ಗೀತಾ ವಿಶ್ವನಾಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೀತಾ ವಿಶ್ವನಾಥ್,[೧] ಮುಂಬಯಿನಗರದ ಉತ್ತಮ ರಂಗನಿರ್ದೇಶಕಿ, ಅಂತಾರಾಷ್ಟ್ರೀಯ ಖ್ಯಾತಿಯ ಭರತನಾಟ್ಯಪಟು, ಬರಹಗಾರ್ತಿ, ಮತ್ತು ಸಮಾಜಸೇವಕಿ ಎಂದು ಗುರುತಿಸಿಕೊಂಡಿದ್ದರು. ಅವರು ಮೈಸೂರ್ ಅಸೋಸಿಯೇಷನ್, ಮುಂಬಯಿ ನ ಕಲಾವಿಭಾಗದ ಸಕ್ರಿಯ ಸದಸ್ಯೆಯಾಗಿ ದುಡಿದರು. ಹಲವಾರು ವರ್ಷಗಳ ಕಾಲ ವಾಸ್ತ್ಯವ್ಯದ ಬಳಿಕ ಬೆಂಗಳೂರಿಗೆ ಹೋದರು.

ಜನನ,ಬಾಲ್ಯ[ಬದಲಾಯಿಸಿ]

'ಗೀತ,' ಕಮಲಮ್ಮ ರಾಮರಾಯರ ಪ್ರೀತಿಯ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಚಿಕ್ಕಂದಿನಲ್ಲಿ ತಂದೆತಾಯಿಗಳಿಗೆ ಸಂಗೀತದಲ್ಲಿ ವಿಶೇಷ ಆಸಕ್ತಿಯಿದ್ದದ್ದರಿಂದ ಬಾಲಕಿ ಗೀತಾ ಸಂಗೀತದಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿರು. ಪಿಟೀಲು ವಾದ್ಯವನ್ನು ಅವರು ಬಹಳವಾಗಿಪ್ರೀತಿಸುತ್ತಿದ್ದರು. ೮ ನೆಯ ವಯಸ್ಸಿನಲ್ಲಿ ಆಚಾರ್ಯ ಕೌಶಿಕ್ [೨] ರವರಲ್ಲಿ ಭರತನಾಟ್ಯವನ್ನು ಕಲಿತು ಅಭ್ಯಾಸ ಮಾಡಿದರು. ಶಿಸ್ತಿನ ಗುರುವಾಗಿದ್ದ ಗುರುಗಳ ಬಳಿ ಅಪಾರ ನಿಷ್ಠೆಯಿಂದ ಕಲಿತರು. ಗುರುಗಳ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿಯಿತ್ತು.

ಮದುವೆ[ಬದಲಾಯಿಸಿ]

