ಶೀತರಕ್ತ ಪ್ರಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಆಮೆ

ಶೀತರಕ್ತ ಪ್ರಾಣಿಯು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಆಂತರಿಕ ಪ್ರಕ್ರಿಯೆಯನ್ನು ಹೊಂದಿರದ ಪ್ರಾಣಿ. ಬದಲಿಗೆ, ಶೀತರಕ್ತ ಪ್ರಾಣಿಯು ಪರಿಸರದಿಂದ ಸೆರೆಹಿಡಿಯಲ್ಪಟ್ಟ ಸೌರಶಕ್ತಿಯನ್ನು ಅವಲಂಬಿಸಿರುತ್ತದೆ. ಸರೀಸೃಪಗಳು, ಉಭಯಚರಗಳು ಮತ್ತು ಮೀನು ಶೀತರಕ್ತ ಪ್ರಾಣಿಗಳ ಉದಾಹರಣೆಗಳಾಗಿವೆ.

ಕಪ್ಪೆ

ಸರೀಸೃಪಗಳು[ಬದಲಾಯಿಸಿ]

ಸರೀಸೃಪಗಳು ಶಾಖ ಹೀರಿಕೊಳ್ಳಲು ಹಲವುವೇಳೆ ಬಂಡೆಗಳ ಮೇಲೆ ಬಿಸಿಕಾಯಿಸಿಕೊಳ್ಳುತ್ತವೆ. ಶಾಖವು ಸರೀಸೃಪಗಳ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಇದು ಸಕ್ರಿಯ ಅವಧಿಯಲ್ಲಿ ಪರಿಣಮಿಸುತ್ತದೆ. ಹವಾಮಾನ ತುಂಬಾ ಬಿಸಿಯಿದ್ದರೆ, ಒಂದು ಸರೀಸೃಪವು ತನ್ನನ್ನು ಮರಳಿನಲ್ಲಿ ಹೂತುಕೊಳ್ಳಬಹುದು ಅಥವಾ ಒಂದು ಪೊಟರೆ ಅಥವಾ ಯಾವುದೇ ಇತರ ತಂಪಾದ ಆಶ್ರಯದಲ್ಲಿ ನೆರಳನ್ನು ಅರಸಬಹುದು. ಈ ರೀತಿಯಲ್ಲಿ, ಶೀತರಕ್ತ ಪ್ರಾಣಿಗಳ ವರ್ತನಾ ಪ್ರವೃತ್ತಿಗಳು ಅದರ ದೇಹದ ಉಷ್ಣಾಂಶವನ್ನು ಸರಿಯಾದ ವ್ಯಾಪ್ತಿಯಲ್ಲಿ ಇರಿಸುತ್ತವೆ. ಹೊರಗಿನ ತಾಪಮಾನ ಇಳಿಯುತ್ತಿದ್ದಂತೆ, ಶಕ್ತಿಯನ್ನು ಸಂರಕ್ಷಿಸಲು ಪ್ರಾಣಿಯ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ.

ಹಾವುಗಳು

ಮೀನು ಮತ್ತು ಉಭಯಚರಗಳು[ಬದಲಾಯಿಸಿ]

ತಮ್ಮ ಪರಿಸರಗಳಿಗೆ ಸಂಬಂಧಿಸಿದಂತೆ, ಉಭಯಚರಗಳು ಮತ್ತು ಮೀನುಗಳು ಹೋಲುವಂಥ ವರ್ತನೆಗಳನ್ನು ಹೊಂದಿರುತ್ತವೆ. ಒಂದು ನದಿಯ ಮಣ್ಣಿನ ತೀರದಲ್ಲಿ ತುಂಬಾ ಬೆಚ್ಚಗಾಗುವ ಕಪ್ಪೆಯು ಮೃದು ನೆಲದಲ್ಲಿ ತನ್ನನ್ನು ಹೂತುಕೊಳ್ಳುತ್ತದೆ ಅಥವಾ ನೀರಿನಲ್ಲಿ ಹೆಚ್ಚು ತಂಪಾದ ಜಾಗವನ್ನು ಅರಸುತ್ತದೆ. ಮೀನುಗಳು ತಮ್ಮ ತಾಪಮಾನವನ್ನು ನಿಯಂತ್ರಿಸಲು ಆಳವನ್ನು ಬದಲಾಯಿಸುತ್ತವೆ, ಅಂದರೆ ಹೆಚ್ಚು ತಂಪಾದ ಆಳ ನೀರನ್ನು ಅಥವಾ ಮೇಲ್ಮೈಗೆ ಹತ್ತಿರವಿರುವ ಬೆಚ್ಚಗಿನ ನೀರನ್ನು ಅರಸುತ್ತವೆ.

ಶಕ್ತಿಯ ಅವಶ್ಯಕತೆಗಳು[ಬದಲಾಯಿಸಿ]

ಒಂದು ಶೀತರಕ್ತ ಪ್ರಾಣಿಯು ತನ್ನ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಆಂತರಿಕವಾಗಿ ಉತ್ಪತ್ತಿಯಾದ ಶಕ್ತಿಯನ್ನು ಬಳಸುವುದಿಲ್ಲ, ಹಾಗಾಗಿ ಅದಕ್ಕೆ ಬಿಸಿರಕ್ತ ಪ್ರಾಣಿಗಳಿಗಿಂತ ತೀರಾ ಕಡಿಮೆ ಶಕ್ತಿ ಬೇಕಾಗುತ್ತದೆ. ಮಾನವರು, ಇತರ ಸಸ್ತನಿಗಳು ಮತ್ತು ಹಕ್ಕಿಗಳಂತಹ ಬಿಸಿರಕ್ತ ಪ್ರಾಣಿಗಳು ಸುತ್ತಮುತ್ತಲಿನ ತಾಪಮಾನವನ್ನು ಲೆಕ್ಕಿಸದೆ, ಒಂದು ನಿರ್ದಿಷ್ಟ ವ್ಯಾಪ್ತಿಯಲ್ಲಿ ತಮ್ಮ ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳುವಂಥ ಆಂತರಿಕ ಪ್ರಕ್ರಿಯೆಗಳನ್ನು ಹೊಂದಿವೆ. ಈ ಸ್ವಯಂ ನಿಯಂತ್ರಣಕ್ಕೆ ಅಗಾಧ ಪ್ರಮಾಣದ ಶಕ್ತಿ ಬೇಕಾಗುತ್ತದೆ, ಇದನ್ನು ಆಗಾಗ್ಗಿನ ಊಟಗಳ ಮೂಲಕ ಪಡೆಯಲಾಗುತ್ತದೆ. ಶೀತರಕ್ತ ಪ್ರಾಣಿಯು ಅಷ್ಟೊಂದು ಸಲ ತಿನ್ನಬೇಕಾಗುವುದಿಲ್ಲ ಮತ್ತು ಕೆಲವು ವಾರಗಳಿಗೊಮ್ಮೆ ತಿನ್ನಬಹುದು. ಪರಿಣಾಮವಾಗಿ, ಬಿಸಿರಕ್ತದ ಪ್ರಾಣಿಗಳಿಗೆ ಆಧಾರ ನೀಡುವಷ್ಟು ಆಹಾರವಿಲ್ಲದ ಸಣ್ಣ ದ್ವೀಪಗಳು ಮತ್ತು ಮರುಭೂಮಿಗಳಂತಹ ದೂರದ ಪ್ರದೇಶಗಳಲ್ಲಿ ಶೀತರಕ್ತ ಪ್ರಾಣಿಗಳು ಬಾಳಲು ಸಾಧ್ಯವಾಗುತ್ತದೆ.

ಉಲ್ಲೇಖ[ಬದಲಾಯಿಸಿ]

http://www.wisegeek.org/what-is-a-cold-blooded-animal.htm