ಸದಸ್ಯ:Kavyat1431
ನನ್ನ ಮತ್ತು ನನ್ನ ಕುಟುಂಬ ಸದಸ್ಯರ ಪರಿಚಯ
[ಬದಲಾಯಿಸಿ]ನನ್ನ ಹೆಸರು ಕಾವ್ಯ.ಟಿ. ನಾನು ಆನೇಕಲ್ ತಾಲುಕಿನ ಗುಡ್ನಳ್ಳಿ ಗ್ರಾಮದವಳು. ನನ್ನ ತಂದೆಯ ಹೆಸರು ತಾಯಪ್ಪ ಮತ್ತು ನನ್ನ ತಾಯಿಯ ಹೆಸರು ಗೌರಮ್ಮ. ನಮ್ಮ ತಾಯಿಗೆ ನಾವು ಇಬ್ಬರು ಮಕ್ಕಳು. ಒಂದು ನಾನು ಇನ್ನೊಂದು ನನ್ನ ತಂಗಿ. ನಾನು ಹುಟ್ಟಿದ ದಿನಾಂಕ ೨೧ ಮಾರ್ಚ್ ೧೯೯೮ ಮತ್ತು ನನ್ನ ತಂಗಿಯ ಹೆಸರು ಮಧು ಶ್ರೀ ಆಕೆ ೨೭ ಡಿಸೆಂಬರ್ ೧೯೯೯ ನಲ್ಲಿ ಜನಿಸಿದ್ದಳು,ಅವಳು ಈಗ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಸಂಗ ಮಾಡುತ್ತಿದ್ದಾಳೆ. ನಮ್ಮ ಮನೆಯಲ್ಲಿ ಈಗ ಮೂರು ಜನ ಇದ್ದೇವೆ.
ನನ್ನ ವಿದ್ಯಾಭ್ಯಾಸದ ವಿವರ
[ಬದಲಾಯಿಸಿ]ನನಗೆ ಮೂರು ವರ್ಷವಿರುವಾಗ ನನ್ನನ್ನು ಸಂತ ಜೋಸೆಫರ ಫೌಡ ಶಾಲೆಗೆ ನನ್ನ ತಾಯಿಯವರು ಸೇರಿಸಿದ್ದರು. ಆ ಶಾಲೆಯಲ್ಲಿ ನಾನು ಲ್.ಕೆ.ಜಿ ತರಗತಿಯಿದ್ದ ಹತ್ತನೇ ತರಗತಿಯವರೆಗೂ ವ್ಯಸಂಗ ಮಾಡಿದೆನು.ಆ ಶಾಲೆಯು ನನಗೆ ತುಂಬ ಇಷ್ಟವಾದ ಶಾಲೆಯಾಗಿದೆ. ಅದು ನನ್ನ ಜೀವನದಲ್ಲಿ ತುಂಬ ವಿಷಯಗಳನ್ನು ಹೇಳಿಕೊಟ್ಟಿದೆ. ನನ್ನ ಆ ಶಾಲೆಯಲ್ಲಿ ಹನ್ನೆರಡು ವರ್ಷಗಳ ಕಾಲ ವ್ಯಸಂಗ ಮಾಡಿದೆನು.ಆ ಶಾಲೆಯಲ್ಲಿ ನನಗೆ ತುಂಬ ಸ್ನೇಹಿತರಿದರು,ನಾವೆಲ್ಲರು ಶಾಲೆಯ ದಿನಗಳಲ್ಲಿ ತುಂಬ ಸಂತೋಷದಂದ ಕಾಲ ಕಳ್ಳೆಯುತ್ತಿದೆವು ಹತ್ತನೇ ತರಗತಿಯಲ್ಲಿ ಶೇಕಡ ೮೬% ಗಳಲ್ಲಿ ಉತ್ತೀರ್ಣಗೊಂಡೆನು. ಶಾಲೆಯ ವಿದ್ಯಾಭ್ಯಾಸದ ನಂತರ ನಾನು ಆನೇಕಲ್ ನಲ್ಲಿ ಇರುವ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ಸೇರಿದೆ . ಅಲ್ಲಿ ನಾನು ಪ್ರಥಮ ಹಾಗೂ ದ್ವಿತೀಯ ಪಿಯುಸಿಯನ್ನು ಮುಗಿಸಿದೆ. ನಾನು ದ್ವಿತೀಯ ಪಿಯುಸಿಯಲ್ಲಿ ಶೇಕಡ ೯೦% ಗಳಲ್ಲಿ ಉತ್ತೀರ್ಣಗೊಂಡೆನು.ಈಗ ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿಯಸಿ(ಪಿಸಿಮ್) ನಲ್ಲಿ ವ್ಯಸಂಗ ಮಾಡುತ್ತಿದ್ದೇನೆ.
ನನ್ನ ಹವ್ಯಸಗಳು
[ಬದಲಾಯಿಸಿ]ನನ್ನ ಹವ್ಯಸಗಳು ದೂರದರ್ಶನವನ್ನು ನೋಡುವುದು, ಕಥೆಯ ಪುಸ್ತಕಗಳನ್ನು ಓದುವುದು,ಸ್ನೇಹಿತರೊಡನೆ ಮಾತನಾಡುವುದು, ಆಟಗಳನ್ನು ಆಡುವುದು, ಕುಟುಂಬ ಸದಸ್ಯರೊಡನೆ ಕಾಲ ಕಳೆಯುವುದು,ಹಾಡುಗಳನ್ನು ಕೇಳುವುದು,ಅಮ್ಮನಿಗೆ ಅವರ ಕೆಲಸಗಳಲ್ಲಿ ಸಹಾಯ ಮಾದುವುದು,ಮುಂತಾದವು. ನಾನು ಪಿಯುಸಿ ಕಾಲೇಜಿನಲ್ಲಿ ಇರುವಾಗ ತುಂಬ ಕಾರ್ಯಕ್ರಮಗಳಲ್ಲಿ ಸೇರುತ್ತಿದ್ದೆ.ಮತ್ತು ಮುಂತಾದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದೆ. ನಾನು ಎಲ್ಲ ತರದ ಸ್ಪರ್ಧೆಗಳಲ್ಲಿ ಭಾಗಿಯಾಗಿ ತುಂಬ ಬಹುಮಾನಗಳನ್ನು ಗಳಿಸಿದ್ದೆನೆ. ಆ ಸ್ಪರ್ಧೆಗಳಾವುವೆಂದರೆ ಚಿತ್ರಕಲೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಓಟ ಸ್ಪರ್ಧೆ, ಬೆಂಕಿ ಇಲ್ಲದೆ ಆಡಿಗೆ ಮಾಡುವ ಸ್ಪರ್ಧೆ, ಹಾಡು ಹಾಡುವ ಸ್ಪರ್ಧೆ, ಮುಂತಾದವುಗಳು.
This user is a member of WikiProject Education in India |