ವಿಷಯಕ್ಕೆ ಹೋಗು

ಕಂಬರ್ಲೆಂಡ್ ನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಬರ್ಲೆಂಡ್ : ಅಮೆರಿಕ ಸಂಯುಕ್ತಸಂಸ್ಥಾನಮೆರಿಲೆಂಡ್ ರಾಜ್ಯದ ದೊಡ್ಡ ನಗರಗಳಲ್ಲಿ ಮೂರನೆಯದು. ರಾಜ್ಯದ ವಾಯವ್ಯ ಭಾಗದಲ್ಲಿ, ಪೊಟೋಮೆಕ್ ನದಿಯ ದಡದ ಮೇಲಿದೆ. ಸಮುದ್ರಮಟ್ಟಕ್ಕಿಂತ 194 ಮೀ ಎತ್ತರದಲ್ಲಿರುವ ಈ ನಗರದ ಮೂರು ಕಡೆಗಳಲ್ಲಿ ಪರ್ವತಗಳಿವೆ. ನ್ಯಾರೋಸ್ ಎಂದು ಪ್ರಸಿದ್ಧವಾದ ಸುಂದರ ಕಮರಿಯೊಂದು ಇದರ ನೈಸರ್ಗಿಕ ಹೆಬ್ಬಾಗಿಲು. ಕಂಬರ್ಲೆಂಡ್ ಅಥವಾ ರಾಷ್ಟ್ರೀಯ ರಸ್ತೆ ಈ ನಗರದಿಂದ ಆರಂಭವಾಗಿ ಪಶ್ಚಿಮಾಭಿಮುಖವಾಗಿ ಸಾಗುತ್ತದೆ. ಚೆಸಪೇಕ್ ಮತ್ತು ಒಹಾಯೊ ನಾಲೆಯ ಪಶ್ಚಿಮದ ಕೊನೆಯ ನಿಲುದಾಣ ಈ ನಗರ.

ಕಲ್ಲಿದ್ದಲು ವ್ಯಾಪಾರದಲ್ಲಿ ಇದು ಪ್ರಮುಖ ಸ್ಥಾನ ಪಡೆದಿದೆ. ವರ್ಷಕ್ಕೆ ಸು. 15,00,000 ಟನ್ ಕಲ್ಲಿದ್ದಲನ್ನು ಈ ಸುತ್ತಿನ ಪ್ರದೇಶದಲ್ಲಿ ಉತ್ಪಾದಿಸಲಾಗುತ್ತದೆ. ಇದಲ್ಲದೆ ಪ್ಲಾಸ್ಟಿಕ್, ಟೈರು, ಗಾಜಿನ ಸಾಮಾನು, ಇಟ್ಟಿಗೆ ಮತ್ತು ಮರದ ಸಾಮಾನುಗಳ ಉತ್ಪಾದನೆಯಾಗುತ್ತದೆ. ಕಂಬರ್ಲೆಂಡ್ ನಗರ ಪಶ್ಚಿಮ ಮೆರಿಲೆಂಡ್, ಪಶ್ಚಿಮ ವರ್ಜಿನಿಯ ಮತ್ತು ಪೆನ್ಸಿಲ್ವೇನಿಯಗಳ ಪ್ರಮುಖ ಕೇಂದ್ರ. ಇಲ್ಲಿ ಪ್ರಥಮವಾಗಿ ವಸತಿ ಏರ್ಪಟ್ಟಿದ್ದು 1750ರಲ್ಲಿ; 1763ರಲ್ಲಿ ಪಟ್ಟಣದ ಸ್ಥಾಪನೆಯಾಯಿತು; ನಗರದ ಸನ್ನದು ದೊರೆತದ್ದು 1850ರಲ್ಲಿ, ಜನಸಂಖ್ಯೆ 33,415 (1960).

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: