ಟಿಸ್ಸಿ ಥಾಮಸ್
ಟಿಸ್ಸಿ ಥಾಮಸ್ | |
---|---|
Born | |
Nationality | ಭಾರತೀಯ |
Education | ಬಿ.ಟೆಕ್.ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ತ್ರಿಸ್ಸಾರ್, ಆರ್ಮ್ಯಾಮೆಂಟ್ ಟೆಕ್ ಇನ್ಸ್ಟಿಟ್ಯೂಟ್ ನಿಂದ ಎಂ.ಟೆಕ್, ಪುಣೆ |
Occupation | ಡಿ ಆರ್ ಡಿ ಓ ಸೈಂಟಿಸ್ಟ್ |
Years active | ೧೯೮೮-ಇಂದಿನವರೆಗೆ |
Notable credit | ಅಗ್ನಿ- IV |
Title | ಸೈಂಟಿಸ್ಟ್ |
Spouse | ಸರೋಜ್ ಕುಮಾರ್ |
Children | ತೇಜಸ್ |
ಟಿಸ್ಸಿ ಥಾಮಸ್ (ಜನನ - ೧೯೬೪) ಭಾರತದ ಬಹು ನಿರೀಕ್ಷಿತ ಅಗ್ನಿ-೪ ಕ್ಷಿಪಣಿ ಯೋಜನೆಯ ನಿರ್ದೇಶಕರು. ಇವರು ಪ್ರಸಕ್ತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್) ಯ ಮಹಾನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.'ಡಿ ಆರ್ ಡಿ ಒ'ಮಹಾನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎರಡನೇ ಮಹಿಳೆ.( ಜೆ.ಮಂಜುಳಾ ಮೊದಲನೆಯವರು). ಇವರು ಭಾರತದ ಕ್ಷಿಪಣಿ ಯೋಜನೆಯ ಮೊದಲ ಮಹಿಳಾ ನಿರ್ದೇಶಕರು. ಇವರನ್ನು 'Missile Woman' (ಕ್ಷಿಪಣಿ ಮಹಿಳೆ) ಎಂದು ಕರೆಯುತ್ತಾರೆ.
ಬಾಲ್ಯ ಮತ್ತು ಶಿಕ್ಷಣ
[ಬದಲಾಯಿಸಿ]ಇವರು ಏಪ್ರಿಲ್ ೧೯೬೩ ರಲ್ಲಿ ಕೇರಳದ ಆಲಪುಳದಲ್ಲಿ ಜನಿಸಿದರು. ತಂದೆ ಥಾಮಸ್ ಅಕೌಂಟಂಟ್ ಆಗಿದ್ದರು.ತಾಯಿ ಕುಂಜಮ್ಮ ಥಾಮಸ್ ಗೃಹಿಣಿ. ಇಂಜಿನಿಯರಿಂಗ್ ಪದವಿಯನ್ನು ತ್ರಿಶೂರ್ ನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೂರೈಸಿದರು. ಆಗಿನ ಇನ್ಸ್ಟಿಟ್ಯೂಟ್ ಆಫ್ ಆರ್ಮ್ಡ್ ಟೆಕ್ನಾಲಜಿ (ಈಗ ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ) ಪೂನಾದಲ್ಲಿ ಕ್ಷಿಪಣಿ ತಂತ್ರಜ್ಞಾನದಲ್ಲಿ ಎಂ.ಟೆಕ್ ಪದವಿ ಗಳಿಸಿದರು.
ವೃತ್ತಿ ಜೀವನ
[ಬದಲಾಯಿಸಿ]ಟಿಸ್ಸಿ ಥಾಮಸ್, ಭಾರತದ ಪ್ರಮುಖ ಕ್ಷಿಪಣಿಗಳಾದ ಅಗ್ನಿ-೩, ಅಗ್ನಿ-೪ ಮತ್ತು ಅಗ್ನಿ-೫ ಯೋಜನೆಯ ನಿರ್ದೇಶಕಿ[೧]. ಇದರಿಂದಾಗಿ ಇವರು "ಅಗ್ನಿಪುತ್ರಿ" ಎಂದೇ ಪ್ರಖ್ಯಾತರಾಗಿದ್ದಾರೆ. ಅಗ್ನಿ-೫ ಕ್ಷಿಪಣಿ ಭಾರತದ ಹೆಮ್ಮೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಇವರು ಭಾರತಿಯ ನೌಕಾಪಡೆಯಲ್ಲಿ ಕಮಾಂಡರ್ ಆಗಿರುವ ಸರೋಜ್ ಕುಮಾರ್ ರನ್ನು ವಿವಾಹವಾಗಿದ್ದಾರೆ. ಇವರ ಮಗ ತೇಜಸ್ ಒಬ್ಬ ಇಂಜಿನಿಯರ್.
ಪ್ರಶಸ್ತಿಗಳು
[ಬದಲಾಯಿಸಿ]ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡಿದ ಕೊಡುಗೆಗಾಗಿ ಥಾಮಸ್ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.[೩][೪] ಅವರು ೨೦೧೮ ರಲ್ಲಿ ಜೈಪುರದ (ಎಫ್ಎಂಎಸ್-ಐಆರ್ಎಂ) ಮ್ಯಾನೇಜ್ಮೆಂಟ್ ಸ್ಟಡೀಸ್ - ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ನಲ್ಲಿ ಡಾ. ಥಾಮಸ್ ಕ್ಯಾಂಗನ್ ಲೀಡರ್ಶಿಪ್ ಪ್ರಶಸ್ತಿಯನ್ನು ಪಡೆದರು.[೫]
ಬಾಹ್ಯ ಸಂಪರ್ಕ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ http://www.deccanherald.com/content/11243/tessy-thomas-agni-v-project.html
- ↑ http://www.firstpost.com/fwire/missile-woman-tessy-thomas-conferred-shastri-award-476024.html?utm_source=fwire&utm_medium=hp
- ↑ "Scientist honoured for work on Agni missile tech". Moneycontrol. Retrieved 20 March 2020.
- ↑ "'Missile woman' Tessy Thomas conferred Shastri award". Firstpost. Retrieved 20 March 2020.
- ↑ "The Faculty of Management Studies, Institute of Rural Management". The Faculty of Management Studies, Institute of Rural Management. Retrieved 20 March 2020.