ಕಾಂತವನ
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ. ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ. |
ಭಾರತದ ಪ್ರತಿಯೊಂದು ಗ್ರಾಮಕ್ಕೂ ಒಂದು ವಿಶೇಷತೆಯಿದೆ. ಸಾಂಸ್ಕೃತಿಕ ಆಯಾಮವಿದೆ. ಇಂದು ಅದೆಲ್ಲ ಮಾಯವಾಗಿ ಒಂದೇ ರೀತಿಯ ಸಾಂಸ್ಕೃತಿಕ ವಾತಾವರಣ ಸೃಷ್ಟಿಯಾಗುತ್ತಿದೆ. ಗ್ರಾಮಗಳು ಭಾರತದ ಉಸಿರಾಗಿದೆ. ಅವುಗಳ ಉಸಿರಿನನ್ನು ತೆಗೆಯುತ್ತಿದ್ದೇವೆ. ಅವು ಜೀವ ಪಡೆಯುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಅವುಗಳ ಅಂತ:ಸತ್ತ್ವವನ್ನು ಕಟ್ಟಿಕೊಳ್ಳಬೇಕಿದೆ. ನಾವು ಕಾಂತಾವರ ಗ್ರಾಮವನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡು ಅದರ ಚಾರಿತ್ರಿಕ ಸಾಂಸ್ಕೃತಿಕ ಅನನ್ಯತೆಯನ್ನು ಗುರುತಿಸುವ ಪ್ರಯತ್ನ ಮಾಡಿದ್ದೇವೆ.
ಭಾರತ ಪುಣ್ಯಭೂಮಿ, ಶ್ರೇಷ್ಥವಾದ ಸಂಸ್ಕೃತಿಗೆ ವಿಶ್ವ ವಿಖ್ಯಾತಿಯನ್ನು ಪಡೆದ ಪ್ರದೇಶ. ಈ ನೆಲದ ಸಂಸ್ಕೃತಿಗೆ ಜನ ಜೀವನದಲ್ಲಿ ಆಳವಾಗಿ ಬೇರೂರಿರುವ ದೈವಶಕ್ತಿಯೇ ಮೂಲಾಧಾರ. ಆದ್ದರಿಂದಲೇ ಈ ದೇಶದ ಉದ್ದಗಲಗಳಲ್ಲಿ ಸಂಚರಿಸಿದಾಗ ಸಾವಿರಾರು ಗುಡಿ-ಗೋಪುರಗಳು ನಮ್ಮನ್ನು ಆಕರ್ಷೀಸಿ ಆನಂದವನ್ನು ನೀಡುತ್ತವೆ. ನಮ್ಮ ಕರ್ನಾಟಕ ಭಾರತದ ಭವ್ಯ ಸಂಸ್ಕೃತಿಯನ್ನು ಸದಾ ಸಂರಕ್ಷಿಸಿ, ಪೋಷಿಸುವ ಪವಿತ್ರ ನೆಲ. ಇಂತಹ ಕನ್ನಡ ನಾಡಿನ ಕರಾವಳಿ ತೀರದಲ್ಲಿ ಭವ್ಯ ಭಾರತದ ಪುಣ್ಯ ಸಂಸ್ಕೃತಿಯನ್ನುಎತ್ತಿ ಹಿಡಿದು, ನಾಡಿನ ಆಸ್ತಿಕ ಬಂಧುಗಳನ್ನು ತನ್ನೆಡೆಗೆ ಕೈಬೀಸಿ ಕರೆಯುತ್ತಿರುವ ಪುಣ್ಯ ಕ್ಷೇತ್ರವೇ ಶ್ರೀಕ್ಷೇತ್ರ ಕಾಂತಾವರ.
