ವ್ಯವಹಾರ ಹಣಕಾಸಿನ ಮೂಲಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
     ವ್ಯವಹಾರವು ಸಮಾಜದ ಬಳಕೆಗೆ ಬೇಕಾದ ಸರಕು ಸೇವೆಗಳನ್ನು ಉತ್ಪಾದಿಸುವ ಮತ್ತು ವಿತರಣೆ ಮಾಡುವ ಚಟುವಟಿಕೆಗಳಿಗೆ ಸಂಬಂಧಿಸಿದೆ. ವ್ಯವಹಾರದ ವಿವಿಧ ಚಟುವಟಿಕೆಗಳನ್ನು ನಡೆಸಲು ಹಣಕಾಸು ಅಥವಾ ಬಂಡವಾಳವು ಅತ್ಯಂತ ಅಗತ್ಯವಾಗಿದೆ. ವ್ಯವಹಾರ ಸಂಸ್ಥೆಯೊಂದನ್ನು ನಡೆಸಲು ಅಗತ್ಯವಾದ ಹಣಕಾಸು ಅಥವಾ ಬಂಡವಾಳವನ್ನು ವ್ಯವಹಾರ ಹಣಕಾಸು ಎಂದು ಕರೆಯಲಾಗುತ್ತದೆ.

ಹಣಕಾಸಿನ ಲಕ್ಷಣಗಳೆಂದರೆ

೧. ವ್ಯವಹಾರ ಹಣಕಾಸು ವ್ಯವಹಾರ ಸಂಸ್ಥೆಯ ಚಟುವಟಿಕೆಗಳನ್ನು ನಡೆಸಲು ಬೇಕಾದ ಬಂಡವಾಳವನ್ನು ವ್ಯವಸ್ಥೆಗೊಳಿಸುತ್ತದೆ.
೨. ಇದು ಉದ್ದೇಶಾಧಾರಿತವಾದ ಚಟುವಟಿಕೆಯಾಗಿದೆ. ಸಂಸ್ಥೆಯ ಲಾಭಗಳಿಕೆ,ಭವಿಷ್ಯಕ್ಕೆ ಬೇಕಾದ ನಿಧಿಗಳನ್ನು ನಿರ್ಮಿಸುವುದು ಮುಂತಾದ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸಹಾಯ ಮಾಡುತ್ತದೆ.
೩. ವ್ಯವಹಾರ ಹಣಕಾಸು ವ್ಯವಹಾರಕ್ಕೆ ಬೇಕಾದ ಬಂಡವಾಳವನ್ನು ವಿವಿಧ ಮೂಲಗಳಿಂದ ಸಂಗ್ರಹಿಸುವುದು,ಸಂಗ್ರಹಿಸಿದ ಬಂಡವಾಳವನ್ನು ಸಂಸ್ಥೆಯ ಚಟುವಟಿಕೆಗಳಲ್ಲಿ ಅಥವಾ ಆಸ್ತಿಗಳಲ್ಲಿ ಹೂಡಿಕೆ ಮಾಡುವುದು ಮತ್ತು ಹೂಡಿಕೆಯಾದ ಬಂಡವಾಳವನ್ನು ದಕ್ಷ ಮತ್ತು ಲಾಭದಾಯಕ ಬಳಕೆಗೆ ವ್ಯವಸ್ಥಾಪನೆ ಮಾಡುವ ಚಟುವಟಿಕೆಗಳನ್ನು ಒಳಗೊಂಡಿದೆ.
ವ್ಯವಹಾರ ಹಣಕಾಸು ವ್ಯವಹಾರ ಸಂಸ್ಥೆಯ ಜೀವನಾಡಿಯಾಗಿದೆ. ಸಣ್ಣ ಮಾಧ್ಯಮ ಅಥವಾ ಬೃಹತ್ ಪ್ರಮಾಣದ ಯಾವುದೇ ರೀತಿಯ ವ್ಯವಹಾರ ಸಂಸ್ಥೆಯಿರಲಿ , ಬಂಡವಾಳವಿಲ್ಲದೆ ಸಂಸ್ಥೆಯ ಕಾರ್ಯಚಟುವಟುಕೆಗಳನ್ನು ನಡೆಸಲು ಮತ್ತು ಅದರ ಉದ್ದೇಶಗಳನ್ನು ಈಡೇರಿಸಲು ಸಾಧ್ಯವಾಗುವುದಿಲ್ಲ.ಒಬ್ಬ ವ್ಯವಹಾರೋದ್ಯಮಿ ಒಂದು ವ್ಯವಹಾರವನ್ನು ಸ್ಥಾಪಿಸಲು ನಿರ್ಧರಿಸಿದ ಪ್ರಾರಂಭಿಕ ಹಂತದಿಂದಲೂ ಬಂಡವಾಳದ ಅಗತ್ಯತೆ ಇದ್ದೆಇರುತ್ತದೆ.ಒಂದು ವ್ಯವಹಾರ ಸಂಸ್ಥೆಗೆ ಬಂಡವಾಳವು ಈ ಕೆಳಗೆನ ಕಾರಣಗಳಿಂದಾಗಿ ಅತ್ಯವಶ್ಯಕವಾಗಿದೆ.
  • ಸ್ಥಿರ ಆಸ್ಥಿಗಳಾದ ಭೂಮಿ ಮತ್ತು ಕಟ್ಟಡ,ಸ್ಥಾವರ ಮತ್ತು ಯಂತ್ರೋಪಕರಣ,ಪೀಠೋಪಕರಣ ಮೂಂತಾದ ಆಸ್ತಿಗಳನ್ನು ಖರೀದಿಸಲು,
  • ಹಳೆಯ ಹಾಗು ಅನುಪಯುಕ್ತವಾದ ಆಸ್ತಿಗಳನ್ನು ಬದಲಾಯಿಸಲು ಇಲ್ಲವೆ ಹೊಸ ಆಸ್ತಿಗಳನ್ನು ಖರೀದಿಸಲು,
  • ವ್ಯವಹಾರವನ್ನು ವಿಸ್ತರಿಸಲು,ಆಧುನೀಕರಣಗೊಳಿಸಲು,ಉತ್ಪಾದನೆಯಲ್ಲಿ ವೈವಿಧ್ಯತೆತರಲು,
  • ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು,
  • ಕಾರ್ಮಿಕರ ಉತ್ಪಾದನೆಯನ್ನು ತರಬೇತಿ ಕಾರ್ಯಕ್ರಮಗಳ ಮೂಲಕ ಹೆಚ್ಚಿಸಲು,
  • ಕಚ್ಚಾ ವಸ್ತುಗಳನ್ನು ಖರೀದಿಸಲು,
  • ಕಾರ್ಮಿಕರಿಗೆ ಸಂಬಳ ಮತ್ತು ಕೂಲಿಯನ್ನು ನೀಡಲು,
  • ದಿನನಿತ್ಯದ ಖರ್ಚು-ವೆಚ್ಚಗಳನ್ನು ನಿರ್ವಹಿಸಲು