೧೯೬೦ ರಲ್ಲಿ ವರದರಾಜನ್, ಶ್ಯಾಮಲಾಂಬ ಎಂಬ ದಂಪತಿಗಳ ಪುತ್ರ ವಿಶ್ವನಾಥ್ (ಬಂಡು) ಎಂಬ ಯುವಕನನ್ನು ಮದುವೆಯಾಗಿ ಬೊಂಬಾಯಿಗೆ ಪಾದಾರ್ಪಣೆಮಾಡಿದರು. ಗೀತಾ ವಿಶ್ವನಾಥ್, ವರದರಾಜ ದಂಪತಿಗಳ ಎರಡನೆಯ ಸೊಸೆ. ಮಾವ, ಎಚ್.ಸಿ.ಸಿ.ಕಂಪೆನಿಯಲ್ಲಿ (Hindustan Construction Company) ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು. ಬೊಂಬಾಯಿನ ಅತಿ ಗಣ್ಯವ್ಯಕ್ತಿಗಳಲ್ಲೊಬ್ಬರಾಗಿದ್ದರು. ಮೈಸೂರ್ ಅಸೋಸಿಯೇಷನ್ ನ ಹಿರಿಯ ಸದಸ್ಯರೂ ಹಾಗೂ ಅಧ್ಯಕ್ಷರೂ ಆಗಿದ್ದ ವರದರಾಜನ್, ಶ್ಯಾಮಲಾಂಬ ದಂಪತಿಗಳು ಮೈಸೂರು ಅಸೋಸಿಯೇಷನ್ ಮತ್ತು ನ್ಯಾಷನಲ್ ಕನ್ನಡಶಾಲೆಗೆ ಉದಾರ ದಾನಮಾಡಿದರು. ಪತಿ ವಿಶ್ವನಾಥ್, ಹಾಗೂ ಪಾರಿವಾರದ ಸದಸ್ಯರ ಪ್ರೋತ್ಸಾಹದಾಯಕ ವಾತಾವರಣದಲ್ಲಿ ಅವರ ಕಲೆ ಇನ್ನಷ್ಟು ಪುಟಗೊಂಡು ಸರ್ವತೋಮುಖವಾಗಿ ಬೆಳೆಯಿತು. ಗೀತಾ ವಿಶ್ವನಾಥ್ ದಂಪತಿಗಳಿಗೆ 'ಶಾರ್ವರಿ, 'ಶೃತ' ಎಂಬ ಇಬ್ಬರು ಮಕ್ಕಳು. ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಜೊತೆಗೆ, ಕನ್ನಡ ಮತ್ತು ರಾಷ್ಟ್ರದ ಹಲವು ಭಾಷೆಗಳನ್ನು ಕಲಿಸಿದರು. ಗೀತಾರವರಿಗೆ ಸಂಸ್ಕೃತ ಹಾಗೂ ವೇದಾಂತದ ಅಧ್ಯಯನದಲ್ಲಿ ಅಪಾರ ಆಸಕ್ತಿಯಿತ್ತು. ೧೯೬೪-೬೫ ರಲ್ಲಿ ಮುಂಬಯಿನಗರದ ವಡಾಲ ಜಿಲ್ಲೆಯ, ಕನ್ನಡ ಶಾಲೆಯಲ್ಲಿ ಆಯೋಜಿಸಲಾಗಿದ್ದ 'ಕನ್ನಡ ಸಾಹಿತ್ಯ ಸಮ್ಮೇಳ'ನದಲ್ಲಿ ದುಡಿದಿದ್ದರು. ಬರವಣಿಗೆಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ೩ ಕೃತಿಗಳನ್ನು ರಚಿಸಿದ್ದಾರೆ.

  • ಎಲೆಮರೆಯ ಹಣ್ಣುಗಳು
  • ಮಹಿಳೆಯರಲ್ಲಿ ಮನೋವ್ಯಾಧಿ
  • ನಾಟ್ಯಗುರು ಕೌಶಿಕ

ನಾಟಕ ರಚನೆ ಮತ್ತು ದಿಗ್ದರ್ಶನ[ಬದಲಾಯಿಸಿ]

೫ ನಾಟಕಗಳನ್ನು ರಚಿಸಿದ್ದಾರೆ :

  • ಸೂತ್ರದ ಗೊಂಬೆ
  • ಕೂಪಮಂಡೂಕ
  • ನಳನೋ ನಕ್ಷತ್ರಿಕನೋ
  • ವಿದ್ಯಾಭ್ಯಾಸ
  • ದೇವನೆಲ್ಲಿಹನೋ

ನೃತ್ಯಾಂಗನೆಯಾಗಿ[ಬದಲಾಯಿಸಿ]

'ಗೀತಾ ಸಂಯೋಜಿಸಿ ನಿರ್ದೇಶಿಸಿದ ನೃತ್ಯ ನಾಟಕಗಳು ಮುಂಬಯಿನಗರವಲ್ಲದೆ, ಬೆಂಗಳೂರಿನಲ್ಲೂ ಜನಪ್ರಿಯವಾದವು. ಅವುಗಳು :

  1. ಅಂತಃಪುರಗೀತೆಗಳು
  2. ಕೃಷ್ಣಾಯ ತುಭ್ಯಂ
  3. ಕೃಷ್ಣ ಪಾರಿಜಾತ
  4. ಭಜಗೋವಿಂದಂ
  5. ಕೋಳೂರುಕೊಡಗೂಸು
  6. ಶ್ಯಾಮಲಾದಂಡಕಂ

ಸಮಾಜ ಸೇವಕಿಯಾಗಿ[ಬದಲಾಯಿಸಿ]