ಕಾಂತಾವರ ಒಂದು ಪುಟ್ಟ ಹಳ್ಳಿ, ಆದರೆ ಭಗವಾನ್ ಶಿವ ಶ್ರೀ ಕಾಂತೇಶ್ವರನಾಗಿ ಇಲ್ಲಿ ನೆಲೆಗೊಂಡಿರುವುದರಿಂದ ಒದೊಂದು ಪ್ರಸಿದ್ಧ ಪುಣ್ಯ ಕ್ಷೇತ್ರ. ಕಾಂತಾವರವನ್ನು ಸ್ಥಳೀಯ ತುಳು ಭಾಷೆಯಲ್ಲಿ ಲಾಮತಾರ ಎಂದು ಕರೆಯುವುದು ರೂಢಿ. ಕಾಂತಾರ ಶಬ್ದಕ್ಕೆ ಸಂಸ್ಕೃತದಲ್ಲಿ ಕಾಡು , ಕಠಿಣವಾದ ದಾರಿಯಿಂದ ಕೂಡಿದ ಅಡವಿ ಸ್ಥಳ ಎಂಬ ಅರ್ಥವಿದೆ. ಈ ಅರ್ಥದ ದೃಷ್ಟಿಯಿಂದ ಕಾಂತಾವರಕ್ಕೆ ಇದು ಅನ್ವರ್ಥನಾಮ. ಕಾಂತಾರ ಎಂಬುದಕ್ಕೆ ಪಾರ್ವತಿಯ ಊರು ಎಂಬ ಒಂದು ಅರ್ಥವೂ ಇದೆ. ಕ್ರಿ.ಶ.೧೪ನೇ ಶತಮಾನದ ಬಳಿಕ ಈ ಊರಿಗೆ ಕಾಂತಾವರ ಎಂಬ ಹೆಸರು ಪ್ರಚಲಿತವಿದ್ದುದು ಶಾಸನಗಳಿಂದ ದೃಡಪಟ್ಟಿದೆ.ಪ್ರಕೃತಿದತ್ತವಾಗಿ ತನ್ನದೇ ಪ್ರತ್ಯೇಕತೆಯನ್ನು ಸಂಪಾದಿಸಿಕೊಂಡಿರುವ ಈ ಊರು ಒಂದೊಮ್ಮೆ ಆಯಕಟ್ಟಿನ ಸ್ಥಳದ ಪ್ರಮುಖ ಸಂಪರ್ಕ ಮತ್ತು ಸೈನಿಕ ಕೇಂದ್ರವಾಗಿತ್ತೆಂದು ಇತಿಹಾಸಕಾರರು ಹೇಳುತ್ತಾರೆ. ಕ್ರಿ.ಶ. ೫ನೇ ಶತಮಾನದಲ್ಲಿ ಕಾಮತಾವರ ಒಂದು ಸೈನಿಕ ನೆಲೆಯಾಗಿತ್ತಂದುತಿಳಿದುಬರುತ್ತದೆ. ಆದರೆ ಇಂದು ಈ ಕ್ಷೇತ್ರ ಶ್ರೀಕಾಂತೇಶ್ವರನ ದಿವ್ಯ ಸಾನಿಧ್ಯದಿಂದ ಪ್ರಸಿದ್ಧವಾಗಿದೆ. ೧೯೬೯ಕ್ಕೆ ಮುನ್ನ ಕಾಂತಾವರ ಒಂದು ದುರ್ಗಮ ಪ್ರದೇಶವೆನಿಸಿತ್ತು. ಆಗ ರಸ್ತೆಯೇ ಇಲ್ಲದ ಈ ಊರಿಗೆ ನಡೆದುಕೊಂಡೇ ಬರಬೇಕಿತ್ತು. ಆದ್ದರಿಂದಲೇ ಕಣ್ಣಿದ್ದವರಿಗೆ ಕಾಂತಾವರ ಎಂಬ ಮಾತೊಂದು ರೋಡಿಯಲ್ಲಿತ್ತು. ಒಂದೊಮ್ಮೆ ಕುಗ್ರಾಮದಂತಿದ್ದ ಕಾಂತಾವರವು ಈಗ ಪ್ರಗತಿಯ ಪಥದಲ್ಲಿ ಸಾಗುತ್ತಿದೆ.
