ವಿಷಯಕ್ಕೆ ಹೋಗು

ಭಾರತ ಸರ್ಕಾರದ ರೈಲ್ವೆ ಬಜೆಟ್ 2015-2016

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

2015-2016 ರ ಕೇಂದ್ರ ರೈಲ್ವೆ ಮುಂಗಡ ಪತ್ರ

[ಬದಲಾಯಿಸಿ]
ದಿನಾಂಕ : 26-2-2015 ರಂದು ರೈಲ್ವೆ ಸಚಿವ ಸುರೇಶ್‌ ಪ್ರಭುಇದೇ ಮೊದಲ ಬಾರಿಗೆ ಲೋಕಸಭೆಯಲ್ಲಿ ಯಾವುದೇ ಹೊಸ ರೈಲು ಸಂಚಾರದ ಪ್ರಸ್ತಾಪ­ವಿಲ್ಲದ, ಸರಕು ಸಾಗಣೆ ದರ ಏರಿಕೆ ಮೂಲಕ ಒಂದಷ್ಟು ವರಮಾನ ಸಂಗ್ರಹಿಸುವ ಗುರಿಯ ರೈಲ್ವೆ ಬಜೆಟ್‌ನ್ನು ಕೇಂದ್ರ ಸಚಿವ ಸುರೇಶ್‌ ಪ್ರಭು ಗುರುವಾರ ಮಂಡಿಸಿದರು.
ಶೇ 10ರಷ್ಟು ಹೆಚ್ಚಾಗಿರುವ ಸರಕು ಸಾಗಣೆ ದರದಿಂದ ಬರುವ ವರ್ಷ­ದಲ್ಲಿ ₹ 4,000 ಕೋಟಿ ವರಮಾನ ನಿರೀಕ್ಷಿಸಲಾಗಿದೆ.ಕಳೆದ ಸಲ ಸಾಗಣೆ ದರವನ್ನು ಶೇ 6.5ರಷ್ಟು ಏರಿಸಲಾಗಿದ್ದರೆ, ಪ್ರಯಾಣಿಕರ ದರವನ್ನು ಶೇ 14.2ರಷ್ಟು ಏರಿಸಲಾಗಿತ್ತು.

11 ಆಶಯಗಳು

[ಬದಲಾಯಿಸಿ]

ಭಾರತೀಯ ರೈಲ್ವೆ ಸೇವೆಯ ಸುಧಾರಣೆಗಾಗಿ 11 ಆಶಯಗಳನ್ನು ಬಜೆಟ್‌ನಲ್ಲಿ ಸೇರಿಸ­ಲಾಗಿದೆ. ರೈಲ್ವೆಯು ದೇಶದ ಆರ್ಥಿಕ ಚಟುವಟಿಕೆಯ ಪ್ರಮುಖ ವಾಹಿನಿ ಆಗಬೇಕು, ರೈಲ್ವೆ ಮಾರ್ಗಗಳಲ್ಲಿನ ಸಂಚಾರ ದಟ್ಟಣೆಯನ್ನು ನಿವಾರಿಸಬೇಕು, ರೈಲುಗಳ ವೇಗ ಹೆಚ್ಚಿಸಬೇಕು, ಪ್ರಯಾಣಿಕರಿಗೆ ಸವಲತ್ತು– ಸುರಕ್ಷತೆ ಸುಧಾರಿಸಬೇಕು, ಸ್ವಚ್ಛತೆಯ ಕಟ್ಟುನಿಟ್ಟಿನ ಪಾಲನೆ, ಉತ್ತಮ ಹೊದಿಕೆಗಳ ಪೂರೈಕೆ, ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿ ಕ್ಯಾಮರಾಗಳ ಅಳವಡಿಕೆ ಸೇರಿದಂತೆ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ಸ್ಥಾಪನೆ, ಪ್ರಯಾಣಿಕರಿಗೆ ಅಂತರ್ಜಾಲದ ಮೂಲಕ ತಮ್ಮ ಆಯ್ಕೆಯ ಭೋಜನ ಬುಕಿಂಗ್‌ ಸೌಲಭ್ಯ ಇವು ಈ ಆಶಯಗಳಲ್ಲಿ ಸೇರಿವೆ.

ರೈಲ್ವೆ, ಭಾರತೀಯರ ದಿನನಿತ್ಯದ ಬದುಕಿನ ಜೀವನಾಡಿ. ಉದ್ಯೋಗ ಅವಕಾಶ ಹಾಗೂ ಪರಿಸರ ಸಂರಕ್ಷಣೆ ಕಾರಣಗಳಿಗಾಗಿ ರೈಲಿನಲ್ಲಿ ಹಣ ಹೂಡಿಕೆ ಮುಖ್ಯವಾದುದು. ರಾಷ್ಟ್ರದಲ್ಲಿ ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ 2.3 ಕೋಟಿ ಇದೆ. ಇದನ್ನು 3 ಕೋಟಿಗೇರಿಸುವ ಗುರಿ ಹೊಂದಿದೆ. ಇದಕ್ಕಾಗಿ ಭಾರತೀಯ ರೈಲ್ವೆಯ ‘ಪರಿವರ್ತನೆ’ಗೆ 2014–15ರ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.
  • ರೈಲುಗಳ ವೇಗ ಹೆಚ್ಚಳ
  • ಪ್ರಯಾಣಿಕರ ದೂರು ಆಲಿಸಲು ಮೊಬೈಲ್‌ ಅಪ್ಲಿಕೇಶನ್‌
  • ಮುಂಗಡ ಕಾಯ್ದಿರಿಸದ ಪ್ರಯಾ­ಣಿ­ಕರು ಕೂಡ ಐದು ನಿಮಿಷದಲ್ಲಿ ಟಿಕೆಟ್‌ ಖರೀದಿಸಬಹುದು
  • ರೈಲು ಬರುವ ಮತ್ತು ಹೊರಡುವ ಸಮ­ಯದ ಬಗ್ಗೆ ಎಸ್‌ಎಂಎಸ್‌ ಮಾಹಿತಿ
  • ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಚ್‌ 1ರಿಂದ 24x7 ಸಹಾಯವಾಣಿ 138 ಆರಂಭ.
  • ಭದ್ರತೆಗೆ ಸಂಬಂಧಿಸಿದ ದೂರು ಸಲ್ಲಿಸಲು 182 ಸಂಖ್ಯೆಗೆ ಉಚಿತ ಕರೆ ಸೌಲಭ್ಯ
  • ಆಯ್ದ ಪ್ರಮುಖ ಮಾರ್ಗಗಳು ಹಾಗೂ ಮಹಿಳಾ ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ
  • ಎಲ್ಲ ಹೊಸ ಬೋಗಿಗಳಲ್ಲಿ ಅಂಧರಿಗಾಗಿ ಬ್ರೈಲ್‌ ಸೌಲಭ್ಯ
  • ಲಿಫ್ಟ್‌ಗಳು ಹಾಗೂ ಎಸ್ಕಲೇಟರ್‌ಗಳಿಗಾಗಿ ₹ 120 ಕೋಟಿ
  • ಸುರಕ್ಷತೆ ದೃಷ್ಟಿಯಿಂದ ಮಹಿಳೆಯರು ಹಾಗೂ ವೃದ್ಧರಿಗೆ ಮಧ್ಯದ ಬೋಗಿ ಮೀಸಲು
  • ಗಾಲಿ ಕುರ್ಚಿಗಳಿಗಾಗಿ ಆನ್‌ಲೈನ್‌ ಬುಕಿಂಗ್‌ ಅವಕಾಶ
  • ಎಲ್ಲ ನಿಲ್ದಾಣಗಳಲ್ಲಿಯೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ
  • 4೦೦ ನಿಲ್ದಾಣಗಳಲ್ಲಿ ವೈ–ಫೈ ಸೌಲಭ್ಯ
  • 17 ಸಾವಿರಕ್ಕೂ ಹೆಚ್ಚು ಜೈವಿಕ ಶೌಚಾಲಯಗಳ ನಿರ್ಮಾಣ
  • ಇಸ್ರೊ ನೆರವಿನಿಂದ 3,438 ಲೆವೆಲ್‌ ಕ್ರಾಸಿಂಗ್‌ ತೆಗೆದುಹಾಕುವ ಯೋಜನೆ.
  • ರೈಲ್ವೆ ಸೇವೆಯ ಒಟ್ಟಾರೆ ಸುಧಾರಣೆಗಾಗಿ ಮುಂದಿನ ಐದು ವರ್ಷಗಳಲ್ಲಿ 8.5 ಲಕ್ಷ ಕೋಟಿ ರೂಪಾಯಿ­ಗಳ ಭಾರಿ ಬಂಡವಾಳ ಹೂಡಿಕೆ­ಯೊಂದಿಗೆ ವಿವಿಧ ಯೋಜನೆಗಳನ್ನು ಕೈಗೊಳ್ಳುವುದಾಗಿ ಹೇಳಿದೆ.
  • ಶೇ 10ರಷ್ಟು ಹೆಚ್ಚಾಗಿರುವ ಸರಕು ಸಾಗಣೆ ದರದಿಂದ ಬರುವ ವರ್ಷ­ದಲ್ಲಿ ₹ 4,000 ಕೋಟಿ ವರಮಾನ ನಿರೀಕ್ಷಿಸಲಾಗಿದೆ.
  • ಯೂರಿಯಾ ಸಾಗಣೆ ದರ ಹೆಚ್ಚಳ­ದಿಂದ ಸರ್ಕಾರಕ್ಕೆ ₹ 3,000 ಕೋಟಿ, ಆಹಾರ­ಧಾನ್ಯಗಳ ಸಾಗಣೆ ದರ ಹೆಚ್ಚಳದಿಂದ 600 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಉದ್ಯಮ ಸಂಘಟನೆಗಳು ಅಂದಾಜಿಸಿವೆ

