ಮೈಹೇಲ್ ಕಗಲ್ನಿಸಿಅನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈಹೇಲ್ ಕಗಲ್ನಿಸಿಅನು
ಮೈಹೇಲ್ ಕಗಲ್ನಿಸಿಅನು


ಅಧಿಕಾರದ ಅವಧಿ
October 11, 1863 – January 26, 1865
ಪೂರ್ವಾಧಿಕಾರಿ Nicolae Kretzulescu
ಉತ್ತರಾಧಿಕಾರಿ Nicolae Kretzulescu

ಅಧಿಕಾರದ ಅವಧಿ
April 27, 1876 – July 23, 1876
April 3, 1877 – November 24, 1878
ಪೂರ್ವಾಧಿಕಾರಿ Dimitrie Cornea
Nicolae Ionescu
ಉತ್ತರಾಧಿಕಾರಿ Nicolae Ionescu
Ion C. Câmpineanu

ಅಧಿಕಾರದ ಅವಧಿ
October 11, 1863 – January 26, 1865
November 16, 1868 – January 24, 1870
November 17, 1878 – November 25, 1878
July 11, 1879 – April 17, 1880
ಪೂರ್ವಾಧಿಕಾರಿ Nicolae Kretzulescu
Anton I. Arion
C. A. Rosetti
Ion Brătianu
ಉತ್ತರಾಧಿಕಾರಿ Constantin Bosianu
Dimitrie Ghica
Ion Brătianu
Ion Brătianu

ಜನನ (೧೮೧೭-೦೯-೦೬)೬ ಸೆಪ್ಟೆಂಬರ್ ೧೮೧೭
Iași, Moldavia
ಮರಣ July 1, 1891(1891-07-01) (aged 73)
Paris, France
ರಾಜಕೀಯ ಪಕ್ಷ National Liberal Party
ಜೀವನಸಂಗಾತಿ Ecaterina Jora
ವೃತ್ತಿ Historian, journalist, literary critic
ಧರ್ಮ Romanian Orthodox
ಹಸ್ತಾಕ್ಷರ

ಮೈಹೇಲ್ ಕಗಲ್ನಿಸಿಅನು( ಸೆಪ್ಟೆಂಬರ್ 6, 1817 –ಜುಲೈ 1, 1891) ರುಮೇನಿಯದಲ್ಲಿ ಆಧುನಿಕ ಇತಿಹಾಸ ಲೇಖನವನ್ನು ಆರಂಭಿಸಿದಾತ, ಸಾಹಿತ್ಯ, ರಾಜಕಾರಣ, ಇತಿಹಾಸ ಕ್ಷೇತ್ರಗಳಲ್ಲಿ ಅಪ್ರತಿಮ ದೇಶಪ್ರೇಮವನ್ನು ಮೆರೆದ ಪ್ರತಿಭಾನ್ವಿತ ವ್ಯಕ್ತಿ.

ಬಾಲ್ಯ[ಬದಲಾಯಿಸಿ]

ಇಯಾಸಿ ಎಂಬಲ್ಲಿ ಹುಟ್ಟಿ, ಫ್ರಾನ್ಸಿನ ಲುನೆವಿಲ್ ಮತ್ತು ಬರ್ಲಿನ್ ವಿಶ್ವವಿದ್ಯಾನಿಲಯಗಳಲಿದ್ದುಕೊಂಡು ಪ್ರಥಮವಾಗಿ ರುಮೇನಿಯದ ಚರಿತ್ರೆಯನ್ನು ನಾನಾ ಮೂಲಗಳಿಂದ ಸಂಪಾದಿಸಿ ಬರೆದ; ರುಮೇನಿಯನ್ ಭಾಷೆ ಹಾಗೂ ಸಾಹಿತ್ಯದ ಸಮೀಕ್ಷೆಯನ್ನೂ ನಡೆಸಿದ.

