ಸದಸ್ಯ:Princita mascarenhas/sandbox
ನನ್ನ ಹೆಸರು ಪ್ರಿನ್ಸಿಟಾ ಮಸ್ಕರೇನಸ್. ಮಂಗಳೂರಿನ ವ್ಯಾಪ್ತಿಯಲ್ಲಿರುವ ಕಿನ್ನಿಗೋಳಿ ಎಂಬ ಪ್ರದೇಶದಲ್ಲಿ ನನ್ನ ತಂದೆ ಪಿಲಿಫ್ ಮಸ್ಕರೇನಸ್ ಮತ್ತು ತಾಯಿ ಹಿಲ್ಡಾ ಮಸ್ಕರೇನಸ್ ಜೊತೆಗೆ ವಾಸವಾಗಿದ್ದೇನೆ. ನನ್ನ ಅವಳಿ ಸಹೋದರಿಯಾಗಿರುವ ಪ್ರಿಯಾಂಕ ಮಸ್ಕರೇನಸ್ ಬಿ.ಡಿ.ಎಸ್ ವ್ಯಾಸಂಗ ಮಾಡುತ್ತಿದ್ದಾಳೆ. ಪ್ರೀತಿ, ಸಂತೋಷ, ನೆಮ್ಮದಿ ತುಂಬಿಕೊಂಡಿರುವ ನನ್ನ ಕುಟುಂಬವೇ ನನ್ನ ಪ್ರಪಂಚ.
ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಧ್ಯಾಭ್ಯಾಸವನ್ನು ನನ್ನ ಸ್ವಂತ ನಾಡಾಗಿರುವ ಕಿನ್ನಿಗೋಳಿಯ ಮೇರಿವೇಲ್ಸ್ ಪ್ರೌಢಶಾಲೆಯಲ್ಲಿ ಪೂರೈಸಿದೆ. ಪದವಿಪೂರ್ವ ವಿದ್ಯಾಭ್ಯಾಸವನ್ನು ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಯಶಸ್ವಿಯಾಗಿ ಪೂರೈಸಿದ್ದೇನೆ. ನೃತ್ಯದಲ್ಲಿ ಅತೀವಾಸಕ್ತಿಯಿರುವ ನಾನು ಬಿಡುವಿನ ವೇಳೆಗಳನ್ನು ಪುಸ್ತಕಗಳ ಜೊತೆ ಕಳೆಯುತ್ತೇನೆ. ಇದೀಗ. ಮಂಗಳೂರಿನ ಪ್ರಖ್ಯಾತ ಶಿಕ್ಷಣ ಸಂಸ್ಥೆಯಾಗಿರುವ ಸಂತ ಅಲೋಶಿಯಸ್ ವಿದ್ಯಾಸಂಸ್ಥೆಯಲ್ಲಿ ಬಿ.ಕಾಂ ಅಭ್ಯಸಿಸುತ್ತಿದ್ದೇನೆ. ಭವಿಷ್ಯದಲ್ಲಿ ಒಬ್ಬ ಅತ್ಯುತ್ತಮ ಚಾರ್ಟರ್ಡ್ ಅಕೌಂಟಂಟ್ ಆಗುವ ಗುರಿ ಹೊಂದಿದ್ದೇನೆ.