ಏಂಜೆಲಿಕ
ಗೋಚರ
ಏಂಜೆಲಿಕ | |
---|---|
ಕಾಡು ಏಂಜೆಲಿಕ (ಏಂಜೆಲಿಕಾ ಸಿಲ್ವೆಸ್ಟ್ರಿಸ್) | |
Scientific classification | |
ಸಾಮ್ರಾಜ್ಯ: | Plantae |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | Eudicots |
ಏಕಮೂಲ ವರ್ಗ: | ಆಸ್ಟರಿಡ್ಸ್ |
ಗಣ: | ಏಪಿಯಾಲೀಸ್ |
ಕುಟುಂಬ: | ಏಪಿಯೇಸೀ |
ಉಪಕುಟುಂಬ: | ಏಪಿಯಾಯ್ಡಿಯೀ |
ಪಂಗಡ: | ಸೆಲಿನಿಯೀ |
ಕುಲ: | ಏಂಜೆಲಿಕ L. |
Synonyms[೧] | |
|
ಏಂಜೆಲಿಕ ಕೊತ್ತಂಬರಿ ಬಳಗಕ್ಕೆ (ಏಪಿಯೇಸೀ) ಸೇರಿದ, ಚಿಕ್ಕಗಾತ್ರದ ಬಹುವಾರ್ಷಿಕ, ಸುಗಂಧಸಸ್ಯ. ಸಿರಿಯ ಇದರ ತವರೂರು. ದಿವ್ಯವಾದ, ಅತಿ ಮಾನುಷ ಗುಣಗಳನ್ನು ಹೊಂದಿರುವುದರಿಂದ ಇದಕ್ಕೆ ಏಂಜೆಲಿಕ ಎಂಬ ಹೆಸರು. ಬೇರು ಮತ್ತು ಫಲಗಳನ್ನು ಒಣಗಿಸಿ ಕೇಕ್, ರೊಟ್ಟಿ, ಕ್ಯಾಂಡಿ ಮತ್ತು ಅನೇಕ ಜನಪ್ರಿಯ ಮಾದಕಪಾನೀಯಗಳಿಗೆ ಮನಮೋಹಕ, ಆಕರ್ಷಕ, ಸುವಾಸನೆ ನೀಡಲು ಉಪಯೋಗಿಸುತ್ತಾರೆ. ಸಸ್ಯ ದಟ್ಟ ಹಸುರುಬಣ್ಣದಿಂದ ಕೂಡಿರುವುದರಿಂದ ಎಳೆಯ ಕುಡಿಗಳನ್ನು ಶೀತಲೀಕರಿಸಿ ಕೇಕುಗಳಿಗೆ ಅಂದ ಕೊಡಲು ಬಳಸುತ್ತಾರೆ. ಬಟ್ಟಿ ಇಳಿಸಿ ತೆಗೆದ ತೈಲವನ್ನು ಔಷಧಿ, ಸುಗಂಧ ತೈಲಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. 1500 ವರ್ಷಗಳಿಗೂ ಮುಂಚೆಯೇ ಇದರ ಪ್ರಯೋಜನವನ್ನು ಜನ ಕಂಡುಕೊಂಡಿದ್ದರೆಂಬುದಕ್ಕೆ ದಾಖಲೆಗಳಿವೆ.
ಏಂಜಿಲಿಕದ ಸಕ್ರಿಯ ಘಟಕಾಂಶಗಳು ಬೇರುಗಳು ಮತ್ತು ಬೇರುಕಾಂಡಗಳಲ್ಲಿ ಕಂಡುಬರುತ್ತವೆ.[೨]
ಉಲ್ಲೇಖಗಳು
[ಬದಲಾಯಿಸಿ]- ↑ "Angelica L." Retrieved 20 December 2022.
- ↑ "Comprehensive Guide to Angelica Species". Meschino Health. Archived from the original on July 18, 2017. Retrieved 10 July 2012.
ಹೊರಗಿನ ಕೊಂಡಿಗಳು
[ಬದಲಾಯಿಸಿ]- "History of Angelica". Our Herb Garden. March 2013.
- "Plants Profile Angelica L." Plants Database. USDA - NRCS.
- "How to Take Care of Ashitaba Plant (Longevity Herb) Angelica". Rochkirstin Santos. 23 November 2012.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: