ಸದಸ್ಯ:Navamadi.s

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನವಮದಿ.ಎಸ್

ಪರಿಚಯ/ಜನನ[ಬದಲಾಯಿಸಿ]

ನನ್ನ ಹೆಸರು ನವಮದಿ.ಎಸ್. ನನ್ನ ತಂದೆಯ ಹೆಸರು ಸುಂದರಂ.ಎಸ್. ನನ್ನ ತಾಯಿಯ ಹೆಸರು ದೇವಯಾನಿ.ಎಮ್. ನನ್ನ ತಂಗಿಯ ಹೆಸರು ಚಂದನ ಮಾಯ. ಅವಳು ಜ್ಯೋತಿ ನಿವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ಯಲ್ಲಿ ಅಧ್ಯಯನ ಮಾಡುತ್ತಿದ್ದಾಳೆ. ನನ್ನ ತಮ್ಮನ ಹೆಸರು ಶಿವ ಶಂಕರನ್. ಅವನು ಏಳನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ನಾನು ೩೦ನೇ ಮೇ ೧೯೯೭, ಧರ್ಮಪುರಿ ತಮಿಳುನಾಡಿನಲ್ಲಿ ಜನಿಸಿದ್ದೇನೆ. ನಾನು ಹುಟ್ಟಿದ್ದು ತಮಿಳುನಾಡಿನಲ್ಲಾದರು, ಬೆಳೆದದ್ದು ಬೆಂಗಳೂರಿನಲ್ಲಿಯೇ. ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬೊಮ್ಮನಹಳ್ಳಿಯಲ್ಲಿರುವ ಜಾನ್ಸನ್ ಪ್ರೌಢ ಶಾಲೆಯಲ್ಲಿ ಪೂರ್ಣಗೊಳಿಸಿದೆ. ನಂತರ ನನ್ನ ಪಿ.ಯು.ಸಿ.ಯನ್ನು ಕೋರಮಂಗಳದಲ್ಲಿರುವ ಜ್ಯೋತಿ ನಿವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದೆ. ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾಲಯಲ್ಲಿ ಬಿ.ಎಸ್ಸಿ ಪದವಿಯನ್ನು ಸಿ.ಎಮ್.ಇ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದೇನೆ. ನಾನು ವಿದ್ಯುಚ್ಛಾಸ್ತ್ರ ವಿಷಯದಲ್ಲಿ ಅನೇಕ ಸಾಧನೆಗಳನ್ನು ಮಾಡಬೇಕೆಂದು ಆಶಿಸುತ್ತೇನೆ.

ನನ್ನ ಶಿಕ್ಷಕ[ಬದಲಾಯಿಸಿ]

"ಇಂದಿನ ಮಕ್ಕಳು, ನಾಳಿನ ಪ್ರಜೆಗಳು", ಒಂದು ಒಳ್ಳೆಯ ಮತ್ತು ಪ್ರಾಮಾಣಿಕ ಪ್ರಜೆಗಳನ್ನು ಸಜ್ಜುಗೊಳಿಸಲು ಒಂದು ಆದರ್ಶ ಶಿಕ್ಷಕರಿಂದ ಮಾತ್ರ ಸಾಧ್ಯವಾಗುತ್ತದೆ. ಅಂತಹ ಶಿಕ್ಷಕರು ನನಗೂ ಸಿಕ್ಕಿದ್ದಾರೆ. ಅವರ ಹೆಸರು ವಿನಯ್. ಅವರು ನನಗೆ ಗಣಕಯಂತ್ರ ವಿಷಯವನ್ನು ಬೋಧಿಸುತ್ತಾರೆ. ಗಣಕಯಂತ್ರ ವಿಷಯವನ್ನು ತುಂಬ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡುತ್ತಾರೆ ಮತ್ತು ಅಸಾಮಾನ್ಯವಾದ ರೀತಿಯಲ್ಲಿ ಉಪನ್ಯಾಸವನ್ನೂ ಕೂಡ ಮಾಡುತ್ತಾರೆ. ಅವರು ಒಂದು ಆದರ್ಶ ಉಪನ್ಯಾಸಕರಿಗೆ ಉದಾಹರಣೆಯಾಗುತ್ತಾರೆ ಎಂದು ಹೇಳಬಹುದು.ನನ್ನಂತ ವಿದ್ಯಾರ್ಥಿಗಳು ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಹಾಗೂ ನಮ್ಮ ಮುಂದಿನ ಯೋಜನೆಗೆ ಸಹಾಯ ಮಾಡುವ ಮನೋಭಾವ ಉಳ್ಳವರಾಗಿದ್ದಾರೆ.

