ಮೀಟು ತರಗತಿ
ಮೀಟು ತರಗತಿಯು ಒಂದು ಅಧ್ಯಾಪನ ಪ್ರಕ್ರೀಯೆ. ಇದು ಒಂದು ರೀತಿಯ ಮಿಶ್ರಿತ ಶಿಕ್ಷಣ ಕ್ರಮ. ಮೀಟು ತರಗತಿಯಲ್ಲಿ ಸಾಂಪ್ರದಾಯಿಕವಾಗಿ ನಡೆಸುವ ಶೈಕ್ಷಣಿಕ ಶೈಲಿಯನ್ನು ಹಿಮ್ಮೊಗವಾಗಿಸಿ ಅಥವಾ ಮೀಟಿಸಿ ಅಧ್ಯಾಯನ, ಪ್ರತ್ಯೇಕವಾಗಿ ಅಂತರಜಾಲ ಮುಖಾಂತರ, ತರಗತಿಯ ಹೊರಗೆ ನಡೆಸಲಾಗುವುದು. ಸಾಂಪ್ರದಾಯಕವಾಗಿ ಕೊಡುವಂತಃಹ ಮನೆಕೆಲಸವನ್ನು ತರಗತಿಯಲ್ಲೇ ಮಾಡಿ, ಇತರ ಚಟುವಟಿಕೆಗಳನ್ನು ಕೂಡ ಮಾಡುವ ಪ್ರಯೋಗ. ಮೀಟು ತರಗತಿಯಲ್ಲಿ ವಿಧ್ಯಾರ್ಥಿಗಳು ಅಂತರಜಾಲದಲ್ಲಿರುವ ಉಪನ್ಯಾಸಗಳನ್ನು ವೀಕ್ಷಿಸಿ, ಆಂತರ್ಜಾಲಿಕ ಚರ್ಚೆ ನಡೆಸಿ, ಮನೆಗಳಲ್ಲಿ ಸಂಶೋಧನೆ ನಡೆಸಿ, ತರಗತಿಯಲ್ಲಿ ಶಿಕ್ಷಕರ ಸಹಾಯ ಜೊತೆ, ವಿವಿಧ ಪರಿಕಲ್ಪನೆಗಳ ಚರ್ಚೆಗಳಲ್ಲಿ ತೊಡಗಿಸಲ್ಪಡುತ್ತಾರೆ.[೧]
ಸಾಂಪ್ರದಾಯಿಕ ಕಲಿಕೆ ವಿರುದ್ಧ ಮೀಟು ತರಗತಿಗಳು
[ಬದಲಾಯಿಸಿ]ಸಾಂಪ್ರದಾಯಿಕ ಶೈಕ್ಷಣಿಕ ಶೈಲಿಯಲ್ಲಿ, ಶಿಕ್ಷಕರು ಅಧ್ಯಾಯನದ ಕೇಂದ್ರಬಿಂದುವಾಗಿ, ಶಿಕ್ಷೆಯ ಪರಮ ದಾನಿಗಳಾಗಿದ್ದರು. ಶಿಕ್ಷಕರು ವಿಧ್ಯಾರ್ಥಿಯ ಪ್ರಶ್ನೆಗಳನ್ನು ಉತ್ತರಿಸುತ್ತಿದ್ದರು ಹಾಗು ವಿಧ್ಯಾರ್ಥಿಯರು ಶಿಕ್ಷಕರಿಂದ ಸಲಹೆಗಳನ್ನು ಪಡೆಯುತ್ತಿದ್ದರು. ಪ್ರತ್ಯೇಕ ಪಾಠವು ವಿಷಯ ಆಧಾರಿತವಾಗುತ್ತಿತ್ತು. ವಿಧ್ಯಾರ್ಥಿಯ ಪಾತ್ರ ಬಹಳ ಕಡಿಮೆ ಮಾತ್ರದಲ್ಲಿದ್ದು, ಕೆಲವೇ ಚಟುವಟಿಕೆಗಳು ಇರುತ್ತಿತ್ತು. ಇವರು ಶಿಕ್ಷಕರು ಕೊಟ್ಟಂತಹ ಅಭ್ಯಾಸವನ್ನು ಸ್ವತಂತ್ರವಾಗಿ ಅಥವಾ ಚಿಕ್ಕ ಗುಂಪಿನಲ್ಲಿ ಕೆಲಸಮಾಡುತ್ತಿದ್ದರು. ತರಗತಿಯಲ್ಲಿ ಚರ್ಚೆಯು ಶಿಕ್ಷಕರಮೇಲೆ ಕೇಂದ್ರಿತವಾಗಿದ್ದು, ಶಿಕ್ಷಕರು ಅವುಗಳನ್ನು ನಿಯಂತ್ರಣದಲ್ಲಿ ಇಡುತಿದ್ದರು.[೨] ಈ ಶೈಲಿಯಲ್ಲಿ ಶಿಕ್ಷಣವು ವಿಧ್ಯಾರ್ಥಿಗಳಿಗೆ ಪುಸ್ತಕಗಳಿಂದ ಓದಿ ಅಥವಾ ತರಗತಿಯಲ್ಲಿ ಕೊಟ್ಟಂತಹ ಅಭ್ಯಾಸಗಳನ್ನು ಮಾಡಿ ಪಡೆಯಲಾಗುತ್ತಿತ್ತು.[೩]
