ವಿಷಯಕ್ಕೆ ಹೋಗು

ಸದಸ್ಯ:Sindhu.v/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                    ಭಾರತದ ಐಷಾರಾಮಿ ರೈಲುಗಳು


Maharajas' Express - Mayur Mahal, dining (4809207224)


ಭಾರತೀಯ ರೈಲ್ವೆ ಸಹಯೋಗದೊಂದಿಗೆ ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮ ಮಂಡಳಿ ಭಾರತದ ಐಷಾರಾಮಿ ರೈಲು ಸಂಚಾರಕ್ಕೆ ಒಂದು ವ್ಯಾಪಕ ಶ್ರೇಣಿಯನ್ನು ಒದಗಿಸುತ್ತದೆ. ಭಾರತೀಯ ರೈಲ್ವೆ ಇಲಾಖೆಯು ನಾಲ್ಕು ಪ್ರವಾಸಿಗರ ರೈಲುಗಳು ಮತ್ತು ಸೂಪರ್ ಫಾಸ್ಟ್ ಪ್ಯಾಸೆಂಜರ್ ರೈಲುಗಳ ಮೂರು ವಿಭಾಗಗಳ ಮೂಲಕ ಜನತೆಗೆ ಅತ್ಯುನ್ನತ ಸೇವೆ ಒದಗಿಸುತ್ತದೆ. ಭಾರತೀಯ ರೈಲ್ವೆ ಇಲಾಖೆಯು ಇತ್ತೀಚಿನ ದಿನಗಳಲ್ಲಿ ಐಷಾರಾಮಿ ರೈಲುಗಳಿಂದ ಮಹಾರಾಜ ಎಕ್ಸ್‌ಪ್ರೆಸ್ ಅಥವಾ ಪ್ಯಾಲೆಸ್ ಆನ್ ವೀಲ್ಸ್‌ಗೆ ಹೋಲುವಂತೆ ಸಾಮಾನ್ಯ ರೈಲುಗಳಲ್ಲೂ ಸಹ ಉನ್ನತ ದರ್ಜೆಯ ವಿಲಾಸಿ ಭೋಗಿಗಳನ್ನು ಸೇವೆಗೆ ಒದಗಿಸಲು ನಿರ್ಧರಿಸಿದ್ದಾರೆ. ಕೋಲ್ಕತಾದ ಮೆಟ್ರೋ ರೈಲ್ವೆ ೧೭ನೇ ವಲಯದಲ್ಲಿದ್ದರೂ ಸಹ ಭಾರತದ ಐಷಾರಮಿ ರೈಲುಗಳ ವ್ಯಾಪ್ತಿಗೆ ಬರುತ್ತದೆ. ಕೆಲವು ಪ್ರಸಿದ್ದವಾದ ಐಷಾರಾಮಿ ರೈಲುಗಳನ್ನು ಕೆಳಗೆ ವಿವರಿಸಲಾಗಿದೆ.

ಕೆಲವು ಪ್ರಸಿದ್ದವಾದ ಐಷಾರಾಮಿ ರೈಲುಗಳೆಂದರೆ- ೧. ಪ್ಯಾಲೆಸ್ ಆನ್ ವೀಲ್ಸ್. ೨. ಡೆಕ್ಕನ್ ಒಡಿಸ್ಸಿ. ೩. ರಾಯಲ್ ರಾಜಸ್ತಾನ್ ಆನ್ ವೀಲ್ಸ್. ೪. ಗೋಲ್ಡನ್ ಚಾರಿಯಟ್.

