ಸದಸ್ಯ:Shishirarao/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಶಿಶಿರ ರಾವ್ ಹೆಚ್.ಎಸ್. ನನ್ನ ತಂದೆಯ ಹೆಸರು ಸುರೇಶ್ ಮತ್ತು ನನ್ನ ತಾಯಿಯ ಹೆಸರು ರೇಖಾ. ನನ್ನ ಊರು ತೀಥ‌ಹಳ್ಳಿ, ನಾನು ಒಂದನೇ ತರಗತಿಯಿಂದ ೧೨ನೇ ತರಗತಿಯವರೆಗೆ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆಯಲ್ಲಿ ಕಲಿತೆ. ಆ ಶಾಲೆ ನಮ್ಮ ಮನೆಯಿಂದ ಬಹಳ ಹತ್ತಿರ, ಆ ಕಾರಣದಿಂದ ನಾನು ಅಲ್ಲಿಯೇ ಕಲಿತೆ.ನಮ್ಮ ಊರಿನಲ್ಲಿ ಕುವೆಂಪುರವರು ಹುಟ್ಟಿದ್ದರು. ನಾನು ಅವರ ಮನೆಗೆ ಬಹಳ ಸಾರಿ ಹೋಗಿದ್ದೆ.ಅವರ ಮನೆ ತುಂಬಾ ಚೆನ್ನಾಗಿದೆ.ಅ ಮನೆ ಸುಮಾರು ನೂರು ವಷ ಹಳೆಯದು. ತುಂಬಾ ದೊಡ್ಡ ಮನೆ. ಈಗ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ.ಪದವಿ ಕಲಿಯುತ್ತಿದ್ದೇನೆ.ನಾನು ಅಲೋಶಿಯಸ್ ಹಾಸ್ಟೆಲ್ ನಲ್ಲಿ ಇದ್ದೇನೆ. ಇದೇ ಮೊದಲನೇ ಬಾರಿ ನಾನು ಮನೆಯನ್ನು ಬಿಟ್ಟು ಹೊರಗೆ ಓದುವ ಸಲುವಾಗಿ ಇದ್ದೇನೆ.ಹಾಸ್ಟಲ್ ಮುಂದೆ ಮಾಡುವ ಪಾನಿಪೂರಿ ತುಂಬಾ ಚೆನ್ನಾಗಿರುತ್ತದೆ. ನಾನು ಹಾಸ್ಟೆಲಗೆ ಬಂದ ಮೊದಲ ದಿನವೇ ಆ ಪಾನಿಪೂರಿಯನ್ನು ತಿಂದಿದ್ದೆ ಅದು ಬಹಳ ರುಚಿಕರ. ನನಗೆ ಹಾಸ್ಟಲ್ ನಲ್ಲಿ ತುಂಬಾ ಗೆಳೆಯರಿದ್ದಾರೆ. ಅವರು ನನ್ನ ಹಾಗೆ ಇದೇ ಮೊದಲನೇ ಬಾರಿ ಮನೆಯನ್ನು ಬಿಟ್ಟು ಇರುವುದು.ನಾವೆಲ್ಲರು ಒಟ್ಟಿಗೆ ದಿನ ನಿತ್ಯ ತಿಂಡಿ ಊಟ ಮಾಡುತ್ತೇವೆ. ನಾನು ಮೊದಲನೇ ದಿನ ಕಾಲೇಜಿನಲ್ಲಿ ಓರಿಯೆಂಟೇಶನ್ ಪ್ರೋಗ್ರಾಮ್ ಇತ್ತು. ಆ ಕಾರ್ಯಕ್ರಮದಿಂದಾಗಿ ಕಾಲೇಜಿನ ನಿಯಮಗಳು ಗೊತ್ತಾಯಿತು. ತುಂಬಾ ಗೆಳೆಯ ಗೆಳತಿಯರು ಇದ್ದಾರೆ.ನನ್ನ ಇಷ್ಟವಾದ ವಿಷಯ ಪ್ರಾಣಿಶಾಸ್ರ್ರ ಏಕೆಂದರೆ ಮೊದಲ ಪರೀಕ್ಷೆಯಲ್ಲಿ ಆ ವಿಷಯದಲ್ಲಿ ನನಗೆ ಹೆಚ್ಚು ಅಂಕ ಬಂದಿತ್ತು. ಆ ಕಾರಣದಿಂದಾಗಿ ನನಗೆ ಆ ವಿಷಯ ತುಂಬಾ ಇಷ್ಟ. ನಮ್ಮ ಊರಿನಲ್ಲಿ ತುಂಬಾ ಮಳೆಯಾಗುತ್ತದೆ.ಎಕೆಂದರೆ ಅಲ್ಲಿ ತುಂಬಾ ಕಾಡು ಕಾಣಬಹುದು. ನಮ್ಮ ಊರಿನಿಂದ ಸುಮಾರು ೩೦ ಕಿ.ಮೀ. ಸಮೀಪದಲ್ಲಿ ಆಗುಂಬೆ ಇದೆ. ಆ ಪ್ರದೇಶದಲ್ಲಿ ತುಂಬಾ ಮಳೆಯಾಗುತ್ತೆ ಭಾರತದಲ್ಲಿ ೨ನೇ ಹೆಚ್ಚು ಮಳೆ ಬೀಳುವ ಪ್ರದೇಶ.