ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Divya Amshu/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭ್ರಷ್ಟಾಚಾರ ತಡೆಗಟ್ಟುವುದರಲ್ಲಿ ಯುವಜನರಾದ ವಿದ್ಯಾರ್ಥಿಗಳ ಪಾತ್ರವಿದೆ

ನಾನು ನಿಮಗೆಲ್ಲರಿಗು ಎರಡು ಮುಖ್ಯ ಅಂಶಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತೇನೆ, "ಭಾರತೀಯ ಒಂದು ವಿಶಾಲವಾದ ದೇಶ, ಬದಲಾವಣೆ ಮಾತ್ರ ಒ೦ದೇ ಸ್ಠಿಮಿತದಲ್ಲಿದೆ".

ಭಾರತದಂತಹ ದೇಶದಲ್ಲಿ ಬದಲಾವಣೆ ತರಲು ಬೇಕಾಗಿರುವ ಮುಖ್ಯ ಮುಖ್ಯ ಅಂಶ ಭಾರತೀಯರೆಲ್ಲರಲ್ಲಿ ಏಕತೆ. ನಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ಜನಸಂಖ್ಯೆಯಲ್ಲಿ ಗರಿಷ್ಟ ೬೦-೭೦% ಜನರು ೩೦ ವರ್ಷ ಮೇಲ್ಪಟ್ಟವರು ಹಾಗೂ ೨೫% ಜನಸಂಖ್ಯೆ ಮಕ್ಕಳನ್ನು ಹೊಂದಿರುತ್ತದೆ. ಆದ್ದರಿಂದ ಮಕ್ಕಳಾಗಿರುವ ನಾನು ಮತ್ತು ನೀವು ಈ ಭ್ರಷ್ಟಾಚಾರ ತಡೆಗಟ್ಟುವಲ್ಲಿ ಸಕ್ರೀಯವಾಗಿ ಭಾಗವಹಿಸಿ ಈ ನಮ್ಮ ದೇಶವನ್ನು ಉತ್ತಮಗೊಳಿಸಬೇಕು.

ನಾವು ಕಾಲೇಜು ಸ್ಕೂಲ್ ಗಳಿಗೆ ಸೇರಿಕೊಳ್ಳುವ ಉದ್ಡೇಶವೇನು? ಜ್ಞಾನ ಸಂಪಾದಿಸಿಕೊಳ್ಳುವ ಉದ್ದೇಶವೇ? ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತೆಸೆಯಲು ನಾವು ವಿಫಲರಾದರೆ ನಾವು ಸಂಪಾದಿಸುವ ಈ ಜ್ಞಾನದಿಂದಲೇ ಉಪಯೋಗ? ನಾವು ನಮ್ಮನ್ನು ವಿದ್ಯಾವಂತರೆಂದು ಹಾಗೂ ಸ್ವತ್ರಂತ್ಯವಾಗಿ ಯೋಚನೆ ಮಾಡುವ ಶಕ್ತಿ ಉಳ್ಳವರೆಂದು ಹೇಳಿ ಕೊಳ್ಳುತ್ತೇವೆ. ಆದರೆ ನಾವು ನಮ್ಮ ಈ ಸಂಪತ್ತನ್ನು ಎಷ್ಟರ ಮಟ್ಟಿಗೆ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದ್ದೇವೆ? ನಾವು ಶಾಲೆಗಳಲ್ಲಿ ಮೌಲ್ಯಧಾರಿತ ವಿದ್ಯೆಯನ್ನು ಪಡೆದುಕೊಂಡರೆ ಸಾಲದು ಅದನ್ನು ನಾವು ಭ್ರಷ್ಟಾಚಾರ ತಡೆಗಟ್ಟುವಂತಹ ಕಾರ್ಯಕ್ರಮಗಳಲ್ಲಿ ಉಪಯೋಗಿಸದಿದ್ದರೆ ಅದು ನಿಷ್ಟ್ರಯೋಜಕ.

ಇತಿಹಾಸ ನಮಗೆ ಸ್ಪಷ್ಟವಾಗಿ ಚಿತ್ರಿಸುವುದೇನೆಂದರೆ ಎಲ್ಲಾ ವಿದ್ಯಾರ್ಥಿಗಳ ಚಳುವಳಿ ಸಮಾಜದ ಮೇಲೆ ಪ್ರಭಾವ ಬೀರಿರದಿದ್ದರೂ ಹೆಚ್ಛಿನವು ಪ್ರಭಾವ ಬೀರಿರದಿದ್ದರೂ ಹೆಚ್ಛಿನವು ಪ್ರಭಾವ ಬೀರಿವೆ.

ಉದಾಹರಣೆಗೆ ಸ್ವಾತ್ರಂತ್ಯ ಹೋರಾಟದಲ್ಲಿ ವಿದ್ಯಾರ್ಥಿಗಳ ಪ್ರಭಾವ ಅಥವಾ ಸಿನಿಮಾ ರಂಗದ ಉದಾಹರಣೆ ಬೇಕಾದರೆ : ಎಷ್ಟು ಜನ ಹಿಂದಿ ಚಲನಚಿತ್ರ "ಚಿಲಲ್ಲರ್ಸ್ ಪಾರ್ಟಿ" ನೋಡಿದ್ದೀರಿ? ಆ ಸಿನಿಮಾದಲ್ಲಿ ನಟ ಸಲ್ಮಾನ್ ಖಾನ್ ರವರು ಕೂಡ ವಿದ್ಯಾರ್ಥಿಗಳು ಚಳುವಳಿ ನಡೆಸಿದ ಅದು ಯಾವ ಸಮಾಜದ ಬದಲಾವಣೆಗೂ ಕಾರಣವಾಗಬಹುದು ಎಂಬುದನ್ನೇ ತಾನೇ ಚಿತ್ರಿಸಿದ್ದಾರೆ.

Start a discussion about ಸದಸ್ಯ:Divya Amshu/sandbox

Start a discussion