ವಿಷಯಕ್ಕೆ ಹೋಗು

ಇಗ್ನಾಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂತ ಇಗ್ನಾಸಿ

ಸಂತ ಇಗ್ನಾಸಿ ಮತ್ತು ಭಾರತ|ಸಂತ ಇಗ್ನಾಸಿ ಲೊಯೋಲರವರು ೧೪೯೧ ರಲ್ಲಿ ಸ್ಪೇಯ್ನ್ ದೇಶದಲ್ಲಿ ಗಿಬುಸ್ಕು ಪ್ರಾಂತ್ಯದ ಲೊಯೋಲ ಎಂಬ ಮನೆತನದಲ್ಲಿ ಹುಟ್ಟಿದರು. ಬಾಲ್ಯದಲ್ಲಿ ಇವರನ್ನು 'ಇನಿಗೊ' ಎಂದು ಕರೆಯುತಿದ್ದರು.ಇಗ್ನಾಸಿಯವರು ಸ್ಪೇಯ್ನ್ ದೇಶದ ರಾಜರ ಆಸ್ತಾನದಲ್ಲಿ ಬೆಳೆದರು. ಇವರ ತಂದೆ ಬೆಲ್ತ್ರನ್ ಹಾಗು ತಾಯಿ ಮರೀನ. ೧೫೧೭ ರಲ್ಲಿ ಇಗ್ನಾಸಿಯವರು ರಾಜ ಪರಿವಾರವನ್ನು ಬಿಟ್ಟು ಸೇನೆಗೆ ಸೇರಿದರು. ಪ್ಯಾಂಪಲೂನ ಎಂಬಲ್ಲಿ ೧೫೨೧ ರಲ್ಲಿ, ಫ಼್ರೆಂಚರ ವಿರುದ್ದ ನಡೆದ ಕಾಳಗದಲ್ಲಿ ಇವರು ತೀವ್ರವಾಗಿ ಗಾಯಗೊಂಡರು. ಫಿರಂಗಿಯ ಗುಂಡು ಅವರ ಬಲಕಾಲಿಗೆ ತಗುಲಿ ಅವರ ಇದೀ ಜೀವನವನ್ನೆ ಬದಲಾಯಿಸಿತು. ಅವರ ಮುರಿದ ಕಾಲನ್ನು ಸರಿಪಡಿಸಲು ಎರಡು ಬಾರಿ ಅನಸ್ತೀಸಿಯ ಇಲ್ಲದೆ ಶಸ್ತಚಿಕಿತ್ಸೆಗೆ ಒಳಪಡಿಸಲಾಯಿತು.[]

ಚರಿತ್ರೆ

[ಬದಲಾಯಿಸಿ]

ಇಗ್ನಾಸಿಯವರ ಚೇತರಿಕೆಯ ಅವದಿಯಲ್ಲಿ ಸಮಯವನ್ನು ಕಳೆಯಲೆಂದು ಏನಾದರು ಕೊಡಿರೆಂದು ಅವರು ಕೇಳಿದಾಗ, ಎರಡು ಪುಸ್ತಕಗಳನ್ನು ಅವರಿಗೆ ಕೊಡಲಾಯಿತು - "ಕ್ರಿಸ್ತನ ಜೀವನ ಚರಿತ್ರೆ ಹಾಗು ಸಂತರ ಜೀವನ ಚರಿತ್ರೆ", ಈ ಎರಡು ಪುಸ್ತಕಗಳು ಇಗ್ನಾಸಿಯವರ ಜೀವನಕ್ಕೆ ಒಂದು ಹೊಸ ತಿರುವನ್ನು ನೀಡಿದವು. ಇಗ್ನಾಸಿಯವರು ಪರಿವರ್ತನೆಗೊಂಡು ಹಾಣ, ಆಸ್ತಿಪಾಸ್ತಿಯನ್ನು ಬಿಟ್ಟು ರೋಮ್ ನಗರಕ್ಕೆ ತೀಥಯಾತ್ರೆಗೆಂದು ಹೊರಟರು.ಈ ಯತ್ರೆಯ ಸಮಯದಲ್ಲಿ ಅವರು ತಮ್ಮ ಶ್ರೀಮಂತಿಕೆಯ ಬಟ್ಟೆ ಹಾಗು ಖಡ್ಗವನ್ನು ಬದಿಗಿಟ್ಟು ತಿರುಕನ ಬಟ್ಟೆಯನ್ನು ದರಿಸಿದರು. ಅನಂತರ ಹತ್ತು ತಿಂಗಳು ಮನ್ರೇಸ ಎಂಬ ಗುಹೆಯಲ್ಲಿ ದೆಹದಂಡನೆ ಹಾಗುಇ ಪ್ರಾಥನೆಯಲ್ಲಿ ಕಳೆದರು.ಅಲ್ಲಿ ಅವರು ಅಪೂರ್ವ ಆಧ್ಯಾತ್ಮಿಕ ಅನುಭವಕ್ಕೆ ಒಳಗಾದರು.ಇದರ ಫಲವಾಗಿ ಅವರು [http://"ಆಧ್ಯಾತ್ಮಿಕ%20ಸಾಧನ" "ಆಧ್ಯಾತ್ಮಿಕ ಸಾಧನ"] ಎಂಬ ಕೈಪಿಡಿಯನ್ನು ಬರೆದರು. ಸಂತ ಇಗ್ನಾಸಿಯವರು ನಂತರ ಪವಿತ್ರ ಭೂಮಿ ತಲುಪಿ ಅಲ್ಲಿ ಜೀವನ ನಡೆಸುವುದೆಂದು ನಿರ್ಧರಿಸಿದರು. ಆದರೆ ದೇವರ ಇಚ್ಚೆ ಅದಾಗಿರಲಿಲ್ಲ. ಆದಕಾರಣ ಅವರು ಪುನಃ ಸ್ಪೇಯ್ನ್ ದೇಶಕ್ಕೆ ಮರಳಿ ಬಂದು ತಮ್ಮ ವಿಧ್ಯಾಭ್ಯಾಸದಲ್ಲಿ ತೊಡಗಿದರು. ಈ ಸಮಯದಲ್ಲಿ ದೇವರು ತನ್ನನ್ನು ಶಾಲಾ

