ಬ್ರಜೀಲ್ (ಜೇನಿನ) ಗಿಡ
ಬ್ರಜೀಲ್ ಅಥವಾ ಜೇನಿನಲ್ಲಿ ಗಿಡದ ಹೆಸರೇ ಹೇಳುವಂತೆ ಮೂಲತಹ ಅಮೇರಿಕಾ,ಕೊಸ್ಟರಿಕಾ ಪ್ರಾಂತ್ಯದ್ದಾಗಿದೆ. ಸಾಮಾನ್ಯ ಭಾಷೆಯಲ್ಲಿ ಬ್ರಜೀಲ್ ಅಥವಾ ಜೇನಿನ ಗಿಡವನ್ನು ಕಾಡು ತಂಬಾಕು ಎಂದೂ ಕರೆಯುತ್ತಾರೆ,ಕಾರಣ ಎಲೆಯ ಆಕಾರ ಇರಬಹುದು.ಆದರೆ ಬ್ರಜೀಲ್ ಅಥವಾ ಜೇನಿನಲ್ಲಿ ಗಿಡದ ಎಲೆಯಲ್ಲಿ ನಿಕೋಟಿನ್ ಅಂಶ ಇರುವುದಿಲ್ಲ. ಬ್ರಜೀಲ್ ಅಥವಾ ಜೇನಿನ ಗಿಡ ಅನಾದಿಕಾಲದಿಂದ ಇದೆ ಆದರೂ ಭಾರತಕ್ಕೆ ಬಂದ ದಾರಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಬ್ರಜೀಲ್ ಅಥವಾ ಜೇನಿನ ಗಿಡ ಮಧ್ಯಮ ಗಾತ್ರದ ಪೊದ-ಮರದ ಗುಂಪಿಗೆ ಸೇರಿದ್ದಾಗಿದೆ.ಬ್ರಜೀಲ್ ಅಥವಾ ಜೇನಿನ ಗಿಡ ಸುಮಾರು ೧೦ ರಿಂದ ೨೦ ಅಡಿ ಎತ್ತರದ ವರೆಗೆ ಬೆಳೆಯುತ್ತದೆ. ಇದು ಸುಮಾರು ಡಿಸಂಬರ್ - ಮೇ ತಿಂಗಳ ವರೆಗೆ ಹೂ ನೀಡುತ್ತದೆ. ಕೆಳಗೆ ಕಾಣಿಸಿರುವ ಚಿತ್ರಗಳಲ್ಲಿ ಗಮನಿಸಿದರೆ ಬ್ರಜೀಲ್ ಅಥವಾ ಜೇನಿನ ಗಿಡದ ಹೂ ತನ್ನನ್ನು ಆಕರ್ಶಿಸದ ಕೀಟಗಳೇ ಇಲ್ಲ.ಇದೇ ಕಾರಣಕ್ಕೋ ಏನೋ ನಮ್ಮ ಹಿರಿಯರು ತೋಟಗಳಲ್ಲಿ ಕಸಿ ಮಾಡಿದ ಬ್ರಜೀಲ್ ಅಥವಾ ಜೇನಿನ ಗಿಡದ ಕೊನೆಗಳನ್ನು ಬಿಸಾಡದೆ ಮತೊಂದೆಡೆಗೆ ನಡುತ್ತಿದ್ದರು.ಬ್ರಜೀಲ್ ಅಥವಾ ಜೇನಿನಲ್ಲಿ ಗಿಡ ಹೂ ಬಿಡುವ ಕಾಲ ಜೇನು ನೊಣಗಳಿಗೆ ಮುಂಬರುವ ಮುಂಗಾರು ಮಳೆಯನ್ನು ಎದುರಿಸಿ ಈ ಸ್ಥಳದಲ್ಲಿಯೇ ಉಳಿಯಲು ಸಂತಾನ ಅಭಿವೃದ್ಧಿಸಿಕೊಳ್ಳಲು ಬಹು ಉಪಕಾರಿ. ಆದ್ದರಿಂದ ಬ್ರಜೀಲ್ ಅಥವಾ ಜೇನಿನ ಗಿಡದ ಕೊನೆಗಳನ್ನು ತೋಟ ಗದ್ದೆಯ ಬೇಲಿಯಂಚಿನಲ್ಲಿ ಸಾಕಿದಲ್ಲಿ ನಮ್ಮ ಪರಿಸರದ ಕಾಳಜಿಯಿಂದ ಕಡೆಗೆ ನಾವು ಒಂದು ಹೆಜ್ಜೆಯನ್ನಿಟ್ಟ ಹೆಮ್ಮೆ ನಮ್ಮದಾಗುತ್ತದೆ. ಇನ್ನು ಈ ಗಿಡದ ಹಣ್ಣುಗಳೂ ಸಹ ಜೊತೆಯಲ್ಲೇ ತಿಂಗಳ ಅಂತರದಲ್ಲಿ ಮಾಗಲಾರಂಭಿಸುತ್ತವೆ.ಹಣ್ಣು ಸಣ್ಣ ಟೊಮ್ಯಾಟೋ ಬಣ್ಣದ್ದಾಗಿದ್ದು ಸುತ್ತಮುತ್ತಲ ಹಕ್ಕಿ ಪಕ್ಷಿಗಳಿಗೆ ಸ್ವಾಧಿಷ್ಟ ಪಲಾಹಾರವಾಗಿರುತರತ್ತೆ.