ಪ್ಯಾಲೆಸ್ ಆನ್ ವೀಲ್ಸ್

[ಬದಲಾಯಿಸಿ]

Palace on Wheels Jaipur


ಪ್ಯಾಲೆಸ್ ಆನ್ ವೀಲ್ಸ್ ಐಷಾರಾಮಿ ಪ್ರವಾಸಿ ರೈಲುಗಳಲ್ಲಿ ಒಂದಾಗಿದೆ. ರಾಜಸ್ಥಾನ ರಾಜ್ಯದ ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸಲು ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಸಹಯೋಗದಲ್ಲಿ ಭಾರತೀಯ ರೈಲ್ವೆ ಈ ರೈಲನ್ನು ಆರಂಭಿಸಿದೆ. ಆಗಸ್ಟ್ ೨೦೦೯ರಲ್ಲಿ ಈ ರೈಲು ಹೊಸ ವಿನ್ಯಾಸ, ನವಮೆರಗಿನಿಂದ, ಪ್ರಯಾಣಿಕರಿಗೆ ಅವಶ್ಯಕವಾದ ಮಾಹಿತಿಗಳ ಜೊತೆಗೆ ತಿಂಡಿ, ತಿನಿಸುಗಳ ಲಭ್ಯತೆಯೊಂದಿಗೆ ಪುನರ್ ಆರಂಭಿಸಲಾಯಿತು. ಪ್ಯಾಲೆಸ್ ಆನ್ ವೀಲ್ಸ್ ಈ ರೈಲು ೨೦೧೦ನೇ ಇಸವಿಯಲ್ಲಿ ಜಗತ್ತಿನ ೪ನೇ ಐಷಾರಾಮಿ ರೈಲು ಎಂಬ ಖ್ಯಾತಿಗೆ ಒಳಗಾಯಿತು.

ಇತಿಹಾಸ

[ಬದಲಾಯಿಸಿ]

ಪ್ಯಾಲೆಸ್ ಆನ್ ವೀಲ್ಸ್ ಜನವರಿ ೨೬, ೧೯೮೩ರಲ್ಲಿ ಪ್ರಾರಂಭವಾಯಿತು. ಪ್ಯಾಲೆಸ್ ಆನ್ ವೀಲ್ಸ್‌ನ ಪರಿಕಲ್ಪನೆಯು ಸಾಹುಕಾರ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತದೆ. ಈ ರೈಲು ಹಿಂದಿನ ಆಡಳಿತಗಾರರಾದ ರಾಜಪುತಾನ, ಗುಜರಾತ್, ಹೈದರಾಬಾದಿನ ನಿಜಾಮರವರ ವೈಯಕ್ತಿಕ ರೈಲ್ವೆ ಭೋಗಿಗಳ ಆಧಾರದಮೇರೆಗೆ ಪ್ಯಲೆಸ್ ಆನ್ ವೀಲ್ಸ್‌ನ ಪರಿಕಲ್ಪನೆಯು ಸಾಹುಕಾರ ಹಿನ್ನೆಲೆಯಿಂದ ಪ್ರಾರಂಭಗೊಂಡಿತು.

ಒಳಾಂಗಣ

[ಬದಲಾಯಿಸಿ]

ಪ್ರತಿ ಸಲೂನ್ ಪೀಠೋಪಕರಣ, ಕರುಕುಶಲ, ಚಿತ್ರಕಲೆ ಬಳಕೆಯಿಂದ ನಿರೂಪಿಸಲಾಗಿದೆ. ಈ ರೈಲು ಬಹುಪಾಲು ಸಾಂಸ್ಕ್ರತಿಕ ಲಕ್ಷಣವನ್ನೇ ತೋರಿಸುತ್ತದೆ. ದೆಹಲಿ ಮೂಲದ ವಿನ್ಯಾಸಕಾರಳಾದ ಮೋನಿಕಾ ಖನ್ನಾ‌ರವರು ರೈಲಿನ ಒಳಾಂಗಣವನ್ನು ಚಿತ್ರಿಸಿದ್ದಾರೆ.