ಜೆಸ್ವಿತ್ ಸಂಸ್ತೆ ಸ್ತಾಪನೆ

[ಬದಲಾಯಿಸಿ]

ಶಿಕ್ಶಕನಂತೆ ಪ್ರತಿಯೊಂದು ಸಮಯದಲ್ಲಿ ಕೈ ಹಿಡಿದು ನಡೆಸಿದಂತೆ ಅವರಿಗೆ ಭಾಸವಾಯಿತು.ಇಗ್ನಾಸಿಯವರು ತಮ್ಮ ಶಿಕ್ಶಣದ ಜೊತೆಗೆ ಬಡಬಗ್ಗರಿಗೆ ಹಾಗು ವ್ಯಾಧಿಗ್ರಸ್ಥರಿಗೆ ಸಹಾಯಮಾಡಿದರು. ತಾಮ್ಮ 'ಆಧ್ಯತ್ಮಿಕ ಸಾಧನ' ದ ಮೂಲಕ ಅನೇಕ ವಿಧ್ಯಾರ್ಥಿಹಗಳಿಗೆ ದೇವರೆಡೆಗೆ ಆಕರ್ಶಿಸಿದರು. ಹೀಗೆ ಹಲವಾರು ಮಂದಿ ಇಗ್ನಾಸಿಯವರ ಜೊತೆ ಸೇರಿ ಕ್ರಿಸ್ತನ ಪ್ರಚಾರ ಕಾರ್ಯದಲ್ಲಿ ತೊಡಗಿದರು. ಈ ಒಂದು ಸಂಗವು ಕೊನೆಗೆ ಯೇಸು ಸಭೆ ಎಂಬ ಸಂಸ್ಥೆಯಾಗಿ ಪರಿಣಮಿಸಿತು. ಈ ಸಭೆಯ ಸದಸ್ಯರು ತಾವು ಯೇಸುವಿನ ಗೆಳೆಯರೆಂದು ಎನಿಸಿಕೊಂಡರು.

ಇಗ್ನಾಸಿ ಸಭೆಯ ಸಂತರು

ಸಂತ ಇಗ್ನಾಸಿಯವರು ಏಸು ಸಭೆಯನ್ನು ೧೫೪೦ ಸೆಪ್ತೆಮ್ಬರ್ ೨೭ ರಂದು ಸ್ಥಾಪಿಸಿದರು. ಆಗಿನ ಜಗತ್ಗುರು ತ್ರತೀಯ ಪಾಲ್ ರವರು ಈ ಸಭೆಯನ್ನು "ರೆಗಿಮಿನಿ ಮಿಲಿತಾಂತಿಸ್ ಎಕ್ಲೆಸಿಯ" ಎಂಬ ಶಾಸನದ ಮೂಲಕ ಅನುಮೊದಿಸಿದರು. ೧೫೪೧ ರಲ್ಲಿ ಯೇಸು ಸಭೆಯ ಇಬ್ನಾಸಿಯವರನ್ನು ತನ್ನ ಶ್ರೆಷ್ತ ಮೇಲಾಧಿಕಾರಿಯಾಗಿ ಆಯ್ಕೆಮಾಡಿತು. ಇಗ್ನಾಸಿಯವರು ತಮ್ಮ ಸೇವೆ, ಪ್ರಾರ್ಥನೆ ಹಾಗು ಪರಾನಮರಿಕೆಯ ಮೂಲಕ ತಮ್ಮ ಸಭೆಗೆ ಒಂದು ಒಳ್ಳೆಯ ಪ್ರಾರಂಭವನ್ನು ನೀಡಿದರು. ಹೀಗೆ ಯೇಸು ಸಭೆಯು ಸಂತ ಇಗ್ನಾಸಿಯವರ ನೇತ್ರುತ್ವದಲ್ಲಿ ಹಲವು ದೇಶಗಳಿಗೆ ತಲುಪಿ ಹಲವಾರು ಜನರನ್ನು ಕ್ರಿಸ್ಥನೆಡೆಗ ಸೆಳೆಯಿತು. ೧೫೫೬ ಜುಲಾಯಿ ೩೧ ರಲ್ಲಿ ಇಗ್ನಾಸಿಯವರು, ತಮ್ಮ ೬೬ ವರುಶದ ಪ್ರಾಪಂಚಿಕ ಪ್ರಯಾಣವನ್ನು ಮುಗಿಸಿ, ಪರಮಾತ್ಮನೊಡನೆ ಒಂದಾದರು. ಇವರ ಮರಣದ ಸಮಯದಲ್ಲಿ ಸುಮಾರು ಒಂದು ಸಾವಿರ ಯೇಸುಸಭಾ ಸದಸ್ಯರು ಧರ್ಮಸಭೆಯಲ್ಲಿ ಸೇವೆ ಸಲ್ಲಿಸುತಿದ್ದರು.

ಉಲ್ಲೇಖ

[ಬದಲಾಯಿಸಿ]
  1. http://www.ignatianspirituality.com/ignatian-voices/st-ignatius-loyola
"https://kn.wikipedia.org/w/index.php?title=ಇಗ್ನಾಸಿ&oldid=1261249" ಇಂದ ಪಡೆಯಲ್ಪಟ್ಟಿದೆ