ವೃತ್ತಿ ಜೀವನ[ಬದಲಾಯಿಸಿ]

ತನ್ನ ಇಪ್ಪತ್ತಾರನೆಯ ವಯಸ್ಸಿನಲ್ಲಿಯೇ ಮೈಹೇಲಿಯ ಅಕೆಡಮಿಯಲ್ಲಿ ರಾಷ್ಟ್ರ ಚರಿತ್ರೆಯ ಬಗ್ಗೆ ಉಪನ್ಯಾಸ ಮಾಡಿದ. ರುಮೇನಿಯದ ಭಾಗವಾದ ಮಾಲ್ಡೇವಿಯದ ಪ್ರಾಚೀನ ಚರಿತ್ರೆಯನ್ನು ಸಂಪಾದಿಸಿ ಪ್ರಕಟಿಸಿದ. ಇದಲ್ಲದೆ ಅಹೆರ್ೃವ ರೂಮೆನಸ್ಕ ಎಂಬ ಚಾರಿತ್ರಿಕ ಪತ್ರಾಗಾರ ವಿಮರ್ಶಾ ಪತ್ರಿಕೆಯನ್ನೂ ಆರಂಭಿಸಿದ. ಸಾಹಿತ್ಯ ಕ್ಷೇತ್ರದಲ್ಲಿ ಡೇಸಿಯ ಲಿಟರೆರ ಎಂಬ ವಿಮರ್ಶಾಪತ್ರಿಕೆಯನ್ನೂ ಸ್ಥಾಪಿಸಿ, ಸಾಂಪ್ರದಾಯಿಕತೆಯನ್ನು ಬೆಳೆಸಿದ. ಪ್ರಗತಿಪರ ಸುಧಾರಣೆಯೇ ಈತನ ರಾಜಕೀಯ ಚಟುವಟಿಕೆಯ ಗುರಿ, ಹೀಗಾಗಿ ಸರ್ಕಾರವನ್ನು ಎದುರಿಸಿದುದರಿಂದ 1846ರಲ್ಲಿ ಗಡಿಪಾರಾದ, ಫ್ರಾನ್ಸ್‌ ಸ್ಪೇನ್‍ಗಳಲ್ಲಿ ಸಂಚರಿಸಿ 1848ರಲ್ಲಿ ಹಿಂದಿರುಗಿ, ಮಾಲ್ಡೇವಿಯ-ವಾಲೇಷಿಯ ಪ್ರಾಂತ್ಯಗಳು ಒಂದುಗೂಡಬೇಕೆಂಬ ಪ್ರಚಾರವನ್ನು ಆರಂಭಿಸಿ ಅದಕ್ಕಾಗಿ ಒಂದು ದಿನಪತ್ರಿಕೆಯನ್ನು ಸ್ಥಾಪಿಸಿದ. ಹನ್ನೊಂದು ವರ್ಷಗಳ ಅವ್ಯಾಹತ ಹೋರಾಟದ ಅನಂತರ 1859ರಲ್ಲಿ ಮಾಲ್ಡೇವಿಯ, ವಾಲೇಷಿಯ ಪ್ರಾಂತ್ಯಗಳು ಒಂದಾದಾಗ ಕಗಲ್ನಿಸಿಅನು ರಾಜಕುಮಾರನ ಆಪ್ತ ಸಲಹೆಗಾರನಾದ. 1863ರಲ್ಲಿ ಪ್ರಧಾನಿಯಾಗಿ ನೇಮಕಗೊಂಡು ಭೂಮಾಲೀಕತ್ವ, ಧಾರ್ಮಿಕ ಆಸ್ತಿಗಳು, ಶಿಕ್ಷಣ, ಆಡಳಿತಗಳಲ್ಲಿ ಸುಧಾರಣೆಗಳನ್ನು ಮಾಡಿದ, ಇದರಿಂದ ಆತ ಪ್ರಬಲ ವಿರೋಧವನ್ನು ಎದುರಿಸಬೇಕಾಯಿತು. ಅದರ ಫಲವಾಗಿ 1865ರಲ್ಲಿ ತನ್ನ ಪದವಿಗೆ ರಾಜೀನಾಮೆಯಿತ್ತ. 1876-80ರ ವರೆಗೆ ವಿದೇಶಾಂಗ ಮಂತ್ರಿಯಾಗಿದ್ದ. 1878ರಲ್ಲಿ ದೇಶದ ಪ್ರತಿನಿಧಿಯಾಗಿ ಬರ್ಲಿನ್ ಕಾಂಗ್ರೆಸ್ನಲ್ಲಿ ಭಾಗವಹಿಸಿ ರುಮೇನಿಯದ ಸ್ವಾತಂತ್ರ್ಯಕ್ಕೆ ಮನ್ನಣೆ ದೊರಕಿಸಿದ.

ನಿಧನ[ಬದಲಾಯಿಸಿ]

1891ರಲ್ಲಿ ಪ್ಯಾರಿಸಿನಲ್ಲಿ ನಿಧನನಾದ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: