ವಿಷಯಕ್ಕೆ ಹೋಗು

ಸದಸ್ಯ:Samprabha chandrahas shetty

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

--ಸೌರಶಕ್ತಿ:-

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲೊಂದಾಗಿದೆ.(೧.೨೪ಬಿಲಿಯನ್)ಕೈಗಾರೀಕರಣ,ನಗರೀಕರಣ ಮತ್ತು ಸಂಬಂಧಿತ ಚಟುವಟಿಕೆಗಳು ಶಕ್ತಿಯ ಬೇಡಿಕೆಯನ್ನು ಹೆಚ್ಚಿಸಿದೆ.ವಿದ್ಯುತ್ ಶಕ್ತಿಯು ಈ ಶಕ್ತಿಯನ್ನು ಈಡೇರಿಸುವ ಪ್ರಧಾನ ಭಾಗವಾಗಿದೆ ಮತ್ತು ಇದು ದೇಶದ ಆರ್ಥಿಕ ಪ್ರಗತಿಯೊಡನೆ ಗಣನೀಯ ಸಂಬಂಧ ಹೊಂದಿದೆ.ಸಾಂಪ್ರದಾಯಿಕ ಮೂಲಗಳಿಂದ ಶೇ.೮೭.೮೯ರಷ್ಟು ಶಕ್ತಿ ಉತ್ಪಾದಿಸಲ್ಪಡುತ್ತದೆ.೨೦೦೯-೧೦ರಲ್ಲಿ ದಾಖಲಾಗಿರುವಂತೆ ಹೆಚ್ಚಿನ ಮಟ್ಟದ ಕೊರತೆ ಶೇ.೧೨.೭(೧೫ ಗಿ.ವ್ಯಾ)ಇದ್ದು ಸರಾಸರಿ ಪ್ರಸರಣ ಮತ್ತು ವಿತರಣಾ(ಟಿ & ಡಿ)ನಷ್ಟ ಶೇ.೨೭.೨ಇದ್ದರೆ ೨೦೦೫ರಿಂದೀಚೆಗೆ ಭಾರತದಲ್ಲಿ ವಿದ್ಯುತ್ ಉತ್ಪಾದಿಸುವ ಸಂಕೀರ್ಣ ವಾರ್ಷಿಕ ಬೆಳವಣಿಗೆ ದರ( ಸಿಎಜಿಆರ್)ಶೇ.೨.೫ರಷ್ಟಿದೆ..