ಐದುವರ್ಷಗಳಲ್ಲಿ ಹೂಡಿಕೆ

[ಬದಲಾಯಿಸಿ]
  • 1 ಸಂಚಾರ ದಟ್ಟಣೆ ತಗ್ಗಿಸಲು 1.99ಲಕ್ಷ ಕೋಟಿ ರೂ
  • 2 ರೈಲ್ವೆ ಜಾಲ ವಿಸ್ತರಣೆ 1.93ಲಕ್ಷ ಕೋಟಿ ರೂ
  • 3 ಪ್ರಯಾಣಿಕರ ಸೌಕರ್ಯ 12500 ಕೋಟಿ ರೂ
  • 4 ಹೈಸ್ಪೀಡ್ ರೈಲು ಮಾರ್ಗ 65000 ಕೋಟಿ ರೂ
  • 5 ನಿಲ್ದಾಣ ಅಭಿವೃದ್ಧಿ 1ಲಕ್ಷ ಕೋಟಿ ರೂ
  • 6 ಕಾಶ್ಮೀರ ಈಶಾನ್ಯ ರಾಜ್ಯಗಳ ಸಂಪರ್ಕ 39000 ಕೋಟಿ ರೂ
  • 7 ಪ್ರಯಾಣಿಕರ ಸುರಕ್ಷತೆ 1.27ಲಕ್ಷ ಕೋಟಿ ರೂ
  • 8 ಮಾಹಿತಿ ತಂತ್ರಜ್ಞಾನ ಸಂಶೋಧನೆ 5000 ಕೋಟಿ ರೂ
  • 9 ರೈಲುಭೋಗಿಗಳ ನಿರ್ವಹಣೆ ತಯಾರಿಕೆ 1.02ಲಕ್ಷ ಕೋಟಿ ರೂ
  • 10 ಇತರೆ ಖರ್ಚು 13200 ಕೋಟಿರೂ.

ಕರ್ನಾಟಕದ ಯೋಜನೆಗಳಿಗೆ ಉದಾರ ಕೊಡುಗೆ

[ಬದಲಾಯಿಸಿ]
  • ಸಚಿವ ಸುರೇಶ್‌ ಪ್ರಭು ಮಂಡಿಸಿದ 2015–16ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಯೋಜನೆಗಳಿಗೆ ಉದಾರವಾಗಿ ಹಣ ನೀಡಿದ್ದಾರೆ.
  • ಹೊಸ ರೈಲು ಮಾರ್ಗಗಳು, ಜೋಡಿ ಮಾರ್ಗಗಳೂ ಸೇರಿದಂತೆ ರಾಜ್ಯದ ಯೋಜನೆಗಳಿಗೆ ₹ 2,450 ಕೋಟಿ ನಿಗದಿಪಡಿಸಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರ ವೆಚ್ಚ ಹಂಚಿಕೆ ಆಧಾರದ ಮೇಲೆ ನೀಡುವ ₹ 368ಕೋಟಿಯೂ ಸೇರಿದೆ. ಕಳೆದವರ್ಷ ಜುಲೈನಲ್ಲಿ ಡಿ.ವಿ. ಸದಾನಂದಗೌಡರು ಮಂಡಿಸಿದ್ದ ರೈಲ್ವೆ ಬಜೆಟ್‌ನಲ್ಲಿ 1,500ಕೋಟಿ ನೀಡಿದ್ದರು. ಈಗ ಪ್ರಭು ₹ 950 ಕೋಟಿ ಅಧಿಕವಾಗಿ ನೀಡಿದ್ದಾರೆ.
  • ಕೊಟ್ಟೂರು– ಹರಪನಹಳ್ಳಿ– ಹರಿಹರ ಮಾರ್ಗವೂ ಸೇರಿದಂತೆ ಹೊಸ ಮಾರ್ಗಗಳ ನಿರ್ಮಾಣಕ್ಕೆ ಸಾವಿರ ಕೋಟಿ ರೂಪಾಯಿಗಳನ್ನು ಕೊಡ­ಲಾಗಿದೆ. ಕಳೆದ ವರ್ಷ ₹ 517 ಕೋಟಿ ತೆಗೆದಿರಿಸಲಾಗಿತ್ತು. ಜೋಡಿ ಮಾರ್ಗ­ಗಳಿಗೆ ₹ 1,279 ಕೋಟಿ ನೀಡಲಾಗಿದೆ. ಕಳೆದ ಸಲ ₹ 759 ಕೋಟಿ ಸಿಕ್ಕಿತ್ತು. ರೈಲ್ವೆ ಮೇಲ್ಸೆತುವೆ ಹಾಗೂ ಸುರಂಗ ಮಾರ್ಗಕ್ಕೆ ₹ 115 ಕೋಟಿ, ಗೇಜ್‌ ಪರಿವರ್ತನೆಗೆ
  • ₹ 66 ಕೋಟಿ ಪ್ರಕಟಿಸಲಾಗಿದೆ.
  • ಹಿಂದಿನ ಯುಪಿಎ ಸರ್ಕಾರದ ಕೊನೆಯ ಎಂಟು ತಿಂಗಳು ರೈಲ್ವೆ ಸಚಿವ­ರಾಗಿದ್ದ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಯೋಜನೆಗಳಿಗೆ 1,500ಕೋಟಿ ನೀಡಿದ್ದರು. ಹೊರಗಿನವರು ರೈಲ್ವೆ ಖಾತೆ ಹೊಣೆ ಹೊತ್ತಾಗಲೆಲ್ಲ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕೂಗು ಕೇಳಿಬಂದಿವೆ. ಆದರೆ, ಸುರೇಶ್‌ ಪ್ರಭು ಹೆಚ್ಚಿನ ಹಣ ಕೊಡುವ ಮೂಲಕ ಈ ಅಪವಾದದಿಂದ ಮುಕ್ತರಾಗಿದ್ದಾರೆ.
  • ಕೊಟ್ಟೂರು– ಹರಪನಹಳ್ಳಿ– ಹರಿಹರ ಮಾರ್ಗ ನಿರ್ಮಾಣಕ್ಕೆ ₹ 40 ಕೋಟಿ, ಚಿಕ್ಕಮಗಳೂರು– ಸಕಲೇಶ­ಪುರಕ್ಕೆ ₹ 70 ಕೋಟಿ, ಬೆಂಗಳೂರು– ಹಾಸನ– ಶ್ರವಣಬೆಳಗೊಳಕ್ಕೆ ₹ 190 ಕೋಟಿ, ಬೆಂಗಳೂರು– ಸತ್ಯ ಮಂಗಲಕ್ಕೆ ₹ 10 ಕೋಟಿ, ರಾಯದುರ್ಗ – ತುಮಕೂರು– ಕಲ್ಯಾಣದುರ್ಗಕ್ಕೆ ₹ 100ಕೋಟಿ, ಬಾಗಲಕೋಟೆ– ಕುಡು­ಚಿಗೆ ₹ 155 ಕೋಟಿ, ತುಮಕೂರು– ಚಿತ್ರದುರ್ಗ– ದಾವಣಗೆರೆಗೆ ₹ 139 ಕೋಟಿ, ಶಿವಮೊಗ್ಗ– ಹರಿಹರಕ್ಕೆ ₹ 150 ಕೋಟಿ, ಗದಗ– ವಾಡಿಗೆ ₹ 120 ಕೋಟಿ ನೀಡಲಾಗಿದೆ.
  • ರೈಲ್ವೆ ಮೇಲ್ಸೇತುವೆ ಹಾಗೂ ಸುರಂಗ ಮಾರ್ಗಗಳ ನಿರ್ಮಾಣಕ್ಕೆ ₹ 115 ಕೋಟಿ ನೀಡಿದ್ದಾರೆ. ಸುರಕ್ಷತಾ ನಿಧಿಯಿಂದ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಕೆಲವು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರೈಲ್ವೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಸರಾಸರಿ ಸಾವಿರ ಕಿ.ಮೀಗೆ 17ಕಿ.ಮೀ ರೈಲ್ವೆ ಮಾರ್ಗವಿದೆ. ರಾಜ್ಯದ ಯೋಜನೆಗಳನ್ನು ಪೂರ್ಣಗೊಳಿಸಲು ₹ 22ಸಾವಿರ ಕೋಟಿ ಬೇಕಿದೆ.
  • ರೈಲ್ವೆ ಯೋಜನೆಗಳನ್ನು ತ್ವರಿತಗೊಳಿ­ಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹಿಂದೆ ರೈಲ್ವೆ ಜತೆ ವೆಚ್ಚ ಹಂಚಿಕೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಹೊಸ ರೈಲ್ವೆ ಯೋಜನೆಗಳಿಗೆ ಹಣ ಭರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಖಚಿತಪಡಿಸಿದೆ. ಪ್ರಧಾನಿ ಇತ್ತೀಚೆಗೆ ಕರೆದಿದ್ದ ನೀತಿ ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇ ನಿಲುವನ್ನು ಪುನರುಚ್ಚರಿಸಿದ್ದಾರೆ.
  • ಗೇಜ್‌ ಪರಿವರ್ತನೆ: ಗೇಜ್‌ ಪರಿವರ್ತನೆಗೆ ನಿಗದಿಪಡಿಸಿದ ₹ 66 ಕೋಟಿಯಲ್ಲಿ, ಬೆಂಗಳೂರು– ಹುಬ್ಬಳ್ಳಿ, ಶಿವಮೊಗ್ಗ– ತಾಳಗುಪ್ಪ ಮಾರ್ಗಗಳ ಗೇಜ್‌ ಪರಿವರ್ತನೆಗೆ ₹ 52 ಕೋಟಿ, ಅರಸೀಕೆರೆ– ಹಾಸನ– ಮಂಗಳೂರು ಮಾರ್ಗಕ್ಕೆ ₹ 1 ಕೋಟಿ, ಸೋಲ್ಲಾಪುರ– ಗದಗಕ್ಕೆ 50 ಲಕ್ಷ, ಮೈಸೂರು– ಚಾಮರಾಜ ನಗರ– ಮೆಟ್ಟುಪಾಳ್ಯಂ ₹ 50 ಲಕ್ಷ, ಕೋಲಾರ– ಚಿಕ್ಕಬಳ್ಳಾಪುರಕ್ಕೆ ₹ 7.8ಕೋಟಿ ತೆಗೆದಿಡಲಾಗಿದೆ.
  • ಧಾರವಾಡ–ಕಂಬಾರಗಣವಿ ಜೋಡಿ ಮಾರ್ಗಕ್ಕೆ ₹ 11 ಕೋಟಿ, ಹುಬ್ಬಳ್ಳಿ– ಹೆಬ್ಸೂರಿಗೆ ₹ 1.2ಕೋಟಿ, ಅರಸೀಕೆರೆ– ಬೀರೂರಿಗೆ ₹10ಕೋಟಿ, ಯಶವಂತ­ಪುರ– ಯಲಹಂಕ ಮಾರ್ಗಕ್ಕೆ ₹ 20ಕೋಟಿ, ಅರಸೀಕೆರೆ– ತುಮಕೂರು ಮಾರ್ಗಕ್ಕೆ ₹ 21ಕೋಟಿ, ಹೊಸಪೇಟೆ– ಹುಬ್ಬಳ್ಳಿ– ವಾಸ್ಕೊ ಮಾರ್ಗಕ್ಕೆ ₹ 75 ಕೋಟಿ ಕೊಡಲಾಗಿದೆ.
  • ಅನೇಕ ವರ್ಷಗಳಿಂದ ಪರಿಸರ ಸಚಿವಾಲಯದ ಒಪ್ಪಿಗೆಗೆ ಕಾದಿರುವ ಹುಬ್ಬಳ್ಳಿ– ಅಂಕೋಲಾ ಮಾರ್ಗಕ್ಕೆ ರೈಲ್ವೆ ಸಚಿವರು ₹ 12ಕೋಟಿ ಹಣ ನಿಗದಿಪಡಿಸಿದ್ದಾರೆ. ಬಜೆಟ್‌ ಅಂಗೀಕಾರದ ಬಳಿಕ ರೈಲ್ವೆ ಸಚಿವರು ಪರಿಸರ ಹಾಗೂ ಅರಣ್ಯ ಸಚಿವ ಪ್ರಕಾಶ್‌ ಜಾವಡೇಕರ್ ಅವರೊಂದಿಗೆ ಚರ್ಚಿಸಲಿದ್ದಾರೆಂದು ಧಾರವಾಡದ ಸಂಸತ್‌ ಸದಸ್ಯ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.
  • ರೈಲ್ವೆ ಸಚಿವಾಲಯ ಗುರುವಾರ ಹೊರಡಿಸಿರುವ ಶ್ವೇತ ಪತ್ರದಲ್ಲಿ, ಕೋಲಾರ– ವೈಟ್‌ಫೀಲ್ಡ್‌ ರೈಲು ಮಾರ್ಗ, ಮಂಗಳೂರು ಹಾಗೂ ಬಯ್ಯಪ್ಪನಹಳ್ಳಿ ಪ್ರಯಾಣಿಕರ ಟರ್ಮಿನಲ್‌ಗಳನ್ನು ಪಿಪಿಪಿ ಯೋಜನೆ­ಯಡಿ ನಿರ್ಮಾಣ ಮಾಡುವುದಾಗಿ ಸ್ಪಷ್ಟಪಡಿಸಿದೆ.
  • * * *