ಹಣಕಾಸಿನ ಅವಶ್ಯಕತೆಗಳನ್ನು ಹೀಗೆ ವಿಂಗಡಿಸಬಹುದು

ದೀರ್ಘಾವಧಿ ಬಂಡವಾಳದ ಅವಶ್ಯಕತೆ:- ವ್ಯವಹಾರ ಸಂಸ್ಥೆಯನ್ನು ಸ್ಥಾಪಿಸುವಾಗ ಸ್ಥಿರ ಆಸ್ತಿಗಳಾದ ಭೂಮಿ ಮತ್ತು ಕಟ್ಟಡ, ಸ್ಥಾವರ ಮತ್ತು ಯಂತ್ರಗಳು, ಪೀಠೋಪಕರಣ ಮುಂತಾದ ಆಸ್ತಿಗಳನ್ನು ಖರೀದಿಸಲು ಬಂಡವಾಳ ಅವಶ್ಯಕತೆ ಇರುತ್ತದೆ. ಇದನ್ನು ವ್ಯವಹಾರದ ಸ್ಥಿರ ಬಂಡವಾಳದ ಅಗತ್ಯತೆ ಎಂದು ಕರೆಯಲಾಗುತ್ತದೆ. ಸ್ಥಿರ ಆಸ್ತಿಗಳ ಖರೀದಿಗೆ ಬೇಕಾದ ಬಂಡವಾಳವು ವ್ಯವಹಾರದಲ್ಲಿ ತುಂಬಾ ದೀರ್ಘಾಕಾಲದವರೆಗೆ ವಿನಿಯೋಜಿತವಾಗಿರುತ್ತದೆ. ವಿವಿಧ ಬಗೆಯ ವ್ಯವಹರ ಸಂಸ್ಥೆಗಳು,ಅವುಗಳ ಸ್ವರೂಪ,ಪ್ರಮಾಣ, ಉತ್ಪನ್ನದ ವಿಧ ಮುಂತಾದ ಅಂಶಗಳನ್ನು ಆಧರಿಸಿ ವಿವಿಧ ಪ್ರಮಾಣದಲ್ಲಿ ಸ್ಥಿರ ಬಂಡವಾಳವನ್ನು ಬಯಸುತ್ತವೆ.

