ವಿಷಯಕ್ಕೆ ಹೋಗು

ಸೂಚ್ಯಂಕಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೂಚ್ಯಂಕಗಳು

[ಬದಲಾಯಿಸಿ]

ಪ್ರತಿಯೊಂದು ವಸ್ತುವಿಗೂ ಒಂದು ಬೆಲೆ ಇರುತ್ತದೆ. ಈ ಬೆಲೆಯನ್ನು ನಾವು ಹಣದ ಮುಲಕ ಅಳತೆ ಮಾಡುತ್ತೇವೆ. ಹಣ ಕೂಡ ಒಂದು ಸರಕಿದ್ದಂತೆ. ಅದಕ್ಕೆ ಸಹ ಒಂದು ಬೆಲೆ ಇರುತ್ತದೆ. ನಮಗೆ ಗೊತ್ತಿರುವ ಹಾಗೆ ಹಣದ ಬೆಲೆ ಹೆಚ್ಚಾಗುತ್ತದೆ ಹಾಗು ಕಡಿಮೆಪ್ರತಿಯೊಂದು ವಸ್ತುವಿಗೂ ಒಂದು ಬೆಲೆ ಇರುತ್ತದೆ. ಈ ಬೆಲೆಯನ್ನು ನಾವು ಹಣದ ಮುಲಕ ಅಳತೆ ಮಾಡುತ್ತೇವೆ. ಹಣ ಕೂಡ ಒಂದು ಸರಕಿದ್ದಂತೆ. ಅದಕ್ಕೆ ಸಹ ಒಂದು ಬೆಲೆ ಇರುತ್ತದೆ. ನಮಗೆ ಗೊತ್ತಿರುವ ಹಾಗೆ ಹಣದ ಬೆಲೆ ಹೆಚ್ಚಾಗುತ್ತದೆ ಹಾಗು ಕಡಿಮೆಯಾಮೆ ಯಾಗುತ್ತದೆ. ನಮ್ಮ ದೇಶದಲ್ಲೇ ನಮ್ಮ ರುಪಾಯಿಯ ಬೆಲೆ ಕಡಿಮೆಯಾಗುತ್ತಿದೆ.ಅದು ಕೇವಲ ೨೭ ಪೈಸೆಗೆ ಸಮ ಎನ್ನುವ ಮಾತನ್ನು ಸಾಮಾನ್ಯವಾಗಿ ಕೇಳುತ್ತೇವೆ. ಇದರ ಅರ್ಥವನ್ನು ನಾವು ತಿಳಿದುಕೊಳ್ಳಬೇಕಾದರೆ ಹಣದ ಬೆಲೆ ಹೇಗೆ ವ್ಯತ್ಯಾಸವಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಹಣದ ಬೆಲೆ ಎಂದರೆ ಅದರ ಕೊಳ್ಳುವ ಚೈತನ್ಯ.ಇತರ ವಸ್ತುಗಳ ಬೆಲೆಗಳನ್ನು ನಾವು ಹೇಗೆ ಹಣದಿಂದ ಅಳೆಯುತ್ತೇವೆಯೋ, ಅದೇ ರೀತಿ ಹಣದ ಬೆಲೆಯನ್ನು ವಸ್ತುಗಳ ಬೆಲೆಗಳ ಮೂಲಕ, ಅಳತೆ ಮಾಡುತ್ತೇವೆ. ಅರ್ಥಶಾಸ್ತ್ರದಲ್ಲಿ ಹಣದ ಬೆಲೆಯನ್ನು ಅಳತೆ ಮಾಡಲು ಯಾವ ಮಾನದಂಡವು ಇಲ್ಲ. ಆದ್ಧರಿಂದ ಸಂಖ್ಯಾಶಾಸ್ತ್ರದಿಂದ "ಸೂಚ್ಯಂಕಗಳು" ಎಂಬ ಸರಿಭಾವನೆಯನ್ನು ಅರ್ಥಶಾಸ್ತ್ರ ಪಡೆದುಕೊಂಡಿದೆ. ಸೂಚ್ಯಂಕವನ್ನು ನಾವು ಹೇಗೆ ವಿವರಿಸಬಹುದೆಂದರೆ ಯಾವುದಾದರೂ ಒಂದು ಕಾಲದಲ್ಲಿ ಆಯ್ಕೆಯಾದ ಸರಕುಗಳ ಬೆಲೆಗಳನ್ನು ಆಧಾರವಾಗಿಟ್ಟುಕೊಂಡು ಆ ಬೆಲೆಗಳಿಗೆ ಹೋಲಿಸಿಕೊಂಡು ಕಂಡುಹಿಡಿಯಲಾಗುವ ಸರಾಸರಿ ಬೆಲೆ ವ್ಯತ್ಯಾಸಗಳನ್ನು ಸೂಚ್ಯಂಕಗಳೆನ್ದು ಕರೆಯಬಹುದು.