ಅಭಿವೃದ್ಧಿಗಾಗಿ ಪಾಲುದಾರಿಕೆ

[ಬದಲಾಯಿಸಿ]
  • ರೈಲ್ವೆ ಇಲಾಖೆಯ ಅಭಿವೃದ್ಧಿ ಹಾಗೂ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಸರ್ಕಾರಿ, ಖಾಸಗಿ ಪಾಲುದಾರಿಕೆ (ಪಿಪಿಪಿ) ವ್ಯವಸ್ಥೆಯನ್ನು ಪುನರ್‌ರಚಿಸುವ ಪ್ರಸ್ತಾವವನ್ನು ಸುರೇಶ್‌ ಪ್ರಭು ಅವರು ಬಜೆಟ್‌ನಲ್ಲಿ ಮಾಡಿದ್ದಾರೆ.
  • ಪಿಪಿಪಿ ಮೂಲಕ ದೇಶದ ಪ್ರಮುಖ ಬಂದರುಗಳಿಗೆ ಹಾಗೂ ಗಣಿಗಳಿಗೆ ಸಂಪರ್ಕ ಕಲ್ಪಿಸುವ ಅಗತ್ಯವನ್ನು ಪ್ರದಿಪಾದಿಸಿರುವ ಪ್ರಭು, ಇದಕ್ಕೆ ಪೂರಕವಾಗಿ ಸರ್ಕಾರದ ನೀತಿಗಳನ್ನು ಸರಳೀಕರಣಗೊಳಿಸುವ ಭರವಸೆಯನ್ನೂ ನೀಡಿದ್ದಾರೆ.
  • ಸಂಪನ್ಮೂಲ­ಗಳ ಸಂಗ್ರಹ, ಭೂ ಸ್ವಾಧೀನ, ಯೋಜನೆ ಅನುಷ್ಠಾನ ಮತ್ತು ಪ್ರಮುಖ ರೈಲು ಯೋಜನೆಗಳ ಮೇಲ್ವಿ­ಚಾರಣೆ­ಗಳನ್ನು ಎಲ್ಲ ರಾಜ್ಯಗಳೊಂದಿಗೆ ಸೇರಿಕೊಂಡು ಜಂಟಿಯಾಗಿ ಮಾಡ­ಲಾಗು­-ವುದು ಎಂದು ಅವರು ಹೇಳಿದ್ದಾರೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಸಾಧಿಸುವ ಮೂಲಕ ಅಗತ್ಯ ರೈಲು ಮಾರ್ಗಗಳನ್ನು ನಿರ್ಮಿಸುವ ಪ್ರಸ್ತಾವವನ್ನು ಅವರು ಮಾಡಿದ್ದಾರೆ.