ಅಲ್ಪಾವಧಿ ಬಂಡವಾಳದ ಅವಶ್ಯಕತೆ:- ಒಂದು ವ್ಯವಹಾರ ಸಂಸ್ಥೆಯ ಹಣಕಾಸಿನ ಅವಶ್ಯಕತೆ,ಸ್ಥಿರ ಆಸ್ತಿಗಳ ಖರೀದಿಯೊಂದಿಗೆ ಕೊನೆಗೊಳ್ಳುವುದಿಲ್ಲ,ತನ್ನ ದಿನ ನಿತ್ಯದ ಚಟುವಟಿಕೆಗಳನ್ನು ನಡೆಸಲು ಬಂಡವಾಳದ ಅವಶ್ಯಕತೆ ಇದೆ.ಇದನ್ನು ದುಡಿಯುವ ಬಂಡವಾಳ ಎಂದು ಕರೆಯಲಾಗುತ್ತದೆ.ಈ ಬಂಡವಾಳವನ್ನು ಚರ ಆಸ್ತಿಗಳನ್ನು ಹೊಂದಲು ಮತ್ತು ದಿನ ನಿತ್ಯದ ಖರ್ಚುಗಳಾದ ಸಂಬಳ,ಕೂಲಿ,ಬಾಡಿಗೆ ಮತ್ತು ತೆರಿಗೆ ಮುಂತಾದವುಗಳನ್ನು ಪಾವತಿಸಲು ಬಳಸಲಾಗುತ್ತದೆ. ದುಡಿಯುವ ಬಂಡವಾಳದ ಅವಶ್ಯಕತೆಯು ಹಲವಾರು ಅಂಶಗಳನ್ನು ಆಧರಿಸಿ ಸಂಸ್ಥೆಯಿಂದ ಸಂಸ್ಥೆಗೆ ಬದಲಾಗುತ್ತದೆ.

ಹಣಕಾಸಿನ ಮೂಲಗಳ ವಿಧಗಳು

 ಮಾಲೀಕತ್ವದ ಆಧಾರದ ಮೇಲೆ ಹಣಕಾಸು ಮೂಲಗಳನ್ನು ಮಾಲೀಕರ ಬಂಡವಾಳ ಮತ್ತು ಸಾಲದ ಬಂಡವಾಳ ಅಥವ ಸಾಲದ ನಿಧಿ ಎಂದು ವಿಂಗಡಿಸಬಹುದು.

ಮಾಲೀಕರ ಬಂಡವಾಳ:- ಮಾಲೀಕರ ಬಂಡಳವು ಸಂಸ್ಥೆಯ ಮಾಲೀಕರು ತೊಡಗಿಸಿದ ಬಂಡವಾಳವಾಗಿದೆ.ಮಾಲೀಕರೆಂದರೆ, ಏಕ ವ್ಯಕ್ತಿ ವ್ಯಾಪಾರಿಯಾಗಿರಬಹುದು, ಪಾಲುದಾರಿಕಾ ಸಂಸ್ಥೆಯ ಪಾಲುದಾರರಾಗಿರಬಹುದು ಅಥವ ಕಂಪೆನಿಗಳ ಷೇರುದಾರರಾಗಿರಬಹುದು. ಮಾಲೀಕರು ತೊಡಗಿಸಿದ ಬಂಡವಾಳ ಜೊತೆಗೆ ಇದು ಸಂಸ್ಥೆಯ ಲಾಭದ ಪುನರ್ವಿನಿಯೋಗವನ್ನು ಒಳಗೊಂಡಿದೆ.ಈ ಬಂಡವಾಳವು ಸಂಸ್ಥೆಯಲ್ಲಿ ದಿರ್ಘಕಾಲದವರೆಗೆ ವಿನಿಯೋಜಿತವಾಗಿರುತ್ತದೆ ಮತ್ತು ಸಂಸ್ಥೆಯು ಅಸ್ಥಿತ್ವದಲ್ಲಿ ಇರುವಾಗ ಇದನ್ನು ಮರುಪಾವತಿ ಮಾಡುವುದಿಲ್ಲ

