ವಿಕಿಪೀಡಿಯ:ಐದು ಆಧಾರ ಸ್ತಂಭಗಳು
ಗೋಚರ
ವಿಕಿಪೀಡಿಯ ಮೂಲಭೂತ ತತ್ವಗಳನ್ನು ಐದು "ಆಧಾರ ಸ್ತಂಭಗಳಾಗಿ" ಸಂಕ್ಷೇಪಿಸಬಹುದು.
ವಿಕಿಪೀಡಿಯ ಒಂದು ವಿಶ್ವಕೋಶ:
ವಿಕಿಪೀಡಿಯವು ಸಾಮಾನ್ಯ ಮತ್ತು ವಿಶೇಷ ವಿಶ್ವಕೋಶಗಳ, ಗೆಜೆಟಿಯರ್'ಗಳ ಹಲವು ವೈಶಿಷ್ಟ್ಯಗಳ ಸಂಯೋಜನೆಯನ್ನು ಹೊಂದಿರುತ್ತದೆ. ವಿಕಿಪೀಡಿಯಾವು ಪ್ರಚಾರತಾಣವಲ್ಲ, ಜಾಹೀರಾತು ವೇದಿಕೆಯಲ್ಲ, ಸಾಮಾಜಿಕ ಜಾಲತಾಣವಲ್ಲ, ಪ್ರತಿಷ್ಟೆಯ ಪ್ರಕಟಣೆಯಲ್ಲ, ಅರಾಜಕತೆ ಅಥವಾ ಪ್ರಜಾಪ್ರಭುತ್ವದ ಪ್ರಯೋಗಶಾಲೆಯಲ್ಲ, ಅವ್ಯವಸ್ಥಿತ ಮಾಹಿತಿ ಸಂಗ್ರಹಣೆಯಲ್ಲ, ಅಂತರಜಾಲ ಕೈಪಿಡಿಯಲ್ಲ. ವಿಕಿಪೀಡಿಯಾವು ನಿಘಂಟು ಅಥವಾ ಪದಕೋಶವಲ್ಲ, ಸುದ್ದಿಪತ್ರಿಕೆಯಲ್ಲ, ಸಂಪನ್ಮೂಲ ದಾಖಲೆಗಳ ಶೇಖರಣೆಯ ತಾಣವಲ್ಲ.
ವಿಕಿಪೀಡಿಯಾ ಒಂದು ತಟಸ್ಥ ದೃಷ್ಟಿಕೋನದಿಂದ ಬರೆಯಲಾಗಿದೆ:
ವಿಕಿಪೀಡಿಯಾದ ಲೇಖನಗಳು ನಿಷ್ಪಕ್ಷವಾಗಿರಲು ಮತ್ತು ಎಲ್ಲಾ ದೃಷ್ಟಿಕೋನಗಳನ್ನೂ ವಿವರಸಿ ಅದಕ್ಕ ತಕ್ಕ ಪ್ರಾಮುಖ್ಯವನ್ನು ಒದಗಿಸಲು ಪ್ರಯತ್ನಿಸಲಾಗುತ್ತದೆ. ಯಾವುದನ್ನೂ ಸಮರ್ಥನೆ ಮಾಡದಂತೆ, ಮಾಹಿತಿಗಳನ್ನು ಮತ್ತು ವಿದ್ಯಮಾನಗಳನ್ನು ಕಲೆಹಾಕಲು ಪ್ರಯತ್ನಿಸಲಾಗುತ್ತದೆ ಹೊರತು ಚರ್ಚೆ ಮಾಡುವುದಿಲ್ಲ. ಹಲವಾರು ಕಡೆಗಳಲ್ಲಿ ಒಂದು ದೃಷ್ಟಿಕೋನವು ಮಾತ್ರ ಹೆಚ್ಚು ವ್ಯವಸ್ಥಿತವಾಗಿ ಪ್ರಚಲಿತದಲ್ಲಿರಬಹುದು, ಮತ್ತೊಂದೆಡೆ ಹಲವಾರು ದೃಷ್ಟಿಕೋನಗಳನ್ನು ನಿಖರತೆಯಿಂದ ಪ್ರಸ್ತುತಪಡಿಸಿ ವಿವರಿಸಲಾಗುವುದು. ಯಾವುದನ್ನೂ "ಸತ್ಯ" ಅಥವಾ "ಅತ್ಯುತ್ತಮ ದೃಷ್ಟಿಕೋನ" ಎಂದು ಗುರುತಿಸುವುದಿಲ್ಲ. ಎಲ್ಲಾ ಲೇಖನಗಳೂ ಸಹ ಪರೀಶೀಲನಾರ್ಹ ನಿಖರತೆಯೊಂದಿಗೆ, ಉಲ್ಲೇಖಗಳನ್ನು ಆಧರಿಸಿ, ವಿಶ್ವಾಸಾರ್ಹ ಮೂಲಗಳನ್ನು ಹೊಂದಲು ಮಹತ್ವ ನೀಡಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ಜೀವಂತ ಜನರ ಬಗ್ಗೆ ಅಥವಾ ವಿವಾದಿತ ವಿಷಯಗಳ ಬಗ್ಗೆ ಬರೆಯುವಾಗ ಇದು ಬಹಳ ಮುಖ್ಯವಾಗುತ್ತದೆ. ಸಂಪಾದಕರ ವೈಯಕ್ತಿಕ ಅನುಭವಗಳು, ನಿಲುವುಗಳು ಅಥವಾ ವ್ಯಾಖ್ಯಾನಗಳಿಗೆ ವಿಕಿಪೀಡಿಯಾದಲ್ಲಿ ಅವಕಾಶವಿಲ್ಲ.
ವಿಕಿಪೀಡಿಯದಲ್ಲಿನ ವಿಷಯಗಳು ಯಾರಾದರೂ ಬಳಸಲು, ಸಂಪಾದಿಸಲು ಮತ್ತು ವಿತರಿಸಲು ಮುಕ್ತವಾಗಿರುತ್ತವೆ: ಎಲ್ಲಾ ಸಂಪಾದಕರು ಸಹ ತಮ್ಮ ಕೊಡುಗೆಯನ್ನು ಉಚಿತ ಪರವಾನಗಿ ಅಡಿಯಲ್ಲಿ ಸಾರ್ವಜನಿಕ ಬಳಕೆಗೆ ಕೊಡುತ್ತಾರೆ. ಯಾವ ಲೇಖನಕ್ಕೂ ಯಾವ ಸಂಪಾದಕರು ಮಾಲಿಕರಾಗಿರುವುದಿಲ್ಲ. ಲೇಖನಗಳನ್ನು ತಿದ್ದುಪಡಿ ಮಾಡಬಹುದಾಗಿರುತ್ತದೆ ಮತ್ತು ಹಂಚಬಹುದಾಗಿರುತ್ತದೆ. ಹಕ್ಕುಸ್ವಾಮ್ಯಗಳನ್ನು ಗೌರವಿಸಬೇಕು ಮತ್ತು ಯಾವ ಮೂಲಗಳಿಂದಲೂ ಕೃತಿಚೌರ್ಯ ಮಾಡಬಾರದು. ಹಕ್ಕಮುಕ್ತವಲ್ಲದ ಕೆಲವು ಮಾಧ್ಯಮಗಳನ್ನು ಸದ್ಬಳಕೆಗಾಗಿ ಕೆಲವು ಸಂದರ್ಭಗಳಲ್ಲಿ ಬಳಸಿಕೊಳ್ಳಲು ಅವಕಾಶವಿರುತ್ತದೆ. ಆದರೆ ಸಂಪಾದಕರು ಅದನ್ನು ಮೊದಲು ಹಕ್ಕುಮುಕ್ತ ಮೂಲಗಳಿಂದ ಪಡೆಯಲು ಪ್ರಯತ್ನಿಸಬೇಕು.