ಸೌಲಭ್ಯಗಳು- ರೈಲಿನಲ್ಲಿ ೨೩ ಭೋಗಿಗಳಿವೆ. ಇದರಲ್ಲಿ ಒಂದುಬಾರಿಗೆ ೧೦೪ ಪ್ರವಾಸಿಗಳು ಪ್ರವಾಸ ಮಾಡಬಹುದು. ಪ್ರತಿಯೊಂದು ಭೋಗಿಗೂ ಮಾಜಿ ರಜಪೂತರ ಹೆಸರಿಡಲಾಗಿದೆ. ಅವುಗಳೆಂದರೆ ಆಲ್ವಾರ್, ಭರತ್ಪುರ್, ಬಿಕನೆರ್, ಬುಂದಿ, ಧೋಲ್ಪುರ್, ಜೈಸಲ್ಮೇರ್, ಜೈಪುರ್, ಜಲಾವರ್, ಉದಯಪುರ್, ಕೋಟ, ಸಿರೋಹಿ, ಜೋದಪುರ್, ಕಿಶನ್‌ಘರ್. ಪ್ರತಿ ಭೋಗಿಗಳಲ್ಲಿ ೪ ಕೋಣೆಗಳಿವೆ. ಈ ಕೋಣೆಗಳಲ್ಲಿ ಐಷಾರಾಮಿ ಸೌಲಭ್ಯಗಳ ಜೊತೆಗೆ ವೈಫೈ ಸಂಪರ್ಕವೂ ಇದೆ. ಈ ರೈಲುನಲ್ಲಿ ರಾಜಸ್ತಾನಿ ಪರಿಸರವನ್ನು ಒಳಗೊಂಡಿರುವಂತಹ ಮಹಾರಾಜ ಮತ್ತು ಮಹಾರಾಣಿ ಎನ್ನುವ ಹೆಸರಿನಲ್ಲಿ ಎರಡು ರೆಸ್ಟೋರೆಂಟುಗಳಿವೆ.ಈ ರೆಸ್ಟೋರೆಂಟ್ ಕಾಂಟಿನೆಂಟಲ್, ಚೀನಿ ತಿನಿಸು, ಒಂದು ಬಾರ್, ೧೪ ಸಲೂನ್ ಮತ್ತು ಸ್ಪಾ ಕಾರ್ಯನಿರ್ವಹಿಸುತ್ತದೆ.

ಮಾರ್ಗ- ಈ ರೈಲು ೭ ರಾತ್ರಿ ಮತ್ತು ೮ ದಿನಗಳ ಪ್ರಯಾಣವನ್ನು ಜನರಿಗೆ ಒದಗಿಸುತ್ತದೆ. ದಿನ ೧- ನವ ದೆಹಲಿಯಿಂದ ಆರಂಭವಾಗುತ್ತದೆ, ದಿನ ೨- ಜೈಪುರ್, ದಿನ ೩- ಸಾವಾಯಿ, ಮದೋಪುರ, ಚಿತ್ತುರ್ಗರ್ಹ, ದಿನ ೪- ಉದಯಪುರ, ದಿನ ೫- ಜೈಸಲ್ಮೇರ್, ದಿನ ೬- ಜೋದಪುರ, ದಿನ ೭- ಭರತ‌ಪುರ, ಆಗ್ರ, ದಿನ ೮- ನವ ದೆಹಲಿಗೆ ಹಿಂತಿರುಗುತ್ತದೆ.

ಪ್ರಶಸ್ತಿಗಳು ಮತ್ತು ಮಾನ್ಯತೆ-

  • ಈ ರೈಲು ಪ್ರಾರಂಭವಾದ ಕೆಲವು ವರ್ಷಗಳಲ್ಲೇ, ೧೯೮೭ರಲ್ಲಿ ಪಾಟಾ ಗೋಲ್ಡ್ ಅವಾರ್ಡ್ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿತು. ಈ ಪ್ರಶಸ್ತಿಯನ್ನು ಪೆಸಿಫಿಕ್ ಏಷಿಯಾ ಟ್ರಾವಲ್ ಅಸೋಸಿಯೇಷನ್ (ಪಾಟಾ) ನೀಡಿತು.
  • ಹಲವಾರು ದೂರದರ್ಶನ ವಾಹಿನಿಗಳಾದ ಬಿಬಿಸಿ, ಎಂ.ಟಿವಿ, ನ್ಯಾಷನಲ್ ಜಿಯಾಗ್ರಫಿ, ಡಿಸ್ಕವರಿ, ಜೀ ಟಿವಿಯಲ್ಲಿ ಪ್ಯಾಲೆಸ್ ಆನ್ ವೀಲ್ನ್ ರೈಲನ್ನು ಪ್ರದರ್ಶನವನ್ನು ನೀಡಿತು.
  • ಕೊಂಡೆ ನಾಸ್ಟ್ ಎಂಬ ಜಾಗತಿಕ ಪ್ರಯಾಣದ ಪತ್ರಿಕೆಯ ಸಮೀಕ್ಷೆಯಲ್ಲಿ, ಪ್ಯಾಲೆಸ್ ಆನ್ ವೀಲ್ಸ್ ವಿಶ್ವದಲ್ಲಿ ೪ನೇ ಐಷಾರಮಿ ರೈಲು ಎಂದು ನೇಮಕವಾಯಿತು.