ಇತರ ಪ್ರಸ್ತಾವಗಳು

[ಬದಲಾಯಿಸಿ]
  • ರೈಲ್ವೆ ಸಾಮರ್ಥ್ಯ ಹೆಚ್ಚಳ: ₹ 96 ಸಾವಿರ ಕೋಟಿ ವೆಚ್ಚದಲ್ಲಿ 9,400 ಕಿ.ಮೀ ಉದ್ದದ ರೈಲು ಮಾರ್ಗವನ್ನು ಜೋಡಿ ಮಾರ್ಗ, ತ್ರಿಪಥ, ಚತುಷ್ಪಥವಾಗಿ ಅಭಿವೃದ್ಧಿಪಡಿಸುವುದು, ವಿದ್ಯುದೀಕರಣ ಮಾಡುವುದಾಗಿ ಸುರೇಶ್‌ ಪ್ರಭು ಘೋಷಿಸಿದ್ದಾರೆ. ಕಳೆದ ಬಾರಿ ಈ ಕೆಲಸಕ್ಕೆ ಮೀಸಲಿರಿಸಿದ್ದ ಮೊತ್ತಕ್ಕಿಂತ ಶೇಕಡ 2,700ರಷ್ಟು ಹೆಚ್ಚು!
  • ರೈಲು ಸಂಚಾರ ದಟ್ಟಣೆ ಕಡಿಮೆ ಮಾಡುವುದು. ಈಗಾಗಲೇ ಅನುಮೋದನೆ ನೀಡಿರುವ ಏಳು ಸಾವಿರ ಕಿ.ಮೀ ರೈಲ್ವೆ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುವುದು. 2015–16ರಲ್ಲಿ 1,200 ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಚಾಲನೆ.
  • 800 ಕಿ.ಮೀ ರೈಲು ಮಾರ್ಗ ಗೇಜ್ ಪರಿವರ್ತನೆಗೆ ಈ ಬಾರಿ ಚಾಲನೆ.
  • ಮೇಘಾಲಯ ಮತ್ತು ದೆಹಲಿ ನಡುವೆ ನೇರ ರೈಲು ಸಂಪರ್ಕ. ಬರಕ್ ಕಣಿವೆಗೆ ಬ್ರಾಡ್‌ಗೇಜ್‌ ಸಂಪರ್ಕ.
  • ರೈಲ್ವೆ ವಿದ್ಯುದೀಕರಣ ಪ್ರಕ್ರಿಯೆಗೆ ವೇಗ. ಈ ಬಾರಿ 6,608 ಕಿ.ಮೀ ರೈಲು ಮಾರ್ಗ ವಿದ್ಯುದೀಕರಣಕ್ಕೆ ಒಪ್ಪಿಗೆ. ಇದು ಕಳೆದ ಬಾರಿಗಿಂತ ಶೇಕಡ 1,330ರಷ್ಟು ಹೆಚ್ಚು.

ಸರಕು ಸಾಗಣೆ ಸಾಮರ್ಥ್ಯ ಹೆಚ್ಚಳ

[ಬದಲಾಯಿಸಿ]
  • ಆಯ್ದ ರೈಲು ನಿಲ್ದಾಣಗಳಲ್ಲಿ ಖಾಸಗಿ ಸಹಭಾಗಿತ್ವದ ಅಡಿ ಸರಕು ಸಾಗಣೆಗೆ ಏಕರೂಪದ ಸೌಲಭ್ಯ ಕಲ್ಪಿಸಲು ಟ್ರಾನ್ಸ್‌ಪೋರ್ಟ್‌ ಲಾಜಿಸ್ಟಿಕ್‌ ಕಾರ್ಪೊರೇಷನ್ ಆಫ್‌ ಇಂಡಿಯಾ (ಟ್ರಾನ್ಸ್‌ಲಾಕ್‌) ಆರಂಭ.
  • ಕಂಟೇನರ್‌ ಡಿಪೋಗಳು ಮತ್ತು ವಿಮಾನ ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸಿ, ಸರಕುಗಳ ತ್ವರಿತ ಸಾಗಣೆಗೆ ಸೌಲಭ್ಯ.
  • ಖಾಸಗಿ ಸರಕು ಟರ್ಮಿನಲ್‌ಗಳಿಗೆ ಸಂಬಂಧಿಸಿದ ನೀತಿ ಪರಿಷ್ಕರಣೆ.

ಬುಲೆಟ್ ರೈಲು

[ಬದಲಾಯಿಸಿ]
  • ಮುಂಬಯಿ – ಅಹಮದಾಬಾದ್‌ ನಡುವೆ ಹೈಸ್ಪೀಡ್ ರೈಲು ಸಂಚಾರ ಆರಂಭಿಸುವ ಸಾಧ್ಯತೆಗಳನ್ನು ಪರಿಶೀಲಿಸುವ ಕೆಲಸ ಅಂತಿಮ ಹಂತದಲ್ಲಿದೆ. ಈ ವರ್ಷದ ಜೂನ್‌–ಜುಲೈ ವೇಳೆಗೆ ವರದಿ ಸಿದ್ಧವಾಗುವ ಸಾಧ್ಯತೆಯಿದೆ. ಇತರೆಡೆಗಳಲ್ಲಿ ಹೈಸ್ಪೀಡ್ ರೈಲು ಆರಂಭಿಸುವ ಸಾಧ್ಯತೆಗಳ ಅಧ್ಯಯನ ಶುರುವಾಗಲಿದೆ.

ತಯಾರಿಕಾ ವಲಯದ ಬಲವರ್ಧನೆ

[ಬದಲಾಯಿಸಿ]
  • ರೈಲ್ವೆಗೆ ಸಂಬಂಧಿಸಿದ ತಯಾರಿಕಾ ವಲಯದ ಸಾಮರ್ಥ್ಯ ಹೆಚ್ಚಿಸಿ ಆ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚಿಸುವುದು.
  • ರೈಲ್ವೆಗೆ ಸಂಬಂಧಿಸಿದ ವಸ್ತುಗಳನ್ನು ಉತ್ಪಾದಿಸುವ ಘಟಕಗಳು ಮತ್ತು ಕಾರ್ಯಾಗಾರಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ಅವು ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವಂತೆ ಮಾಡಲಾಗುವುದು. ಈ ಘಟಕಗಳು ಸ್ವಾವಲಂಬನೆ ಸಾಧಿಸುವಂತೆ ಮಾಡಲು ಅವುಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಾಗುವುದು.

ಆದ್ಯತೆ

[ಬದಲಾಯಿಸಿ]

ತಂತ್ರಜ್ಞಾನ ಸುಧಾರಣೆ

  • ರೈಲು ಇಲಾಖೆಗೆ ಹೊಸತನದ ಸ್ಪರ್ಶ ನೀಡಲು, ವಿನೂತನ ಕಲ್ಪನೆಗಳ ಅನುಷ್ಠಾನಕ್ಕಾಗಿ ‘ಕಾಯಕಲ್ಪ’ ಹೆಸರಿನ ವಿಶಿಷ್ಟ ಮಂಡಳಿ ಸ್ಥಾಪನೆ
  • ವಿಶಿಷ್ಟ ತಾಂತ್ರಿಕ ಪರಿಹಾರಗಳಿಗಾಗಿ ತಾಂತ್ರಿಕ ಪೋರ್ಟಲ್‌
  • ಆನ್ವಯಿಕ ಸಂಶೋಧನಾ ಕ್ಷೇತ್ರದಲ್ಲಿ ‘ವಿನ್ಯಾಸ ಸಂಶೋಧನೆ ಮತ್ತು ಗುಣಮಟ್ಟಗಳ ಸಂಸ್ಥೆ’ಯನ್ನು (ಆರ್‌ಡಿಎಸ್‌ಒ) ಉತ್ಕೃಷ್ಟ ಮಟ್ಟಕ್ಕೆ ಒಯ್ಯಲು ಪಣ
  • ಮೂಲಭೂತ ಸಂಶೋಧನೆ­ಗಳಿಗಾಗಿ ಆಯ್ದ ನಾಲ್ಕು ವಿವಿಗಳಲ್ಲಿ ರೈಲ್ವೆ ಸಂಶೋಧನಾ ಕೇಂದ್ರಗಳ ಸ್ಥಾಪನೆ.
  • ರೈಲ್ವೆ ತಂತ್ರಜ್ಞಾನಕ್ಕಾಗಿ ವಾರಾಣಸಿಯ ಐಐಟಿಯಲ್ಲಿ ‘ಮಾಳವೀಯ ಅಧ್ಯಯನ ಕೇಂದ್ರ’ ಸ್ಥಾಪನೆ
  • ಗುರುತಿಸಲಾಗಿರುವ ರೈಲು ಯೋಜನೆಗಳ ಅಧ್ಯಯನಕ್ಕಾಗಿ ರೈಲ್ವೆ, ಮಾನವ ಸಂಪನ್ಮೂಲ ಅಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೈಗಾರಿಕಾ ಸಚಿವಾಯಲ­ಗಳನ್ನೊಳ­ಗೊಂಡ ಸಮಿತಿ ರಚನೆ
  • ಯಾವ ನಿಲ್ದಾಣದಿಂದ ಸೀಟು ಲಭ್ಯವಿದೆ ಎಂಬ ಬಗ್ಗೆ ಮಾಹಿತಿ ನೀಡುವುದಕ್ಕೆ, ಪಾರ್ಸೆಲ್‌ ಹಾಗೂ ಸರಕು ಬೋಗಿಗಳ ಸಂಚಾರದ ಬಗ್ಗೆ ಮಾಹಿತಿ ನೀಡುವ ಬಾರ್‌ ಕೋಡ್‌ ಅಥವಾ ಆರ್‌ಎಫ್‌ಐಡಿ (ರೇಡಿಯೊ ಫ್ರಿಕ್ವೇನ್ಸಿ ಐಡೆಂಟಿಫಿಕೇಷನ್‌) ವ್ಯವಸ್ಥೆ ಅಳವಡಿಕೆ. ರೈಲು ನಿಯಂತ್ರಣ ಮತ್ತು ನಿರ್ವಹಣಾ ವ್ಯವಸ್ಥೆಯಲ್ಲಿ ಸಮನ್ವಯ ಸಾಧಿಸಲು ಮಾಹಿತಿ ತಂತ್ರಜ್ಞಾನ ಬಳಕೆ.
  • ಹಳಿಗಳ ನಿರ್ವಹಣೆಗೆ ಯಾಂತ್ರೀಕೃತ ಸಂಯೋಜನಾ ವ್ಯವಸ್ಥೆ ಜಾರಿ ನಿರ್ವಹಣೆ ಮತ್ತು ವ್ಯವಸ್ಥೆ ಸುಧಾರಣೆ
  • ‘ನಿಯೋಜನೆ, ವಿಕೇಂದ್ರೀಕರಣ, ನಿಯಂತ್ರಣ ಮುಕ್ತ ಮತ್ತು ಸರಳತೆ’ ಇಲಾಖೆಯ ಹೊಸ ಮಂತ್ರ
  • ಇಲಾಖೆಯ ಎಲ್ಲ ಚಟುವಟಿಕೆ ಮತ್ತು ಕಾರ್ಯವಿಧಾನಗಳನ್ನು ಪರಿಶೋಧನೆಗೆ ಒಳಪಡಿಸುವುದು
  • ಪ್ರಮುಖ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಜಾಗತಿಕ ಮಾನದಂಡ­ ಅಳವಡಿಕೆ
  • ಯೋಜನೆಗಳ ಆಯ್ಕೆಯ ಮಾನದಂಡದ ಸುಧಾರಣೆ. ಯೋಜನೆ ರೂಪು ರೇಷೆ ಸಿದ್ಧಪಡಿಸುವಾಗ ಮತ್ತು ನಿರ್ಧಾರ ಕೈಗೊಳ್ಳುವಾಗ ಹೊಸ ವಿಧಾನ ಅನುಸರಣೆ. ಗುತ್ತಿಗೆ ನೀಡುವುದಕ್ಕೆ ವಿದ್ಯುನ್ಮಾನ ಉತ್ಪನ್ನ ಸಂಕೇತ (ಇಪಿಸಿ) ವ್ಯವಸ್ಥೆ
  • ರೈಲುಗಳ ಕಾರ್ಯಾಚರಣೆಯ ಪರಿಶೋಧನೆ
  • ಉಪಕರಣಗಳ ನಿರ್ವಹಣೆಯಲ್ಲಿ ಕಾಗದ ರಹಿತ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸುವುದು. ಮಾರಾಟ­ಗಾರ­ರೊಂದಿಗೆ ಸಮನ್ವಯ ಸಾಧಿಸುವುದ­ಕ್ಕಾಗಿ ಅಂತರಮುಖ ನಿರ್ವಹಣಾ ವ್ಯವಸ್ಥೆ.

