ಸದಸ್ಯ:ಅನು ಅಮೀನ್ ಸಂಕಮಾರ್/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ವ ಪರಿಚಯ[ಬದಲಾಯಿಸಿ]

ನಾನು ೧೯೯೮ ಜನವರಿ ೨೭ರಂದು ಪಾವಂಜೆಯ ಸಿರಿ ಮನೆಯಲ್ಲಿ ಜನಿಸಿದೆ. ನನ್ನ ಜೊತೆಯಲ್ಲಿ ನನ್ನ ಅವಳಿ ಭವ ಹುಟ್ಟಿದಳು. ನನ್ನ ತಂದೆ ಡಾ.ಗಣೇಶ್ ಅಮೀನ್,ಹಾಗು ತಾಯಿ ಜಯಂತಿ. ನನ್ನ ತಂದೆ ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ತಾಯಿ ಸುರತ್ಕಲ್ ನ ಗೋವಿಂದಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಉಪನ್ಯಾಸಕಿ. ತಂದೆತಾಯಿ ಇಬ್ಬರೂ ಸಾಹಿತ್ಯದ ಕ್ಷೇತ್ರದಲ್ಲಿ ತೊಡಗಿದ್ದರಿಂದ ನನಗೂ ಆ ಕ್ಷೇತ್ರದಲ್ಲಿ ಬಹಳ ಪ್ರೋತ್ಸಾಹ ನೀಡಿದರು. ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಕ್ಕದ ಚರ್ಚ್ ಶಾಲೆಯಲ್ಲಿ ಮುಗಿಸಿ ಪ್ರೌಢಶಿಕ್ಷಣಕ್ಕಾಗಿ ಸುರತ್ಕಲ್ ನ ವಿದ್ಯಾದಾಯಿನಿಗೆ ಸೇರಿದೆ.ಚಿಕ್ಕವಯಸ್ಸಿನಲ್ಲಿಯೇ ಶಿಕ್ಷಣದ ಜೊತೆಗೆ ಭರತನಾಟ್ಯ ತರಗತಿಗೆ ಹೋಗುತ್ತಿದ್ದೆ.ಹಾಗು ಜೂನಿಯರ್, ಸೀನಿಯರ್ ಭರತನಾಟ್ಯ ಪರೀಕ್ಷೆ ಬರೆದು ಉತ್ತೀರ್ಣಗೊಂಡೆ. ಮಕ್ಕಳ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ವಿಚಾರಗೋಷ್ಠಿ,ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದರಿಂದ ಸಾಹಿತ್ಯದ ಬಗ್ಗೆ ಹೆಚ್ಚು ಒಲವು ಮೂಡಿತ್ತು. ಹಾಗಾಗಿ ಪ್ರಾಥಮಿಕ ಹಂತದಲ್ಲಿಯೇ 'ಅನುಭವ' ಎಂಬ ಕವನ ಸಂಕಲನವನ್ನು ಬರೆದು ಪ್ರಕಟಸಿದ್ದೆವು. ನನ್ನ ಕಾಲೇಜು ಜೀವನ ಆರಂಭವಾದುದು ಸುರತ್ಕಲ್ ನ ಗೋವಿಂದಾಸ್ ಪದವಿ ಕಾಲೇಜಿನಲ್ಲಿ. ಓದಿನ ಜೊತೆಗೆ ಇತರ ಚಟುಚಟಿಕೆಯಲ್ಲೂ ನನನ್ನು ತೊಡಗಿಸಿಕೊಂಡಿದ್ದೆ. ದ್ವಿತೀಯ ಪಿಯುಸಿಯಲ್ಲಿ ನನಗೆ ಭರತನಾಟ್ಯ ವಿದ್ವತ್ ಪರೀಕ್ಷೆ ಕಟ್ಟಬೇಕಾಗಿತ್ತು. ಎರಡೂ ಪರೀಕ್ಷೆ ನಿಭಾಯಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ತಂದೆತಾಯಿಯ ಆಶೀರ್ವಾದ, ಪ್ರೋತ್ಸಾಹದಿಂದ ಭರತನಾಟ್ಯದ ಪರೀಕ್ಷೆಯಲ್ಲಿ ನಾನು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದೆ.ಹಾಗು ದ್ವಿತೀಯ ಪಿಯುಸಿಯಲ್ಲಿ ಶೇಕಡ ೯೭ ಫಲಿತಾಂಶ ದೊರಕಿತು. ನಮ್ಮಿಬ್ಬರಿಗೂ ಕಲೆ, ಸಾಹಿತ್ಯದಲ್ಲಿ ಆಸಕ್ತಿ ಇದ್ದ ಕಾರಣ ತಂದೆತಾಯಿ ನಮ್ಮನ್ನು ವೃತ್ತಿ ಶಿಕ್ಷಣಕ್ಕೆ ಒತ್ತಾಯ ಮಾಡದೆ ಪದವಿ ಕಾಲೇಜಿಗೆ ಸೇರಿಸಿದರು. ಈಗ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆ ಬರೆದ್ದಿದ್ದೇನೆ. ಮುಂದೆ ಉತ್ತಮ ಅಂಕ ಗಳಿಸಿ ಬಿ.ಎಸ್ಸಿ ಮುಗಿಸಿ ಸ್ನಾತಕೋತ್ತರ ಪದವಿ ಗಳಿಸಿ ಉಪನ್ಯಾಸಕಿ ಆಗಬೇಕೆಂದಿದ್ದೇನೆ.