ಡೆಕ್ಕನ್ ಒಡಿಸ್ಸಿ

[ಬದಲಾಯಿಸಿ]

The Indian Maharaja, Deccan Odyssey - Beauty Salon


ಭಾರತದ ರೈಲ್ವೆ ಮಹಾರಾಷ್ಟ್ರದ ಮಾರ್ಗದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಪ್ಯಾಲೆಸ್ ಆನ್ ವೀಲ್ಸ್‌ನ ಮಾದರಿಯಲ್ಲಿ ಡೆಕ್ಕನ್ ಒಡಿಸ್ಸಿ ಎಂಬ ವಿಶೇಷ ಐಷಾರಮಿ ರೈಲನ್ನು ಪ್ರಾರಂಭಿಸಲಾಯಿತು. ರೈಲಿನ ಮಾರ್ಗ ಮುಂಬಾಯಿನಿಂದ ಆರಂಭವಾಗುತ್ತದೆ. ನಂತರ ರತ್ನಗಿರಿ, ಸಿಂಧುದುರ್ಗ, ಗೋವಾ, ಕೊಲ್ಹಾಪುರ, ಬೆಲ್ಗೊನ್, ಸೋಲಾಪುರ, ನಾಂದೇಡ್, ಔರಂಗಾಬಾದ್, ಅಜಂತಾ-ಎಲ್ಲೋರ, ನಾಸಿಕ್, ಪುಣೆಯಲ್ಲಿ ಪ್ರವಾಸ ಮುಗಿಸಿ ಕೊನೆಗೆ ಮುಂಬಾಯಿಗೆ ಹಿಂತಿರುಗತ್ತೆ. ಈ ರೈಲು ಮಹಾರಾಷ್ಟ್ರ ಸರ್ಕಾರ ಹಾಗೂ ರೈಲ್ವೆ ಸಚಿವಾಲಯದ ಸಾಹಸೋದ್ಯಮವಾಗಿದೆ. ಈ ರೈಲು ಪ್ರವಾಸಿ ತಣಗಳನ್ನು ಮುಟ್ಟುವುದರ ಜೊತೆಗೆ ಹಲವಾರು ಸೌಲಭ್ಯಗಳು ಎಂದರೆ ಪಂಚತಾರಾ ಹೋಟೆಲ್, ಎರಡು ರೆಸ್ಟೋರೆಂಟ್ ಮತ್ತು ಬಾರ್, ಸೌನಾ, ವ್ಯಾಪಾರ ಕೇಂದ್ರಗಳನ್ನು ಒಳಗೊಂಡಿದೆ. ರೈಲಿನ ಭೋಗಿಗಳಲ್ಲಿ ಅಳವಡಿಸಲಾಗಿರುವ ವಿಶೇಷ ಸೌಲಭ್ಯಗಳನ್ನು ಚೆನ್ನೈ‌ನ ಸಮಗ್ರ ಕೋಚ್ ಕಾರ್ಖಾನೆ ಉತ್ಪಾದಿಸಿತು. ೨೦೦೪ರಲ್ಲಿ, ಡೆಕ್ಕನ್ ಒಡಿಸ್ಸಿಯ ಕಳಪೆ ಪ್ರತಿಕ್ರಿಯೆಯನ್ನು ಉದಾಹರಿಸಿ ಮಹಾರಾಷ್ಟ್ರದ ಸರ್ಕಾರವು ಅದರ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿತು; ಆದರೆ ಮಾನ್ಸೂನ್ ನಂತರ ಪುನಃ ಪ್ರಾರಂಭವಾಯಿತು. ಪ್ರವಾಸದ ಅವಧಿಯು ೭ ರಾತ್ರಿಗಳಾಗಿದ್ದು, ಪ್ರತಿ ಬುಧವಾರ ಮುಂಬೈ‌ಯಿಂದ ಆರಂಭವಾಯಿತು.