ಮೀಟು ತರಗತಿಯಲ್ಲಿ ಶಿಕ್ಷಣವು ವಿಧ್ಯಾರ್ಥಿ-ಕೇಂದ್ರಿತವಾಗಿ, ತರಗತಿಯ ಸಮಯವನ್ನು ವಿಷಯಗಳನ್ನು ಅತೀ ಸೂಕ್ಷ್ಮ ರೀತಿಯಲ್ಲಿ ವಿಚಾರಿಸಿ, ಅರ್ಥಪೂರ್ಣ ಕಲಿಯುವ ಅವಕಾಶವನ್ನು ಕೊಡುವಂತದ್ದು. ಇದರಲ್ಲಿ ಆಂತರ್ಜಾಲ ಆಧರಿತ ಸಂಪನ್ಮೂಲಗಳನ್ನು ತರಗತಿಯ ಹೊರ ಸಮಯದಲ್ಲಿ ಉಪಯೋಗಿಸುತ್ತಾರೆ. ವಿಷಯಗಳನ್ನು ವಿವಿಧ ರೀತಿಯಲ್ಲಿ ಕೊಡಲಾಗುತ್ತದೆ. ಸಾಮಾನ್ಯವಾಗಿ, ಶಿಕ್ಷಕರಿಂದ ಮಾಡಲಾಗಿದ್ದ ವೀಡಿಯೊಗಳನ್ನು ಅಥವಾ ಅನ್ಯ ಸಂಪನ್ಮೂಲಗಳಿಂದ ಅಥವಾ ಆಂತರ್ಜಾಲ ಆಧಾರಿತ ಅನ್ಯ ಮೂಲಗಳಿಂದ, ಸಹಯೋಗದ ಚರ್ಚೆ, ಸಂಶೋಧನೆ, ಗ್ರಂಥಾಲಯಗಳ ಪುಸ್ತಕಗಳನ್ನು ಕೂಡ ಉಪಯೋಗಿಸುತ್ತಾರೆ.[೧][೪][೫]
ಮೀಟು ತರಗತಿಯು, ತರಗತಿಯಲ್ಲಿ ಮಾಡಲಾಗುವ ಚಟುವಟಿಕೆಗಳನ್ನು ನೂತನಗೊಳಿಸುತ್ತದೆ. ತರಗತಿ ಚಟುವಟಿಗಳು ಮನೆಕೆಲಸವಿಲ್ಲದೆ, ಎಲ್ಲಾ ವಿಷಯಗಳನ್ನು ಅಲ್ಲೇ ವಿಚಾರಿಸುವ ಪದ್ದತಿಯನ್ನು ಹೊಂದಿರುತ್ತದೆ. ಬೇರೆ ಬೇರೆ ತರಗತಿಗಳು ವಿಧವಿಧದ ಚಟುವಟಿಕೆಗಳನ್ನು ಮಾಡಬಹುದು; ಆದೆರೆ, ಸಾಮಾನ್ಯವಾಗಿ ಗಣಿತ ಆಧರಿತ ಸಮಸ್ಯೆಗಳನ್ನು, ಗಣಿತ ತಂತ್ರಜ್ಞಾನ ಆಧರಿತ, ಪ್ರಯೋಗಾಲಯ ಪ್ರಯೋಗಗಳು, ಮೂಲ ದಾಖಲೆ ವಿಷ್ಲೇಶಣೆ, ಚರ್ಚೆಗಳು, ಭಾಷಣ, ಪರ್ಸ್ಪರ ವಿಮರ್ಶೆ, ಯೋಜನೆ ಆಧಾರಿತ ಕಲಿಕೆ, ಕೌಶಲ್ಯ ಬೆಳವಣಿಗೆ ಮತ್ತು ಪರಿಕಾಲ್ಪಣಿಕ ಅಭ್ಯಾಸಗಳು ಹೊಂದಿರುತ್ತವೆ.[೬][೭] ಈ ರೀತಿಯ ಚಟುವಟಿಕೆಗಳು ವಿವಿಧ ಕಲಿಕೆಶೈಲಿಗಳನ್ನು ಅವಕಾಶ ಮಾಡಿಕೊಡುವುದರಿಂದ,[೮] ತರಗತಿಯಲ್ಲಿ ಹೆಚ್ಚಿನ ಸಮಯ ಉನ್ನತ ಯೋಚನೆಯಲ್ಲಿ, ಸಮಸ್ಯೆ ಪರಿಹಾರ, ಸಂಯೋಜಿತ ಕಲಿಕೆ, ವಿನ್ಯಾಸ, ಗುಂಪಿನಲ್ಲಿ ಕೆಲಸಮಾಡುವುದು, ಸಂಶೋಧನೆ ಇತರ ರಚನಾತ್ಮಕ ಕಾರ್ಯಗಳಲ್ಲಿ ಉಪಯೋಗಿಸಬಹುದು.[೯] ಮೀಟು ತರಗತಿಗಳು ಶಾಲೆಗಳಲ್ಲಿ ಹಾಗು ಕಾಲೇಜುಗಳಲ್ಲಿ ಕಾರ್ಯಗತಗೊಳಿಸಿ, ವಿವಿಧ ಫಲಿತಾಂಶಗಳನ್ನು ನೀಡಿದೆ.[೧೦]
ವಿಧ್ಯಾರ್ಥಿಯರ ಜೊತೆ ಶಿಕ್ಷಕರ ಸಂವಹನ ವೈಯುಕ್ತಿಕವಾಗಿರುತ್ತದೆ ಮಾತ್ರವಲ್ಲದೆ, ಅಧ್ಯಾಯನದಲ್ಲಿ ಎಲ್ಲರು ಭಾಗವಹಿಸುವ ಕಾರಣ, ವಿಧ್ಯಾರ್ಥಿಯು ಜ್ಞಾನ ಸಂಗ್ರಹಿಸುವುದರಲ್ಲಿ ಆಸಕ್ತಿಯಿಂದ, ಕ್ರೀಯಾತ್ಮಕವಾಗಿ ಪಾಲುಗೊಳ್ಳುತ್ತಾರೆ.[೧][೧೧][೧೨]
ಮೀಟು ಪಾಂಡಿತ್ಯ