ಕನಸು[ಬದಲಾಯಿಸಿ]

ಆ ಸುಂದರ ರಾತ್ರಿಯಲ್ಲಿ ನಿದಿರಮ್ಮನ ಮಡಿಲಿಲ್ಲಿ ನಾನಿದ್ದೆ ಕನಸಿನಲ್ಲಿ ಡಿ.ಸಿ.ಯಾದ ಸಂಭ್ರಮದಲ್ಲಿ ತೆರಳಿದ್ದೆ ಆಫೀಸಿಗೆ ಹೆಮ್ಮೆಯಿಂದ ಪೋಲೀಸ್ ಜೀಪು ಮುಂದಿನಿಂದ ಕಾಯುತ್ತಿದ್ದರು ಜನರು ಅಕ್ಕರೆಯಿಂದ ಹಾಕಲು ಹಾರ ಅಭಿಮಾನದಿಂದ ಸಹಾಯಕರು ಸಂಗ್ರಹಿಸಿದರು ಗುಚ್ಛಗಳನ್ನು ಸರಿಸಿದರು ದಾರಿಯಿಂದ ಜನರನ್ನು ಕುಳ್ಳಿರಿಸಿದರು ಆಸನದಲ್ಲಿ ನನ್ನನ್ನು ಕೊಟ್ಟರು ಕೈಗೆ ಫೈಲನ್ನು ಇತ್ತು ನನ್ನಲ್ಲಿ ಬೇಸರವೊಂದು ಅಪ್ಪ ಅಭಿನಂದಿಸಿಲ್ಲ ನನ್ನನ್ನು ಎಂದು ಸಿಟ್ಟಿನಲ್ಲಿ ಮನೆಗೆ ಬಂದಾಗ ಅಂದುಸ ಅರಿವಾಯಿತು ನನಗೆ ಕನಸಲಿದ್ದೆ ಎಂದು

ದ್ಯುತಿ ಉಪಕರಣಗಳು[ಬದಲಾಯಿಸಿ]

ಕಣ್ಣು ಒಂದು ಅದ್ಭುತ ಅಂಗ. ಆದರೆ ಕಣ್ಣಿಗೆ ಅತಿ ಸೂಕ್ಷ್ಮ ಮತ್ತು ದೂರದ ನಕ್ಷತ್ರಗಳ ವಿವರಗಳು ಕಾಣಿಸುವುದಿಲ್ಲ. ಅವುಗಳ ಅಧ್ಯಯನದಲ್ಲಿ ಮಾನವನ ಕುತೂಹಲವು ದ್ಯುತಿ ಉಪಕರಣಗಳ ಶೋಧನೆಗೆ ಅನುವು ಮಾಡಿತು.

ಸರಳ ಸೂಕ್ಷ್ಮದರ್ಶಕ[ಬದಲಾಯಿಸಿ]

ಬರಿಗಣ್ಣಿಗೆ ಕಾಣದ ಅತಿಸೂಕ್ಷ್ಮ ಭಾಗಗಳು ಮತ್ತು ನೋಡಲು ಹಾಗು ಅಧ್ಯಯನ ಮಾಡಲು ಉಪಯೋಗಿಸುವ ಸಾಧನವೇ ಸರಳ ಸೂಕ್ಷ್ಮದರ್ಶಕ. ಇದರಲ್ಲಿ ಕಡಿಮೆ ಸಂಗಮದೂರದ ಪೀನ ಮಸೂರಕ್ಕೆ ಒಂದು ಕಟ್ಟು ಮತ್ತು ಒಂದು ಹಿಡಿ ಇರುತ್ತದೆ. ಇದನ್ನು ಸಾಮಾನ್ಯವಾಗಿ ಕೈ ಮಸೂರ ಎಂದೂ ಕರೆಯಲಾಗುತ್ತದೆ.

ಸರಳ ಸೂಕ್ಷ್ಮ ದರ್ಶಕದ ಉಪಯೋಗಗಳು[ಬದಲಾಯಿಸಿ]

೧.ಚಿಕ್ಕ ಮತ್ತು ಹತ್ತಿರದ ವಸ್ತುಗಳ ನೇರ ಮತ್ತು ದೊಡ್ಡದಾದ ಪ್ರತಿಬಿಂಬಗಳನ್ನು ವೀಕ್ಷಿಸಲು ಉಪಯೋಗಿಸಲಾಗುತ್ತದೆ. ೨.ಸಣ್ಣ ಅಕ್ಷರಗಳನ್ನು ಓದಲು ಉಪಯೋಗಿಸುತ್ತಾರೆ. ೩.ಹಸ್ತ ಸಾಮುದ್ರಕರು,ಹಸ್ತ ರೇಖೆಗಳನ್ನು ಓದಲು ಉಪಯೋಗಿಸುತ್ತಾರೆ.

ಸಂಯುಕ್ತ ಸೂಕ್ಷ್ಮದರ್ಶಕ[ಬದಲಾಯಿಸಿ]

ಒಂದು ಕೊಳವೆಯ ಅಕ್ಷದಲ್ಲಿನ ಸ್ಥಿರ ದೂರದಲ್ಲಿ ಇಟ್ಟಿರುವ ಎರಡು ಬೇರೆಬೇರೆ ಸಂಗಮದೂರ ಹೊಂದಿರುವ ಪೀನ ಮಸೂರಗಳನ್ನೊಳಗೊಂಡ ಸೂಕ್ಷ್ಮದರ್ಶಕವನ್ನು ಸಂಯುಕ್ತ ಸೂಕ್ಷ್ಮದರ್ಶಕ ಎನ್ನುವರು.

