ವಿಷಯಕ್ಕೆ ಹೋಗು

ಲಕ್ಷ್ಮಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಕ್ಷ್ಮಮ್ಮ
ಜನನ೧೧೬೦
ಅಂಕಿತನಾಮಅಗಜೇಶ್ವರಲಿಂಗ
ಸಂಗಾತಿ(ಗಳು)ಕೊಂಡೆ ಮಂಚಣ್ಣ


ಲಕ್ಷ್ಮಮ್ಮ

[ಬದಲಾಯಿಸಿ]

ಕೊಂಡೆ ಮಂಚಣ್ಣಗಳ ಪುಣ್ಯಸ್ತ್ರೀ ಎಂಬ ಹೆಸರಿನ ವಿಶೇಷಣದೊಂದಿಗೆ ಈಕೆಯನ್ನು ಗುರ್ತಿಸಲಾಗುತ್ತದೆ. ಕೊಂಡೆ ಮಂಚಣ್ಣ ಬಿಜ್ಜಳನ ಆಸ್ಥಾನದ ಮಂತ್ರಿಯಾಗಿದ್ದು, ಬಸವಣ್ಣನ ಬಗ್ಗೆ ಚಾಡಿ ಮಾತುಗಳನ್ನು ಹೇಳುತ್ತಿದ್ದನೆನ್ನಲಾಗಿದೆ. ಈ ದಂಪತಿಗಳು ಮೊದಲು ಹರಿಭಕ್ತಿಯಲ್ಲಿ ತಲ್ಲೀನರಾಗಿದ್ದೂ, ನಂತರ ಶಿವಭಕ್ತಿಯೆಡೆಗೆ ತನ್ನ ಚೇತನವನ್ನು ಹರಿಯ ಬಿಡುತ್ತಾರೆ. ಮತಾಂತರ ಹೊಂದಿದ ಶಿವಶರಣೆಯೆಂದು ಈಕೆಯನ್ನು ಗುರ್ತಿಸಲಾಗುತ್ತದೆ. ಇವಳಿಗೆ ವ್ರತಾಚರಣೆಯ ಬಗ್ಗೆ ಅಪಾರ ಗೌರವವಿದ್ದರೂ ಇತರರಂತೆ ವ್ರತಹೀನರನ್ನೂ ಉಗ್ರವಾಗಿ ಖಂಡಿಸಿಲ್ಲ. ವ್ರತ ಕೆಟ್ಟ ದೋಷಕ್ಕೆ ಪರಿಹಾರವೇ ಇಲ್ಲವೆಂಬುದು ಅವಳ ಅಚಲ ನಂಬಿಕೆ ಲಕ್ಷ್ಮಮ್ಮನ ಒಂದು ವಚನ ಮಾತ್ರ ನಮಗೆ ಲಭ್ಯವಾಗಿದೆ. ಈಕೆಯ ವಚನಗಳ ಅಂಕಿತ "ಅಗಜೇಶ್ವರಲಿಂಗ".

ಆಯುಷ್ಯ ತೀರಲು ಮರಣ
ವ್ರತ ತಪ್ಪಲು ಶರೀರ ಕಡೆ
ಮೇಲುವ್ರತವೆಂಬ ತೂಕರ ಮೆಚ್ಚ
ನಮ್ಮ ಅಗಜೇಶ್ವರಲಿಂಗವು