ಎಲೆಕ್ಟ್ರಿಕ್ ಫ್ಯೂಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಲೆಕ್ಟ್ರಿಕ್ ಫ್ಯೂಸ್

ವಿದ್ಯುತ್ ಹರಿಯುತ್ತಿರುವ ಎರಡು ತಂತಿಗಳು ಒಂದಕ್ಕೊಂದು ತಾಗಿದಾಗ, ವಿದ್ಯುಚ್ಛಕ್ತಿಯ ತಂತಿಗಳಲ್ಲಿ ವಿದ್ಯುತ್ ರಭಸವಾಗಿ ಹರಿಯುತ್ತದೆ. ಆಗ ಆ ತಂತಿಗಳು ಅತಿಯಾಗಿ ಕಾದು ಹೋಗಬಹುದು ಅಥವಾ ಬೆಂಕಿ ಹತ್ತಿಕೊಳ್ಳಲೂ ಕಾರಣವಾಗಬಹುದು. ಇಂತಹವುಗಳನ್ನು ತಡೆಯಲು ನೆರವಾಗುವ ಸಾಧನವೇ ಎಲೆಕ್ಟ್ರಿಕ್ ಫ಼್ಯೂಸ್.