರಗಳಲ್ಲಿ ಬ್ಯಾಂಕು ಗಳಿಸಿರುವ ಅಥವಾ ಅಂಥ ಸಂಸ್ಥೆಗಳಿಂದ ಸ್ಥಾಪಿತವಾದ ಸಂಸ್ಥೆಗಳಿಗೆ ಈ ಬ್ಯಾಂಕು ಹಣವನ್ನು ನೀಡಿ ಸಣ್ಣ ಸಣ್ಣ ಯೋಜನೆಗಳಿಗೆ ಅವಕಾಶಮಾಡಿಕೊಡುತ್ತದೆ. ಇಂಥ ಯೋಜನೆಗಳನ್ನು ಎಲ್ಲಾ ರೀತಿಯಿಂದಲೂ ಪರೀಕ್ಷೆ ಮಾಡುತ್ತ ಅವುಗಳ ಮೂಲ ಆದರ್ಶಗಳಿಗೆ ಮತ್ತು ಉದ್ದೇಶಗಳಿಗೆ ಹಣ ದೊರಕುವಂತೆ ಸಹಾಯ ಮಾಡುತ್ತದೆ. ಭಾರತದಲ್ಲಿ ಕೈಗಾರಿಕಾ ಆರ್ಥಿಕ ಕಾರ್ಪೋರೇಷನ್ ಸರ್ಕಾರದಿಂದ ಮೊದಲೇ ಆದೇಶವನ್ನು ಪಡೆದುಕೊಂಡು ಈ ಬ್ಯಾಂಕಿನಿಂದ ಹಣವನ್ನು ಪಡೆಯಬಹುದು. ಭಾರತದ ಕೈಗಾರಿಕಾ ಸಾಲ ಮತ್ತು ಬಂಡವಾಳ ಕಾರ್ಪೋರೇಷನ್ನಿಗೆ ಆಗಿಂದಾಗ್ಗೆ ಬೇರೆ ಬೇರೆ ರಾಜ್ಯಗಳಲ್ಲಿ ಚಲಾವಣೆಯಿರುವ ನಾಣ್ಯಗಳ ಸಾಲವನ್ನು ಕೊಡಲು ವಿಶ್ವಬ್ಯಾಂಕ್ ಒಪ್ಪಿಕೊಂಡಿದೆ. ಭಾರತ ಸರ್ಕಾರ ಪಡೆದ ಹಣವನ್ನು ಬಡ್ಡಿಯ ಸಮೇತ ಹಿಂದಿರುಗಿಸಿಕೊಡಲು ಭರವಸೆಯನ್ನಿತ್ತಿದೆ. ಈ ಬ್ಯಾಂಕು ಯಾವ ವಿಧದಲ್ಲೂ ವಿದೇಶಿ ಖಾಸಗಿ ಬಂಡವಾಳ ಸಂಸ್ಥೆಗಳಿಗೆ ಸ್ಪರ್ಧಿಯಾಗಿಲ್ಲ; ಅವುಗಳಿಗೆ ಪುರಕವಾಗಿ ವ್ಯವಹರಿಸುತ್ತಿದೆ. ಬ್ಯಾಂಕಿನ ಸಾಲಗಳು ಎಲ್ಲಾ ದೊಡ್ಡ ಆರ್ಥಿಕ ಕ್ಷೇತ್ರಗಳಿಗೂ ದೊರೆತಿವೆ. ಆದರೆ ಮುಖ್ಯವಾಗಿ ಸಾಗಾಣಿಕೆ, ವಿದ್ಯುಚ್ಛಕ್ತಿ, ಕೈಗಾರಿಕೆ, ವ್ಯವಸಾಯ, ದೂರಸಂಪರ್ಕ, ನೀರುಸರಬರಾಜು ಮತ್ತು ಇತ್ತೀಚೆಗೆ ವಿದ್ಯಾಭ್ಯಾಸ - ಇಂಥ ಬಾಬುಗಳಿಗೆ ಈ ಸಾಲಗಳು ಸಿಕ್ಕಿವೆ.

ಇತ್ತೀಚಿಗಿನ ಬೆಳವಣಿಗೆ ಈಚೆಗೆ ಬ್ಯಾಂಕು ಬಹಳವಾಗಿ ಮುಂದುವರಿದು ಅಭಿವೃದ್ಧಿಹೊಂದಿ ಎಲ್ಲರ ಮೆಚ್ಚುಗೆ ಪಡೆದಿದೆ. ಪ್ರಾರಂಭದಲ್ಲಿ ಇದು ಯುರೋಪಿನ ಪುನಾರಚನೆಯ ಸಮಸ್ಯೆಗಳಿಗೆ ಹೆಚ್ಚು ಗಮನವನ್ನು ಕೊಟ್ಟಿತ್ತಾದರೂ ಈಗ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕ ಸ್ಥಿತಿಯನ್ನು ಬೇಗ ಉತ್ತಮಗೊಳಿಸುವ ವಿಷಯಕ್ಕೆ ಹೆಚ್ಚು ಹೆಚ್ಚು ಗಮನವಿತ್ತಿದೆ. ಬ್ಯಾಂಕಿನ ಚರಿತ್ರೆಯಲ್ಲಿ ಮತ್ತೊಂದು ಮುಖ್ಯವಾದ ಪ್ರಗತಿಯನ್ನು ಇಲ್ಲಿ ಹೇಳಬೇಕಾದ್ದು ಅತ್ಯಗತ್ಯ. ಇದು ಮತ್ತು 1960ನಲ್ಲ್ಲಿ ಸ್ಥಾಪಿತವಾದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯು (ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ ಅಸೋಸಿಯೇಷನ್-ಐ.ಡಿ.ಎ) ವಿಶ್ವಬ್ಯಾಂಕಿನ ಸದಸ್ಯ ರಾಷ್ಟ್ರಗಳ ಉತ್ಪಾದನಾ ಯೋಜನೆಗಳಿಗೆ ಬಂಡವಾಳವನ್ನು ಒದಗಿಸುವ ಉದ್ದೇಶವನ್ನು ಹೊಂದಿರುವ ವಿಚಾರ. ಈ ಅಂತಾರಾಷ್ಟ್ರೀಯ ಅಭಿವೃದ್ದಿ ಸಂಸ್ಥೆಯಲ್ಲಿ ಈಗ 95 ಸದಸ್ಯ ರಾಷ್ಟ್ರಗಳಿವೆ. ಮಾಮೂಲಿನಂತೆ ಸಿಗುತ್ತಿದ್ದ ಸಾಲಕ್ಕಿಂತ ಹೆಚ್ಚಿನ ನೆರವನ್ನು ಮುಂದುವರೆಯುತ್ತಿರುವ ರಾಷ್ಟ್ರಗಳಿಗೆ ಇನ್ನೂ ಹೆಚ್ಚಿನ ರಿಯಾಯಿತಿಗಳೊಂದಿಗೆ ಒದಗಿಸುವುದೇ ಈ ಸಂಸ್ಥೆಯ ವಿಶಿಷ್ಟ ಉದ್ದೇಶ. ಈ ಸಂಸ್ಥೆ ನೀಡಿರುವ ಸಾಲದ ಮೊತ್ತ ಒಟ್ಟು 1 ಬಿಲಿಯನ್ ಡಾಲರುಗಳಿಗೂ ಹೆಚ್ಚಾಗಿದೆ. ಬ್ರೇಟನ್ವುಡ್ಸ ನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ ಭಾರತ ಬ್ಯಾಂಕಿನ ಪ್ರವರ್ತಕ ರಾಷ್ಟ್ರಗಳಲ್ಲೊಂದು; ಅಭಿವೃದ್ಧಿಗೆ ಬ್ಯಾಂಕು ನೀಡುವ ಸಹಾಯವನ್ನು ಗಣನೀಯ ಪ್ರಮಾಣದಲ್ಲಿ ಬಳಸಿಕೊಂಡಿದೆ. ಭಾರತ ದೇಶದಂತಹ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿ ಕಾರ್ಯಗಳಿಗೆ ವಿಶ್ವಬ್ಯಾಂಕಿನ ಅಂಗಸಂಸ್ಥೆಗಳಾದ ಅಂತಾರಾಷ್ಟ್ರೀಯ ಆರ್ಥಿಕ ಮಂಡಳಿ (ಇಂಟರ್ನ್ಯಾಷನಲ್ ಫೈನಾನ್್ಸ ಕಾರ್ಪೊರೇಷನ್), ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಗಳ ನೆರವು ಅಗತ್ಯವಾಗಿದೆ.