ಸ್ಥಳಗಳು- ಮುಂಬೈ- ಸಿಂಧುದುರ್ಗ- ಗೋವಾ- ಕೊಲ್ಹಾಪುರ- ಔರಂಗಬಾದ್ (ಎಲ್ಲೋರ)- ಜಲ್ಗೊನ್ (ಅಜಂತ)- ನಾಸಿಕ್- ಮುಂಬೈ.

ರಾಯಲ್ ರಾಜಸ್ಥಾನ್ ಆನ್ ವೀಲ್ಸ್

[ಬದಲಾಯಿಸಿ]

El Transcantabrico luxury train from the Luxury Train Club (2367213966)


ಐಷಾರಾಮಿ ರೈಲುಗಳಲ್ಲಿ ಒಂದಾದ ರಾಯಲ್ ರಾಜಸ್ಥಾನ್ ಆನ್ ವೀಲ್ಸ್ ಭಾರತೀಯ ರೈಲ್ವೆಯ ಸಹಾಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ರೈಲು ಪ್ಯಾಲೆಸ್ ಆನ್ ವೀಲ್ಸ್‌ನ ಮಾದರಿಯಲ್ಲಿದ್ದು, ರಾಜಸ್ಥಾನದ ಮಾರ್ಗದಲ್ಲೇ ಚಲಿಸುತ್ತದೆ. ಪ್ರವಾಸಿಗರನ್ನು ರಾಜಸ್ಥಾನದ ಅನೇಕ ಪ್ರಮುಖ ಪ್ರವಾಸಿ, ವನ್ಯಜೀವಿ ಮತ್ತು ಪರಂಪರೆಯ ತಾಣಗಳಿಗೆ ಕರೆದೊಯ್ಯಲಾಗುತ್ತದೆ.

ಇತಿಹಾಸ- ಈ ಐಷಾರಾಮಿ ರೈಲು ಪ್ಯಾಲೆಸ್ ಆನ್ ವೀಲ್ಸ್‌ನ ಯಶಸ್ಸಿನ ನಂತರ ಜನವರಿ ೨೦೦೯ರಲ್ಲಿ ಆರಂಭಿಸಲಾಯಿತು. ಈ ಐಷಾರಾಮಿ ರೈಲು ಸಹ ರಾಜಸ್ಥಾನದ ಮಾರ್ಗದಲ್ಲೆ ಸಂಚರಿಸುತ್ತದೆ.

ಸೌಲಭ್ಯಗಳು-

ಕೋಣೆಗಳು- ರಾಯಲ್ ರಾಜಸ್ಥಾನ್ ಆನ್ ವೀಲ್ಸ್‌ನ ಒಳಗೆ ಆಶ್ರಯವಾಗಿರುವ ೧೪ ಕೋಣೆಗಳಿಗೆ ರಾಜಸ್ಥಾನದ ಹಿಂದಿನ ಕೆಲವು ನಿರ್ಧಿಷ್ಟ ಅರಮನೆಯ ಹೆಸರಿಡಲಾಗಿದೆ. ಆ ಕೋಂಎಗಳು ಹಲವಾರು ವಿಶೇಷ ಸೌಲಭ್ಯಗಳೊಡನೆ ಒಳಗೊಂಡಿವೆ. ಕೆಲವು ಕೋಣೆಗಳ ಹೆಸರುಗಳೆಂದರೆ- ಹವಾ ಮಹಲ್, ಪದ್ಮ ಮಹಲ್, ಕಿಶೋರಿ ಮಹಲ್, ಪೂಲ್ ಮಹಲ್ ಮತ್ತು ಡೀಲಕ್ಸ್ ಭೋಗಿಗೆ ತಾಜ್ ಮಹಲ್.