ಮಾನವ ಸಂಪನ್ಮೂಲ

  • ರೈಲ್ವೆ ಇಲಾಖೆಯಲ್ಲಿನ ಮಾನವ ಸಂಪನ್ಮೂಲದ ಪರಿಶೋಧನೆ ನಡೆಸುವುದು. ಸಿಬ್ಬಂದಿ ಕಾರ್ಯಕ್ಷಮತೆ­ಯನ್ನು ಜಾಗತಿಕ ಗುಣಮಟ್ಟಕ್ಕೆ ಕೊಂಡೊಯ್ಯುವುದಕ್ಕಾಗಿ ಮಾನವ ಸಂಪನ್ಮೂಲ ಕಾರ್ಯತಂತ್ರಕ್ಕೆ ಹೆಚ್ಚಿನ ಗಮನ ನೀಡುವುದು. ಈ ವಿಭಾಗಕ್ಕೆ ಪ್ರತ್ಯೇಕ ಲೆಕ್ಕ ಪರಿಶೋಧನಾ ಮುಖ್ಯಸ್ಥರ ನೇಮಕ. ಇಆರ್‌ಪಿ (ಉದ್ದಿಮೆ ಸಂಪನ್ಮೂಲ ಯೋಜನೆ) ಆಧಾರಿತ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ಜಾರಿ.
  • ಗ್ರಾಹಕರಲ್ಲಿ ಸಂತೃಪ್ತಿಯ ಭಾವ ತುಂಬುವುದಕ್ಕಾಗಿ ಇಲಾಖೆಯ ಮುನ್ನೆಲೆ ಸಿಬ್ಬಂದಿಗೆ ಕೌಶಲಗಳ ತರಬೇತಿ. ಯೋಗ ತರಬೇತಿ ನೀಡಿಕೆ.
  • ರೈಲ್ವೆಯ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ 2015–16ರಲ್ಲಿ ಪ್ರತ್ಯೇಕ ವಿ.ವಿ ಸ್ಥಾಪನೆ.
  • ಸಿಬ್ಬಂದಿಗೆ ಒದಗಿಸುವ ಆರೋಗ್ಯ ಸೇವೆಗಳಲ್ಲಿ ಸುಧಾರಣೆ.

ಇಂಧನ ಮತ್ತು ಸುಸ್ಥಿರತೆ

[ಬದಲಾಯಿಸಿ]
  • ಪರಿಸರ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವುದಕ್ಕೆ ರೈಲ್ವೆ ಮಂಡಳಿಯಲ್ಲಿ ಪರಿಸರ ನಿರ್ದೇಶನಾಲಯ ಸ್ಥಾಪನೆ
  • ಇಂಧನ ಉಳಿತಾಯಕ್ಕಾಗಿ ವಿಸ್ತೃತ ಪರಿಶೋಧನೆ
  • ಬಿಡ್ಡಿಂಗ್‌ ಪ್ರಕ್ರಿಯೆ ಮೂಲಕ ಮಿತ ದರದಲ್ಲಿ ವಿದ್ಯುತ್‌ ಕಂಪೆನಿಗಳಿಂದ, ವಿದ್ಯುತ್‌ ವಿನಿಮಯಗಳಿಂದ, ದ್ವಿಪಕ್ಷೀಯ ವ್ಯವಸ್ಥೆ ಮೂಲಕ ವಿದ್ಯುತ್‌ ಖರೀದಿ. ಇದರಿಂದಾಗಿ ;ಮುಂದಿನ ಕೆಲವು ವರ್ಷಗಳಲ್ಲಿ ಕನಿಷ್ಠ ₹ 3 ಸಾವಿರ ಕೋಟಿ ಉಳಿತಾಯದ ನಿರೀಕ್ಷೆ
  • ‘ಸೌರ ಮಿಷನ್‌’ ಅಡಿಯಲ್ಲಿ ನವೀಕರಿಸಲಾಗದ ಇಂಧನ ಸಚಿವಾಲಯ ನೀಡುವ ಅನುದಾನದಿಂದ ಐದು ವರ್ಷಗಳಲ್ಲಿ 1000 ಮೆ.ವಾ. ಸೌರ ವಿದ್ಯುತ್‌ ಉತ್ಪಾದನೆ
  • ಜಲಸಂರಕ್ಷಣೆ ಯೋಜನೆ ಭಾಗವಾಗಿ ಜಲ ಪರಿಶೋಧನೆ ಮತ್ತು ನೀರು ಸಂಗ್ರಹ ವ್ಯವಸ್ಥೆ ವಿಸ್ತರಣೆ
  • 100 ಡೀಸೆಲ್‌ ಚಾಲಿತ ರೈಲು ಎಂಜಿನ್‌ಗಳನ್ನು (ಡೆಮು) ಸಿಎನ್‌ಜಿ­ಯಿಂದಲೂ (ಕಂಪ್ರೆಸ್ಡ್‌ ನ್ಯಾಚುರಲ್‌ ಗ್ಯಾಸ್‌) ಕಾರ್ಯ ನಿರ್ವಹಿಸುವಂತೆ ಪರಿವರ್ತನೆ. ಜೊತೆಗೆ ಸಿಎನ್‌ಜಿ ==ಚಾಲಿತ ಎಂಜಿನ್‌ಗಳ ಅಭಿವೃದ್ಧಿ.==
  • ಅಂತರರಾಷ್ಟ್ರೀಯ ನಿಯಮಗಳಿಗೆ ಅನುಸಾರವಾಗಿ ಎಂಜಿನ್‌ಗಳ ಶಬ್ದ ನಿಯಂತ್ರಣ.
ಪಾರದರ್ಶಕತೆ ಮತ್ತು ಆಡಳಿತಕ್ಕೆ ಚುರುಕು
  • ರೈಲ್ವೆಯ ಎಲ್ಲ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ವಿಸ್ತರಣೆ. ಸದ್ಯ ಎರಡು ಹುದ್ದೆಗಳಿಗೆ ಮಾತ್ರ ಈ ವ್ಯವಸ್ಥೆ ಇದೆ.
  • ಭ್ರಷ್ಟಾಚಾರ ನಿರ್ಮೂಲಗೆ ಸಾಧ್ಯವಿ­ರುವ ಎಲ್ಲ ಪ್ರಯತ್ನಗಳನ್ನು ಕಂಡು­ಕೊಳ್ಳಲಾಗುವುದು.
  • ಇ–ದಾಸ್ತಾನು ಜಾಲಾ ವಿಸ್ತರಣೆ
  • ನಿಯಮ ರೂಪಿಸುವುದು, ದರ ನಿಗದಿ, ವಿವಾದ ಇತ್ಯರ್ಥ , ಕಾರ್ಯ­ದಕ್ಷತೆ ಗುಣಮಟ್ಟ ನಿಗದಿಗೆ ಪ್ರತ್ಯೇಕ ವ್ಯವಸ್ಥೆ.

ಸಾಮಾಜಿಕ ಉಪಕ್ರಮಗಳು

[ಬದಲಾಯಿಸಿ]
  • ರೈಲು ನಿಲ್ದಾಣ ಮತ್ತು ತರಬೇತಿ ಕೇಂದ್ರಗಳಲ್ಲಿ ಕೌಶಲ ಅಭಿವೃದ್ಧಿಗೆ ಅವಕಾಶ ಕಲ್ಪಿಸುವುದು.
  • ಯುವ ಮತ್ತು ಮಹಿಳಾ ಸ್ವ–ಸಹಾಯ ಸಂಘಗಳು ತಯಾರಿ­ಸಿದ ಉತ್ಪನ್ನಗಳ ಬಳಕೆಗೆ ಒತ್ತು. ಈ ಯೋಜನೆ ಕಳೆದ ಮೂರು ತಿಂಗಳಿಂದ ಕೊಂಕಣ ರೈಲ್ವೆಯಲ್ಲಿದೆ. ಇದು ಎಲ್ಲೆಡೆ ವಿಸ್ತರಣೆ, 50ಸಾವಿರ ಉದ್ಯೋಗ ಸೃಷ್ಟಿ.

ಬಜೆಟ್‌ ಅಂದಾಜು

[ಬದಲಾಯಿಸಿ]
;ವರಮಾನ ರೂ.1,83,578/-ಕೋಟಿ.
  • ಸರಕುಸಾಗಣೆ 65%
  • ಪ್ರಯಾನಿಕರ ರೈಲು 25%
  • ಇತರೆ ಬೋಗಿ 3%
  • ವಿವಿಧ ಬಾಬ್ತು 4%
  • ಇತರೆ 3%
ವೆಚ್ಚ---
  • ಸಿಬ್ಬಂದಿ ವೇತನ ,ಭತ್ಯ 33%
  • ಇಂಧನ 19%
  • ಉಗ್ರಾಣ 3%
  • ಸವಕಳಿ ವೆಚ್ಚ 6%
  • ಪಿಂಚಣಿ ನಿಧಿ 17%
  • ಗುತ್ತಿಗೆ ಚೆಚ್ಚ 4%
  • ಲಾಭಾಂಶ 6%
  • ಬಂಡವಾಳ ನಿಧಿ 0.03%
  • ಅಭಿವೃದ್ಧಿ ನಿಧಿ 2%
  • ಸಾಲ ನಿರ್ವಹಣಾ ನಿಧಿ 0.01%
.
  • ಹೆಚ್ಚಿನ ಮಟ್ಟದ ವರಮಾನ ಸಂಗ್ರಹಕ್ಕೆ ಆದ್ಯತೆ. ರೈಲು ಸಂಚಾರ ದಟ್ಟಣೆಯನ್ನು ತಪ್ಪಿಸುವಂತಹ ಸೂಕ್ತ ಯೋಜನೆಗಳಿಗೆ ಹೂಡಿಕೆ ಮತ್ತು ಹಳಿ ಮಾರ್ಗಗಳ ಸಾಮರ್ಥ್ಯ ಹೆಚ್ಚಳ.
  • ಪ್ರಯಾಣಿಕರ ರೈಲಿನಿಂದ ಶೇ 16.7ರಷ್ಟು ವರಮಾನ ನಿರೀಕ್ಷೆ. ರೂ. 50,175 ಕೋಟಿ ಸಂಗ್ರಹದ ಗುರಿ.
  • 8.5 ಕೋಟಿ ಟನ್‌ ಸರಕು ಸಾಗಣೆಯ ಗುರಿ. ಸರಕು ಸಾಗಣೆಯಿಂದ ರೂ. 1,21,423 ಕೋಟಿ ವರಮಾನ ನಿರೀಕ್ಷೆ. ಸರಕು ವರ್ಗೀಕರಣ ಮತ್ತು ಕ್ರಮಿಸುವ ದೂರವನ್ನು ಹಂತಗಳ ಮಾದರಿಯಲ್ಲಿ ವಿಂಗಡಿಸಿ ವೈಜ್ಞಾನಿಕ ದರ ನಿಗದಿ.
  • ಇನ್ನಿತರ ಬೋಗಿಗಳಿಂದ ರೂ. 4,612 ಕೋಟಿ ಮತ್ತು ವಿವಿಧ ಬಾಬ್ತುಗಳಿಂದ ರೂ. 7,318 ಕೋಟಿ ವರಮಾನದ ಅಂದಾಜು.
  • ಒಟ್ಟಾರೆ ವರಮಾನ ನಿರೀಕ್ಷೆ ರೂ. 1,83,578 ಕೋಟಿ(ಶೇ 15.3 ಪ್ರಗತಿ ಅಂದಾಜು)
  • ಸಾಮಾನ್ಯ ಕಾರ್ಯನಿರ್ವಹಣಾ ವೆಚ್ಚ (ಒಡಬ್ಲ್ಯುಇ) ಶೇ 9.6 ಅಂದಾಜು. ಡೀಸೆಲ್‌ ದರ ಕಡಿಮೆಯಾದರೆ ಒಡಬ್ಲ್ಯುಇ ತಗ್ಗುವ ನಿರೀಕ್ಷೆ.
  • ಸುರಕ್ಷತೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ. ಗುತ್ತಿಗೆ ವೆಚ್ಚ ಮತ್ತು ಸಾಲದ ಮೇಲಿನ ಬಡ್ಡಿ ಪಾವತಿ ವೆಚ್ಚದಲ್ಲಿ ಶೇ 21ರಷ್ಟು ಏರಿಕೆ.
  • ರೂ. 35,260 ಕೋಟಿ ಪಿಂಚಣಿ ನಿಧಿ ಸಂಗ್ರಹದ ಗುರಿ. ಇದರಲ್ಲಿ ಮರಣ ಪರಿಹಾರ ನಿಧಿ (ಡಿಆರ್‌ಎಫ್‌) ರೂ. 8100 ಕೋಟಿ.
  • ರೈಲ್ವೆ ಹಣಕಾಸು ನಿಗಮದ (ಐಆರ್‌ಎಫ್‌ಸಿ) ಮೂಲಕ ಪಡೆದ ಸಾಲದ ಮರುಪಾವತಿಯ ಬಂಡವಾಳ ನಿಧಿಗೆ ರೂ. 7,616 ಕೋಟಿ ಮೀಸಲು.

ಯೋಜನಾ ಗಾತ್ರ

[ಬದಲಾಯಿಸಿ]
  • ಬಜೆಟ್‌ ಯೋಜನಾ ಗಾತ್ರ ₹ 1 ಲಕ್ಷ ಕೋಟಿಗೂ ತುಸು ಹೆಚ್ಚು. 2014–15ಕ್ಕೆ ಹೋಲಿಸಿದರೆ ಶೇ 52ರಷ್ಟು ವೃದ್ಧಿ.
  • ಒಟ್ಟಾರೆ ಬಜೆಟ್‌ ಅನುದಾನ ₹ 40 ಸಾವಿರ ಕೋಟಿ.
  • ರೈಲ್ವೆಯ ಡೀಸೆಲ್‌ ಸೆಸ್‌ಗಾಗಿ ಕೇಂದ್ರ ಸಾರಿಗೆ ನಿಧಿಯಿಂದ ₹ 1,645.60 ಕೋಟಿ ಅನುದಾನ.
  • ಹೆಚ್ಚುವರಿ ಬಜೆಟ್‌ ಸಂಪನ್ಮೂಲಗಳಿಂದ (ಇಬಿಆರ್‌– ವಿವಿಧ ಸಂಸ್ಥೆಗಳಿಂದ ರೈಲ್ವೆ ಯೋಜನೆಗಳ ಮೇಲೆ ಹೂಡಿಕೆ) ₹ 17,655 ಕೋಟಿ (ಶೇ. 46.5ರಷ್ಟು ವೃದ್ಧಿ) ಸಂಗ್ರಹದ ಗುರಿ.
  • ಆಂತರಿಕ ಸಂಪನ್ಮೂಲಗಳಿಂದ ₹ 17,793 ಕೋಟಿ ಮತ್ತು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಿಂದ (ಪಿಪಿಪಿ) ₹ 5781 ಕೋಟಿ ಕ್ರೋಡೀಕರಣ.

