ಜೋಸೆಫ್ ಎರ್ಲಾಂಗರ್
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಜೋಸೆಫ್ ಎರ್ಲಾಂಗರ್ | |
---|---|
ಜನನ | San Francisco, California | ೫ ಜನವರಿ ೧೮೭೪
ಮರಣ | December 5, 1965 St. Louis, Missouri | (aged 91)
ಅಭ್ಯಸಿಸಿದ ವಿದ್ಯಾಪೀಠ | Johns Hopkins School of Medicine |
ಗಮನಾರ್ಹ ಪ್ರಶಸ್ತಿಗಳು | Nobel Prize in Medicine (1944) |
ಎರ್ಲಾಂಗರ್, ಜೋಸೆಫ್: (ಜನವರಿ 5, 1874 – ಡಿಸೆಂಬರ್ 5, 1965). ನರಗಳ ನಿಜಗೆಲಸಗಳ ವ್ಯತ್ಯಾಸ ತೋರಿಕೆಯ ಕೃತಿಗಾಗಿ ಗ್ಯಾಸರ್,-ಹರ್ಬರ್ಟ್-ಸ್ಪೆನ್ಸರ್ ಕ್ಯಾಥೋಡ್ ರೇ ಆಸಿಲೋಗ್ರಾಫ್ ಅಳವಡಿಕೆಗಾಗಿ ನೊಬೆಲ್ ಪ್ರಶಸ್ತಿ ಪಡೆದ (1944) ಅಂಗಕ್ರಿಯಾ ವಿಜ್ಞಾನಿ. ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಹುಟ್ಟಿ, ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವೈದ್ಯಶಾಲೆಯಲ್ಲಿ ಎಂ.ಡಿ ಪದವೀಧರನಾಗಿ (1899) ಅಂಗಕ್ರಿಯಾ ಪಟು ವಿಲಿಯಂ ಹೊವೆಲ್‍ನೊಂದಿಗೆ ಸೇರಿದ. ರಕ್ತದ ಒತ್ತಡವನ್ನು ಗೆರೆಚಿತ್ರದಲ್ಲಿ ಗುರುತಿಸುವುದನ್ನೂ ಗುಂಡಿಗೆಯಲ್ಲಿ ನರಗಳಲ್ಲಿನ ಸಾಗಣೆಯನ್ನೂ ಕಂಡುಹಿಡಿದು ಬೆಳಕಿಗೆ ಬಂದ. 1906ವರೆಗೆ ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆಯ ವೈದ್ಯಶಾಲೆಯಲ್ಲಿ ಕೆಲಸಮಾಡಿ, ಮುಂದೆ ಹೊಸದಾಗಿ ಸ್ಥಾಪಿತವಾದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ವೈದ್ಯಶಾಲೆಯ ಅಂಗಕ್ರಿಯಾ ಪ್ರಾಧ್ಯಾಪಕನಾಗಿ ನೇಮಕಗೊಂಡ ಮುಂದೆ 1910ರಿಂದ ಮೊದಲಾಗಿ 1946ರಲ್ಲಿ ನಿವೃತ್ತನಾಗುವ ತನಕ ವಾಷಿಂಗ್ಟನ್ ವಿಶ್ವವಿದ್ಯಾಲಯಗಳಲ್ಲೂ ಅಂಗಕ್ರಿಯಾವಿಜ್ಞಾನದ ಪ್ರಾಧ್ಯಾಪಕನಾಗಿದ್ದ. ನಾಡಿಯನ್ನು ಕಿವಿಯಿಂದಾಲಿಸಿ ರಕ್ತದ ಒತ್ತಡವನ್ನು ತೋಳಿನಲ್ಲಿ ಅಳೆವ ವಿಧಾನಗಳಲ್ಲಿ ಸದ್ದು ಹುಟ್ಟುವುದರ ತಂತ್ರವನ್ನು ಆಳವಾಗಿ ಪರಿಶೋಧಿಸಿ, ರಕ್ತ ಪರಿಚಲನೆಯ ಅಭ್ಯಾಸದಲ್ಲಿ ಆಸಕ್ತನಾಗಿದ್ದ. ವಿದ್ಯುನ್ಮಾನ (ಎಲೆಕ್ಟ್ರಾನಿಕ್) ವಿಧಾನಗಳು ಬೆಳಕಿಗೆ ಬಂದುದರಿಂದ ನರಗಳ ಕೆಲಸಗಳಲ್ಲಿ ವಿಶೇಷ ಆಸಕ್ತನಾಗಿದ್ದುದರಿಂದಲೇ ನೊಬೆಲ್ ಬಹುಮಾನ ಬಂದದ್ದು. ಚೋದಿಸುವಷ್ಟು ಬಲವಿಲ್ಲದ ಆವೇಗ (ಸ್ಟಿಮುಲಸ್) ಬಂದಾಗ ನರಗಳಲ್ಲಿ ಆಗುವ ಬದಲಾವಣೆಗಳನ್ನು ಗುರುತಿಸಿ ವಿವರಿಸಿದ. ಮಜ್ಜಿಕಗೂಡಿನ (ಮಯಲಿನೇಟೆಡ್) ನರ ತಂತುಗಳಲ್ಲಿ ಆವೇಗದ ಸಾಗಣೆ ಒಂದೇ ಸಮನಾಗಿರದೆ ಹೆಜ್ಜೆ ಹೆಜ್ಜೆಗಳಲ್ಲಿರುವುವೆಂಬ ಇಂದಿನ ಕಲ್ಪನೆಗೆ ಮೂಲವಾದ ಮೊತ್ತಮೊದಲ ಪ್ರಯೋಗಗಳನ್ನು ಎರ್ಲಾಂಗ್ ನಡೆಸಿದ.☂[೧][೨][೩]
ಎರ್ಲಾಂಗರ್ನ ಸಾಧನೆಗಾಗಿ ಕ್ಯಾಲಿಫೋರ್ನಿಯ ವಿಸ್ಕಾನ್ಸಿನ್, ಪೆನ್ಸಿಲ್ವೇನಿಯ ಮತ್ತು ಮಿಚಗನ್ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿದವು.
- ↑ McComas 2011, p. 77.
- ↑ Oakes 2000, p. 214.
- ↑ McComas 2011, p. 79.
- ಉಲ್ಲೇಖವಿಲ್ಲದ ಲೇಖನಗಳು
- Articles with FAST identifiers
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BNF identifiers
- Articles with BNFdata identifiers
- Articles with GND identifiers
- Articles with J9U identifiers
- Articles with LCCN identifiers
- Articles with NKC identifiers
- Articles with NLA identifiers
- Articles with NTA identifiers
- Articles with PLWABN identifiers
- Articles with DTBIO identifiers
- Articles with Trove identifiers
- Articles with SNAC-ID identifiers
- Articles with SUDOC identifiers
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
- ನೋಬೆಲ್ ಪ್ರಶಸ್ತಿ ಪುರಸ್ಕೃತರು
- ನರವಿಜ್ಞಾನ
- ವಿಜ್ಞಾನಿಗಳು
- Harv and Sfn no-target errors