ಆಹಾರ- ರಾಯಲ್ ರಾಜಸ್ಥಾನ್ ಆನ್ ವೀಲ್ಸ್‌ನಲ್ಲಿ ಶೀಶ್ ಮಹಲ್ ಮತ್ತು ಸ್ವಾರ್ನ್ ಮಹಲ್ ಎನ್ನುವ ಹೆಸರಿನಲ್ಲಿ ಎರಡು ಆಹಾರ ಕಾರುಗಳಿವೆ. ಆದರೆ ಸ್ವಾರ್ನ್ ಮಹಲನ್ನು ಕಂಚು ಮತ್ತು ಚಿನ್ನದ ಥೀಮ್ ಮೂಲಕ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಶೀಶ್ ಮಹಲ್ ರೆಸ್ಟೋರೆಂಟನ್ನು ಅದ್ಭುತ ನೆಲದ ದೀಪಗಳು ಮತ್ತು ಸ್ಪಟಿಕ ಪೆಲ್ಮೆಟ್ಸ್ ಮೂಲಕ ಅಲಂಕರಿಸಲಾಗಿದೆ.

ಸ್ಪಾ ಮತ್ತು ವಿನೋದ- ಇತ್ತೀಚಿಗೆ ಒಂದು ಬ್ಯೂಟಿ ಸಲೂನ್ ಈ ಐಷಾರಾಮಿ ರೈಲಿನ ಸೌಲಭ್ಯಗಳಿಗೆ ಸೇರ್ಪಡೆಯಾಗಿದೆ.

ಪ್ರಯಾಣ- ಈ ರೈಲು ಪ್ರವಾಸಿಗರಿಗೆ ೭ ದಿನ/ ೮ ರಾತ್ರಿಗಳ ಪ್ರಯಾಣವನ್ನು ಒದಗಿಸುತ್ತದೆ. ದಿನ ೧- ರಂದು ನವ ದೆಹಲಿಯ ಸಪ್ದರ್ಜಂಗ್ ರೈಲ್ವೆ ನಿಲ್ದಾಣದಲ್ಲಿ ಆರಂಭವಾಗುತ್ತದೆ, ದಿನ ೨- ಜೋದಪುರ, ದಿನ ೩- ಉದಯಪುರ ಮತ್ತು ಚಿತ್ತುರ್ಗರ್ಹ್, ದಿನ ೪- ರಣಥಂಬೊರ್ ರಾಷ್ಟ್ರೀಯ ಉದ್ಯಾನ ಮತ್ತು ಜೈಪುರ, ದಿನ ೫- ವಾರಣಾಸಿ, ದಿನ ೬- ಸಾರನಾಥ್, ದಿನ ೭- ಆಗ್ರಾ, ದಿನ ೮- ನವ ದೆಹಲಿಗೆ ಹಿಂತಿರುಗುತ್ತಾರೆ. ಕೆಲವು ಪ್ರವಾಸಿಗರ ಆಕರ್ಷಣೆಗಳನ್ನು ಒಳಗೊಂಡಿವೆ ಅವುಗಳೆಂದರೆ ಹವಾ ಮಹಲ್ (ಪ್ಯಾಲೆಸ್ ಆಫ್ ವಿಂಡ್ಸ್), ಮೋತಿ ಮಹಲ್, ಶೀಶ್ ಮಹಲ್, ರಣಥಂಬೊರ್ ರಾಷ್ಟ್ರೀಯ ಉದ್ಯಾನ, ಚಿತ್ತುರ್ಗರ್ಹ್ ಕೋಟೆ, ಜಗ್ ನಿವಾಸ್ (ಲೇಕ್ ಪ್ಯಾಲೆಸ್), ಕಿಯೋಲಾಡಿಯೋ ಘಾನಾ ರಾಷ್ಟ್ರೀಯ ಉದ್ಯಾನ, ಆಗ್ರಾ ಕೋಟೆ ಕೊನೆಗೆ ತಾಜ್ ಮಹಲ್.

