ಸದಸ್ಯ:Vinayaka90/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ವಿನಾಯಕ. ಕನಾ‍ಟಕದ ಗಡಿಭಾಗವಾದ ಬೆಳಗಾವಿಯಲ್ಲಿ ನಾನು ಹುಟ್ಟಿದೆ. ಮರಾಠಿ ಮತ್ತು ಮಹಾರಾಷ್ಟ್ರದ ಪ್ರಭಾವವಿದ್ದರೂ, ನಾನಂತೂ ಆಚ್ಛಕನ್ನಡಿಗನಾಗಿ ಬೆಳೆದೆ. ಈ ಬೇಳವಣಿಗೆಯಲ್ಲಿ ನನ್ನ ತಂದೆ ಪತ್ರಯ್ಯ ಮತ್ತು ತಾಯಿ ಕಾರಮ್ಮ ರ ಪಾತ್ರವು ಅಪಾರವಾದುದು. ಬೆಳಗಾವಿಯಿಂದ ಬಂದು ಇದೀಗ ದಕ್ಷಿಣ ಕನ್ನಡದ ಮಂಗಳೂರಿನ ಶಕ್ತಿನಗರದಲ್ಲಿ ತಂದೆತಾಯಿಯೊಂದಿಗೆ ವಾಸಿಸುತ್ತಿದ್ದೇನೆ. ಬಿಡುವಿನ ವೇಳೆಗಳಲ್ಲಿ ನನ್ನ ನೆಚ್ಚಿನ ಹವ್ಯಾಸಗಳೆಂದರೆ ಪುಸ್ತಕ ಮತ್ತು ದಿನಪತ್ರಿಕೆಗಳನ್ನು ಓದುವುದು. ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ಪೂರ್ಣಗೊಳಿಸಿದೆ. ಬಳಿಕ ಪದವಿಪೂರ್ವ ಶಿಕ್ಷಣವನ್ನು ಮಂಗಳೂರಿನ ಪ್ರತಿಷ್ಟಿತ ವಿದ್ಯಾಸಂಸ್ಥೆ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಂದುವರಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದೆ. ಇದೀಗ ಪದವಿ ಶಿಕ್ಷಣವನ್ನು ಸಂತ ಅಲೋಶಿಯಸ್ ಪಡೆಯುತ್ತಿದ್ದು, ಮುಂದೆ ಐಎಎಸ್ ಅಧಿಕಾರಿಯಾಗಬೇಕೆಂಬ ಗುರಿಯಿದೆ.