ಸೂಚ್ಯಂಕವನ್ನು ರಚಿಸುವ ವಿಧಾನ

[ಬದಲಾಯಿಸಿ]

ಸೂಚ್ಯಂಕಗಳ ರಚನೆಗಳಲ್ಲಿ ಅನೇಕ ಹಂತಗಳಿವೆ. ಅವುಗಳನ್ನು ನಾವು ೪ ಹಂತಗಳಾಗಿ ವಿಂಗಡಿಸಿಕೊಳ್ಳಬಹುದು: ೧. ಸರಕುಗಳ ಆಯ್ಕೆ : ಸೂಚ್ಯಂಕದ ಬೆಲೆಗಾಗಿ ಕೆಲವು ಸರಕುಗಳನ್ನು ಆಯ್ದುಕೊಳ್ಳಬೇಕಾಗುತ್ತದೆ. ಸರಕುಗಳು ಎಲ್ಲಾ ಅಂತಸ್ತಿನ ಜನರಿಗೂ ಬೇಕಾಗುವ ಸರಕುಗಳಾಗಿರಬೇಕು. ಸರಕುಗಳ ಸಂಖ್ಯೆ ಬಹುಮಟ್ಟಿಗೆ ದೊಡ್ಡದಾಗಿರಬೇಕು.ಜೀವನ ಮಟ್ಟಕ್ಕೆ ಅಗತ್ಯವಾಗುವ ಎಲ್ಲಾ ಸರಕುಗಳನ್ನೂ ಆಯ್ದುಕೊಳ್ಳುವುದು ಉತ್ತಮ, ೨. ಮೂಲ ವರ್ಷದ ಆಯ್ಕೆ ಅಥವಾ ಆಧಾರವರ್ಷದ ಆಯ್ಕೆ ; ಸೂಚ್ಯ್ಂಕದ ಬೆಲೆಗೆ ಯಾವುದಾದರೂ ಒಂದು ವರ್ಷವನ್ನು ಆಧಾರ ವರ್ಷವಾಗಿ ಆಯ್ದುಕೊಳ್ಳಬೇಕಾಗುತ್ತದೆ. ಆಧಾರವರ್ಷಗಳನ್ನು ಆಯ್ದುಕೊಳ್ಳಬೇಕದರೆ ಎಚ್ಚರಿಕೆಯಿಂದಿರಬೇಕು. ಅದು ಒಂದು ಸಾಧಾರಣ ವರ್ಷವಾಗಿರಬೇಕು. ಯುದ್ಧ, ಕ್ಷಾಮ, ಪ್ರವಾಹ ಉಂಟಾಗಿರುವ ವರ್ಷವನ್ನು ಆಯ್ದುಕೊಳ್ಳಬಾರದು. ಸೂಚ್ಯಂಕವನ್ನು ಸಾಮಾನ್ಯವಾಗಿ ೨ ಕ್ರಮಗಳಿಂದ ಆಯ್ದುಕೊಳ್ಳಲಾಗುತ್ತದೆ. ಮೊದಲನೆಯದಾಗಿ ಒಂದು ನಿರ್ದಿಷ್ಟ ವಸ್ತುವನ್ನು ಆಧಾರವರ್ಷ ಕ್ರಮವನ್ನು ಅನುಸರಿಸಬಹುದು. ಅಂದರೆ ಈ ಕ್ರಮದಲ್ಲಿ ಪ್ರತಿವರ್ಷಕ್ಕೆ ಹಿಂದಿನ ವರ್ಷ ಆಧಾರ ವರ್ಷವಾಗಿರುತ್ತದೆ. ಉದಾ : ೧೯೮೫ರ ಜನವರಿಗೆ ೧೯೮೪ರ ಜನವರಿ ಆಧಾರವಾಗಿರುತ್ತದೆ. ೧೯೮೪ರ ಜನವರಿಗೆ ೧೯೮೩ರ ವರ್ಷವಾಗಿರುತ್ತದೆ. ಸರಪಳಿ ಆಧಾರವರ್ಷವನ್ನು ಮಾರ್ಷಲ್ ಸೂಚಿಸಿದ್ದಾರೆ. ಆಧಾರ ವರ್ಷದ ಬೆಲೆ ಎಷ್ಟೇ ಆಗಿರಲಿ ಅದನ್ನು ೧೦೦ ಎಂದಿಟ್ಟುಕೊಳ್ಳಲಾಗುತ್ತದೆ. ೩. ಪದಾರ್ಥಗಳ ಬೆಲೆಗಳನ್ನು ನಿರೂಪಿಸುವುದು ; ಆಧಾರವರ್ಷದಲ್ಲಿ ಅದರ ಮುಂದಿನ ವರ್ಷದಲ್ಲಿರುವ ಬೇರೆ ಬೇರೆ ಸರಕುಗಳನ್ನು ಪಟ್ಟಿಮಾಡಿಕೊಳ್ಳಬೇಕು.ಯಾವ ಯಾವ ಪ್ರದೇಷಗಳಲ್ಲಿ ಯಾವ ಸರಕುಗಳು ಮಾರಾಟವಾಗುತ್ತವೆಯೋ ಆಯಾ ಸ್ಥಳಗಳ ಪ್ರಮುಖ ವರ್ತಕರಿಂದ ಸಗಟು ಬೆಲೆಯನ್ನು ತೆಗೆದುಕೊಂಡು ಅವುಗಳ ಸರಾಸರಿ ಬೆಲೆಯನ್ನು ಕಂಡುಹಿಡಿದುಕೊಳ್ಳಬೇಕು. ಚಿಲ್ಲರೆ ಬೆಲೆ ಸೂಚ್ಯಂಕಗಳ ಬೆಲೆಗಳಿಗಿಂತ ಸಗಟು ಬೆಲೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಏಕೆಂದರೆ ಚಿಲ್ಲರೆ ಬೆಲೆ ಎಲ್ಲಾ ಪದಾರ್ಥಗಳಲ್ಲೂ ಒಂದೇ ಆಗಿರುವುದಿಲ್ಲ. ೪, ಶೇಖಡ ಬೆಲೆಗಳನ್ನು ಲೆಕ್ಕ ಹಾಕುವುದು : ಆಧಾರ ವರ್ಷದ ಸರಾಸರಿ ಬೆಲೆ ಆಧಾರದ ಮೇಲೆ ಮುಂದಿನ ವರ್ಷದ ಶೇಖಡ ಬೆಲೆಗಳನ್ನು ಲೆಕ್ಕ ಹಾಕಬೇಕು. ಆಧಾರ ವರ್ಷದಲ್ಲಿ ೧ಕೆ,ಜಿ ಅಕ್ಕಿಯ ಬೆಲೆ ೧ರೂ. ಆದರೆ, ಅದರ ಸರಾಸರಿಯನ್ನು ೧೦೦ ಎಂದು ಭಾವಿಸಬೇಕು. ಮುಂದಿನ ವರ್ಷ ಅದರ ೨ರೂ. ಆದರೆ ಅದರ ಬೆಲೆ ಸರಾಸರಿ ಶೇಖಡ ೨೦೦ರೂ ಆಗುತ್ತದೆ. ಹೀಗೆ ಎಲ್ಲಾ ಸರಕುಗಳಿಗೂ ಶೇಖಡ ಬೆಲೆಯನ್ನು ಕಂಡುಹಿಡಿದುಕೊಳ್ಳಬೇಕು,