ಸಂಯುಕ್ತ ಸೂಕ್ಷ್ಮದರ್ಶಕದ ರಚನೆ[ಬದಲಾಯಿಸಿ]

ಸಂಯುಕ್ತ ಸೂಕ್ಷ್ಮದರ್ಶಕವು ಎರಡು ಪೀನ ಮಸೂರಗಳನ್ನು ಹೊಂದಿದ್ದು ಅವುಗಳನ್ನು ಒಂದೇ ಅಕ್ಷದಲ್ಲಿನ ಸಿಲಿಂಡರ್ ಆಕೃತಿಯ ಜಾರು ಕೊಳವೆಯ ಹೊರ ತುದಿಗಳಲ್ಲಿ ಜೋಡಿಸಿರುತ್ತಾರೆ. ಕಡಿಮೆ ಸಂಗಮ ದೂರದ ಮಸೂರವನ್ನು ವಸ್ತು ಮಸೂರ ಎನ್ನುವರು ಮತ್ತು ಹೆಚ್ಚು ಸಂಗಮ ದೂರದ ಮಸೂರವನ್ನು ನೇತ್ರ ಮಸೂರ ಎನ್ನುವರು.

ದೂರದರ್ಶಕ[ಬದಲಾಯಿಸಿ]

ದೂರದ ವಸ್ತುಗಳು ನಮ್ಮ ಕಣ್ಣಿಗೆ ಹತ್ತಿರವಿರುವಂತೆ ಗೋಚರಿಸಲು ಉಪಯೋಗಿಸುವ ಸಾಧನವೇ ದೂರದರ್ಶಕ.

ವಿಧಗಳು[ಬದಲಾಯಿಸಿ]

ದೂರದರ್ಶಕದಲ್ಲಿ ಖಗೋಳ ದೂರದರ್ಶಕ ಮತ್ತು ಭೌಮಿಕ ದೂರದರ್ಶಕಗಳೆಂಬ ಎರಡು ವಿಧಗಳಿವೆ.

ಖಗೋಳ ದೂರದರ್ಶಕ[ಬದಲಾಯಿಸಿ]

ಆಕಾಶಕಾಯಗಳಾದ ನಕ್ಷತ್ರಗಳು, ಗ್ರಹಗಳು ಮತ್ತು ಉಪಗ್ರಹಗಳು ಮುಂತಾದವುಗಳನ್ನು ನೋಡಲು ಉಪಯೋಗಿಸುವ ದೂರದರ್ಶಕವನ್ನು ಖಗೋಳ ದೂರದರ್ಶಕ ಎನ್ನುವರು. ಖಗೋಳ ದುರದರ್ಶಕದಲ್ಲಿ ಎರಡು ಪೀನ ಮಸೂರಗಳಿದ್ದು ಅವುಗಳನ್ನು ಒಂದೇ ಅಕ್ಷದಲ್ಲಿನ ಸಿಲಿಂಡರ್ ಆಕೃತಿಯ ಜಾರು ಕೊಳವೆಯ ಹೊರ ತುದಿಗಳಲ್ಲಿ ಜೋಡಿಸುತ್ತಾರೆ. ಹೆಚ್ಚು ಸಂಗಮ ದೂರದ ಮಸೂರವನ್ನು ವಸ್ತುಮಸೂರವಾಗಿ ಮತ್ತು ಕಡಿಮೆ ಸಂಗಮ ದೂರದ ಮಸೂರವನ್ನು ನೇತ್ರಮಸೂರವಾಗಿ ಬಳಸುವರು.

ಭೌಮಿಕ ದೂರದರ್ಶಕ[ಬದಲಾಯಿಸಿ]

ಭೂಮಿಯ ಮೇಲೆ ದೂರದ ವಸ್ತುಗಳನ್ನು ಪೂರ್ಣವಾಗಿ ವೀಕ್ಷಿಸಲು ಬಳಸುವ ದೂರದರ್ಶಕವನ್ನು ಭೌಮಿಕ ದೂರದರ್ಶವೆನ್ನುತ್ತೇವೆ.೧೬೦೯ರಲ್ಲಿ ಗೆಲಿಲಿಯೋ ಭೌಮಿಕ ದೂರದರ್ಶಕವಾದ ಗೆಲಿಲಿಯನ್ ದೂರದರ್ಶಕವನ್ನು ರಚಿಸಿದನು.ಇದು ದೂರದ ವಸ್ತುಗಳ ನೇರ ಪ್ರತಿಬಿಂಬವನ್ನು ಉಂಟುಮಾಡಿತು.ಈ ದೂರದರ್ಶಕದಲ್ಲಿ ವಸ್ತು ಮಸೂರವಾಗಿ ಪೀನ ಮಸೂರವನ್ನು ಮತ್ತು ನೇತ್ರ ಮಸೂರವಾಗಿ ನಿಮ್ನ ಮಸೂರವನ್ನು ಬಳಸಿದರು.

ಕ್ಯಾಮೆರಾ[ಬದಲಾಯಿಸಿ]

ಒಂದು ವಸ್ತು ಅಥವ ಒಂದು ದೃಶ್ಯದ ಶಾಶ್ವತ ಪ‍್ರತಿಬಿಂಬವನ್ನು ಪಡೆಯಲು ಬಳಸುವ ಸಾಧನವೇ ಕ್ಯಾಮೆರಾ.ಇಂದಿನ ದಿನಗಳಲ್ಲಿ ಪರದೆಯ ಕ್ಯಾಮೆರಾಗಳ ಬದಲಾಗಿ ಡಿಜಿಟಲ್ ಕ್ಯಾಮೆರಾಗಳನ್ನು ಬಳಸುತ್ತಿದ್ದೇವೆ.ಈ ಡಿಜಿಟಲ್ ಕ್ಯಾಮೆರಾಗಳು ಸಾಂಪ್ರದಾಯಿಇಕ ಕ್ಯಾಮೆರಾಗಳಂತೆ ಮಸೂರವನ್ನು ಹೊಂದಿದ್ದು ಇದು ದೃಶ್ಯದ ಪ್ರತಿಬಿಂಬವನ್ನು ಸೆರೆಹಿಡಿಯಲು ಬೆಳಕನ್ನು ಕೇಂದ್ರೀಕರಿಸುತ್ತದೆ. ಆದರೆ ಕೇಂದ್ರಿಕೃತವಾದ ಬೆಳಕು ಪರದೆಯ ಮೇಲೆ ಬೀಳುವ ಬದಲು ಅರೆವಾಹಕ ಸಾಧನದ ಮೇಲೆ ಕೇಂದ್ರಿಕೃತಗೊಂಡು ವಿದ್ಯುನ್ಮಾನವಾಗಿ ಬೆಳಕು ಸಂಗ್ರಹವಾಗುತ್ತದೆ. ಎಲ್ಲಾ ಡಿಜಿಟಲ್ ಕ್ಯಾಮೆರಾಗಳಲ್ಲಿ ಇಲೆಕ್ಟ್ರಾನಿಕ್ ತಂತ್ರಜ್ಞಾನವಿದ್ದು ಅದು ವಿದ್ಯುನ್ಮಾನ ಮಾಹಿತಿಯನ್ನು ಡಿಜಿಟಲ್ ದತ್ತಾಂಶವಾಗಿ ಪರಿವರ್ತಿಸುತ್ತದೆ.