  • ಮಹಿಳಾಮಂಡಲದಲ್ಲಿ ಬಡ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಶ್ರಮಿಸಿದರು. ಮಹಿಳಾಮಂಡಲಕ್ಕೆ ಹಣಕೂಡಿಸಲು ಮುಂಬಯಿನ ಪ್ರತಿಷ್ಠಿತ ಶಣ್ಮುಖಾನಂದ ಸಭಾಗೃಹದಲ್ಲಿ ’ಶ್ರೀಕೃಷ್ಣ ಪಾರಿಜಾತ ನೃತ್ಯ ರೂಪಕ'ವನ್ನು ಆಡಿದ್ದರು.
  • ಕೆ.ಕೆ.ಸುವರ್ಣರ 'ತನುನಿನ್ನದು ಮನನಿನ್ನದು' ನಾಟಕದಲ್ಲಿ ಅಭಿನಯಿಸಿದ್ದರು.
  • ಡಿಜಿಯವರ,'ಅಂತಃಪುರಗೀತ ನಾಟಕ'ದಲ್ಲಿ ಒಂದೊಂದುನುಡಿಗೆ ಬೇಲೂರಿನ ಎಲ್ಲಾ ಶಿಲಾಬಾಲಕಿಯರನ್ನೂ ಅಳವಡಿಸಿದ್ದರು. ಸೂತ್ರದ ಗೊಂಬೆನಾಟಕವನ್ನೂ ಅಚ್ಚುಕಟ್ಟಾಗಿ ನಿರ್ದೇಶಿಸಿದ್ದರು.

ನಿಧನ[ಬದಲಾಯಿಸಿ]

ಪತಿ ವಿಶ್ವನಾಥ, ಮರಣಿಸಿದ ಬಳಿಕ ಗೀತಾ ವಿಶ್ವನಾಥ್, ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಆಮೇಲೆ ಅವರು, 'ಸಿಂಗಪುರ'ದಲ್ಲಿ ಮಗಳು ಶಾರ್ವರಿ ಮನೆಯಲ್ಲಿ ವಾಸ್ತವ್ಯಹೂಡಿದ್ದರು. ಮೇ,೨೪ ರಂದು ಹೃದಯಾಘಾತದಿಂದ ನಿಧನರಾದರು.[೩]

ಸಂತಾಪ ಸೂಚಕ ಸಭೆ[ಬದಲಾಯಿಸಿ]

ಮುಂಬಯಿನಗರದ ಮೈಸೂರ್ ಅಸೋಸಿಯೇಷನ್ ನಲ್ಲಿ ೩೦,ಮೇ,೦೧೫ ರಂದು, ಸಾಯಂಕಾಲ, ಸಂತಾಪಸೂಚಕ ಸಭೆಯನ್ನು ಆಯೋಜಿಸಲಾಗಿದ್ದು, ದಿವಂಗತ ಶ್ರೀಮತಿ. ಗೀತಾ ವಿಶ್ವನಾಥ್ ರವರಿಗೆ ನುಡಿನಮನಗಳನ್ನು ಸಲ್ಲಿಸಲಾಯಿತು.[೪]

ಉಲ್ಲೇಖಗಳು[ಬದಲಾಯಿಸಿ]

  1. 'ನೇಸರು', ಜೂನ್,೨೦೧೫, ಪುಟ-೭,'ನಾಕಂಡ ಶ್ರೀಮತಿ.ಗೀತಾ ವಿಶ್ವನಾಥ್-ಡಾ.ಬಿ.ಆರ್.ಮಂಜುನಾಥ್'
  2. ನೂಪುರ, ಭ್ರಮರ(ರಿ),'ಸಾದರ ಸ್ವೀಕಾರ ಮತ್ತು ನಿರ್ದೇಶಕಿಯಾಗಿ : ಭರತನಾಟ್ಯ ಪ್ರವೀಣ,ನಾಟ್ಯಾಚಾರ್ಯ,ಕೌಶಿಕ್ (ನೆನಪಿನ ಹೊನಲು)-ಲೇಖಕಿ: ಗೀತಾ ವಿಶ್ವನಾಥ್
  3. "Udayavani, 29-05-2015, ಮೈಸೂರು ಅಸೋಸಿಯೇಶನ್‌ ಸದಸ್ಯೆ, ಕಲಾವಿದೆ ಗೀತಾ ವಿಶ್ವನಾಥ್‌ ನಿಧನ". Archived from the original on 2016-03-04. Retrieved 2015-06-17.
  4. 'ಗೀತಾ ವಿಶ್ವನಾಥ್ ರಿಗೆ, ಭಾವಪೂರ್ಣ ಶ್ರದ್ಧಾಂಜಲಿ',ನೇಸರು, ಪುಟ.೨