ಸೂಚ್ಯಂಕ ಪಟ್ಟಿಯ ರಚನೆಯ ವಿಧಾನದಲ್ಲಿರುವ ಅಡಚನೆಗಳು

[ಬದಲಾಯಿಸಿ]

ಯಾವುದೇ ಸೂಚ್ಯಂಕವನ್ನು ರಚಿಸುವಾಗಲು ನಾವು ಅನೇಕ ಅಡಚಣೆಗಳನ್ನೆದುರಿಸಬೇಕಾಗುತ್ತದೆ, ಇವುಗಳಲ್ಲಿ ಕೆಲವು ಮುಖ್ಯವಾದ ಅಡಚನೆಗಳನ್ನು ಇಲ್ಲಿ ಗಮನಿಸಬಹುದು.

೧. ಸರಕುಗಳ ಆಯ್ಕೆ : ಸೂಚ್ಯಂಕಗಳನು ರಚಿಸುವಾಗ ಯಾವ ಸರಕುಗಳನ್ನು ಆಯ್ದುಕೊಳ್ಳಬೇಕೆಂಬ ಸಮಸ್ಯೆ ಬರುತ್ತದೆ. ಉದಾ ; ನಾವು ತೆಗೆದುಕೊಂಡಿರುವ ಸೂಚ್ಯಂಕ ಪಟ್ಟಿಯಲ್ಲಿ ಕೇವಲ ೫ ಸರಕುಗಳನ್ನು ಮಾತ್ರ ಆಯ್ದುಕೊಂಡಿದ್ದೇವೆ. ಆದರೆ ಅವಷ್ಟೆ ಒಬ್ಬನ ಜೀವನ ಮಟ್ಟವನ್ನು ತೋರಿಸುವುದಿಲ್ಲ. ಇದಕ್ಕೆ ಇನ್ನು ಅನೇಕ ಸರಕುಗಳನ್ನು ಸೇರಿಸಬೇಕಾಗುತ್ತದೆ. ಆದ್ದರಿಂದ ನಾವು ಯಾವ ಉಪಯೋಗಕ್ಕಾಗಿ ಸೂಚ್ಯಂಕವನ್ನು ರಚಿಸುತ್ತೇವೆಂಬುದನ್ನು ನಿಗದಿ ಮಾಡಿಕೊಂಡ ನಂತರ ಅದಕ್ಕೆ ಬೇಕಾದ ಸರಕುಗಳನ್ನು ಸೂಚ್ಯಂಕ ಪಟ್ಟಿಯಲ್ಲಿ ಸೇರಿಸಬೇಕಾಗುತ್ತದೆ.

೨. ಆಧಾರ ವರ್ಷದ ಆಯ್ಕೆ ; ಸೂಚ್ಯಂಕವನ್ನು ರಚಿಸುವಾಗ ನಮಗೆ ಬರುವ ಅತ್ಯಂತ ದೊಡ್ಡ ಕಷ್ಟವೆಂದರೆ ಆಧಾರ ವರ್ಷವನ್ನು ಆಯ್ದುಕೊಳ್ಳುವುದು. ಆಧಾರ ವರ್ಷ ಯಾವ ಏರುಪೇರುಗಳೂ ಇಲ್ಲಾದ ವರ್ಷವಾಗಿರಬೇಕು. ಅದು ಯಾವ ಏರುಪೇರುಗಳು ಇಲ್ಲದ ವರ್ಷವಾಗಿರಬೇಕು.