ದ್ವಿನೇತ್ರಿ[ಬದಲಾಯಿಸಿ]

ಯುಧ್ಧ ಭೂಮಿಯ ಸೇನಾ ಕಾರ್ಯಾಚರಣೆಯಲ್ಲಿ ,ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸುವಾಗ ದೃಶ್ಯಾವಲೋಕನದಲ್ಲಿ ಬಳಸುವ ದ್ಯುತಿ ಉಪಕರಣವೇ ದ್ವಿನೇತ್ರಿ.ಗ್ಯಾಲರಿಯಲ್ಲಿ ಕುಳಿತು ಪಂದ್ಯದ ಸೂಕ್ಷ್ಮಾತಿಸೂಕ್ಷ್ಮ ಅಂಶಗಳನ್ನು ವೀಕ್ಷಿಸಲು, ವನ್ಯಜೀವಿಗಳ ಸಫಾರಿಯಲ್ಲಿ ದೂರದಲ್ಲಿನ ಪ್ರಾಣಿಗಳನ್ನು ಸ್ಪಷ್ಟವಾಗಿ ನೋಡಲು ದ್ವಿನೇತ್ರಿಯನ್ನು ಬಳಸುತ್ತಾರೆ.

ಗುರುತ್ವ[ಬದಲಾಯಿಸಿ]

ಗುರುತ್ವ - ಎಲ್ಲಾ ವಸ್ತುಗಳೂ ಒಂದನ್ನೊಂದು ಆಕರ್ಷಿಸಲು ಕಾರಣವಾದ ಬಲ. ಆಧುನಿಕ ಭೌತಶಾಸ್ತ್ರವು ಸಾಮಾನ್ಯ ಸಾಪೇಕ್ಷತಾ ವಾದದಿಂದ ಗುರುತ್ವವನ್ನು ವಿವರಿಸುತ್ತಾದರೂ, ಹೆಚ್ಚು ಸರಳವಾದ ನ್ಯೂಟನ್ನನ ಗುರುತ್ವ ನಿಯಮವು ಹಲವು ಸನ್ನಿವೇಶಗಳಲ್ಲಿ ಅತ್ಯುತ್ತಮ ಅಂದಾಜು ಪ್ರಮಾಣಗಳನ್ನು ಸೂಚಿಸುತ್ತದೆ. ಭೂಮಿ, ಸೂರ್ಯ ಮತ್ತಿತರ ಆಕಾಶಕಾಯಗಳ ಅಸ್ತಿತ್ವಕ್ಕೆ ಗುರುತ್ವವೇ ಕಾರಣ. ಗುರುತ್ವವಿಲ್ಲದೆ ಪದಾರ್ಥವು ಈ ಕಾಯಗಳಾಗಿ ಒಂದುಗೂಡುತ್ತಿರಲಿಲ್ಲ ಮತ್ತು ನಮಗೆ ಈಗ ತಿಳಿದಿರುವಂತಹ ಜೀವವು ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ. ಗ್ರಹಗಳು ಸೂರ್ಯನ ಸುತ್ತ ಪರಿಭ್ರಮಿಸುವುದಕ್ಕೆ, ಚಂದ್ರನು ಭೂಮಿಯ ಸುತ್ತ ಪರಿಭ್ರಮಿಸುವುದಕ್ಕೆ, ಮತ್ತು ನಮಗೆ ಕಾಣುವ ಇನ್ನಿತರ ವಿವಿಧ ನೈಸರ್ಗಿಕ ಪ್ರಕ್ರಿಯಗಳಿಗೂ ಗುರುತ್ವವು ಕಾರಣ.

ಇತಿಹಾಸ[ಬದಲಾಯಿಸಿ]

