ಗಜೇಶ ಮಸಣಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಜೇಶ ಮಸಣಯ್ಯ
ಜನನ೧೧೬೫
ಅಂಕಿತನಾಮಮಹಾಲಿಂಗ ಗಜೇಶ್ವರ
ಸಂಗಾತಿ(ಗಳು)ಪುಣ್ಯಸ್ತ್ರೀ


ಗಜೇಶ ಮಸಣಯ್ಯ : - ೧೨ನೇ ಶತಮಾನದ ಅಪ್ರಸಿದ್ದ ವಚನಕಾರ, ಅಕಲಕೋಟೆ ತಾಲ್ಲೋಕಿನ ಕರಜಗಿ ಗ್ರಾಮದ ನಿವಾಸಿ. ಬಸವಾದಿ ಶರಣರ ಸಮಕಾಲೀನ. ಈತನ ಪತ್ನಿಯ ಹೆಸರು ಏನೆಂದು ತಿಳಿಯುವುದಿಲ್ಲವಾದರೂ ಆಕೆಯೂ ವಚನಕಾರ್ತಿಯಾಗಿರುವುದನ್ನು ಗಮನಿಸಬಹುದಾಗಿದೆ. ಇಂತಹ ಒಂದೆರಡು ಪ್ರಸಂಗಗಳು ವಚನ ಸಾಹಿತ್ಯಯುಗದಲ್ಲಿ ದಾಖಲಾಗಿವೆ. ಅವೆಲ್ಲವೂ ಷಟ್ಸ್ಥಲಸಿದ್ದಾಂತದ ವಿವರಗಳನ್ನು, ಆತ್ಮಜ್ಞಾನದ ತಿಳುವಳಿಕೆಯನ್ನು ಒಳಗೊಂಡಿವೆ. ಇವರ ವಚನಗಳ ಅಂಕಿತ "ಮಹಾಲಿಂಗ ಗಜೇಶ್ವರ".

ಹೊಸ ಮದುವೆ ಹಸೆ ಉಡುಗದ ಮುನ್ನ
ಹೂಸಿದರಿಶಿನ ಬಿಸಿಲಿಂಗೆ ಹರಿಯದ ಮುನ್ನ
ನೀರ ತಾಳ್ಮೆ ಹರಿಯದ ಮುನ್ನ
ತನು ಸಂಚಳವಾಗಿ, ಮನ ಗುರುಕಾರುಣ್ಯವ ಪಡೆದು
ಹುಸಿ ಇಲ್ಲದಿದ್ದಡೆ ಭಕ್ತನೆಂಬೆ
ಪಿಡಿಯಲಿಲ್ಲದಿದ್ದಡೆ ಮಾಹೇಶ್ವರನೆಂಬೆ
ತನುವಿಲ್ಲದಿದ್ದಡೆ ಪ್ರಸಾದಿ ಎಂಬೆ
ಭೇಧವಿಲ್ಲದಿದ್ದಡೆ ಪ್ರಾಣಲಿಂಗಿ ಎಂಬೆ
ಆಸೆ ಇಲ್ಲದಿದ್ದಡೆ ಶರಣನೆಂಬೆ
ಐವರ ಸಂಪರ್ಕ ಭೋಗವಾ[ಗ]ದಡೆ ಐಕ್ಯನೆಂಬೆ
ಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯವೆಂಬೆ
ಇಂತಾಗಬೇಕೆಂಬ ಮನದ ದೇಹ
ಇರಿದಡರಿಯದು, ಸ್ತುತಿಸಿದಡರಿಯದು
ಸುಖವನರಿಯದು, ದುಃಖವನರಿಯದು
ಈ ಚತಿರ್ವಿಧ ತಾಗು ನಿರೋಧವನರಿಯದಿರ್ದಡೆ
ಅದೇ ಮಹಾಲಿಂಗ ಗಜೇಶ್ವರನೆಂಬೆ