೩. ಬೆಲೆಗಳ ಆಯ್ಕೆ ; ಸೂಚ್ಯಂಕಗಳ ರಚನೆಯ ಕ್ರಮದಲ್ಲಿ ಬೆಲೆಗಳನ್ನು ನಮೂದಿಸುವಾಗ ಜಾಗರೂಕತೆಯಿಂದಿರಬೇಕಾಗುತ್ತದೆ. ಏಕೆಂದರೆ ಒಂದೇ ವಸ್ತುವಿಗೆ ಬೇರೆ ಬೇರೆ ಕಡೆ ಬೇರೆ ಬೆರೆ ಬೆಲೆಯಿರುತ್ತದೆ.ಯಾವ ಬೆಲೆಯನ್ನು ನಾವು ತೆಗೆದುಕೊಳ್ಳಬೇಕೆಂಬ ಪ್ರಶ್ನೆ ಬರುತ್ತದೆ. ಇದಕ್ಕೆ ಇರುವ ಪರಿಹಾರವೆಂದರೆ, ಸರಕುಗಳು ಅತ್ಯಂತ ಹೆಚಾಗಿ ವ್ಯಾಪಾರವಾಗುವ ಸ್ಥಳದಲ್ಲಿನ ಬೆಲೆಯನ್ನು ನಾವು ತೆಗೆದುಕೊಳ್ಳಬೇಕು. ಈ ಮೂರು ಕ್ರಿಯೆಗಳನ್ನು ಜಾಗರೂಕತೆಯಿಂದ ಅನುಸರಿಸಿದರೆ ನಮಗೆ ಒಳ್ಳೆಯ ಸೂಚ್ಯಂಕಗಳು ದೊರೆಯುತ್ತವೆ.