ಕ್ಷೇತ್ರದ ಹಿನ್ನಲೆ
[ಬದಲಾಯಿಸಿ]ಕಾಂತಾವರದ ಆಸುಪಾಸಿನಲ್ಲಿ ಶಿಲಾಯುಗ ಕಾಲದಲ್ಲಿ ಮಾನವರು ವಾಸ್ತವ್ಯವಿದ್ದಿರಬೇಕೆಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.ಕಾಮತಾವರದ ಹೆಬ್ಬಂಡೆಗಳು ಹಾಗು ಬೆಟ್ಟ ಗುಡ್ಡಗಳಲ್ಲಿರುವ ಕಾಡನ್ನು ನೋಡಿದಾಗ ಇದು ಹೌದು ಎನ್ನಿಸುತ್ತದೆ. ಇಲ್ಲಿ ತ್ರ್ಯಂಬಕ ಎಂಬ ಪರ್ವತವಿದೆ. ಇದನ್ನು ಈಗ ಅಂಬರೀಷ ಬೆಟ್ಟ, ಅಂಬಲಪದವು ಎಂದೆಲ್ಲಾ ಕರೆಯುತ್ತಾರೆ. ತ್ರ್ಯಂಬಕ ಎಂಬುದು ಶಿವನ ಹಲವು ಹೆಸರುಗಳಲ್ಲಿ ಒಂದು. ಈ ಬೆಟ್ಟದಲ್ಲಿ ಹಿಂದೆ ಅಂಬರೀಷನೆಂಬ ಮುನಿ ತಪಸ್ಸನ್ನಾಚರಿಸಿದ್ದರಿಂದ ಇದಕ್ಕೆ ಅಂಬರೀಷ ಬೆಟ್ಟ ಅಥವಾ ಅಂಬಲಪದವಿನ ಹಿನ್ನಲೆಯಲ್ಲಿ ಮೂಡಿನಿಂತಿರುವ ಐತಿಹ್ಯವೋಂದು ಕಾಂತಾವರ ಕ್ಷೇತ್ರದ ಅತಿಶಯವನ್ನು ನಿರೂಪಿಸುತ್ತದೆ. ಬಹಳ ಹಿಂದೆ ಝಾಂಝಾವಾತನೆಂಬ ಒಬ್ಬ ರಾಕ್ಷಸನಿದ್ದ. ಅವನಿಗೆ ಅವ್ಯಷ್ಟಕಾಸುರ ಮತ್ತು ಪಿಪೀಲಿಕಾಸುರ ಎಂಬ ಇಬ್ಬರು ಮಕ್ಕಳಿದ್ದರು. ಬ್ರಹ್ಮನ ವರಬಲದಿಂದ ಅಹಂಕಾರದಿಂದ ಮೆರೆಯುತ್ತಿದ್ದ. ಈ ರಾಕ್ಷಸರು ದೇವ ಮಾನವರನೆಲ್ಲಾ ಪೀಡಿಸತೊಡಗಿದ್ದರು. ಋಷಿಮುನಿಗಳನ್ನು ಇವರ ಕಾಡತೊಡಗಿದರು. ಈ ಅಸುರರ ಕಿರುಕುಳವನ್ನು ತಾಳಲಾರದೆ ಹಿಂಸೆಗೆ ಒಳಗಾದವರಲ್ಲಿ ಒಬ್ಬನಾದ ಅಂಬರೀಷ ನೆಂಬ ಮುನಿ, ರಾಕ್ಷಸರ ಸಂಹಾರದ ಅಪೇಕ್ಷೆಯಿಂದ ಕಾಡಿಗೆ ಹೋಗಿ ತ್ರ್ಯಂಬಕ ಬೆಟ್ಟದಲ್ಲಿ ಕುಳಿತು ಶಿವನನ್ನು ಧ್ಯಾನಿಸಿ ತಪಸ್ಸು ಮಾಡಿದ. ಋಷಿಯ ತಪಸ್ಸಿಗೆ ಮೆಚ್ಚಿದ ಶಂಕರ ಪ್ರತ್ಯಕ್ಷನಾಗಿ, ಹರಸಿದ್ದಲ್ಲದೆ ಈ ಕಾಲದ ಸಜ್ಜನರ ಅಪೇಕ್ಷೆಯಂತೆ ಆ ರಾಕ್ಷಸರನ್ನು ಸಂಹರಿಸಿದ. ಇದರಿಂದ ದೇವ, ಮುನಿ, ಮಾನವರಿಗೆ ಬಂದ ಕಂಟಕ ದೂರವಾಯಿತು. ಕೊನೆಗೆ ಶಿವನು ಅಂಬರೀಷ ಮುನಿಗೆ ಕಡಗವೋಂದನ್ನು ನೀಡಿ, ಅದನ್ನು ಪೂಜಾಕಾಲದಲ್ಲಿ ಶಿವನಿಗೆ ಅರ್ಪಿಸಬೇಕೆಂದೂ, ಉಳಿದ ಸಂದರ್ಭದಲ್ಲಿ ಅದನ್ನು ಲಿಂಗದಿಂದ ತೆಗೆದಿಡಬೇಕೆಂದೂ ಹೇಳಿದಳು. ಹೀಗೆ ಬಹುಕಾಲದವರೆಗೆ ಪೂಜಾ ನೋತರ ಕಡಗವನ್ನು ತೆಗೆದಿರಿಸಲು ಮರೆತುಬಿಟ್ಟ. ಮರುದಿನ ನೆನಪಾಗಿ ತೆಗೆಯಲು ಹೋದರೆ ಅದು ಸಾಧ್ಯವಾಗದೆ, ಬದಲಾಗಿ ಅಶರೀರವಾಣಿಯೊಂದರ ಮೂಲಕ ಮುಂದೆ ಕಡಗವನ್ನು ತೆಗೆಯದೇ ಪೂಜೆ ನೆರವೇರಿಸಬೇಕೆಂಬ ಆಣತಿ ದೊರೆಯಿತು.