ಥಿ ಗೋಲ್ಡನ್ ಚಾರಿಯಟ್

[ಬದಲಾಯಿಸಿ]

GKN Golden Chariot DSC 0730

ಥಿ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲೂಗಳಲ್ಲಿ ಒಂದಾಗಿದೆ. ಈ ರೈಲು ಭಾರತದ ರಾಜ್ಯಗಳಾದ ಕರ್ನಾಟಕ, ಗೋವಾ, ಕೇರಳ, ತಮಿಳುನಾಡು ಮತ್ತು ಪಾಂಡಿಚೇರಿಗೆ ಪ್ರವಾಸವನ್ನು ಒದಗಿಸುತ್ತ್ದೆ, ಪ್ರವಾಸಿಗರ ಆಯ್ಕೆಗೆ ತಕ್ಕಂತೆ. ಈ ರೈಲಿಗೆ ಹಂಪಿಯ ವಿಠ್ಹಲ ದೇವಾಲಯದ ಕಲ್ಲಿನ ರಥದ ಹೆಸರಿಡಲಾಗಿದೆ. ರೈಲಿನಲ್ಲಿರುವ ೧೯ ಭೋಗಿಗಳಿಗೆ ಕೆನ್ನೇರಳೆ ಮತ್ತು ಬಂಗಾರದ ಬಣ್ಣದಿಂದ ರಚಿಸಲಾಗಿದೆ. ಅದು ಆನೆಯ ತಲೆ ಮತ್ತು ಸಿಂಹದ ಶರೀರವನ್ನು ಹೋಲುವಂತಿದೆ. ಈ ರೈಲು ಡೆಕ್ಕನ್ ಒಡಿಸ್ಸಿ ಜೊತೆಗೆ, ಜನಪ್ರಿಯವಾದ ಪ್ಯಾಲೆಸ್ ಆನ್ ವೀಲ್ಸ್‌ನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ರೈಲು ೨೦೧೩ರಲ್ಲಿ, ವರ್ಲ್ಡ್ ಟ್ರಾವೆಲ್ ಅವಾರ್ಡ್ಸ್ನ್‌ಂದ "ಏಷ್ಯಾದ ಪ್ರಮುಖ ಐಷಾರಾಮಿ ರೈಲೂ" ಎನ್ನುವ ಶೀರ್ಷಿಕೆಯನ್ನು ಪಡೆಯಿತು. ಈ ರೈಲನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಢಿ ನಿಗಮ ಮಂಡಳಿ ನಿರ್ವಹಿಸುತ್ತಿದೆ.

ಸೌಲಭ್ಯಗಳು- ಗೋಲ್ಡನ್ ಚಾರಿಯಟ್‌ನ ೧೧ ಭೋಗಿಗಳಲ್ಲಿ ೪೪ ಕೋಣೆಗಳಿವೆ. ಆ ಕೋಣೆಗಳಿಗೆ ಆಳ್ವಿಕೆ ಮಾಡುತ್ತಿರುವ ರಾಜವಂಶಗಳ ಹೆಸರಿಡಲಾಗಿದೆ. ಅವಿಗಳೆಂದರೆ- ಕದಂಬ, ಹೊಯ್ಸಳ, ರಾಷ್ಟ್ರ‌ಕೂಟ, ಗಂಗ, ಚಾಲುಕ್ಯ, ಬಹುಮನಿ, ಆದುಲ್ ಶಾಹಿ, ಸಂಗಮ, ಶಾತವಾಹನ, ಯದುಕುಲ ಮತ್ತು ವಿಜಯನಗರ. ಹಲವಾರು ಸೌಲಭ್ಯಗಳಿವೆ ಅವುಗಳೆಂದರೆ- ಎರಡು ರೆಸ್ಟೋರೆಂಟ್, ಲಾಂಜ್ ಬಾರ್, ಕಾನ್ಫ‌ರೆನ್ಸ್, ಜಿಮ್ ಮತ್ತು ಸ್ಪಾ, ಇಂಟರ್ನೆಟ್ ಸಂಪರ್ಕ ಇದೆ.

