ಸದಸ್ಯ:Anoosha k

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ[ಬದಲಾಯಿಸಿ]

ಅನೂಷಾ. ಕೆ. ಭಟ್
ಜನನಅಕ್ಟೋಬರ್ ೮ ೧೯೯೭
ಕೊಲ್ಲರಮಜಲು
ರಾಷ್ಟ್ರೀಯತೆಭಾರತೀಯ


ನಾನು ಅನೂಷಾ ಕೆ. ಭಟ್. ಮಂಗಳೂರು ಸಮೀಪದ ಕೈರಂಗಳ ಗ್ರಾಮದ ಕೊಲ್ಲರಮಜಲು ಎಂಬಲ್ಲಿ ವಾಸಿಸುತ್ತಿದ್ದೇನೆ. ಸಂತ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದೇನೆ. ನಾನು ದ್ವಿತೀಯ ಬಿ.ಎಸ್ಸಿ.ಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತಶಾಸ್ತ್ರ ವಿಷಯಗಳನ್ನು ಅಧ್ಯಯನ ಮಾಡುತ್ತಿದ್ದೇನೆ.

ಮನೆ ಹಾಗೂ ಮನೆಯವರು[ಬದಲಾಯಿಸಿ]

ನನ್ನ ಮನೆ ಹಾಗೂ ಮನೆಯವರ ಬಗ್ಗೆ ಹೇಳಬೇಕೆಂದರೆ, ನಮ್ಮದು ೯ ಜನರಿರುವ ಕೂಡು ಕುಟುಂಬ. ನಮ್ಮ ಮನೆಯಲ್ಲಿರುವ ಸದಸ್ಯರೆಂದರೆ ನಾನು, ಅಪ್ಪ, ಅಮ್ಮ, ತಮ್ಮ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ಅವರ ಮಗಳು ಮತ್ತು ಮಗ ಅಂದರೆ ನನ್ನ ತಂಗಿ ಮತ್ತು ಸಣ್ಣತಮ್ಮ.

ತಂದೆ- ಬಾಲಕೃಷ್ಣ ಭಟ್,

ತಾಯಿ-ವಸಂತಲಕ್ಶ್ಮೀ,

ತಮ್ಮ-ಆದರ್ಶ ಸುಬ್ರಹ್ಮಣ್ಯ,

ಚಿಕ್ಕಪ್ಪ-ಅರವಿಂದ,

ಚಿಕ್ಕಮ್ಮ-ರಾಜೇಶ್ವರಿ,

ತಂಗಿ-ಅಪೇಕ್ಷಾ,

ತಮ್ಮ-ಸುಧನ್ವ.

ನನ್ನ ಪ್ರೀತಿಯ ಅಜ್ಜ ದಿ|ಸುಬ್ಬಣ್ಣ ಭಟ್ ನನ್ನನ್ನು ೩ ವರ್ಷಗಳ ಹಿಂದೆ ಅಗಲಿದರು. ಅವರ ಅಗಲಿಕೆಯನ್ನು ಇನ್ನೂ ನನಗೆ ಮರೆಯಲು ಸಾಧ್ಯವಾಗುತ್ತಿಲ್ಲ. ನಾನೀಗ ಅಜ್ಜನಿಲ್ಲದ ತಬ್ಬಲಿ ಆಗಿದ್ದೇನೆ ಎಂದು ಅನಿಸುತ್ತದೆ.

ಅಂದ ಹಾಗೆ ನಮ್ಮ ಮನೆಯು ಹಳೆಯ ಕಾಲದ ಮನೆ. ಸುಮಾರು ೧೦೭ ವರ್ಷಗಳಾಗಿರಬಹುದೆಂದು ಹಿರಿಯರ ಅಂದಾಜು. ಹಳೆಯ ಮನೆಯಾದರು ಬಹಳ ಗಟ್ಟಿಮುಟ್ಟಾಗಿದೆ. ನನ್ನ ಅಜ್ಜನ ಅಜ್ಜ ಹಿಂದೆ ಊರಿನ ಪಾಟೇಲರಾಗಿದ್ದರು ಎಂದು ನನ್ನ ಪ್ರೌಢ ಶಾಲೆಯ ಅಧ್ಯಾಪಕರು ಹೇಳುತ್ತಿದ್ದರು. ನಮ್ಮ ಊರು ಒಂದು ಹಳ್ಳಿಪ್ರದೇಶ ಆದುದರಿಂದ ಹಾಗೂ ಮನೆಯು ಹಳೆಯ ಕಾಲದ್ದಾದುದರಿಂದ ಬೇಸಿಗೆಯಲ್ಲಿ ಮಂಗಳೂರಿನಷ್ಟು ಸೆಖೆ ಇರುವುದಿಲ್ಲ.

ಹಳ್ಳಿಯ ಪ್ರದೇಶವಾದರು ನಮ್ಮ ಮನೆಗೆ ವಿದ್ಯುತ್ ಸಂಪರ್ಕ ನನ್ನ ಮುತ್ತಜ್ಜನ ಕಾಲದಲ್ಲೇ ಇತ್ತಂತೆ. ಆದರೆ ಅದನ್ನು ಹೆಚ್ಚಾಗಿ ತೋಟದ ಕೆಲಸಕ್ಕಾಗಿ ಬಳಕೆ ಮಾಡುತ್ತಿದ್ದರಂತೆ. ಮನೆಯ ಬಳಕೆಗೆ ಕಡಿಮೆ ವಿದ್ಯುತ್ ಸಾಕಾಗುತ್ತಿತ್ತಂತೆ.

