ವಿಷಯಕ್ಕೆ ಹೋಗು

ಸದಸ್ಯ:Sunaiza/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸುನೈಜಾ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲಾಯಿ ನನ್ನ ಹುಟ್ಟೂರು. ವೃತ್ತಿಯಲ್ಲಿ ವಾಣಿಜ್ಯೋದ್ಯಮಿಯಾಗಿರುವ ನನ್ನ ತಂದೆ ಅಬೂಬಕರ್ ಹಾಗೂ ಅಪ್ಪಟ ಗೃಹಿಣಿಯಾಗಿರುವ ನನ್ನ ತಾಯಿ ಜುಬೈದಾ ದಂಪತಿಗಳ ಕೊನೆಯ ಪುತ್ರಿಯಾಗಿ ತುಂಬಾ ಪ್ರೀತಿಪಾತ್ರಳಾಗೆ ಬೆಳೆದೆ. ಒಟ್ಟು ಮೂರು ಮಕ್ಕಳಲ್ಲಿ ನ್ನ ಸಹೋದರಿ ಕಮರುನ್ನಿಸಾ ಅಂತಿಮ ವಷ‍ದ ಪದವಿ ವಿದ್ಯಾಭ್ಯಾಸವನ್ನು ಕೈಗೊಳ್ಳುತ್ತಿದ್ದು, ಹಿರಿಯ ಸಹೋದರ ಮುಹಮ್ಮದ್ ಅಶ್ರಫ್ ಮಲಬಾರ್ ಗೋಲ್ಡ್ನಲ್ಲಿ ಕಾರ್ಯ ನಿವ‍ಹಿಸುತ್ತಿದ್ದಾನೆ. ಎಲ್ಲರ ಪ್ರೀತಿ ವಾತ್ಸಲ್ಯದ ನಡುವೆ ನನ್ನ ಬಾಲ್ಯವನ್ನು ಉತ್ತಮವಾಗಿ ಕಳೆದೆ. ನನ್ನ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಸಂತ ಅಂತೋನಿ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದೇನೆ. ಉತ್ತಮ ಅನುಭವ ಮತ್ತು ಕಾರ್ಯಕ್ಷಮತೆಯನ್ನು ನಾನಿಲ್ಲಿ ಕಲಿತೆ. ಹಲವು ಸಂದಿಗ್ದ ಪರಿಸ್ಥಿತಿಗಳಲ್ಲೂ ನನ್ನಲ್ಲಿ ಹುಮ್ಮಸ್ಸು ತುಂಬಿದ ವಿದ್ಯಾಸಂಸ್ಥೆಯಾಗಿದೆ ಇದು. ಇದೀಗ ನಾನು ನನ್ನ ಪದವಿ ಶಿಕ್ಷಣಕ್ಕಾಗಿ ಮಂಗಳೂರಿನ ಪ್ರತಿಷ್ಟಿತ ಶಿಕ್ಷಣಸಂಸ್ಥೆ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಶತವರ್ಷಗಳ ದಾಟಿ ಮುನ್ನುಗ್ಗುತ್ತಿರುವ ಈ ವಿದ್ಯಾಸಂಸ್ಥೆಯ ಒಂದು ಭಾಗವಾಗಲು ನನಗೆ ಹೆಮ್ಮೆ ಇದೆ. ನನ್ನ ಬಿಡುವಿನ ವೇಳೆಗಳಲ್ಲಿ ಸಂಗೀತ ಕೇಳುತ್ತಾ , ಪುಸ್ತಕಗಳನ್ನು ಓದುತ್ತಾ ಕಾಲ ಕಳೆಯುತ್ತೇನೆ. ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ, ಪರೋಪಕಾರಿಯಾಗಬೇಕೆಂಬುದೇ ನನ್ನ ಮಹದಾಸೆ.