ಪ್ರಯಾಣಿಕರು- ಗೋಲ್ಡನ್ ಚಾರಿಯಟ್ ೮೮ ಪ್ರಯಾಣಿಕರಿಗೆ ಅವಕಾಶ ಮಾಡಿಕೊಡುತ್ತದೆ. ರೈಲಿನಲ್ಲಿನ ಬಹುತೇಕ ಪ್ರವಾಸಿಗರು ಅಮೇರಿಕಾ, ಬ್ರಿಟನ್, ಜಪಾನ್, ಫ್ರಾನ್ಸ್ ಮತ್ತು ಜರ್ಮನಿರವರಾಗಿದ್ದರೆ.

ಸ್ಥಳಗಳು- ಗೋಲ್ಡನ್ ಛಾರಿಯಟ್ ಎರಡು ರೂಪುರೇಷೆಗಳನ್ನು ಒದಗಿಸುತ್ತದೆ. ಅವಿಗಳೆಂದರೆ- ಪ್ರೈ‍ಡ್ ಆಫ್ ಥಿ ಸೌತ್ ಮತ್ತು ಸ್ಪೆಂಡರ್ ಆಫ್ ಥಿ ಸೌತ್.

  • ಪ್ರೈಡ್ ಆಫ್ ಥಿ ಸೌತ್-

ಪ್ರೈಡ್ ಆಫ್ ಥಿ ಸೌತ್ ೭ ರಾತ್ರಿ ಮತ್ತು ೮ ದಿನಗಳ ಪ್ರವಾಸವನ್ನು ಒದಗಿಸುತ್ತದೆ. ಆ ಸ್ಥಳಗಳೆಂದರೆ- ದಿನ ೧- ಬೆಂಗಳೂರು, ದಿನ ೨- ಮೈಸೂರು, ದಿನ ೩- ನಾಗರಹೊಳೆ ರಾಷ್ಟ್ರೀಯ ಉದ್ಯಾನ, ದಿನ ೪- ಹಾಸನ, ಕರ್ನಾಟಕ, ಬೇಳೂರು, ಹಳೇಬೀಡು, ದಿನ ೫- ಹೊಸಪೇಟೆ, ಹಂಪಿ, ದಿನ ೬- ಐಹೊಳೆ, ಪಟ್ಟದಕಲ್ಲು, ಬಾದಾಮಿ, ದಿನ ೭- ಗೋವಾ, ದಿನ ೮- ಬೆಂಗಳೂರಿಗೆ ಹಿಂತಿರುಗುತ್ತಾರೆ.

  • ಸ್ಪೆಂಡರ್ ಆಫ್ ಥಿ ಸೌತ್-

ಸ್ಪೆಂಡರ್ ಆಫ್ ಥಿ ಸೌತ್ ಮೂರು ದಕ್ಷಿಣ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ಒಳಗೊಂಡಿದೆ. ೭ ರಾತ್ರಿ ಹಾಗೂ ೮ ದಿನಗಳ ಪ್ರವಾಸವನ್ನು ಒದಗಿಸುತ್ತದೆ. ಸ್ಥಳಗಳು- ದಿನ ೧- ಬೆಂಗಳೂರು, ದಿನ ೨- ಚೆನ್ನೈ, ದಿನ ೩- ಪಾಂಡಿಚೇರಿ, ದಿನ ೪- ತಂಜಾವೂರು, ದಿನ ೫- ಮದುರೈ, ದಿನ ೬- ತಿರುವನಂತಪುರಂ, ದಿನ ೭- ಅಲೆಪ್ಪಿ, ಕೊಚ್ಚಿ, ದಿನ ೮- ಬೆಂಗಳೂರಿಗೆ ಹಿಂತಿರುಗುತ್ತಾರೆ.


ಹೊರಗಿನ ಕೊಂಡಿಗಳು

[ಬದಲಾಯಿಸಿ]


ಉಲ್ಲೇಖನಗಳು

[ಬದಲಾಯಿಸಿ]