ಶೇರು ವಿನಿಮಯ ಕೇಂದ್ರ
ಶೇರು ವಿನಿಮಯ ಕೇಂದ್ರದ ವ್ಯಾಖ್ಯೆ: ಭದ್ರತಾ ಪತ್ರ ಕರಾರು (ನಿಬಂಧನೆ)ಕಾನೂನು ೧೯೫೬ ರ ಅನ್ವಯ ಶೇರು ವಿನಿಮಯ ಕೇಂದ್ರವೆಂದರೆ," ಭದ್ರತಾ ಪತ್ರಗಳನ್ನು ಕೊಳ್ಳುವ, ಮಾರುವ ಮತ್ತು ವ್ಯವಹರಿಸುವುದಕ್ಕೆ ಸಹಾಯ ನೀಡುವ,ನಿಯಂತ್ರಿಸುವ ಮತ್ತು ವ್ಯವಸ್ಥೆಗೊಳಿಸುವ ಉದ್ದೇಶದಿಂದ ಸ್ಥಾಪಿತವಾದ,ಒಂದು ಸಂಘ ಅಥವಾ ವ್ಯಕ್ತಿಗಳ ಸಮುದಾಯ".ಭಾರತದ ಪ್ರಪ್ರಥಮ ಶೇರು ವಿನಿಮಯ ಕೇಂದ್ರವನ್ನು ೧೮೭೫ ರಲ್ಲಿ ಸ್ಥಾಪಿಸಲಾಯಿತು.ಮುಂಬಯಿಯಲ್ಲಿ ನೇಟಿವ್ ಶೇರ್ ಮತ್ತು ಸ್ಟಾಕ್ ಬ್ರೋಕರ್ಸ್ ಎಸೋಸಿಯೇಶನ್ ಆಫ್ ಇಂಡಿಯಾ ಹೆಸರಿನಲ್ಲಿ ಸ್ಥಾಪಿಸಲಾಯಿತು. ನಂತರ ಇದನ್ನು ಮುಂಬಯಿ ಸ್ಟಾಕ್ ಎಕ್ಸ್ಚೇಂಜ್ ಎಂದು ಕರೆಯಲಾಯಿತು. ಇದರ ನಂತರ ಶೇರು ವಿನಿಮಯ ಕೇಂದ್ರಗಳು ಅಹಮದಾಬಾದ್(೧೮೯೪),ಕಲ್ಕತ್ತಾ(೧೯೦೮),ಮತ್ತು ಮದ್ರಾಸ್(೧೯೩೭)ನಲ್ಲಿ ಸ್ಥಾಪಿನೆ ಮಾಡಲಾಯಿತು.
೧೯೯೧ರಲ್ಲಿ ಮಾಡಿದ ಸುಧಾರಣೆಯ ನಂತರ ಭಾರತದ ಅನುಷಂಗಿಕ ಮಾರುಕಟ್ಟೆಯು ಮೂರು ಶ್ರೇಣಿಯ ರೂಪವನ್ನು ಪಡೆದಿದೆ.ಅವು ಯಾವುದೆಂದರೆ,
ಪ್ರಾಂತೀಯ ಶೇರು ವಿನಿಮಯ ಕೇಂದ್ರ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನೇರ ಶೇರು ವಿನಿಮಯ ಕೇಂದ್ರ
ಭಾರತದಲ್ಲಿ ಮಾನ್ಯತೆ ಪಡೆದ ಶೇರು ವಿನಿಮಯ ಗಳ ಸ್ಥಾಪನೆ
೧.ಮೀರತ್ ಶೇರು ವಿನಿಮಯ ಕೇಂದ್ರ,ಮೀರತ್ (ಯು.ಪಿ)
೨.ಯು.ಪಿ ಶೇರು ವಿನಿಮಯ ಕೇಂದ್ರ, ಕಾನ್ಪುರ (ಯು.ಪಿ)
೩.ಮುಂಬಯಿ ಶೇರು ವಿನಿಮಯ ಕೇಂದ್ರ, ಮುಂಬಯಿ (ಮಹರಾಷ್ಟ್ರ)
೪.ನೇರ ಶೇರು ವಿನಿಮಯ ಕೇಂದ್ರ ಭಾರತ, ಮುಂಬಯಿ (ಮಹರಾಷ್ಟ್ರ)
೫.ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ, ಮುಂಬಯಿ (ಮಹರಾಷ್ಟ್ರ)
೬.ಪುಣೆ ಶೇರು ವಿನಿಮಯ ಕೇಂದ್ರ, ಪುಣೆ (ಮಹರಾಷ್ಟ್ರ)
೭.ಅಹಮ್ಮದ್ ಬಾದ್ ಶೇರು ವಿನಿಮಯ ಕೇಂದ್ರ,ಅಹಮ್ಮದ್ ಬಾದ್ (ಗುಜರಾತ್)
೮.ವದೋಧರ ಶೇರು ವಿನಿಮಯ ಕೇಂದ್ರ,ವದೋಧರ (ಗುಜರಾತ್)
೯.ಬೆಂಗಳೂರು ಶೇರು ವಿನಿಮಯ ಕೇಂದ್ರ,ಬೆಂಗಳೂರು (ಕರ್ನಾಟಕ)
೧೦.ಕೆನರಾ ಶೇರು ವಿನಿಮಯ ಕೇಂದ್ರ,ಮಂಗಳೂರು (ಕರ್ನಾಟಕ)
೧೧.ಭುವನೇಶ್ವರ್ ಶೇರು ವಿನಿಮಯ ಕೇಂದ್ರ,ಭುವನೇಶ್ವರ (ಒಡಿಶಾ)
೧೨.ಕಲ್ಕತ್ತಾ ಶೇರು ವಿನಿಮಯ ಕೇಂದ್ರ,ಕಲ್ಕತ್ತಾ (ವೆಸ್ಟ್ ಬೆಂಗಾಲ್)
೧೩.ದೆಹಲಿ ಶೇರು ವಿನಿಮಯ ಕೇಂದ್ರ,ದೆಹಲಿ
೧೪.ಗುವಹಟಿ ಶೇರು ವಿನಿಮಯ ಕೇಂದ್ರ,ಗುವಹಟಿ(ಅಸ್ಸಾಂ)
೧೫.ಹೈದರಾಬಾದ್ ಶೇರು ವಿನಿಮಯ ಕೇಂದ್ರ,ಹೈದರಾಬಾದ್ (ಆಂಧ್ರ ಪ್ರದೇಶ)
೧೬.ಜೈಪುರ ಶೇರು ವಿನಿಮಯ ಕೇಂದ್ರ,ಜೈಪುರ (ರಾಜಸ್ಥಾನ)
೧೭.ಲುದಿಯಾನ ಶೇರು ವಿನಿಮಯ ಕೇಂದ್ರ,ಲುದಿಯಾನ (ಪಂಜಾಬ್)
೧೮.ಮದ್ರಾಸ್ ಶೇರು ವಿನಿಮಯ ಕೇಂದ್ರ,ಚೆನೈ (ತಮಿಳುನಾಡು)
೧೯.ಕೊಯಮತ್ತೂರು ಶೇರು ವಿನಿಮಯ ಕೇಂದ್ರ,ಕೊಯಮತ್ತೂರು (ತಮಿಳುನಾಡು)
೨೦.ಎಂ.ಪಿ. ಶೇರು ವಿನಿಮಯ ಕೇಂದ್ರ,(ಮಧ್ಯಪ್ರದೇಶ)
೨೧.ಮಗದಾ ಶೇರು ವಿನಿಮಯ ಕೇಂದ್ರ,ಪಾಟ್ನಾ (ಬಿಹಾರ)
೨೨.ಬಂಡವಾಳ ಶೇರು ವಿನಿಮಯ ಕೇಂದ್ರ,ಕೇರಳ ಲಿಮಿಟೆಡ್,ತಿರುವನಂತಪುರ (ಕೇರಳ)
೨೩.ಕೊಚ್ಚಿನ್ ಶೇರು ವಿನಿಮಯ ಕೇಂದ್ರ,ಕೊಚ್ಚಿನ್ (ಕೇರಳ)