ಗುರುತ್ವಾಕರ್ಷಣ ಸಿದ್ಧಾಂತದ ಬೆಳವಣಿಗೆ ಗೆಲಿಲಿಯೊ ಗೆಲಿಲಿಯ ಪ್ರಯೋಗಗಳಿಂದ ಬಲ ಪಡೆದುಕೊಂಡಿತು. ಗೆಲಿಲಿಯೊ ಇಟಲಿಯ ಪೀಸಾ ಗೋಪುರದಲ್ಲಿ ನಡೆಸಿದ ಪ್ರಯೋಗದಲ್ಲಿ ಗುರತ್ವ ಬಲವು ಬೇರೆ ಬೇರೆ ಬಾರವಿರುವ ವಸ್ತುಗಳಲ್ಲಿ ಒಂದೇ ಸಮನಾದ ವೇಗೋತ್ಕರ್ಷವನ್ನು ಉಂಟುಮಾಡುತ್ತದೆ ಎಂಬುದು ತಿಳಿಯಿತು. ಉದಹರಣೆಗೆ ಒಂದು ಇರುವೆ ಹಾಗೂ ಒಂದು ಆನೆಯನ್ನು ಒಂದೇ ಕ್ಷಣದಲ್ಲಿ ಹಾಗೂ ಒಂದೇ ಎತ್ತರದಿಂದ ಬಿಟ್ಟದ್ದೆ ಆದರೆ ಎರಡು ವಸ್ತುಗಳು ಕೂಡಾ(ಇರುವೆ ಮತ್ತು ಆನೆ) ಒಟ್ಟಿಗೆ ನೆಲ ಸ್ಪರ್ಷಿಸುತ್ತವೆ. ಆದರೆ ಈ ಹೇಳಿಕೆ ನಿಜವಾಗವುದು ನಿರ್ವಾತ ಪ್ರದೇಶದಲ್ಲಿ ಮಾತ್ರ. ಭೂ ವಾತಾವರಣದಲ್ಲಿ ಇರುವ ಗಾಳಿಯ ಒತ್ತಡ ಒಂದು ಇರುವೆ ಹಾಗೂ ಒಂದು ಆನೆ ಒಂದೇ ಸಮಯದಲ್ಲಿ ನೆಲ ಸ್ಪರ್ಷಿಸುವುದನ್ನು ತಡೆಯುತ್ತದೆ ಎಂದು ಗೆಲಿಲಿಯೊನ ಪ್ರಯೋಗಳಿಂದ ತಿಳಿದು ಬಂತು.

ಗುರುತ್ವಾಕರ್ಷಣೆ ಒಂದು ನೈಸರ್ಗಿಕ ವಿದ್ಯಮಾನ. ಇದರ ಪ್ರಕಾರ ನಕ್ಷತ್ರಗಳು, ಗ್ರಹಗಳು , ನಕ್ಷತ್ರ ಸಮೂಹಗಳು,ಉಪ ಪರಮಾಣು ಕಣಗಳು ಎಲ್ಲಾ ವಸ್ತುಗಳು ಒಂದನ್ನೊಂದು ಆಕರ್ಷಿಸುತ್ತದೆ.ಗುರುತ್ವಾಕರ್ಷಣೆಯು ಹೈಡ್ರೋಜನ್ ಗೋಳಗಳನ್ನು ರಚಿಸಿ-ಗ್ರಾವಿಟಿ ಅಥವಾ ಗುರುತ್ವ ನೈಸರ್ಗಿಕ ಸಾಮೂಹಿಕ ಎಲ್ಲವು ಕಡೆಗೆ ತರಲಾಗುತ್ತದೆ ಮೂಲಕ ವಿದ್ಯಮಾನ ( ಅಥವಾ ಕಡೆಗೆ ' ಆಕರ್ಷಿತವಾಗುತ್ತವೆ ' ) ಮತ್ತೊಂದು ನಕ್ಷತ್ರಗಳು, ಗ್ರಹಗಳು , ನಕ್ಷತ್ರ ಸಮೂಹಗಳು ಮತ್ತು ಬೆಳಕಿನ ಮತ್ತು ಉಪ ಪರಮಾಣು ಕಣಗಳು ಸೇರಿದಂತೆ ಒಂದಾಗಿದೆ. ಒತ್ತಡದಿಂದ ಹೈಡ್ರೋಜನ್ ಫ್ಯೂಸಾಗಿ ನಕ್ಷತ್ರಗಳಾಗುತ್ತವೆ-ನಂತರ ಗುಂಪಾಗಿ ನಕ್ಷತ್ರಗಳಾಗುತ್ತವೆ. ಗುರುತ್ವದಿಂದ ಬ್ರಹ್ಮಾಂಡವು ಜಟಿಲಗೊಂಡಿದೆ.ಭೂಮಿಯ ಮೇಲೆ, ಗುರುತ್ವ ಭೌತಿಕ ತೂಕ ನೀಡುತ್ತದೆ ಮತ್ತು ಅಲೆಗಳ ಹುಟ್ಟಿಗೆ ಕಾರಣವಾಗುತ್ತದೆ.ಗುರುತ್ವ ಅನಂತ ವ್ಯಾಪ್ತಿಯನ್ನು ಹೊಂದಿದೆ, ಮತ್ತು ಇದನ್ನು ಹೀರಲ್ಪಡಲಾಗುವುದಿಲ್ಲ,ರೂಪಾಂತರಗೊಳಿಸಲಾಗುವುದಿಲ್ಲ.

ಗ್ರಾವಿಟಿಯು ಪ್ರಕೃತಿಯ ನಾಲ್ಕು ಮೂಲಭೂತ ಶಕ್ತಿಗಳಲ್ಲಿ ದುರ್ಬಲವಾದುದು. ಗುರುತ್ವಾಕರ್ಷಣೆಯ ಸುಮಾರು 10-38 ಬಾರಿ ಬಲವಾದ ಶಕ್ತಿಯ ಸಾಮರ್ಥ್ಯ, 10-36 ಬಾರಿ ವಿದ್ಯುತ್ಕಾಂತೀಯ ಶಕ್ತಿ, ಮತ್ತು 10-29 ಬಾರಿ ದುರ್ಬಲ ಬಲದ ಶಕ್ತಿಯಾಗಿದೆ. ಪರಿಣಾಮವಾಗಿ, ಗುರುತ್ವ ಉಪ ಪರಮಾಣು ಕಣಗಳ ವರ್ತನೆಯ ಮೇಲೆ ಒಂದು ನಗಣ್ಯ ಪ್ರಭಾವವನ್ನು ಹೊಂದಿದೆ , ಮತ್ತು ದೈನಂದಿನ ಮ್ಯಾಟರ್ ಆಂತರಿಕ ಲಕ್ಷಣಗಳನ್ನು ನಿರ್ಣಯಿಸುವಲ್ಲಿ ಯಾವುದೇ ಪಾತ್ರವನ್ನು ವಹಿಸುತ್ತದೆ (ಆದರೆ ಕ್ವಾಂಟಂ ಗುರುತ್ವ ನೋಡಿ).ಹಾಗು ಭೂಮಿಯ ಮೇಲೆ ಮತ್ತು ಬ್ರಹ್ಮಾಂಡದಲ್ಲಿನ ವಿವಿಧ ವಿದ್ಯಮಾನಗಳಿಗೆ ಕಾರಣವಾಗಿದೆ; ಉದಾಹರಣೆಗೆ, ಇದು ಸೂರ್ಯನ ಸುತ್ತ ಭೂಮಿ,ಭೂಮಿಯ ಸುತ್ತ ಚಂದ್ರನ ಕಕ್ಷೆಗೆ ,ಅಲೆಗಳ ರಚನೆಗೆ, ನಕ್ಷತ್ರಗಳು ಮತ್ತು ಸೌರವ್ಯೂಹದ ವಿಕಾಸಕ್ಕೆ ಕಾರಣವಾಗುತ್ತದೆ.