ಅಗತ್ಯ ವಸ್ತು ದುಬಾರಿ

[ಬದಲಾಯಿಸಿ]
* ಸರಕು== ದರ ಹೆಚ್ಚಳ
  • ಸಿಮೆಂಟು = 2.7
  • ಕಲ್ಲಿದ್ದಲು =6.3
  • ಕಬ್ಬಿಣ ಉಕ್ಕು =0.8
  • ಆಹಾರಧಾನ್ಯ=10
  • ಶೇಂಗಾಎಣ್ಣೆ =2.1
  • ಎಲ್`ಪಿಜಿ =0.8
  • ರೈಲ್ವೆ ಬಜೆಟ್- ದರ-ಪ್ರತಿ ಟನ್ ಗೆ ರೂ.ಗ¼ಲ್ಲಿ
ರೈಲ್ವೆ ಬಜೆಟ್ ದರ- ಪ್ರತಿ ಟನ್ ಗೆ ರೂ.ಗ¼ಲ್ಲಿ
, . ಹಾಲಿ ಪ್ರಸ್ತಾವಿತ
1 ಅಡುಗೆ ಉಪ್ಪು 1108.70 1108.70
2 ಸಿಮೆಂಟು 784.60 805.60
3 ಕಲ್ಲಿದ್ದಲು 722.90 768.60
4 ಉಕ್ಕು/ಕಬ್ಬಿಣ 1379.00 1390.50
5 ಧಾನ್ಯ,-ಬೇಳೆಕಾಳು 1415.10 1556.60
6 ಯೂರಿಯಾ ಗೊಬ್ಬರ 891.40 980.60
7 ಮ್ಯಾಂಗನೀಸ್ 837.00 834.30
8 ಕಬ್ಬಿಣದ ಅದಿರು 500.80 504.90
9 ಬೀಡು ಕಬ್ಬಿಣ 902.02 930.50
10 ಶೇಂಗಾ ಎಣ್ಣೆ 2000.30. 2043.20
11 ಡಿಸಲ್ 1291.00 1278.40
12 ಟಾರು 958.60 992.50
13 ಸೀಮೆಎಣ್ಣೆ 1015.00 1023.50
14 ಎಲ್ ಪಿಜೆ. 1015.00 1023.50

ಸರಕು ಸಾಗಣೆ ದರವನ್ನು ಶೇ 10 ರಷ್ಟು ಏರಿಕೆ ಮಾಡುವ ಪ್ರಸ್ತಾವ­ವನ್ನು ಈ ಬಾರಿಯ ಬಜೆಟ್‌ನಲ್ಲಿ ಮಂಡಿಸಿರು­ವುದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ.

ಆಹಾರಧಾನ್ಯ, ಬೇಳೆಕಾಳು, ಸಿಮೆಂಟ್‌, ಕಲ್ಲಿದ್ದಲು ಮತ್ತು ಉಕ್ಕು ಸೇರಿದಂತೆ ಹಲವು ವಸ್ತುಗಳ ಬೆಲೆ ಹೆಚ್ಚಲಿದೆ. ಸಚಿವ ಸುರೇಶ್‌ ಪ್ರಭು ಅವರು ಮಂಡಿಸಿದ ಬಜೆಟ್‌ನಲ್ಲಿ ಸುಮಾರು 12 ಸರಕುಗಳ ಮೇಲೆ ಶೇ 0.8 ರಿಂದ ಶೇ10 ರಷ್ಟು ದರ ಏರಿಕೆ ಮಾಡುವುದಾಗಿ ಹೇಳಿದ್ದಾರೆ.

ಯೂರಿಯಾ ಸಾಗಣೆ ದರ ಶೇ 10ರಷ್ಟು ಏರಿಕೆಯಾಗಲಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಸುಣ್ಣದ ಕಲ್ಲು, ಕ್ಯಾಲ್ಸಿಯಂ ಕಾರ್ಬೊನೇಟ್‌ ಮತ್ತು ಡೀಸೆಲ್‌ ಸಾಗಣೆ ವೆಚ್ಚವನ್ನು ಏರಿಕೆ ಮಾಡಿಲ್ಲ.

‘ಯೂರಿಯಾ ಸಾಗಣೆ ದರ ಹೆಚ್ಚಳ ಮಾಡಿರುವುದ­ರಿಂದ ಇದಕ್ಕೆ ನೀಡಲಾಗುತ್ತಿರುವ ಸಬ್ಸಿಡಿ ಮೊತ್ತ ₹ 3,000ದಿಂದ ₹ 3,300 ಕೋಟಿಗೆ ಏರಲಿದೆ’ ಎಂದು ಭಾರ­ತೀಯ ರಸಗೊಬ್ಬರ ಉತ್ಪಾದ­ಕರ ಸಂಘದ ಸತೀಶ್‌ ಚಂದರ್‌ ಹೇಳಿದ್ದಾರೆ.

‘ಸಿಮೆಂಟ್‌ ಉತ್ಪಾದನೆ ವೆಚ್ಚ ಪ್ರತಿ 50 ಕೆ.ಜಿಗೆ ₹ 2 ರಿಂದ 4 ರಷ್ಟು ಏರಲಿದೆ’ ಎಂದು ದಾಲ್ಮಿಯಾ ಭಾರತ್‌ ಸಿಮೆಂಟ್‌ ಸಮೂಹದ ಮುಖ್ಯ ಕಾರ್ಯನಿರ್ವ­ಹಣಾ­ಧಿಕಾರಿ ಮೋಹೇಂದ್ರ ಸಿಂಗ್ ಹೇಳಿದ್ದಾರೆ.

‘ಸಿಮೆಂಟ್‌ ಬೆಲೆ ಬೇಡಿಕೆ ಮತ್ತು ಪೂರೈಕೆ ಮೇಲೆ ಅವಲಂಬಿತ­ವಾಗಿದೆ. ಈಗಲೇ ಬೆಲೆ ಹೆಚ್ಚಳದ ಬಗ್ಗೆ ನಿರ್ಧಾರ ಮಾಡಲಾಗದು’ ಎಂದು ಅವರು ವಿವರಿಸಿದ್ದಾರೆ.

ಸಿಮೆಂಟ್ ಬೆಲೆ ಚೀಲಕ್ಕೆ ₹ 5ರಿಂದ ₹ 10 ರಷ್ಟು ಹೆಚ್ಚಳ­ವಾಗುವ ಸಾಧ್ಯತೆ ಇದೆ ಎಂದು ಮತ್ತೊಂದು ಪ್ರಮುಖ ಕಂಪೆನಿ ತಿಳಿಸಿದೆ.

ರೈಲ್ವೆಯಲ್ಲಿ ಮುಂದಿನ ಐದು ವರ್ಷ ಗಳಲ್ಲಿ ₹ 8.5 ಲಕ್ಷ ಕೋಟಿ ಹೂಡಿಕೆ ಮಾಡುವ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿರುವ ಉಕ್ಕು ಕಂಪೆನಿ­ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೂಡಿಕೆಯ ಪ್ರಸ್ತಾವ ದಿಂದ ಉಕ್ಕಿಗೆ ಬೇಡಿಕೆ ಹೆಚ್ಚಲಿದೆ ಆದರೆ ಸರಕು ಸಾಗಣೆ ದರ ಹೆಚ್ಚಿಸಿರು­ವುದ­ರಿಂದ ಡೀಸೆಲ್‌ ಬೆಲೆ ಇಳಿಕೆಯಾ­ಗಿದ್ದರೂ ಉಕ್ಕಿನ ದರ ಕಡಿಮೆ­ಯಾಗದು ಎಂದು ಹೇಳಿವೆ.

ಸರಕು ಸಾಗಣೆ ದರ ಏರಿಕೆ ಮಾಡುವುದರಿಂದ ಯೂರಿಯಾ ಬೆಲೆ ಯಲ್ಲಿ ಯಾವುದೇ ಏರಿಕೆ­ಯಾ­­ಗು­ವುದಿಲ್ಲ. ಟನ್‌ಗೆ ₹ 5,360ರ ದರದಲ್ಲೇ ಮಾರಾಟ ಮಾಡ­ಲಾಗುವುದು. (–ಅನಂತ್‌ ಕುಮಾರ್‌ ರಸಗೊಬ್ಬರ ಸಚಿವ)

ರೈತರು ಖರೀದಿ ಮಾಡುವ ಯೂರಿಯಾ ಬೆಲೆಯಲ್ಲಿ ಯಾವುದೇ ಏರಿಕೆ ಮಾಡಿಲ್ಲ. (–ಮನೋಜ್‌ ಸಿನ್ಹಾ, ರೈಲ್ವೆ ಖಾತೆ ರಾಜ್ಯ ಸಚಿವ)

ಕಲ್ಲಿದ್ದಲು ಸಾಗಣೆ ದರ ಹೆಚ್ಚಳ

[ಬದಲಾಯಿಸಿ]
ವಿದ್ಯುತ್‌ ತುಟ್ಟಿ :
ನವದೆಹಲಿ (ಪಿಟಿಐ): ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ಕಲ್ಲಿದ್ದಲು ಸಾಗಣೆ ದರವನ್ನು ಶೇ 6.3ರಷ್ಟು ಹೆಚ್ಚಿಸಿರುವುದರಿಂದ ವಿದ್ಯುತ್‌ ಉತ್ಪಾದನಾ ಕಂಪೆನಿಗಳ ವೆಚ್ಚ ಹೆಚ್ಚಳ­ಲಿದ್ದು, ಇದು ವಿದ್ಯುತ್‌ ದರದ ಏರಿಕೆಗೆ ಕಾರಣವಾಗುವ ಸಾಧ್ಯತೆ ಇದೆ.
ಸಾಗಣೆ ದರದಲ್ಲಿ ಮಾಡಿರುವ ಹೆಚ್ಚಳವು ಕಲ್ಲಿದ್ದಲು ವೆಚ್ಚದ ಮೇಲೆ ಪರಿಣಾಮ ಬೀಳಲಿದೆ ಎಂದು ಸರ್ಕಾರಿ ಸ್ವಾಮ್ಯದ ಕೋಲ್‌ ಇಂಡಿಯಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಸಾಗಣೆ ದರವನ್ನು ಗ್ರಾಹಕರೇ ಭರಿ­ಸು­ವುದರಿಂದ ಸಂಸ್ಥೆಯ ಮೇಲೆ ಯಾವುದೇ ಪರಿಣಾಮ ಇಲ್ಲ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಸಾಗಣೆ ದರ ಏರಿಕೆಯಿಂದ ವಿದ್ಯುತ್‌ ಉತ್ಪಾದನಾ ವೆಚ್ಚವು 4ರಿಂದ 5 ಪೈಸೆಯಷ್ಟು ಹೆಚ್ಚಲಿದೆ ಎಂದು ಪ್ರಮುಖ ವಿದ್ಯುತ್‌ ಉತ್ಪಾದನಾ ಕಂಪೆನಿ ಎನ್‌ಟಿಪಿಸಿ ಹೇಳಿದೆ. ಸಾಗಣೆ ದರದ ಹೆಚ್ಚಳವು ವಿದ್ಯುತ್‌ ದರದ ಮೇಲೆ ನೇರ ಪರಿಣಾಮ ಬೀರಲಿದೆ. ಆದರೆ, ಇದು ವಿದ್ಯುತ್‌ ಉತ್ಪಾದನಾ ಘಟಕ ಮತ್ತು ಕಲ್ಲಿದ್ದಲು ಗಣಿ ನಡುವಣ ದೂರವನ್ನು ಅವಲಂಬಿಸಿದೆ ಎಂದು ವಿದ್ಯುತ್‌ ಉತ್ಪಾದಕರ ಒಕ್ಕೂಟ (ಎಪಿಪಿ) ಹೇಳಿದ್ದಾರೆ. ಪ್ರತಿ ಯೂನಿಟ್‌ ವಿದ್ಯುತ್‌ ದರ 5 ಪೈಸೆಯಷ್ಟು ಹೆಚ್ಚಳ­ವಾಗಲಿದೆ ಎಂದು ಅದು ಹೇಳಿದೆ.
  • * *

ಟಿಕೆಟ್‌ ವಿತರಣೆಗೆ ಎಟಿಎಂ ಮಾದರಿ ಯಂತ್ರ

[ಬದಲಾಯಿಸಿ]

ನವದೆಹಲಿ: ಟಿಕೆಟ್‌ ವಿತರಣೆ ಪದ್ಧತಿಯಲ್ಲಿ ಗಣನೀಯ ಸುಧಾರಣೆ ತರುವುದಾಗಿ ಈ ಬಾರಿಯ ರೈಲ್ವೆ ಬಜೆಟ್‌­ನಲ್ಲಿ ಘೋಷಿಸಲಾಗಿದೆ. ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸದೆ ಇರುವವರು ಸಹ ರೈಲು ಹೊರಡುವ ಐದು ನಿಮಿಷ ಮೊದಲು ಟಿಕೆಟ್‌ ಪಡೆಯ­ಬಹುದಾಗಿದೆ. ಇದಕ್ಕಾಗಿ ಎಟಿಎಂ ಮಾದರಿಯ ಯಂತ್ರಗಳನ್ನು ರೈಲು ನಿಲ್ದಾಣಗಳಲ್ಲಿ ಅಳವಡಿಸಲಾಗುತ್ತದೆ. ಅಂಗ­ವಿಕಲರು ಸೇರಿದಂತೆ ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅರ್ಹರಾದವರಿಗೆ ರಿಯಾಯಿತಿ ದರದ ಇ – ಟಿಕೆಟ್‌ ನೀಡಲಾಗುತ್ತದೆ.ಸ್ಮಾರ್ಟ್‌ಫೋನ್‌ ಮೂಲಕ ಕಾಯ್ದಿರಿಸುವಿಕೆ ರಹಿತ ಟಿಕೆಟ್‌ ಪಡೆಯಬಹುದು. ಬ್ಯಾಂಕ್‌ ಖಾತೆಗೆ ಹಣ ಮರು ಪಾವತಿಗೂ ವ್ಯವಸ್ಥೆ ಮಾಡಲಾಗಿದೆ. ನಗದು ಹಣ ಇಲ್ಲದೆ ಇದ್ದರೆ ಎಟಿಎಂ ಕಾರ್ಡ್‌್ ಬಳಸಿ ಟಿಕೆಟ್‌ ಪಡೆಯುವುದಕ್ಕೂ ಅವಕಾಶ ಇದೆ.

ಅಪಘಾತ ತಡೆಗೆ ಸುರಕ್ಷತಾ ಕ್ರಮ

[ಬದಲಾಯಿಸಿ]
  • ಅಪಘಾತಗಳು ಮತ್ತೆ ಮತ್ತೆ ಆಗಿರುವ ಸ್ಥಳಗಳನ್ನು ಪರಿಶೀಲಿಸಿ, ಅವುಗಳನ್ನು ನಿಯಂತ್ರಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ರೈಲ್ವೆ ಸುರಕ್ಷತೆ ಪುನರ್‌ ಪರಿಶೀಲನೆಗೆ ನೇಮಿಸಿದ್ದ ಡಾ.ಕಾಕೋಡ್ಕರ್ ಸಮಿತಿಯ ಎಲ್ಲ ಶಿಫಾರಸು­ಗಳನ್ನು ಏಪ್ರಿಲ್‌ಗೆ ಮುನ್ನ ಪರಿಶೀಲಿಸ­ಲಾಗುವುದು.
  • ಕಾವಲುವರಹಿತ ರೈಲ್ವೆ ಕ್ರಾಸಿಂಗ್‌ಗಳಲ್ಲಿ, ರೈಲು ಬರುತ್ತಿರುವ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
  • ಈ ಬಾರಿ 3,438 ರೈಲ್ವೆ ಕ್ರಾಸಿಂಗ್‌ಗಳಲ್ಲಿ ಕೆಳಸೇತುವೆ ಅಥವಾ ಮೇಲ್ಸೇತುವೆ ನಿರ್ಮಿಸಲು ₹ 6,581 ಕೋಟಿ ಮೀಸಲಿಡಲಾಗಿದೆ. ಇದು ಕಳೆದ ಬಾರಿ ಈ ಕೆಲಸಕ್ಕೆ ಮೀಸಲಿಟ್ಟ ಹಣಕ್ಕಿಂತ ಶೇ 2,600ರಷ್ಟು ಹೆಚ್ಚು.
  • ರೈಲು ಡಿಕ್ಕಿ ತಡೆ ವ್ಯವಸ್ಥೆ ಮತ್ತು ರೈಲು ಸುರಕ್ಷತಾ ಮುನ್ಸೂಚನೆ ವ್ಯವಸ್ಥೆ­ಯನ್ನು ಆಯ್ದ ಮಾರ್ಗಗಳಲ್ಲಿ

ತ್ವರಿತ­ವಾಗಿ ಅಳ­ವಡಿಸಲಾಗುವುದು.

ಅಪಘಾತ ವಿವರ

[ಬದಲಾಯಿಸಿ]
ಸುರಕ್ಷತಾ ವರದಿ
ವಿವರ 2009 2010 2011 2012 2013
ಅಪಘಾತಗಳ ಸಂಖ್ಯೆ 165 140 131 121 117
ಮೃತಪಟ್ಟವರ ಸಂಖ್ಯೆ 238 381 319 204 152
ಮೃತಪಟ್ಟವರು . . . .
ಪ್ರಯಾಣಿಕರು 167 235 100 140 42
ರೈಲ್ವೆ ಸಿಬ್ಬಂದಿ 4 8 117 4 7
ಇತರರು 167 133 202 140 103

ಕೇಂದ್ರ ಸರ್ಕಾರದ ಬಜೆಟ್ 2015-2016

ಉಲ್ಲೇಖ

[ಬದಲಾಯಿಸಿ]
  • times of india/ಫೆಬ್ರವರಿ 27, 2015
  • .prajavani.ಫೆಬ್ರವರಿ 27, 2015