ಸಾಲದ ಬಂಡವಾಳ:- ಹೊರಗಿನಿಂದ ಸಾಲ ಎತ್ತುವ ಮೂಲಕ ಸಂಗ್ರಹಿಸುವ ಹಣಕಾಸನ್ನು ಸಾಲದ ಬಂಡವಾಳವೆಂದು ಕರೆಯಲಾಗುತ್ತದೆ. ವಾಣಿಜ್ಯ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ಮೂಲಕ, ಸಾಲಪತ್ರಗಳನ್ನು ಬಿಡುಗಡೆ ಮಾಡುವ ಮೂಲಕ, ಸಾರ್ವಜನಿಕ ಠೇವಣಿ ಮತ್ತು ವ್ಯಪಾರಿ ಸಾಲದ ಮುಖಾಂತರ ಈ ಬಂಡವಾಳವನ್ನು ಸಂಗ್ರಹಿಸಲಾಗುತ್ತದೆ.ಸಾಲದ ಹಣಕಾಸಿನ ಮೂಲಗಳು ಕೆಲವು ನಿಯಮ ಮತ್ತು ನಿಬಂಧನೆಗಳಿಗನುಗುಣವಾಗಿ ಒಂದು ನಿರ್ಧಿಷ್ಟ ಅವಧಿಗೆ ಸಾಲ ಸೌಲಭ್ಯವನ್ನು ಒದಗಿಸುತ್ತವೆ. ಮತ್ತು ಅವಧಿ ಮುಗಿದ ನಂತರ ಸಾಲವನ್ನು ಮರುಪಾವತಿ ಮಾಡಬೇಕು. ಸಾಲದ ಹಣಕಾಸಿಗೆ ಒಂದು ನಿಶ್ಚಿತ ದರದಲ್ಲಿ ಪ್ರತಿವರ್ಷ ಬಡ್ಡಿಯನ್ನು ಪಾವತಿಸಬೇಕು.ಹೀಗಾಗಿ ಸಂಸ್ಥೆಯ ಗಳಿಕೆಯು ಕಡಿಮೆ ಇರುವ ಅಥವ ನಷ್ಟವನ್ನುನುಭವಿಸಿದ ವರ್ಷಗಳಲ್ಲಿ ಈ ಮೂಲಗಳು ಸಂಸ್ಥೆಯ ಮೇಲೆ ಹೆಚ್ಚಿನ ಹಣಕಾಸಿನ ಹೊರೆಯನ್ನುಂಟುಮಾಡುತ್ತವೆ. ಸಾಮಾನ್ಯವಾಗಿ ಸಾಲದ ಹಣಕಾಸನ್ನು ಅಥವಾ ನಿಧಿಯನ್ನು ಸ್ಥಿರ ಸ್ವತ್ತುಗಳ ಆಧಾರದ ಮೇಲೆ ಪಡೆಯಲಾಗುತ್ತದೆ.

ಹಣಕಾಸು ಸಂಗ್ರಹಣೆ ವಿಧಾನಗಳು

 ವ್ಯವಹಾರ ಸಂಸ್ಥೆಯೊಂದು ಹಲವಾರು ಮೂಲಗಳಿಂದ ಹಣಕಾಸನ್ನು ಸಂಗ್ರಹಿಸಬಹುದು.ಪ್ರತಿಯೊಂದು ಹಣಕಾಸಿನ ಮೂಲವು ತನ್ನದೇ ಆದ ವಿಶಿಷ್ಟ ಗುಣಲಕ್ಷಣವನ್ನು ಹೊಂದಿದೆ. ವಿವಿಧ ಬಗೆಯ ಹಣಕಾಸು ಮೂಲಗಳ ಸಂಕ್ಷಿಪ್ತ ವಿವರಣೆಯನ್ನು ಅವುಗಳ ಗುಣಾವಗುಣಗಳೊಂದಿಗೆ ಈ ಕೆಳಗೆ ವಿವರಿಸಲಾಗಿದೆ.

ಷೇರುಗಳು

ಕಂಪನಿಯು ತನ್ನ ಷೇರು ಬಂಡವಾಳವನ್ನು,ಷೇರುಗಳನ್ನು ಬಿಡುಗಡೆ ಮಾಡುವ ಮೂಲಕ ಸಂಗ್ರಹಿಸುತ್ತದೆ.ಕಂಪನಿಯು ಷೇರು ಬಂಡವಾಳವನ್ನು ನಿರ್ದಿಷ್ಟ ಮುಖಬೆಲೆಯ ಸಣ್ಣ ಸಣ್ಣ ಘಟಕಗಳನ್ನಾಗಿ ವಿಭಾಗಿಸಿ ಪ್ರತಿ ಘಟಕವನ್ನು ಷೇರು ಎಂದು ಕರೆಯಲಾಗುತ್ತದೆ.ಕಂಪನಿಗಳು ಸಾಮಾನ್ಯವಾಗಿ ಎರಡು ಬಗೆಯ ಷೇರುಗಳನ್ನು ಬಿಡುಗಡೆ ಮಾಡುವ ಮೂಲಕ ಬಂಡವಾಳವನ್ನು ಸಂಗ್ರಹಿಸುತ್ತವೆ, ಅವುಗಳೆಂದರೆ,
ಸಾಮಾನ್ಯ ಷೇರುಗಳು ಅಥವಾ ಈಕ್ವಿಟಿ ಷೇರುಗಳು
ಪ್ರಾಶಸ್ತ್ಯದ ಷೇರುಗಳು ಅಥಾವ ಆದ್ಯತಾ ಷೇರುಗಳು

ಸಾಮಾನ್ಯ ಷೇರುಗಳು ಅಥವಾ ಈಕ್ವಿಟಿ ಷೇರುಗಳು

   ಸಾಮಾನ್ಯ ಷೇರುಗಳು ಕಂಪನಿಯ ಅತ್ಯಂತ ಪ್ರಮುಖ ದೀರ್ಘಾವಧಿ ಹಣಕಾಸಿನ ಮೂಲಗಳಾಗಿವೆ. ಸಾಮಾನ್ಯ ಷೇರುಗಳ ಮೂಲಕ ಸಂಗ್ರಹಿಸಿದ ಬಂಡವಾಳವನ್ನು ಕಂಪನಿ ವಿಸರ್ಜನೆಯ ಸಂದರ್ಭದಲ್ಲಿ ಮಾತ್ರ ಮರುಪಾವತಿ ಮಾಡುವುದುರಿಂದ ಇದು ಶಾಶ್ವತ ಬಂಡವಾಳ ನಿಧಿಯಾಗಿದೆ.

ಸಾಮಾನ್ಯ ಷೇರುಗಳ ಯಾವುದೇ ಪ್ರಾಶಸ್ತ್ಯದ ಹಕ್ಕುಗಳನ್ನು ಹೊಂದಿರುವುದಿಲ್ಲ.ಈ ಷೇರುಗಳನ್ನು ಬಿಡುಗಡೆ ಮಾಡಿ ಸಂಗ್ರಹಿಸಿದ ಬಂಡವಾಳವು ಕಂಪನಿಯ ಮಾಲಿಕತ್ವವನ್ನು ಪ್ರತಿನಿಧಿಸುತ್ತದೆ.ಹೀಗಾಗಿ ಇದನ್ನು ಮಾಲೀಕರ ಬಂಡವಾಳ ಅಥವಾ ಮಾಲೀಕರ ನಿಧಿ ಎಂದು ಕರೆಯಲಾಗುತ್ತದೆ.ಸಾಮಾನ್ಯ ಷೇರುಗಳನ್ನು ಹೊಂದಿರುವ ಷೇರುದಾರರು ನಿರ್ದಿಷ್ಟ ದರದ ಲಾಭಾಂಶವನ್ನು ಪಡೆಯುವುದಿಲ್ಲ.ಬದಲಾಗಿ ಕಂಪನಿಯ ಲಾಭದ ಆಧಾರದ ಮೇಲೆ ಲಾಭಾಂಶವನ್ನು ಪಡೆಯುತ್ತಾರೆ.ಹಾಗೆಯೇ ಲಾಭವನ್ನು ಕಡಿಮೆಗಳಿಸಿದ ಅಥವಾ ನಷ್ಟಭಯ ಹೊಂದಿರುವ ಬಂಡವಾಳ ಎಂದು ಕರೆಯಲಾಗುತ್ತದೆ.ಸಾಮಾನ್ಯ ಷೇರುಗಳ ಷೇರುದಾರರು ಮತದಾನ ಹಕ್ಕನ್ನು ಹೊಂದಿರುತ್ತಾರೆ.

ಪ್ರಾಶಸ್ತ್ಯ ಷೇರುಗಳ

ಪ್ರಾಶಸ್ತ್ಯ ಷೇರುಗಳು ಷೇರುದಾರರು ಕಂಪನಿಯು ಅಸ್ಥಿತ್ವದಲ್ಲಿರುವಾಗ ಲಾಭಾಂಶವನ್ನು ಮತ್ತು ಕಂಪನಿಯ ವಿಸರ್ಜನೆಯ ಸಂಧರ್ಭದಲ್ಲಿ ಬಂಡವಾಳ ಮರು ಪಾವತಿಯನ್ನು ಮೊದಲಿಗೆ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಹೀಗಾಗಿ ಈ ಷೇರುಗಳನ್ನು ಪ್ರಾಶಸ್ತ್ಯದ ಷೇರುಗಳು ಎಂದು ಕರೆಯಲಾಗುತ್ತದೆ.
ಪ್ರಾಶಸ್ತ್ಯ ಷೇರುಗಳನ್ನು ಹೊಂದಿರುವ ಷೇರುದಾರರಿಗೆ ಸಾಮಾನ್ಯ ಷೇರುಗಳ ಷೇರುದಾರರಿಗಿಂತ ಮೊದಲೇ ಲಾಭಾಂಶವನ್ನು ಘೋಷಣೆ ಮಾಡುಲಾಗುತ್ತದೆ ಮತ್ತು ಕಂಪನಿಯ ವಿಸರ್ಜನೆಯ ಸಂದರ್ಭದಲ್ಲಿ ಸಾಮಾನ್ಯ ಷೇರುದಾರರಿಗಿಂತ ಮೊದದೇ ಬಂಡವಾಳವನ್ನು ಮರುಪಾವತಿ ಮಾಡಲಾಗುತ್ತದೆ. ಪ್ರಾಶಸ್ತ್ಯ ಷೇರುಗಳು ನಿರ್ದಿಷ್ಠದರದ ಲಾಭಾಂಶವನ್ನು ಪಡೆಯುತ್ತವೆ ಮತ್ತು ಕಂಪನಿಯಲ್ಲಿ ಇವುಗಳಿಗೆ ಮತದಾನದ ಹಕ್ಕು ಇರುವುದಿಲ್ಲ.