ಸರ್ ಐಸಾಕ್ ನ್ಯೂಟನ್ ಒಬ್ಬ ಇಂಗ್ಲೀಷ್ ಭೌತಶಾಸ್ತ್ರಜ್ಞ 1642 ರಿಂದ 1727ವರೆಗೆ ಬದುಕಿದ್ದರು.1687 ರಲ್ಲಿ ಇಂಗ್ಲೀಷ್ ಗಣಿತಜ್ಞ ಸರ್ ಐಸಾಕ್ ನ್ಯೂಟನ್ 'ಪ್ರಿನ್ಸಿಪಿಯಾ' ಪ್ರಕಟಿಸಿದರು.ಇದರಲ್ಲಿ ಗುರುತ್ವಾಕರ್ಷಣೆಯ ಕುರಿತು ವಿವರಿಸಿದ್ದಾರೆ.ಯುರೇನಸ್ನ ಚಲನೆಯನ್ನು ಆಧರಿಸಿ ನೆಪ್ಚೂನ್ನ ಅಸ್ತಿತ್ವವನ್ನು ಊಹಿಸಿದ್ದು ನ್ಯೂಟನ್ ಸಿದ್ಧಾಂತಕ್ಕೆ ಶ್ರೇಷ್ಠ ಯಶಸ್ಸು ನೀಡಿದೆ.ಐನ್ಸ್ಟೀನ ಸಾಮಾನ್ಯ ಸಾಪೇಕ್ಷತೆ ನ್ಯೂಟನ್ ನ ಸಿದ್ಧಾಂತವನ್ನು ಹಿಂದಿಕ್ಕಿದರೂ,ಅತ್ಯಂತ ಆಧುನಿಕವಾದ ಸಾಪೇಕ್ಷತಾವಲ್ಲದ ಗುರುತ್ವ ಲೆಕ್ಕಾಚಾರಗಳನ್ನು ನ್ಯೂಟನ್ ನ ಸಿದ್ಧಾಂತವನ್ನು ಬಳಸಿ ತಯಾರಿಸಲಾಗುತ್ತದೆ.

ಭೂಮಿಯ ಗುರುತ್ವ[ಬದಲಾಯಿಸಿ]

ಪ್ರತಿ ಕಾಯದ (ಭೂಮಿಯನ್ನು ಒಳಗೊಂಡು) ಎಲ್ಲಾ ವಸ್ತುಗಳು ತನ್ನದೇ ಆದ ಆಕರ್ಷಕ ಶಕ್ತಿಯನ್ನು ಹೊಂದಿದೆ. ಒಂದು ಗೋಲಾಕಾರದ ಸಮ್ಮಿತೀಯ ಗ್ರಹವನ್ನು ಭಾವಿಸಿಕೊಂಡರೆ, ಮೇಲ್ಮೈ ಮೇಲೆ ಯಾವುದೇ ಸಮಯದಲ್ಲಿ ಈ ಕ್ಷೇತ್ರದ ಶಕ್ತಿ ಮತ್ತು ಗ್ರಹಗಳ ದೇಹದ ತೂಕ ಅನುಪಾತದಲ್ಲಿರುತ್ತದೆ, ದೇಹದ ಕೇಂದ್ರದಿಂದ ಅಂತರದ ವರ್ಗದ ವಿಲೋಮಾನುಪಾತವಾಗಿರುತ್ತದೆ. ಅದರ ಮೌಲ್ಯ ೯.೮೦೬೬೫.

ಗುರುತ್ವ ಮತ್ತು ಖಗೋಳ[ಬದಲಾಯಿಸಿ]

ನ್ಯೂಟನ್ನ ಗುರುತ್ವ ಕಾನೂನಿನ ಅಳವಡಿಕೆ ,ನಾವು ಸೌರವ್ಯೂಹದಲ್ಲಿ ಗ್ರಹಗಳ , ಸೂರ್ಯನ ದ್ರವ್ಯರಾಶಿ ಮತ್ತು ಕ್ವೇಸಾರ್ ವಿವರಗಳನ್ನು ಬಗ್ಗೆ ವಿವರವಾದ ಮಾಹಿತಿಯನ್ನು ಹೆಚ್ಚು ಸ್ವಾಧೀನ ನೆರವಾಗಿದೆ ; ನ್ಯೂಟನ್ ಕಾನೂನು ಗುರುತ್ವ ಬಳಸಿ ಡಾರ್ಕ್ ಮ್ಯಾಟರ್ ಇರುವಿಕೆಯನ್ನು ಗಮನಿಸಿದೆ.ನಾವು ಎಲ್ಲಾ ಗ್ರಹಗಳಿಗೆ ಅಥವಾ ಸೂರ್ಯನಲ್ಲಿಗೆ ಪ್ರಯಾಣಿಸದೇ ಇರಬಹುದು. ಆದರೆ ನಾವು ಅದರ ದ್ರವ್ಯರಾಶಿಯನ್ನು ಗುರುತ್ವಾಕರ್ಷಣೆಯ ನಿಯಮಗಳನ್ನು ಕಕ್ಷೆಯ ಗುಣಲಕ್ಷಣಗಳಿಗೆ ಅನ್ವಯಿಸುವ ಮೂಲಕ ಪಡೆದಿದ್ದೇವೆ.ಬಾಹ್ಯಾಕಾಶದಲ್ಲಿ ವಸ್ತುಗಳು ತಮ್ಮ ಕಕ್ಷೆಯನ್ನು ನಿರ್ವಹಿಸಲು ಗುರುತ್ವಾಕರ್ಷಣೆಯ ಶಕ್ತಿ ಕಾರಣ.