ಅಂತಾರಾಷ್ಟ್ರೀಯ ಆರ್ಥಿಕ ಮಂಡಳಿ 1956ರಲ್ಲಿ ಸ್ಥಾಪಿತವಾಯಿತು. ಸರ್ಕಾರಗಳ ಯಾವ ಭರವಸೆಯೂ ಇಲ್ಲದೆ ಖಾಸಗಿ ಉದ್ಯಮಗಳಲ್ಲಿ ಬಂಡವಾಳ ಹೂಡುವುದರ ಮೂಲಕ ಮುಂದುವರಿಯುತ್ತಿರುವ ರಾಷ್ಟ್ರಗಳ ಅಭಿವೃದ್ಧಿಕಾರ್ಯವನ್ನು ತ್ವರಿತಗೊಳಿಸುವುದೇ ಇದರ ಮುಖ್ಯ ಉದ್ದೇಶ. ವಿಶ್ವಬ್ಯಾಂಕಿನ ಎಲ್ಲಾ ಸದಸ್ಯರೂ ಈ ಸಂಸ್ಥೆಯ ಸದಸ್ಯರಾಗಲು ಅವಕಾಶವುಂಟು. ಪ್ರಪಂಚದಾದ್ಯಂತ ಅದರಲ್ಲೂ ಮಧ್ಯ ಮತ್ತು ದಕ್ಷಿಣ ಅಮೆರಿಕ, ಏಷ್ಯ ಭಾಗಗಳಲ್ಲಿ ಈ ಸಂಸ್ಥೆ ಹೂಡಿರುವ ಬಂಡವಾಳ ಯೋಜನೆಗಳನ್ನು ಬೆಳೆಸುತ್ತಿದೆ. ತಯಾರಿಕೆ, ಗಿರಣಿಗಳು, ಗಣಿ ಉದ್ಯಮ, ಖನಿಜದ ಉದ್ಯಮ, ಖನಿಜ ಶುದ್ಧೀಕರಣ - ಹೀಗೆ ಈ ಯೋಜನೆಗಳು ಬಹು ವ್ಯಾಪಕವಾಗಿವೆ. ಉಪಖಂಡವಾಗಿರುವ ಭಾರತಕ್ಕೆ ಅಭಿವೃದ್ಧಿ ಬ್ಯಾಂಕು ನೀಡಿದ ಒಂದು ಗಮನಾರ್ಹವಾದ ನೆರವೆಂದರೆ, ಭಾರತ ಮತ್ತು ಪಾಕಿಸ್ತಾನಗಳ ನಡುವಣ ನೀರಿನ ವಿವಾದವನ್ನು ಪರಿಹರಿಸಿದ್ದು. 1960ನೆಯ ಸೆಪ್ಟೆಂಬರ್ ತಿಂಗಳಿನ 6ನೆಯ ತಾರೀಖಿನಂದು ನಡೆದ ಸಿಂಧೂ ಕಣಿವೆ ಒಪ್ಪಂದ ಮಹತ್ತ್ವದ ಸಾಧನೆ.

ಭೂಕದಾಯ

[ಬದಲಾಯಿಸಿ]

ತೆರಿಗೆ(tax) ಎಂಬುದು ಸರ್ಕಾರದ ಆರ್ಥಿಕ ವ್ಯವಸ್ಥೆಯ ಒಂದು ಭಾಗ. ಕಂದಾಯವು ಸ್ಥೂಲವಾಗಿ ತೆರಿಗೆ ಎಂಬ ಅರ್ಥದಲ್ಲಿ ಕನ್ನಡದಲ್ಲಿ ಪ್ರಚಲಿತವಾಗಿರುವ ಶಬ್ದ. ತೆರಿಗೆಯು ಒಂದು ಸರ್ಕಾರ ಅಥವಾ ಅದರ ಕಾರ್ಯಾತ್ಮಕ ಸಮಾನವಾದ ಸಂಸ್ಥೆಯು ತೆರಿಗೆದಾರನ ಮೇಲೆ ಹೇರುವ ಶುಲ್ಕ. ಮಾರಾಟಗಾರ ಮತ್ತು ಕೊಳ್ಳುವವರ ಮಧ್ಯೆ ವಸ್ತುವೊಂದು ಮಾರಲ್ಪಟ್ಟಾಗ ಸ್ಥಳೀಯ ವಾಣಿಜ್ಯ ತೆರಿಗೆ ಇಲಾಖೆಯು ಸದರಿ ವಸ್ತುವಿನ ಮೇಲೆ ವಿಧಿಸುವ ಶುಲ್ಕವನ್ನು ತೆರಿಗೆಯೆಂದು ಹೇಳಬಹುದು. ಗಮನಿಸಬೇಕಾದ ಅಂಶವೆಂದರೆ,ಇಲ್ಲಿ ಮಾರಲ್ಪಡುವ ವಸ್ತು ಕಣ್ಣಿಗೆ ಕಾಣಿಸುವ (visible) ಮತ್ತು ಅದೃಶ್ಯರೂಪ (Invisible but felt)ದ್ದಾದರೂ ಆಗಿರಬಹುದು. ಸ್ಥಳೀಯ ಸರ್ಕಾರ ಈ ತೆರಿಗೆಯನ್ನು ತನ್ನ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಮಾಡುವ ನೌಕರರ ಸಂಬಳಕ್ಕೆ ಮತ್ತು ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ವ್ಯಯ ಮಾಡುತ್ತದೆ. ಹಾಗೆಯೇ ಸುಂಕ ಕೂಡ ತೆರಿಗೆಯ ಇನ್ನೊಂದು ರೂಪವೇ ಆಗಿದೆ. ತೆರಿಗೆದಾರರು ತೆರಿಗೆಯನ್ನು ಪೂರ್ಣವಾಗಿ ಭರಿಸದ ಸಂದರ್ಭದಲ್ಲಿ ಅವರಿಗೆ ಶಿಕ್ಷೆ ವಿಧಿಸಬಹುದಾಗಿದೆ.