ಕನಸು[ಬದಲಾಯಿಸಿ]

ನಾನು ವಿದ್ಯುಚ್ಛಾಸ್ತ್ರ(ಎಲೆಕ್ಟ್ರಾನಿಕ್ಸ್) ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದೇನೆ. ವಿದ್ಯುಚ್ಛಾಸ್ತ್ರ ವಿಷಯವನ್ನು ಬಳಿಸಿ ವಿದ್ಯುತ್ ಶಕ್ತಿಯನ್ನು ಕಂಡುಹಿಡಿದರು. ವಿದ್ಯುಚ್ಛಾಸ್ತ್ರ ವಿದ್ಯುತ್ ಬಗ್ಗೆ ಅಧ್ಯಯನ ನಡೆಸಲಾಗುವ ಯಂತ್ರಶಾಸ್ತ್ರದ ಒಂದು ಪ್ರಕಾರ. ಕೆಲವು ಬಾರಿ ಋಣವಿದ್ಯುತ್ಕಣ ಪ್ರವಹಗಳನ್ನು ಅಭ್ಯಸಿಸುವ ವಿದ್ಯುನ್ಮಾನ ಶಾಸ್ತ್ರವನ್ನೂ ಕೂಡ ಇದೇ ಪ್ರಕಾರದಲ್ಲಿ ಸೇರಿಸಲಾಗುತ್ತದೆ. ನಾನು ಎಲ್ಲರನ್ನು ಎಲೆಕ್ಟ್ರಾನಿಕ್ಸ್ ವಿಷಯವನ್ನು ಓದಲು ಪ್ರೋತ್ಸಹಿಸುತ್ತೇನೆ. ನನಗೆ ಹಲವಾರು ಸಾಧನೆಗಳನ್ನು ಮಾಡುವ ಆಸೆ. ನಾನು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುತ್ತೇನೆ. ನನಗೆ ವಿಶ್ವದ ಏಳು ಅದ್ಭುತಗಳ ಸ್ಥಳಗಳಿಗೆ ಭೇಟಿ ಕೊಟ್ಟು,ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆ. ಮಾನವ ನಿರ್ಮಿತ ಮತ್ತು ನೈಸರ್ಗಿಕ ವಿಸ್ಮಯಗಳ ವಿಶ್ವದ ಅದ್ಭುತಗಳನ್ನು ಗುರುತಿಸಲು ಕಾಲಕಾಲಕ್ಕೆ ಹಲವಾರು ರೀತಿಯ ಪಟ್ಟಿಗಳನ್ನು ಮಾಡಲಾಗುತ್ತಿದೆ. ಇದರ ಜೊತೆಗೆ ನಾನು ಹಲವಾರು ಸ್ಥಳಗಳಿಗೆ ಬೇಟಿ ನೀಡಿ, ಮಾಹಿತಿಯ ಸಂಗ್ರಹವನ್ನು ಮಾಡುವ ಕನಸಿದೆ.

ಹವ್ಯಾಸ[ಬದಲಾಯಿಸಿ]

  • ನಾನು ಒಬ್ಬ ಪರಿಸರ ಸ್ನೇಹಿ. ನನಗೆ ಗಿಡಗಳನ್ನು ನೆಡುವುದರ ಜೊತೆಗೆ ಬೆಳೆಸುವ ಹವ್ಯಾಸವಿದೆ. ನಾನು ಪರಿಸರಕ್ಕೆ ಏನಾದರೊಂದು ಕೊಡುಗೆ ಕೊಡಲು ಆಶಿಸುತ್ತೇನೆ. ನಾನು ಹೆಚ್ಚು ಮರಗಳನ್ನು ಬೆಳೆಸಲು ಬಯಸುತ್ತೇನೆ. ನಾವು ಎಲ್ಲಾ ರೀತಿಯಲ್ಲಿ ಪರಿಸರದೊಂದಿಗೆ ಪರಸ್ಪರವಾಗಿದ್ದೇವೆ. ಇವತ್ತಿನ ದಿನಗಳಲ್ಲಿ ಪರಿಸರವು ಹಾನಿಗೆ ಒಳಪಟ್ಟಿದೆ. ನಾವು ಜಗತ್ತನ್ನು ಎಚ್ಚರಿಸಬೇಕಾಗಿದೆ. ಎಲ್ಲರು ಕನಿಷ್ಟಪಕ್ಷ ಒಂದು ಗಿಡವನ್ನಾದರು ಬೆಳೆಸಬೇಕು. ನನಗೆ ಅತಂಹ ವಾತವರಣವು ಕ್ರೈಸ್ಟ್ ವಿಶ್ವವಿದ್ಯಾಲಯಲ್ಲಿ ಸಿಕ್ಕಿದೆ. ನನ್ನ ಕಾಲೇಜು ಸದಾ ಹಚ್ಚ ಹಸಿರಿನ ಮರಗಳಿಂದ ತುಂಬಿದೆ. ನನ್ನ ನೆಚ್ಚಿನ ಬಣ್ಣ ಹಸಿರು.
  • ಪುಸ್ತಕಗಳನ್ನು ಓದುವ ಹವ್ಯಾಸವಿದೆ.
  • ಬಿಡುವಿನ ಸಮಯದಲ್ಲಿ ನಾನು ಯಾವುದಾದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳವ ಹವ್ಯಾಸವಿದೆ.
This user is a member of WikiProject Education in India



ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Navamadi.s