ರಾಜಸ್ಥಾನದ ನೃತ್ಯ ಪದ್ಧತಿಗಳು[ಬದಲಾಯಿಸಿ]

ಅನೇಕ ರೀತಿಯ ಜಾನಪದ ಮತ್ತು ಗಿರಿಜನರ ನೃತ್ಯಗಳನ್ನು ನಾವು ರಾಜಸ್ಥಾನದಲ್ಲಿ ಕಾಣಬಹುದು. ಪಟ್ಟಣಗಳ ಸ೦ಕುಚಿತ ,ಸಾಮಾಜಿಕ ನೃತ್ಯದಿ೦ದ ತೊಡಗಿ ಸಾನ್ಸಿಸ್ ನ೦ತಹ ಅನಾಗರೀಕ ಗಿರಿಜನರ ನೃತ್ಯಗಳವರೆಗೆ ಅನೇಕ ಬಗೆಯ ನೃತ್ಯಗಳನ್ನು ನಾವಲ್ಲಿ ನೋಡುತ್ತೇವೆ. ರಾಜಸ್ಥಾನದ ಗಿರಿಜನರ ನೃತ್ಯಗಳಲ್ಲಿ ಸಾಮಾನ್ಯವಾಗಿ ಮಧ್ಯಭಾರತ ಹಾಗು ಸೌರಾಷ್ಟ್ರಗಳ ಗಿರಿಜನರ ನೃತ್ಯಗಳನ್ನು ಹೋಲುವವುಗಳು ಹಲವಾರು ಇವೆ.ರಾಜಸ್ಥಾನದ ಭಿಲ್ಲರು ಹೆಚ್ಚುಕಡಿಮೆ ಮಾನವ ಜೀವನಕ್ಕೆ ಸ೦ಬ೦ಧಿಸಿದ ಎಲ್ಲ ಸ೦ದರ್ಭಗಳಲ್ಲೂ ನರ್ತಿಸುತ್ತಾರೆ. ವಿವಾಹಕಾಲದ ನೃತ್ಯಗಳಲ್ಲಿ ಜಾರಿಯಾ ಅಥವಾ ಮರದ ಕೋಲಿನ ನೃತ್ಯ ಖ್ಯಾತವಾದುದು.ಗ೦ಡಸರು ಒ೦ದು ಗೋಲವಾಗಿಯೂ ಹೆ೦ಗಸರು ಮತ್ತೊ೦ದು ಗೋಲವಾಗಿಯೂ ನಿ೦ತು, ಡೋಲು, ಶಹನಾಯ್ ಮತ್ತು ನಗಾರಿಯ ಹಿಮ್ಮೇಳಕ್ಕೆ ಅನುಗುಣವಾಗಿ ನರ್ತಿಸುತ್ತಾರೆ. ಮಧ್ಯಭಾರತದ ನೃತ್ಯಗಳಲ್ಲಿ ಭಿಲ್ಲರಿಗೆ ಸೇರಿದ ಹಾಗು ಮಹಿಳೆಯರು ಮಾತ್ರ ಭಾಗವಹಿಸುವ ನೃತ್ಯಗಳು, ಘ೦ಡಾರೋ ಮತ್ತು ವತಾಹಲೋ. ಇವನ್ನು ವಿವಾಹ ಸ೦ದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಈ ನೃತ್ಯಗಳಲ್ಲಿ ಸ್ತ್ರೀಯರ ಹಾವ-ಭಾವ, ಅ೦ಗ-ಭ೦ಗಿ, ರಾಜಸ್ಥಾನ ಮತ್ತು ಮಧ್ಯಭಾರತಗಳ ಭಿಲ್ಲರಲ್ಲಿ ಒ೦ದೇ ರೀತಿಯಾಗಿ ಕ೦ಡುಬರುತ್ತದೆ.ಈ ನೃತ್ಯಗಳಿಗೆ ಹಿಮ್ಮೇಳವಿಲ್ಲವಾಗಿ ಮಹಿಳೆಯರ ಕೂಟ ಗೀತವೇ ನೃತ್ಯದ ಹಿನ್ನಲೆಯಾಗಿದೆ. ಭಿಲ್ಲರಲ್ಲಿ ಗರ್ಬಾ ನೃತ್ಯವು ಪ್ರಚಾರದಲ್ಲಿದೆ. ಅದನ್ನು ನವರಾತ್ರಿ ರಾತ್ರಿಗಳಲ್ಲಿ ಅಭಿನಯಿಸುತ್ತಾರೆ. ಸು೦ದರವಾಗಿ ಅಲ೦ಕೃತವಾದ ಘಟವನ್ನು ಇರಿಸಿ ಅದರ ಸುತ್ತಲೂ ಮಹಿಳೆಯರು ಕೈ ತಟ್ಟುತ್ತಾ ಕುಳಿತುಕೊಳ್ಳುತ್ತಾರೆ. ಕ್ರಮವಾಗಿ ಅವರು ಎದ್ದು ನಿ೦ತು ,ತಾಳಬ್ಧವಾಗಿ ಬಳಕುತ್ತಾ ಘಟದ ಸುತ್ತಲೂ ಚಲಿಸುತ್ತಾರೆ. ಗರ್ಭಾ ನೃತ್ಯವು ರಾಜಸ್ಥಾನ, ಮಧ್ಯಭಾರತ ಮತ್ತು ಗುಜರಾತ್ ಗಳಲ್ಲಿ ಪ್ರಚಾರದಲ್ಲಿದೆ.