ಭೂಕ೦ದಾಯ

[ಬದಲಾಯಿಸಿ]

ಭೂಕಂದಾಯ[ಬದಲಾಯಿಸಿ] ಇದು ಅತ್ಯಂತ ಪ್ರಾಚೀನ ತೆರಿಗೆ ಎಂಬುದು ಕೆಲವರ ಅಭಿಮತ. ಆದರೆ ತಲೆಗಂದಾಯ ಮತ್ತು ಗುಡಿಸಲು ತೆರಿಗೆ ಭೂಕಂದಾಯಕ್ಕಿಂತ ಪ್ರಾಚೀನವಾದುದು ಎಂದು ಮತ್ತೆ ಕೆಲವರು ಅಭಿಪ್ರಾಯಪಡುತ್ತಾರೆ. ಇವುಗಳಲ್ಲಿ ಯಾವುದು ಮೊದಲು ರೂಢಿಗೆ ಬಂತೆಂದು ಹೇಳುವುದು ಕಷ್ಟವಾದರೂ ಇವೆರಡೂ ಪ್ರಾಚೀನ ತೆರಿಗೆಗಳೆಂಬುದರಲ್ಲಿ ಸಂಶಯವಿಲ್ಲ.

ಪ್ರಾಚೀನ ಕಾಲದಿಂದಲೂ ಎಲ್ಲ ರಾಷ್ಟ್ರಗಳಲ್ಲೂ ಭೂಕಂದಾಯ ರಾಜಸ್ವದ ಒಂದು ಮುಖ್ಯ ಮೂಲವಾಗಿದೆ. ಈಚಿನ ದಿನಗಳಲ್ಲಿ ಬೇರೆ ತೆರಿಗೆಗಳಿಂದ ದೊರಕುವ ಆದಾಯ ಹೆಚ್ಚಾಗಿರುವುದರಿಂದ ಭೂಕಂದಾಯದಿಂದ ದೊರಕುವ ಆದಾಯ ಇತರ ತೆರಿಗೆಗಳಿಂದ ದೊರಕುವ ಆದಾಯಕ್ಕೆ ಹೋಲಿಸಿದಾಗ ಕಡಿಮೆಯಾಗಿ ಕಾಣುತ್ತದೆ. ಆದರೂ ಇದರ ಮೂಲಕ ಸರ್ಕಾರ ಆದಾಯ ಪಡೆಯುವುದು ತಪ್ಪಿಲ್ಲ. ಭೂಕಂದಾಯವನ್ನು ಸರ್ಕಾರ ಯಾವ ಆಧಾರದ ಮೇಲೆ ವಿಧಿಸುತ್ತದೆಂಬುದನ್ನು ಅರಿಯುವುದು ಆವಶ್ಯಕ. ಈ ಬಗ್ಗೆ ಎಲ್ಲ ರಾಷ್ಟ್ರಗಳಲ್ಲೂ ಒಂದೇ ಪದ್ಧತಿ ಜಾರಿಯಲ್ಲಿಲ್ಲ: ಭಾರತದಲ್ಲೇ ಎಲ್ಲ ಭಾಗಗಳಲ್ಲೂ ಒಂದೇ ಪದ್ಧತಿ ರೂಢಿಯಲ್ಲಿಲ್ಲ. ಕಂದಾಯವನ್ನು ನಿರ್ಧರಿಸಲು ಅನುಸರಿಸುವ ಆಧಾರ ಕಾಲದಿಂದ ಕಾಲಕ್ಕೆ ಬದಲಾವಣೆಯಾಗಿದೆ. ವಸೂಲಿ ಮಾಡುವ ವಿಧಾನದಲ್ಲೂ ಕಾಲದಿಂದ ಕಾಲಕ್ಕೆ ವ್ಯತ್ಯಾಸವಾಗಿದೆ. ಪ್ರಾರಂಭದಲ್ಲಿ ಭೂವಿಸ್ತೀರ್ಣ ಭೂಕಂದಾಯದ ದರವನ್ನು ನಿರ್ಧರಿಸಲು ಆಧಾರವಾಗಿತ್ತು. ರೋಮಿನಲ್ಲಿ ಒಂದುನೂರು ಎಕರೆಗೆ ಇಂತಿಷ್ಟು ಕಂದಾಯ ಎಂದು ನಿರ್ಧರಿಸಲಾಗುತ್ತಿತ್ತು. 