[ಬದಲಾಯಿಸಿ]ಸಾಂಪ್ರದಾಯಿಕ ತರಗತಿಯಲ್ಲಿ ಒಂದು ವಿಷಯವನ್ನು ಸೀಮಿತ ಸಮಯದಲ್ಲಿ ಮುಗಿಸುವ ಅಭ್ಯಾಸವಿತ್ತು. ಮೀಟು ತರಗತಿಯಲ್ಲಿ ಪ್ರತಿ ವಿಧ್ಯಾರ್ಥಿ ಕಲಿಸುವ ವಿಷಯವನ್ನು ಸರಿಯಾಗಿ ತಿಳಿದ ನಂತರ ತರಗತಿಯನ್ನು ಮುಂದುವರಿಸುವ ಅಭ್ಯಾಸವನ್ನು ಹೊಂದಿರುತ್ತದೆ.[೧೩] ಪಾಂಡಿತ್ಯ ವಿಧ್ಯಾರ್ಥಿಯರು ತೋರ್ಸುವ ಸಾಮರ್ಥ್ಯವನ್ನು ಪ್ರೋತ್ಸಾಹಿಸುತ್ತದೆ. ಅಪೂರ್ಣ ಕೆಲಸವನ್ನು ತಿದ್ದಿಪಡಿಸಿದಾದಮೇಲೆ ಮುಂದಿನ ವಿಷಯವನ್ನು ಪ್ರಾರಂಭಿಸುವುದು. ಮೀಟು ತರಗತಿಗಳು ಬರುವ ಮುಂಚೆ, ಮೀಟು ಪಾಂಡಿತ್ಯವು ಬಹಳ ಕಷ್ಟಕರವಾಗಿತ್ತು. ಪರೀಕ್ಷಿಸುವು ವಿಧಾನ ಅಪ್ರಯೋಗಿಕವಾಗಿತ್ತು.ಮೀಟು ಪಾಂಡಿತ್ಯವುಳ್ಳ ತರಗತಿಯಲ್ಲಿ, ಪ್ರತಿ ವಿದ್ಯಾರ್ಥಿ ಪ್ರತಿ ವಿಷಯವನ್ನು ವೀಕ್ಷಿಸಿ, ಅವುಗಳ ಮೇಲೆ ವಿಷ್ಲೇಶಣೆ ನಡೆಸಿ, ಪಾಂಡಿತ್ಯವನ್ನು ಸ್ವೀಕರಿಸಿ ಮುಂದೆ ಅಭ್ಯಾಸವನ್ನು ನಡೆಸುತ್ತಾರೆ.[೧೪]
ಮಿತಿಗಳು ಹಾಗು ವಿಮರ್ಶೆಗಳು
[ಬದಲಾಯಿಸಿ]ಮೀಟು ತರಗತಿಗಳಿಗೆ ಹಲವು ಕುಂದುಕೊರತೆಗಳಿವೆ. ವಿಧ್ಯಾರ್ಥಿಗಳ ದೃಷ್ಟಿಯಲ್ಲಿ, ಈ ಶೈಲಿಯಲ್ಲಿ 'ಡಿಜಿಟಲ್ ವಿಭಜನೆ' ಉಂಟು. ಎಲ್ಲಾ ಕುಟುಂಬಗಳು ಒಂದೆ ತರಹದ ಆರ್ಥಿಕ ಸ್ತಿಥಿವುಳ್ಳವರಲ್ಲ. ಗಣಕಯಂತ್ರಗಳ ಕೊರತೆ ಅಥವಾ ತರಗತಿಯ ಹೊರಗೆ ವೀಡಿಯೊ ವೀಕ್ಷಿಸುವ ಪ್ರಯೋಜನೆವಿರುವುದಿಲ್ಲ. ಈ ವಿಧಾನ ಬಡ ಕುಟುಂಬದ ಸದಸ್ಯರಲ್ಲಿ ಗಣಕಯಂತ್ರ ಹಾಗು ಇತರ ವಿದ್ಯುನ್ಮಾನ ವಸ್ತುಗಳನ್ನು ಕೊಂಡುಕೊಳ್ಳುವ ಒತ್ತಡ ಬೀಳಬಹುದು.[೧೫]
ಮೀಟು ತರಗತಿಗಳು ಸಾಂಪ್ರದಾಯಿಕ ತರಗತಿಗಳಲ್ಲಿ ಕಂಡುಬರುವ ಸಮಸ್ಯೆಗಳನ್ನು ಕೂಡ ಅನುಭವಿಸಬಹುದು. ವಿಧ್ಯಾರ್ಥಿಯರು ಮನೆಗಳಲ್ಲಿ ವಿಡಿಯೊ ಹಾಗು ಪ್ರೋಜೆಕ್ಟ್ ನೋಡಿ, ಕೇಳಿ ಕಲಿಯದೇವಿರಬಹುದು. ರಚನಾತ್ಮಕವಾದ ವಿಧಾನ ಇಲ್ಲಿ ತುಂಬ ಸಹಕಾರಿಯಾಗಬಹುದು. ಶಿಕ್ಷಕರಿಗೂ ಕೂಡ ತೊಂದರೆಗಳು ಉಂಟಾಗಬಹುದು. ಪೂರ್ವಸಿದ್ಧತಿಯ ಕಾಲ ಹೆಚ್ಚಿಸಿ, ಉತ್ತಮ ಗುಣಮಟ್ಟದ ವೀಡಿಯೊಗಳನ್ನು ತಯಾರಿಸಲು ಬಹಳಷ್ಟು ಸಮಯ ನೀಡುವಂತಿದೆ. ಪ್ರತ್ಯೇಕವಾದ ಬಂಡಾವಾಳ ಈ ತರಗತಿಗಳಿಗೋಸ್ಕರವಿರಬೇಕು. ಶಿಕ್ಷಕರಿಗೆ ತರಭೇತಿ ನೀಡಿ, ಗಣಕಯಂತ್ರದ ಮಾಹಿತಿಗಳೆಲ್ಲ ಅತ್ಯಂತ ಅಗತ್ಯವಾದದ್ದು.[೬]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ Abeysekera, Lakmal, and Phillip Dawson (2015). "Motivation and cognitive load in the flipped classroom: definition, rationale and a call for research." Higher Education Research & Development 34(1), 1-14.
- ↑ Ryback, D., & Sanders, J. (1980). Humanistic versus traditional teaching styles and student satisfaction. Journal of Humanistic Psychology, 20(87), 87-90
- ↑ The flip: Turning a classroom upside down, Washington Post, 4. June, 2012.
- ↑ Marco Ronchetti (June 2010), "Using video lectures to make teaching more interactive", International Journal of Emerging Technologies in Learning (iJET)
- ↑ Greg Topp (6 Oct 2011), "Flipped classrooms take advantage of technology", USA Today
- ↑ ೬.೦ ೬.೧ Bergmann, J., & Sams, A. (2012). Flip your classroom: reach every student in every class every day. Washington, DC: International Society for Technology in Education.
- ↑ Sparks, S. D. (2011). Schools "flip" for lesson model promoted by Khan Academy. Education Week, 31(5), 1. Retrieved from http://www.edweek.org/ew/articles/2011/09/28/05khan_ep.h31.html
- ↑ Alvarez, B. (2011). Flipping the classroom: Homework in class, lessons at home. Education Digest: Essential Readings Condensed For Quick Review, 77(8), 18-21. Retrieved from http://neapriorityschools.org/successful-students/flipping-the-classroom-homework-in-class-lessons-at-home-2 