ಪ್ರಾಶಸ್ತ್ಯ ಷೇರುಗಳನ್ನು ಈ ಕೆಳಗಿನಂತೆ ವಿವರಿಸಬಹುದು ೧.ಸಂಚಿತ ಮತ್ತು ಅಸಂಚಿತ ಪ್ರಾಶಸ್ತ್ಯ ಷೇರುಗಳು

       ಕಂಪನಿಯು ಯಾವುದೇ ವರ್ಷದಲ್ಲಿ ಸಾಕಷ್ಟು ಲಾಭಗಳಿಸದೆ,ಲಾಭಾಂಶ ಹಂಚಿಕೆ ಮಾಡಲು ಸಾಧವಾಗದಿದ್ದರೆ ಆ ಪಾವತಿಯಾಗದ ಲಾಭಾಂಶವು ಮುಂದಿನ ವರ್ಷಕ್ಕೆ ಸಂಚಿತ ಗೊಳುವ ಹಕ್ಕನ್ನು ಪ್ರಾಶಸ್ತ್ಯ ಷೇರುಗಳು ಹೊಂದಿದ್ದರೆ ಅವುಗಳನ್ನು ಸಂಚಿತ ಪ್ರಾಶಸ್ತ್ಯದ ಷೇರುಗಳೆಂದು ಕರೆಯುತ್ತಾರೆ.
    ಅಸಂಚಿತ ಪ್ರಾಶಸ್ತ್ಯ ಷೇರುಗಳಲ್ಲಿ ಯಾವುದೇ ವರ್ಷದಲ್ಲಿ ಲಾಭಾಂಶ ನೀಡದಿದ್ದರೆ, ಅದು ಮುಂದಿನ ವರ್ಷಗಳಿಗೆ ಸಂಚಯನಗೊಳ್ಳುವುದಿಲ್ಲ.

೨. ಭಾಗವಹಿಸುವ ಮತ್ತು ಭಾಗವಹಿಸದ ಪ್ರಾಶಸ್ತ್ಯ ಷೇರುಗಳು

    ನಿರ್ದಿಷ್ಟ ದರದ ಲಾಭಾಂಶವನ್ನು ಪಡೆಯುವುದರ ಜೊತೆಗೆ, ಕಂಪನಿಯ ಹೆಚ್ಚುವರಿ ಲಾಭದಲ್ಲಿ ಲಾಭಾಂಶ ಪಡೆಯಲು ಸಾಮಾನ್ಯ ಷೇರುಗಳ ಜೊತೆ ಭಾಗವಹಿಸುವ ಹಕ್ಕನ್ನು 

ಹೊಂದಿರುವ ಪ್ರಾಶಸ್ತ್ಯ ಷೇರುಗಳನ್ನು ಭಾಗವಹಿಸುವ ಪ್ರಾಶಸ್ತ್ಯ ಷೇರುಗಳು ಎಂದು ಕರೆಯಲಾಗುತ್ತದೆ.

  ಭಾಗವಹಿಸದ ಪ್ರಾಶಸ್ತ್ಯ ಷೇರುಗಳು ಕೇವಲ ನಿರ್ದಿಷ್ಟ ದರದಲ್ಲಿ ಲಾಭಾಂಶವನ್ನು ಮಾತ್ರ ಪಡೆಯುತ್ತವೆ ಮತ್ತು ಕಂಪನಿಯ ಹೆಚ್ಚುವರಿ ಲಾಭಾಂಶಕ್ಕೆ ಸಾಮಾನ್ಯ ಷೇರುಗಳ ಜೊತೆ ಭಾಗವಹಿಸುವ ಹಕ್ಕನ್ನು ಹೊಂದಿರುವುದಿಲ್ಲ.

೩.ಪರಿವರ್ತನೀಯ ಮತ್ತು ಪರಿವರ್ತನೀಯವಲ್ಲದ ಪ್ರಾಶಸ್ತ್ಯ ಷೇರುಗಳು

  ಒಂದು ನಿರ್ದಿಷ್ಟ ಅವಧಿ ಮುಗಿದ ನಂತರ ಸಾಮಾನ್ಯ ಷೇರುಗಳನ್ನಾಗಿ ಪರಿವರ್ತನೆ ಮಾಡುಬಹುದಾದ ಪ್ರಾಶಸ್ತ್ಯ ಷೇರುಗಳನ್ನು ಪರಿವರ್ತನೀಯ ಪ್ರಾಶಸ್ತ್ಯದ ಷೇರುಗಳು ಎಂದು ಕರೆಯಲಾಗುತ್ತದೆ
  ಆದರೆ ಪರಿವರ್ತನೀಯವಲ್ಲದ ಪ್ರಾಶಸ್ತ್ಯದ ಷೇರುಗಳನ್ನು ಸಾಮಾನ್ಯ ಷೇರುಗಳನ್ನಾಗಿ ಪರಿವರ್ತಿಸಲು ಸಾಧ್ಯಾವಿಲ್ಲ.