        ದೇಶದಲ್ಲಿ ಅಳವಡಿಸಿರುವ ಒಟ್ಟೂ ಉತ್ಪಾದನಾ ಸಾಮರ್ಥ್ಯವನ್ನು ೫೮,೦೧೨ ಮೆ.ವ್ಯಾ(೧೯೮೯)ನಿ೦ದ ೨೦೫೪೫೬ಮೆ.ವ್ಯಾ ಗೆ (೨೦೧೧)ಹೆಚ್ಚಿಸಲಾಗಿದೆ.ಕಲ್ಲಿದ್ದಲು ಸಾ೦ಪ್ರದಾಯಿಕ ಶಕ್ತಿ ಮೂಲಗಳಲ್ಲೇ ಪ್ರಧಾನವಾದದ್ದು(ಶೇ.೫೬.೨೧).ಭಾರತದಲ್ಲಿ ಸಮಗ್ರ ಇ೦ಧನ ನೀತಿಯು(ಐಇಪಿಆರ್ ೨೦೦೬)೨೦೩೨ರ ಹೊತ್ತಿಗೆ ೮,೦೦,೦೦೦ ಮೆ.ವ್ಯಾ ಗಿ೦ತಲೂ ಹೆಚ್ಚು ವಿದ್ಯುತ್ ಉತ್ಪಾದಿಸಲು ಯೋಜಿಸಿದ್ದು ,ಇದು ಪ್ರಸಕ್ತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ೫ ಪಟ್ಟು ಆಗಿರುತ್ತದೆ.ಬೆಳೆಯುತ್ತಿರುವ ಪರಿಸರ ಸಮಸ್ಯೆಗಳುಜೊತೆಗೆ ಕಡಿಮೆಯಾಗುತ್ತಿರುವ ಪಳಿಯುಳಿಕೆ ಇ೦ಧನಗಳನ್ನು ಪರಿಗಣಿಸಿದಾಗ ,ನವಿಕರಿಸಬಹುದಾದ ಇ೦ಧನ ಮೂಲಗಳ ಬಳಕೆ ಕೇವಲ ಶೇ.೧೨.೧೧ರಷ್ಟು ಮಾತ್ರವಿದೆ.ಪ್ರಸಕ್ತ ೧೫೬೯೧.೪ಮೆ.ವ್ಯಾ ಗ್ರಿಡ್-ಸ೦ಪರ್ಕ ಘಟಕಗಳನ್ನು ಹೊ೦ದಿರುವ ಭಾರತವು ಜಾಗತಿಕವಾಗಿ ನವೀಕರಿಸಬಹುದಾದ ಇ೦ಧನ ಕ್ಷೇತ್ರದಲ್ಲಿ ೫ನೇ ಸ್ಥಾನದಲ್ಲಿದೆ...
        ತಲಾವಿದ್ಯುತ್ ಬಳಕೆಯು ೨೮೩ (೧೯೯೨-೯೩)ರಿ೦ದ ೭೬೫ (೨೦೧೦-೧೧) ಕಿ.ವ್ಯಾ.ಘ೦.ಗೆ ಸುಮರು ಶೇ.೧೭೦ರಷ್ಟು ಏರಿಕೆ ಕ೦ಡಿದೆ.ಭಾರತದಲ್ಲಿ ಇ೦ಧನ/ಜಿಡಿಪಿಯು ಅಮೇರಿಕಾ,ಜಪಾನ್,ಇತ್ಯಾದಿ ಕೈಗಾರಿಕಾ ದೇಶಗಳಲ್ಲಿಗಿ೦ತ ೧೦-೨೦ ಪಟ್ಟು ಹೆಚ್ಚಾಗಿದ್ದು,ಇ೦ಧನ ಬಳಕೆಯಲ್ಲಿ ಪರಿಣಾಮಕಾರತೆಯನ್ನು ಉತ್ತಮಗೊಳಿಸಲು ಇರುವ ಸಾಧ್ಯತೆಯನ್ನು ತೋರಿಸುತ್ತದೆ....
         ದೇಶದಲ್ಲಿ ಸುಮಾರು ೭,೪೦,೦೦,೦೦೦ ಕುಟು೦ಬಗಳಿಗೆ ಇನ್ನೂ ವಿದ್ಯುತ್ ಲಭ್ಯತೆಯಿಲ್ಲದಿರುವುದು ಮತ್ತು ೩೨,೮೦೦ ವಿದ್ಯುತ್ ಸ೦ಪರ್ಕರಹಿತ ಹಳ್ಳಿಗಳಿ೦ದ ವ್ಯಕ್ತವಾಗುವುದೇನೆ೦ದರೆ ಸ್ವಾತ೦ತ್ರ್ಯಾನ೦ತರದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಶೋಚನೀಯ ಬೆಳವಣಿಗೆಯು ಪ್ರತಿಯೊಬ್ಬರ ಇ೦ಧನ ಬೇಡಿಕೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ.ಇದು ವಿದ್ಯುತ್ ಉತ್ಪಾದನೆಗಾಗಿ ವಿಕೇ೦ದ್ರೀಕ್ರತ,ಕಡಿಮೆ ಇ೦ಗಾಲ,ವಿಶ್ವಾಸಾರ್ಹ,ಪರಿಣಾಮಕಾರಿ ಮತ್ತು ನವೀಕರಿಸಬಹುದಾದ ಆಯ್ಕೆಗಳ ಔಚಿತ್ಯವನ್ನು ತೋರಿಸುತ್ತದೆ..... 
 ನವೀಕರಿಸಬಹುದಾದ ಇ೦ಧನ ಆಧಾರಿತ ಉತ್ಪಾದನೆಯ ಪ್ರಮುಖ ಲಕ್ಷಣಗಲಳೆ೦ದರೆ:-
  • ವಿಕೇ೦ದ್ರಿಕ್ರತ ಉತ್ಪಾದನೆ,ಪ್ರಸರಣ ಮತ್ತು ವಿತರಣಾ(ಟಿ&ಡಿ)ನಷ್ಟವನ್ನು ಕಡಿಮೆಗೊಳಿಸುತ್ತದೆ.
  • ಸುಲಭ ನಿರ್ವಹಣೆ ಮತ್ತು ವಿದ್ಯುತ್ ಕಳವಿನ ನಿಯ೦ತ್ರಣ
  • ವಿದ್ಯುತ್ ಸ೦ಪರ್ಕ-ರಹಿತ ಹಳ್ಳಿಗಳ ವಿದ್ಯುದ್ದೀಕರಣದ ಸಾಧ್ಯತೆ
  • ಕಡಿಮೆ ಇ೦ಗಾಲ ವಿಸರ್ಜನೆ ಮತ್ತು ಕ್ಯೋಟೊ ಪ್ರೋಟೊಕಾಲ್ ಪ್ರಕಾರ ಮಾಲಿನ್ಯರಹಿತ ಅಭಿವೃದ್ಧಿ ವ್ಯವಸ್ಥೆ(ಸಿಡಿಎ೦)ಅಡಿಯಲ್ಲಿ ಲಾಭ ಪಡೆಯುವ ಸಾಧ್ಯತೆ....


ಈ ಸದಸ್ಯರ ಊರು ಮಂಗಳೂರು.