Archived 2011-12-22 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Bennett, B., Spencer, D., Bergmann, J., Cockrum, T., Musallam, R., Sams, A., Fisch, K., & Overmyer, J. (2013). The flipped classroom manifest. Retrieved from http://www.thedailyriff.com/articles/the-flipped-class-manifest-823.php Archived 2019-05-26 ವೇಬ್ಯಾಕ್ ಮೆಷಿನ್ ನಲ್ಲಿ.
- ↑ http://emantras.us/how-flipped-classrooms-change-from-schools-to-colleges-infographic/ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ. How Flipped Classrooms change from Schools to Colleges [INFOGRAPHIC]
- ↑ Alvarez, B. (2011). Flipping the classroom: Homework in class, lessons at home. Education Digest: Essential Readings Condensed For Quick Review, 77(8), 18-21
- ↑ Flipped Learning Network http://fln.schoolwires.net/cms/lib07/VA01923112/Centricity/Domain/46/FLIP_handout_FNL_Web.pdf Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Rosenberg, Tina (October 23, 2013). "In 'Flipped' Classrooms, a Method for Mastery". New York Times.
- ↑ Bergmann, Jon; Sams, Aaron. Flip Your Classroom: Reach Every Student in Every Class Every Day. ISBN 1564843157.
- ↑ Nielsen, L. (2012). Five reasons I'm not flipping over the flipped classroom. Retrieved from http://theinnovativeeducator.blogspot.ca/2011/10/five-reasons-im-not-flipping-over.html