೪.ವಿಮುಕ್ತಾರ್ಹ ಮತ್ತು ವಿಮುಕ್ತಾರ್ಹವಲ್ಲದ ಪ್ರಾಶಸ್ತ್ಯ ಷೇರುಗಳು

  ಕಂಪನಿಯು ಅಸ್ಥಿತ್ವದಲ್ಲಿರುವಾಗಲೇ ನಿರ್ದಿಷ್ಟ ಅವಧಿ ಮುಗಿದ ನಂತರ ಮರುಪಾವತಿ ಮಾಡಬಹುದಾದ ಷೇರುಗಳನ್ನು ವಿಮುಕ್ತಾರ್ಹ ಪ್ರಾಶಸ್ತ್ಯದ ಷೇರುಗಳು ಎಂದು ಕರೆಯಲಾಗುತ್ತದೆ.
  ಆದರೆ ವಿಮುಕ್ತಾರ್ಹವಲ್ಲದ ಪ್ರಾಶಸ್ತ್ಯ ಷೇರುಗಳನ್ನು ಕಂಪನಿಯು ವಿಸರ್ಜನೆ ಹೊಂದುವವರೆಗೆ ಮರುಪಾವತಿ ಮಾಡಲು ಸಾಧ್ಯವಿಲ್ಲ.


ಸಾಲಪತ್ರಗಳು

 ಸಾಲಪತ್ರಗಳು ದಿರ್ಘಾವಧಿ ಹಣಕಾಸಿನ ಮತೋಂದು ಪ್ರಮುಖ ಮೂಲವಾಗಿವೆ.ಕಂಪನಿಯು ಸಾರ್ವಜನಿಕರಿಗೆ ಸಾಲಪತ್ರಗಳನ್ನು ಬಡುಗಡೆ ಮಾಡುವ ಮೂಲಕ ಸಾಲವನ್ನು ಸಂಗ್ರಹಿಸಬಹುದು.ಸಾಲಪತ್ರವು ಸಾರ್ವಜನಿಕರಿಂದ ಸಾಲವನ್ನು ಸಂಗ್ರಹಿಸಿದ್ದಕ್ಕೆ ಕಂಪನಿಯು ನೀಡುವ ಸ್ವೀಕೃತಿ ಪತ್ರವಾಗಿದೆ.ಜೊತೆಗೆ ನಿಶ್ಚಿತ ಅವಧಿ ಮುಗಿದ ನಂತರ ಸಾಲವನ್ನು ಮರುಪಾವತಿ ಮಾಡುವ ಭರವಸೆಯನ್ನು ನೀಡುತ್ತದೆ.ಸಾಲಪತ್ರಧಾರಕರು ಕಂಪನಿಯ ಸಾಲಿಗರಾಗಿದ್ದು,ಪ್ರತಿ ವರ್ಷವು ನಿಗದಿತ ದರದಲ್ಲಿ ಬಡ್ಡಿಯನ್ನು ಪಡೆಯುತ್ತಾರೆ.ಸಾಲಪತ್ರಗಳನ್ನು ಬಿಡುಗಡೆ ಮಾಡುವಾಗ ಕಂಪನಿಗಳ ಸಾಲ ಮರುಪಾವತಿ ಸಾಮರ್ಥ್ಯವನ್ನು ಅಳೆಯುವ ನಂತರ ಸಂಸ್ಥೆಗಳಿಂದ ಕಂಪನಿಯ ಸಾಲ ಮರುಪಾವತಿ ಸಾಮರ್ಥ್ಯವನ್ನು ನಿರ್ಧರಿಸಬೇಕು.ಕಂಪನಿಯ ಪ್ರಗತಿದರ,ಅದರ ಲಾಭದಾಯಕತೆ,ಹಣಕಾಸಿನ ದೃಢತೆ,ಸಾಲ ವಾಪಸಾತಿ ಸಾಮರ್ಥ್ಯ ಮುಂತಾದ ಅಂಶಗಳ ಆಧಾರದ ಮೇಲೆ ಸಾಲ ಮರುಪಾವತಿ ಸಾಮರ್ಥ್ಯವನ್ನು ನಿರ್ಧರಿಸಲಾಗುತ್ತದೆ.
ಸಾಲಪತ್ರಗಳ ಪ್ರಮುಖ ವಿಧಗಳೆಂದರೆ

೧.ಭದ್ರತೆಯುಳ್ಳ ಸಾಲಪತ್ರಗಳು ಮತ್ತು ಭದ್ರತೆ ರಹಿತ ಸಾಲಪತ್ರಗಳು

 ಕಂಪನಿಯು ತನ್ನ ಆಸ್ತಿಗಳ ಭದ್ರತೆಯ ಆಧಾರದ ಮೇಲೆ ಬಿಡುಗಡೆ ಮಾಡಿದ ಸಾಲಪತ್ರಗಳನ್ನು ಭದ್ರತೆ ಹೊಂದಿದ ಸಾಲಪತ್ರಗಳು ಎಂದು ಕರೆಯಲಾಗುತ್ತದೆ.ಆದರೆ ಭದ್ರತೆ ರಹಿತ ಸಾಲಪತ್ರಗಳಿಗೆ ಕಂಪನಿಯು ತನ್ನ ಆಸ್ತಿಗಳನ್ನು ಭದ್ರತೆಯಾಗಿ ನೀಡಿರುವುದಿಲ್ಲ.