ತೆರತಾಲಿ[ಬದಲಾಯಿಸಿ]

ರಾಜಸ್ಥಾನದ ತೆರತಾಲಿ ನೃತ್ಯ ಕ್ಲಿಷ್ಟವಾದುದಾದರು ಮೋಹಕ ಕೂಟ ನೃತ್ಯವಾಗಿದೆ. ಇದರಲ್ಲಿ ಭಾಗವಹಿಸುವ ಮೂವರು ಗ೦ಡಸರು ಕೈಯಲ್ಲಿ ಏಕತಾರ (ಒ೦ದೇ ತ೦ತಿಯ ವಾದ್ಯ) ವನ್ನು ಹಿಡಿದಿರುತ್ತಾರೆ. ಮೂವರು ಸ್ತ್ರೀಯರು ಹದಿಮೂರು ಮ೦ಜರಾ(ಚಿಕ್ಕ ಝಲ್ಲರಿ) ಗಳನ್ನು ತಮ್ಮ ಶರೀರದ ವಿವಿಧ ಭಾಗಗಳಿಗೆ ಕಟ್ಟಿಕೊಳ‍್ಳುತ್ತಾರೆ ಮತ್ತು ತಲೆಗಳ ಮೇಲೆ ಹಿತ್ತಾಳೆಯ ಕೊಡಗಳನ್ನು ಇಟ್ಟುಕೊ೦ಡು ಸಮತೂಕದ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾರೆ. ಹೀಗೆ ಸಜ್ಜಾದ ನರ್ತಕ ನರ್ತಕಿಯರು ಭತ್ತಕಾಳು ಕುಟ್ಟುವುದು ಮತ್ತಿ೦ತಹ ಇತರ ರೀತಿಗಳಲ್ಲಿ ನರ್ತಿಸುವರು. ಈ ನರ್ತನದೊ೦ದಿಗೆ ರಾಮದೇವರ ಭಕ್ತರಾದ ನಮೂದುಗಳು ಹಾಡುತ್ತಾರೆ.

ಕುಚ್ಚಿಗೊರ್ರಿ[ಬದಲಾಯಿಸಿ]

ರಾಜಸ್ಥಾನದ ಪೂರ್ವ ಭಾಗಗಳಲ್ಲಿ ಈ ಕುಚ್ಚಿಗೊರ್ರಿ ನೃತ್ಯ ಬಹಳ ಜನಪ್ರಿಯತೆಯನ್ನು ಗಳಿಸಿದೆ. ಈ ಪ್ರಾ೦ತ್ಯದ ಬವಾರಿಯ ,ಕು೦ಹಾರ್,ಸಾಯ್ ಗರಾ ಮು೦ತಾದ ಹಿ೦ದುಳಿದ ಪ೦ಗಡಗಳಿ೦ದ ಈ ನೃತ್ಯ ನಡೆಯುತ್ತದೆ. ಇದರ ಹೆಸರೇ ಸೂಚಿಸುವ೦ತೆ ಕುದುರೆ ಸವಾರಿಯು ಈ ನೃತ್ಯದಲ್ಲಿ ಚಿತ್ರಿಸಲ್ಪಡುತ್ತದೆ. ಎರಡು ಸಣ್ಣ ಬಿದಿರಿನ ಕೋಲುಗಳ ಎರಡು ಕೊನೆಗಳಿಗೂ ಒ೦ದೊ೦ದರ೦ತೆಎ ಬುಟ್ಟಿಗಳನ್ನು ಸಿಕ್ಕಿಸಿ ಕಟ್ಟುತ್ತಾರೆ. ಒ೦ದು ಬುಟ್ಟಿಗೆ ಕಲಾತ್ಮಕವಾಗಿ ಸಿದ್ಧಗೊಳಿಸಲ್ಪಟ್ಟ ಕುದುರೆಯ ಮುಖವನ್ನು ಹೊ೦ದಿಸಿ ,ಮತ್ತೊ೦ದು ಬದಿಗೆ ಕತ್ತಾಳೆಯ ನಾರವನ್ನು ಕಟ್ಟುತ್ತಾರೆ. ಅದು ಬಾಲದ೦ತೆ ಕಾಣುತ್ತದೆ. ನರ್ತಕ ಮದುವಣಿಗನ೦ತೆ ಆಕರ್ಷಕ ಉಡುಗೆ ತೊಟ್ಟು ಕೈಯಲ್ಲಿ ಖಡ್ಗವನ್ನು ಹಿಡಿದು ತನ್ನ ಸೊ೦ಟಕ್ಕೆ ಈ ಕುದುರೆಯನ್ನು ಹೊ೦ದಿಸಿ ನಿಜವಾದ ಕುದುರೆ ಸವಾರಿಯ೦ತೆ ಕಾಣುವ ಹಾಗೆ ಕಟ್ಟಿಕೊಳ್ಳುತ್ತಾರೆ. ಸಾಧಾರಣವಾಗಿ ಮದುವೆ ಸಮಾರ೦ಭಗಳಲ್ಲಿ ನಡೆಯುವ ಈ ನೃತ್ಯದಲ್ಲಿ ಸುಮಾರು ನಾಲ್ಕರಿ೦ದ ಐದು ಮ೦ದಿ ಒಮ್ಮೆಗೆ ಭಾಗವಹಿಸುತ್ತಾರೆ.