ನನ್ನ ತಂದೆ-ತಾಯಿ[ಬದಲಾಯಿಸಿ]

ನನ್ನ ತಂದೆ ಇಂಜಿನಿಯರಿಂಗ್ ಅಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಈಗ ಒಬ್ಬ ಉತ್ತಮ ಕೃಷಿಕ ಹಾಗೂ ಒಬ್ಬ ಉತ್ತಮ ತಂದೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ ಕೈ ತುಂಬಾ ಹಣ ಸಂಪಾದನೆ ಮಾಡಬಹುದಿತ್ತು..... ಆದರೆ ನಮಗೆ ನಮ್ಮ ತಂದೆಯ ದರ್ಶನ ಭಾಗ್ಯವೇ ಸರಿಯಾಗಿ ಸಿಗುತ್ತಿರಲಿಲ್ಲ. ಅಂತಹ ಬದುಕು ಜೀವಂತಿಕೆ ಇಲ್ಲದ ಯಾಂತ್ರಿಕ ಬದುಕಾಗುತ್ತಿತ್ತು. ಹಾಗಾಗಿ ನನ್ನ ತಂದೆ ಕೃಷಿಯನ್ನು ಆಯ್ಕೆ ಮಾಡಿದ್ದು ನನ್ನ ಭಾಗ್ಯವೆಂದೇ ನಾನು ನಂಬಿದ್ದೇನೆ.

ನನ್ನ ಅಮ್ಮ ಬಿ.ಕಾಂ.ನಲ್ಲಿ ಪದವಿ ಪಡೆದಿದ್ದಾರೆ. ಅಮ್ಮನ ವಿದ್ಯಾಭ್ಯಾಸವು ಸುಳ್ಯದ ಆಸುಪಾಸಿನಲ್ಲಿ ನಡೆಯಿತು. ಅಮ್ಮ ಶಾಲೆಗೆ ಹೋಗಬೇಕೆಂದರೆ ದಿನಾಲು ಐದೈದು ಮೈಲಿ ಕಾಲ್ನಡಿಗೆಯಲ್ಲಿ ಹೋಗಬೇಕಿತ್ತು.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ನನ್ನ ೪ನೆಯ ವಯಸ್ಸಿನಲ್ಲಿ ಅಂಗನವಾಡಿಗೆ ಹೋಗತೊಡಗಿದೆ. ೧ ರಿಂದ ೭ ನೆಯ ತರಗತಿವರೆಗಿನ ವಿದ್ಯಾಭ್ಯಾಸವನ್ನು "ಕೈರಂಗಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ"ಯಲ್ಲಿ ನಡೆಸಿದೆ. ಪ್ರೌಢ ಶಾಲಾ ಶಿಕ್ಷಣವನ್ನು ಕೈರಂಗಳದ "ಶಾರದಾ ಗಣಪತಿ ವಿದ್ಯಾ ಕೇಂದ್ರ"ದಲ್ಲಿ ಪಡೆದೆನು. ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ "ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜ್"ನಲ್ಲಿ ಮುಗಿಸಿ, ಈಗ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದೇನೆ.

ಹವ್ಯಾಸಗಳು[ಬದಲಾಯಿಸಿ]

ನನಗೆ ಅನೇಕ ಹವ್ಯಾಸಗಳಿವೆ. ಅವುಗಳಲ್ಲಿ ಮುಖ್ಯವಾದವು,

ಓದುವುದು[ಬದಲಾಯಿಸಿ]

ನಾನು ಹೆಚ್ಚಾಗಿ ಕನ್ನಡ ಕಾದಂಬರಿಗಳನ್ನು ಓದುತ್ತೇನೆ. ಅದರಲ್ಲೂ ಸಾಮಾಜಿಕ ಕಾದಂಬರಿಗಳನ್ನು ಓದುವುದು ಹೆಚ್ಚು.

ಸಂಗೀತ-ನೃತ್ಯ[ಬದಲಾಯಿಸಿ]

ನನಗೆ ಸಂಗೀತ ಹಾಗು ನೃತ್ಯಗಳಲ್ಲಿ ಎಲ್ಲಿಲ್ಲದ ಆಸಕ್ತಿ. ೪ ವರ್ಷ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದೇನೆ. ಹಾಗೂ ೨ ವರ್ಷ ಸುಗಮ ಸಂಗೀತದ ಅಭ್ಯಾಸ ನಡೆಸಿದ್ದೇನೆ. ಈಗ ನೃತ್ಯಾಭ್ಯಾಸವನ್ನೂ ನಡೆಸುತ್ತಿದ್ದೇನೆ.

ಹೂದೋಟದ ಆರೈಕೆ[ಬದಲಾಯಿಸಿ]

ಹೂದೋಟದ ಆರೈಕೆ ನನ್ನ ಇಷ್ಟದ ಒಂದು ಹವ್ಯಾಸ. ಮನೆಯ ಸುತ್ತಮುತ್ತ ಅನೇಕ ಗಿಡಗಳನ್ನು ನೆಟ್ಟು ಬೆಳೆಸಿದ್ದೇನೆ. ಆದರೆ ಅದರ ಆರೈಕೆಗೆ ಸಮಯ ಸಿಗುತ್ತಿಲ್ಲವಾದ್ದರಿಂದ ಅಮ್ಮನೇ ಹೂ ಗಿಡಗಳ ಆರೈಕೆ ಮಾಡುತ್ತಾರೆ.


ಈ ಸದಸ್ಯರ ಊರು ಮಂಗಳೂರು.