1915ಕ್ಕೆ ಮೊದಲು ಫ್ರಾನ್ಸಿನಲ್ಲಿ ಭೂಮಿಯ ಮೌಲ್ಯಕ್ಕೆ ಅನುಗುಣವಾಗಿ ಭೂಕಂದಾಯವನ್ನು ನಿರ್ಧರಿಸಲಾಗುತ್ತಿತ್ತು. ಉತ್ಪನ್ನದ ಆಧಾರದ ಮೇಲೆ ಭೂಕಂದಾಯವನ್ನು ವಿಧಿಸುವುದೂ ಇತರ ಪದ್ಧತಿಗಳಂತೆಯೇ ಪ್ರಾಚೀನವಾದುದೆಂದು ಹೇಳಲಾಗಿದೆ. ಭೂಮಿಯ ಸಾರಗುಣ, ನೀರಾವರಿ ಸೌಲಭ್ಯ, ಮಾರುಕಟ್ಟೆಯ ಸಾಮೀಪ್ಯ ಮುಂತಾದ ಅಂಶಗಳನ್ನು ಆಧಾರವಾಗಿ ಪರಿಗಣಿಸುವುದು ಕಾಲಕ್ರಮದಲ್ಲಿ ಜಾರಿಗೆ ಬಂತು. ಭೂಕಂದಾಯವನ್ನು ಪಡೆಯುವ ರೀತಿಯಲ್ಲೂ ಪ್ರಮುಖ ಬದಲಾವಣೆಯುಂಟಾಗಿದೆ. ಪ್ರಾರಂಭದಲ್ಲಿ ಭೂಮಿಯಿಂದ ಪಡೆಯುವ ಧಾನ್ಯದ ರೂಪದಲ್ಲಿ ಕಂದಾಯ ಕೊಡಬೇಕಾಗಿತ್ತು. ಅನಂತರ ಹಣದ ರೂಪದಲ್ಲಿ ಕಂದಾಯ ಕೊಡುವುದು ರೂಢಿಗೆ ಬಂತು.

ಭಾರತದಲ್ಲೂ ಭೂ ಉತ್ಪಾದನೆಯ ಸ್ವಲ್ಪ ಭಾಗವನ್ನು ಕಂದಾಯ ರೂಪದಲ್ಲಿ ಪಡೆಯುವುದು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಮನುವಿನ ಪ್ರಕಾರ ಒಟ್ಟು ಭೂ ಉತ್ಪನ್ನದ ಆರನೆಯ ಒಂದು ಭಾಗವನ್ನು ಸರ್ಕಾರಕ್ಕೆ ಒಪ್ಪಿಸಬೇಕಾಗಿತ್ತು. ಯುದ್ಧಕಾಲದಲ್ಲಿ ಇದನ್ನು ನಾಲ್ಕನೆಯ ಒಂದು ಭಾಗಕ್ಕೆ ಹೆಚ್ಚಿಸಲಾಗುತ್ತಿತ್ತು. ಒಂದೊಂದು ಹಳ್ಳಿಯೂ ಇಂತಿಷ್ಟು ಕಂದಾಯ ಕೊಡಬೇಕೆಂದು ನಿರ್ಧರಿಸಲಾಗುತ್ತಿತ್ತು. ಹಳ್ಳಿಯ ಪ್ರತಿ ಭೂಮಾಲೀಕನೂ ಎಷ್ಟು ಕಂದಾಯ ಕೊಡಬೇಕೆಂಬುದನ್ನು ನಿರ್ಧರಿಸಿ ಇಡೀ ಹಳ್ಳಿಯ ಕಂದಾಯವನ್ನು ವಸೂಲಿ ಮಾಡಿ ಸರ್ಕಾರಕ್ಕೆ ಒಪ್ಪಿಸುವುದು ಆಗ ಹಳ್ಳಿಯ ಮುಖ್ಯಸ್ಥನ ಕರ್ತವ್ಯ. ಉತ್ಪಾದನೆಯ ಒಂದು ನಿರ್ದಿಷ್ಟ ಭಾಗವನ್ನು ಕೊಡಬೇಕಾಗಿದ್ದುದರಿಂದ ಪ್ರತಿಯೊಬ್ಬನೂ ಕೊಡಬೇಕಾದ ಕಂದಾಯವನ್ನು ನಿರ್ಧರಿಸುವುದು ಸುಲಭ. ರಾಜನಿಂದ ನೇಮಿತನಾದ ಅಧಿಕಾರಿಯ ಸಮ್ಮುಖದಲ್ಲಿ ಕಟಾವಾದ ಬೆಳೆಯನ್ನು ಹರಡಿ ನಿರ್ದಿಷ್ಟವಾದ ಪಾಲನ್ನು ಸರ್ಕಾರಕ್ಕೆ ಒಪ್ಪಿಸಲಾಗುತ್ತಿತ್ತು. ಬೆಳೆ ಕೆಟ್ಟುಹೋದಾಗ ಕಂದಾಯ ಇಲ್ಲವಾಗುತ್ತಿದ್ದುದು ಸ್ವಯಂ ವೇದ್ಯ. ಆದರೆ ಕ್ರಮೇಣ ವ್ಯವಸಾಯ ಅಭಿವೃದ್ಧಿಯಾದಂತೆ ಮತ್ತು ಹೆಚ್ಚು ಹೆಚ್ಚು ಭೂಮಿಯನ್ನು ವ್ಯವಸಾಯಕ್ಕೆ ಉಪಯೋಗಿಸುವುದು ಆರಂಭವಾದ ಮೇಲೆ ಸರಳವಾದ ಹಿಂದಿನ ಪದ್ಧತಿಯನ್ನು ಅನುಸರಿಸುವುದು ಕಷ್ಟವಾಯಿತು. ಕಂದಾಯ ಕೊಡುವುದನ್ನು ತಪ್ಪಿಸಿಕೊಳ್ಳುವುದು ಪ್ರಾರಂಭವಾಯಿತು. ಅಧಿಕಾರಿಗಳೂ ಸರ್ಕಾರಕ್ಕೆ ವಂಚನೆ ಮಾಡಲಾರಂಭಿಸಿದರು. ಆದ್ದರಿಂದ ಬೆಳೆಯ ಆಧಾರದ ಮೇಲೆ ಇಂತಿಷ್ಟು ಕಂದಾಯ ಕೊಡಬೇಕೆಂದು ನಿರ್ಧರಿಸುವ ಮತ್ತು ಹಣದ ರೂಪದಲ್ಲಿ ಕಂದಾಯ ಪಡೆಯುವ ಪದ್ಧತಿಗಳು ಆಚರಣೆಗೆ ಬಂದುವು. ಅಕ್ಬರನ ಕಾಲದಲ್ಲಿ ಎಲ್ಲ ನೆಲವನ್ನೂ ಅದರ ಸಾರಗುಣದ ಆಧಾರದ ಮೇಲೆ ನಾಲ್ಕು ಗುಂಪಾಗಿ ವಿಂಗಡಿಸಿ ಹಿಂದಿನ ಹತ್ತು ವರ್ಷಗಳ ಉತ್ಪನ್ನದ ಸರಾಸರಿಯನ್ನು ಲೆಕ್ಕ ಹಾಕಿ ಅದರ ಆಧಾರದ ಮೇಲೆ ಕಂದಾಯ ವಿಧಿಸುವುದಕ್ಕಾಗಿ ಉತ್ಪನ್ನವನ್ನು ನಿರ್ಧರಿಸಲಾಗುತ್ತಿದ್ದಿತು. ಈ ಉತ್ಪನ್ನದ ಬೆಲೆಯನ್ನು ನಿರ್ಧರಿಸಲು ಹಿಂದಿನ ಹತ್ತೊಂಬತ್ತು ವರ್ಷಗಳ ಬೆಲೆಯ ಸರಾಸರಿಯನ್ನು ಆಧಾರವಾಗಿಟ್ಟುಕೊಳ್ಳಲಾಗಿತ್ತು. ಮೊಗಲರ ಕಾಲದಲ್ಲಿ ಆದ ಈ ಬದಲಾವಣೆ ಬಹಳ ಕಾಲದವರೆಗೆ ಭೂ ಕಂದಾಯನೀತಿಗೆ ಆಧಾರವಾಗಿತ್ತು. ಈಸ್ಟ್‌ ಇಂಡಿಯ ಕಂಪನಿಯ ಆಳ್ವಿಕೆಯ ಕಾಲದಲ್ಲಿ ಪುನಃ ಭೂ ಕಂದಾಯದ ನೀತಿಯಲ್ಲಿ ಪ್ರಮುಖ ಬದಲಾವಣೆಯಾಯಿತು. ಬಂಗಾಲ, ಬಿಹಾರ ಮತ್ತು ಒರಿಸ್ಸ ಪ್ರದೇಶಗಳಲ್ಲಿ ಖಾಯಂ ತೆರ ಪದ್ಧತಿ ಜಾರಿಗೆ ಬಂತು. ಜಮೀನ್ದಾರರು