೨.ನೋಂದಾಯಿತ ಸಾಲಪತ್ರಗಳು ಮತ್ತು ಧಾರಕ ಸಾಲಪತ್ರಗಳು

 ಕಂಪನಿಯ ಸಾಲಪತ್ರ ಧಾರಕರ ನೋಂದಾಣಿಯಲ್ಲಿ ದಾಖಲಾಗಿರುವ ಸಾಲಪತ್ರಗಳು ನೋಂದಾಯಿತ ಸಾಲಪತ್ರಗಳಾಗಿವೆ. ಈ ಸಾಲಪತ್ರಗಳ ವರ್ಗಾವಣೆಯು ವರ್ಗಾವಣೆ ಒಪ್ಪಂದ ಪತ್ರದ ಮೂಲಕ ಮಾತ್ರ ಆಗುತ್ತದೆ.ಆದರೆ,ಧಾರಕ ಅಥಾವಾ ನೋಂದಾಯಿಸಿಲ್ಲದ ಸಾಲಪತ್ರಗಳನ್ನು ಸಾಲಪತ್ರಧಾರಕರ ವಹಿಯಲ್ಲಿ ದಾಖಲಿಸಿರುವುದಿಲ್ಲ,ಹೀಗಾಗಿ ಇವುಗಳ ವರ್ಗಾವಣೆಯು ಸುಲಭವಾಗಿದೆ.

೩.ಪರಿವರ್ತನೀಯ ಮತ್ತು ಪರಿವರ್ತನೀಯವಲ್ಲದ ಸಾಲಪತ್ರಗಳು

 ಒಂದು ನಿರ್ದಿಷ್ಟ ಅವಧಿ ಮುಗಿದ ನಂತರ ಸಾಮಾನ್ಯ ಷೇರುಗಳಾಗಿ ಪರಿವರ್ತನೆ ಮಾಡುಬಹುದಾದ ಸಾಲಪತ್ರಗಳು ಪರಿವರ್ತನೀಯ ಸಾಲಪತ್ರಗಳಾಗಿವೆ.ಆದರೆ ಪರಿವರ್ತನೀಯವಲ್ಲದ ಸಾಲಪತ್ರಗಳನ್ನು ಸಾಮಾನ್ಯ ಷೇರುಗಳಾಗಿ ಪರಿವರ್ತಿಸಲು ಸಾದ್ಯವಿಲ್ಲ.

೪.ವಿಮುಕ್ತಾರ್ಹ ಮತ್ತು ವಿಮುಕ್ತಾರ್ಹವಲ್ಲದ ಸಾಲಪತ್ರಗಳು

 ಕಂಪನಿಯು ಅಸ್ಥಿತ್ವದಲ್ಲಿರುವಾಗ ಒಂದು ನಿರ್ದಿಷ್ಟ ಅವಧಿ ಮುಗಿದ ನಂತರ ಮರುಪಾವತಿ ಮಾಡುಬಹುದಾದ ಸಾಲಪತ್ರಗಳು ವಿಮುಕ್ತಾರ್ಹ ಸಾಲಪತ್ರಗಳಾಗಿವೆ. ಆದರೆ,ವಿಮುಕ್ತಾರ್ಹವಲ್ಲದ ಸಾಲಪತ್ರಗಳನ್ನು ಕಂಪನಿಯ ಅಸ್ಥಿತ್ವದಲ್ಲಿರುವವರೆಗೂ ಮರುಪಾವತಿ ಮಾಡಲಾಗುವುದಿಲ್ಲ.

೫.ಸೇವೆಯೇ ಪ್ರಮುಖ ಗುರಿ:-ಸ್ವ-ಸಹಾಯ ಮತ್ತು ಪರಸ್ಪರ ಸಹಾಯ ತತ್ವದ ತಳಹದಿಯ ಮೇಲೆ ಅಸ್ತಿತ್ವಕ್ಕೆ ಬಂದಿರುವುದರಿಂದ ಮುಖ್ಯ ಉದ್ದೇಶ ಸದಸ್ಯರುಗಳಿಗೆ ಸೇವೆಯನ್ನು ಸಲ್ಲಿಸುವುದಾಗಿದೆ. ಸೇವೆಯ ಮೇಲೆ ಗಳಿಸಿದ ಲಾಭವನ್ನು ನ್ಯಾಯ ಸಮ್ಮತವಾಗಿ ಸಂಸ್ಥೆಯ ಅಧಿನಿಯಮಗಳ ಪ್ರಕಾರ ಹಂಚಲಾಗುತ್ತದೆ.