ಸಂಪಾದಕರು ಪರಸ್ಪರ ಗೌರವ ಮತ್ತು ಸೌಜನ್ಯದಿಂದ ನಡೆದುಕೊಳ್ಳಬೇಕು: ಸಹಸಂಪಾದಕರೊಂದಿಗೆ ಒಮ್ಮತೆ ಇಲ್ಲದಿದ್ದಾಗಲೂ ಸಹ ಗೌರವದಿಂದ ನಡೆದುಕೊಳ್ಳಬೇಕು. ವಿಕಿಪೀಡಿಯ ಶಿಷ್ಟಾಚಾರವನ್ನು ಪಾಲಿಸಿ, ವೈಯಕ್ತಿಕ ದಾಳಿ ಅಥವಾ ಸಂಪಾದನಾ ಕದನದಲ್ಲಿ ತೊಡಗಬಾರದು. ಎಲ್ಲರ ಅಭಿಪ್ರಾಯವನ್ನು ಕೇಳಿ ಮತ್ತು ಯಾವುದೇ ಅಂಶಗಳ ಪ್ರಸ್ತುತಿಗೆ ಅವಕಾಶವಿಲ್ಲದಂತೆ ನಡೆದುಕೊಳ್ಳಬಾರದು. ಇತರರ ಬಗ್ಗೆ ಒಳ್ಳೆಯ ನಂಬಿಕೆ ಹೊಂದಿ. ಹೊಸಬರನ್ನು ಸ್ವಾಗತಿಸಿ ಮತ್ತು ಒಳ್ಳೆಯ ವಾತಾವರಣ ಕಲ್ಪಿಸಿ. ಏನಾದರೂ ವಿವಾದಗಳಾದಾಗ ಅದರ ಬಗ್ಗೆ ಸಂಬಂಧಿಸಿದ ಚರ್ಚಾಪುಟಗಳಲ್ಲಿ ಸಮಾಧಾನದಿಂದ ಚರ್ಚೆಮಾಡಿ, ವಿವಾದ ಪರಿಹಾರ ಪ್ರಕ್ರಿಯೆಗಳನ್ನು ಪಾಲಿಸಿ.
ವಿಕಿಪೀಡಿಯದಲ್ಲಿ ಯಾವುದೇ ಶಾಶ್ವತ ನಿಯಮಗಳಿಲ್ಲ: ವಿಕಿಪೀಡಿಯಾವು ಹೊಂದಿದೆ. ಆದರೆ ಅವು ಯಾವುವೂ ಶಾಶ್ವತವಲ್ಲ. ಅವುಗಳಲ್ಲಿನ ವಿಷಯ ಮತ್ತು ಅರ್ಥವಿವರಣೆಯು ಕಾಲಕ್ರಮೇಣ ವಿಕಸನಗೊಳ್ಳಬಹುದು. ಪದಶಃ ಅರ್ಥಗಳಿಗಿಂತ ಅವುಗಳಲ್ಲಿನ ಮೂಲತತ್ವ ಮತ್ತು ಸ್ಪೂರ್ತಿ ಮುಖ್ಯ. ದಿಟ್ಟವಾಗಿ ಸ್ಪುಟವಾಗಿ ಇರಿ ಆದರೆ ಭಂಡತನ ಬೇಡ. ಯಾವುದೇ ತಪ್ಪುಗಳಾದಾಗ ಎದೆಗುಂದುವುದು ಬೇಡ, ಏಕೆಂದರೆ ಅವುಗಳನ್ನು ಸರಿಪಡಿಸಬಹುದು ಮತ್ತು ಎಲ್ಲಾ ಹಳೆಯ ಆವೃತ್ತಿಗಳು ಕೂಡ ಉಳಿಸಲ್ಪಟ್ಟಿರುತ್ತವೆ.