ಸರ್ಕಾರಕ್ಕೆ ಒಪ್ಪಿಸಬೇಕಾದ ಕಂದಾಯವನ್ನು ಒಂದು ಬಾರಿ ನಿಗದಿ ಮಾಡಿದ ಮೇಲೆ ಎಂದೆಂದಿಗೂ ಅದನ್ನು ಬದಲಾಯಿಸದಿರುವುದು ಈ ಪದ್ಧತಿಯ ಉದ್ದೇಶ. ಮುಂದೆ ಭೂ ಅಭಿವೃದ್ಧಿಯಿಂದ ಲಭಿಸಿದ ಆದಾಯ ಮತ್ತು ಮೌಲ್ಯಗಳ ಹೆಚ್ಚಳದಲ್ಲಿ ಅವರು ಸರ್ಕಾರಕ್ಕೆ ಏನನ್ನೂ ಕೊಡಬೇಕಾಗುತ್ತಿರಲಿಲ್ಲ. ಅವರು ರೈತರಿಂದ ಪಡೆಯುವ ಗುತ್ತಿಗೆಯ ಹನ್ನೊಂದನೆಯ ಹತ್ತು ಭಾಗವನ್ನು ಕಂದಾಯವಾಗಿ ಸರ್ಕಾರಕ್ಕೆ ಒಪ್ಪಿಸಬೇಕಾಗಿದ್ದಿತು. ಈ ದರದ ಕಂದಾಯದ ಹೊರೆ ಅತಿಯೇ ಎನ್ನಬೇಕು. ನಿಗದಿಯಾದ ಅವಧಿಯಲ್ಲಿ ಪಾವತಿ ಮಾಡದಿದ್ದರೆ ಬಾಕಿಗಾಗಿ ಜಮೀನನ್ನು ಸರ್ಕಾರ ಮಾರಾಟ ಮಾಡಬಹುದಾಗಿತ್ತು. ಅತಿಯಾದ ಹೊರೆಯನ್ನು ತಾಳಲಾರದೆ ಅನೇಕರು ಭೂಮಿಯನ್ನು ಕಳೆದುಕೊಂಡರು. ಖಾಯಂ ತೆರ ಪದ್ಧತಿಯನ್ನು ಕ್ರಮೇಣ ಬನಾರಸ್ (ವಾರಾಣಸಿ), ಚೆನ್ನೈ, ಅಸ್ಸಾಂ ಮುಂತಾದ ಪ್ರದೇಶಗಳಿಗೂ ವಿಸ್ತರಿಸಲಾಯಿತು. ಹಲವಾರು ವರ್ಷಗಳ ಅನಂತರ ಕಂಪನಿಯ ಆಡಳಿತ ಸುಭದ್ರಗೊಂಡ ಮೇಲೆ ಖಾಯಂ ಆಗಿ ಕಂದಾಯವನ್ನು ನಿರ್ಧರಿಸುವ ಬದಲಾಗಿ ಕಾಲಕಾಲಕ್ಕೆ ಬದಲಾವಣೆ ಮಾಡುವುದು ಅನುಕೂಲವೆಂದು ಮನಗಾಣಲಾಯಿತು ಮತ್ತು ಮಹಲ್ವಾರಿ ಮತ್ತು ರೈತವಾರಿ ಪದ್ಧತಿಗಳು ಜಾರಿಗೆ ಬಂದುವು. ಒಂದು ಇಡೀ ಹಳ್ಳಿ ಅಥವಾ ಮಹಲ್ ಎಷ್ಟು ಕಂದಾಯ ಕೊಡಬೇಕೆಂದು ನಿರ್ಧರಿಸಲಾಗುತ್ತಿತ್ತು. ಹಳ್ಳಿಯವರೆಲ್ಲರೂ ಒಟ್ಟಾಗಿ ಕಂದಾಯ ಕೊಡಲು ಬದ್ಧರು. ಇದೇ ಮಹಲ್ವಾರಿ ಪದ್ಧತಿ. ರೈತವಾರಿ ಪದ್ಧತಿಯಲ್ಲಿ ಪ್ರತಿ ರೈತನೂ ಎಷ್ಟು ಕಂದಾಯ ಕೊಡಬೇಕೆಂಬುದನ್ನು ಪ್ರತ್ಯೇಕವಾಗಿ ನಿರ್ಧರಿಸಲಾಗುತ್ತಿತ್ತು. ಈ ಎರಡು ಪದ್ಧತಿಗಳಲ್ಲೂ ನಿರ್ದಿಷ್ಟ ಅವಧಿಗೆ ಅನ್ವಯಿಸುವಂತೆ ಕಂದಾಯವನ್ನು ನಿರ್ಧರಿಸಿ, ಅವಧಿಯ ಅನಂತರ ಅದನ್ನು ಬದಲಾಯಿಸಲಾಗುತ್ತಿತ್ತು. ಸ್ವಾತಂತ್ರ್ಯಾನಂತರ ವ್ಯಾಪಕವಾದ ಭೂ ಸುಧಾರಣೆಯ ಕ್ರಮಗಳನ್ನು ಕೈಗೊಂಡ ಮೇಲೆ ರೈತರಿಗೂ ಸರ್ಕಾರಕ್ಕೂ ನಡುವೆ ಇದ್ದ ಮಧ್ಯವರ್ತಿಗಳೆಲ್ಲ ಹೋಗಿ ರೈತರೇ ನೇರವಾಗಿ ಸರ್ಕಾರಕ್ಕೆ ಕಂದಾಯ ಕೊಡುವ ಪದ್ಧತಿ ಜಾರಿಗೆ ಬಂದಿದೆ. ಭೂ ಕಂದಾಯವನ್ನು ನಿರ್ಧರಿಸಲು ಭಾರತದ ಎಲ್ಲ ಭಾಗಗಳಲ್ಲೂ ಒಂದೇ ಅಂಶವನ್ನು ಆಧಾರವಾಗಿಟ್ಟುಕೊಂಡಿಲ್ಲ. ಭೂಮಿಯ ಒಟ್ಟು ಉತ್ಪನ್ನ, ನಿವ್ವಳ ಉತ್ಪನ್ನ, ಅದರ ಮೌಲ್ಯ, ಅದರಿಂದ ದೊರಕಬಹುದಾದ ಗೇಣಿ, ನೀರಾವರಿ ಸೌಲಭ್ಯ, ಹವಾಗುಣ, ಮಾರುಕಟ್ಟೆಯ ಸಾಮೀಪ್ಯ, ಸಾರಿಗೆ ಸಂಪರ್ಕ ವ್ಯವಸ್ಥೆ-ಇವೇ ಮುಂತಾದ ಅಂಶಗಳನ್ನು ಸಾಮಾನ್ಯವಾಗಿ ಗಣನೆಗೆ ತೆಗೆದುಕೊಂಡು ಒಂದು ಎಕರೆ ಭೂಮಿಗೆ ಕೊಡಬೇಕಾದ ಕಂದಾಯವನ್ನು ನಿರ್ಧರಿಸಲಾಗುತ್ತದೆ. ಒಂದು ಬಾರಿ ನಿರ್ಧರಿಸಿದ ದರವನ್ನು ಒಂದು ನಿಶ್ಚಿತ ಅವಧಿಯವರೆಗೆ ಜಾರಿಗೆ ಕೊಡಲಾಗಿರುತ್ತದೆ. ಮರುತೀರ್ಮಾನ ಮಾಡುವ ಅವಧಿ ಸಾಮಾನ್ಯವಾಗಿ 30 ವರ್ಷ.

ಆರೋಹಿ ತೆರಿಗೆಯ ಲಕ್ಷಣವನ್ನು ಪಡೆದಿಲ್ಲದಿರುವುದು ಭೂ ಕಂದಾಯದ ಒಂದು ಮುಖ್ಯ ದೋಷ. ಅದರ ಹೊರೆ ಸಮಾನವಾಗಿ ಹಂಚಿಕೆಯಾಗುತ್ತಿಲ್ಲ. ಆದ್ದರಿಂದ ಭೂಕಂದಾಯವನ್ನು ಕಡಿಮೆ ದರದಲ್ಲಿ ನಿರ್ಣಯಿಸಿ ವ್ಯವಸಾಯೋತ್ಪನ್ನಗಳಿಂದ ಪಡೆಯುವ ಆದಾಯದ ಮೇಲೆ ತೆರಿಗೆ ವಿಧಿಸಬೇಕೆಂಬ ಅಭಿಪ್ರಾಯವಿದೆ. ಭೂಕಂದಾಯವನ್ನು ತೆಗೆದು ಹಾಕಿ ಆರೋಹಿಲಕ್ಷಣವುಳ್ಳ ವ್ಯಾವಸಾಯಿಕ ವರಮಾನ ಮೇಲಿನ ತೆರಿಗೆಯೊಂದನ್ನೇ ವಿಧಿಸಬಹುದೆಂಬ ಅಭಿಪ್ರಾಯವೂ ಇದೆ.