  • ನ್ಯೂನತೆಗಳು : ಸೂಚ್ಯಂಕಗಳು ಅನೇಕ ನ್ಯೂನತೆಗಳಿಂದ ಕೂಡಿವೆ, ಎನ್ನುವುದನ್ನು ನಾವು ಮರೆಯಬಾರದು. ಅಂಕಿ ಅಂಶಗಳು ಸತ್ಯವಾಗಿರುವುದಿಲ್ಲ. ಸುಳ್ಳು ಅಂಕಿ ಅಂಶಗಳ ಮೇಲೆ ರಚಿತವಾಗಿರುವ ಸೂಚ್ಯಂಕಗಳು ಯಾವ ಗುರಿಯನ್ನು ಸಾಧಿಸುವುದಿಲ್ಲ.
  • ಸೂಚ್ಯಂಕದ ಆಧಾರದ ಮೇಲೆ ಒಂದು ದೇಶದ ಬೆಲೆಗಳನ್ನು ಮತ್ತೊಂದು ದೇಶದ ಬೆಲೆಗಳೊಂದಿಗೆ ಹೋಲಿಸುವುದು ಕಷ್ತವಾಗುತ್ತದೆ. ಏಕೆಂದರೆ ಬೇರೆ ಬೇರ್‍ ದೇಶಗಳಲ್ಲಿ ಅನುಸರಿಸಲಾಗುವ ಆಧಾರ ವರ್ಷ, ಚುನಾಯಿಸಿಕೊಳ್ಳುವ ಸರಕುಗಳು ಬೇರೆಬೇರೆಯಾಗಿರುತ್ತವೆ.
  • ಒಂದು ವರ್ಗದ ಜನರಿಗೆ ರಚಿತವಾಗಿರುವ ಸೂಚ್ಯಂಕಗಳು ಮತ್ತೊಂದು ವರ್ಗದ ಜನರಿಗೆ ಅಷ್ಟು ಪ್ರಯೋಜನವಾಗುವುದಿಲ್ಲ. ಉದಾಹರಣೆಗೆ, ಕಾರ್ಮಿಕರಿಗಾಗಿ ರಚಿತವಾಗಿರುವ ಜೀವನ ವೆಚ್ಚದ ಸೂಚ್ಯಂಕ, ಡಾಕ್ಟರುಗಳಿಗೆ ಅಥವಾ ಎಂಜಿನಿಯರುಗಳಿಗೆ ಪ್ರಯೋಜನಕ್ಕೆ ಬರುವುದಿಲ್ಲ.
  • ಕೊನೆಯದಾಗಿ, ದೀರ್ಘಾವಧಿಯಲ್ಲಿ ಜನರ ಸ್ವಭಾವ ಬದಲಾಯಿಸುವುದರಿಂದ ಹಳೆಯ ಸರಕುಗಳಿಗೆ ಬದಲು ಹೊಸ ಸರಕುಗಳು ಬಳಕೆಗೆ ಬರುತ್ತವೆ. ಸರಕುಗಳ ಗಾತ್ರ ಇದ್ದ ಹಾಗೆಯೇ ಇದ್ದರೂ ಅವುಗಳ ಗುಣ ಬದಲಾಗಿರುತ್ತದೆ. ಉದಾಹರಣೆಗೆ, ಫ಼ೋರ್ಡ್ ಕಾರನ್ನು ತೆಗೆದುಕೊಂಡರೆ ೧೯೪೭ರಲ್ಲಿ ಇದ್ದ ಹಾಗೆಯೇ ಇತ್ತೀಚಿನ ಮಾದರಿಯಿಲ್ಲ. ಹೊಸ ಮಾಡಲ್ನಲ್ಲಿ ಅನೇಕ ಬದಲಾವಣೆಗಳಾಗಿವೆ. ಆದ್ದರಿಂದ ಹಳೆಯ ಕಾರಿನ ಬೆಲೆಗೆ ಹೊಸ ಕಾರಿನ ಬೆಲೆಯನ್ನು ಹೋಲಿಸಿ, ಸೂಚ್ಯಂಕವನ್ನು ಕಂಡುಹಿಡಿಯುವುದು ಅಷ್ಟು ಸಮಂಜಸವಾಗುವುದಿಲ್ಲ.

ಸೂಚ್ಯಂಕದ ಮಹತ್ವ

[ಬದಲಾಯಿಸಿ]

ಇಷ್ಟೆಲ್ಲ ನ್ಯೂನತೆಗಳಿದ್ದರೂ, ಸೂಚ್ಯಂಕಗಳು ಅತ್ಯಂತ ಮಹತ್ವವಾದುದೆಂಬುದನ್ನು ಮರೆಯಬಾರದು. ಹಣದ ಮೌಲ್ಯವನ್ನು ಅಳತೆ ಮಾಡುವುದಕ್ಕೆ, ನಮಗಿರುವುದು ಇದೊಂದೆ ಸಾಧನ. ಇಂಗ್ಲೇಂಡಿನ ಪ್ರಸಿದ್ಧ ಅರ್ಥಶಾಸ್ತ್ರದವನಾದ 'ಜೀವನ್ಸ್' ಸೂಚ್ಯಂಕಗಳಿಂದಾಗುವ ಪ್ರಯೋಜನವನ್ನು ವಿವರಿಸುತ್ತಾನೆ. ಅವುಗಳೆಂದರೆ, ೧.ಬಹಳ ಕಾಲದ ಮೇಲೆ ಹಿಂತಿರುಗಿಸಬೇಕಾಗಿರುವ ಸಾಲಗಳನ್ನು, ಬಾಡಿಗೆ ಗುತ್ತಿಗೆಗಳನ್ನು ಸರಿಯಾಗಿ ತೀರಿಸಲು ಸೂಚ್ಯಂಕಗಳು ಸಹಾಯ ಮಾಡುತ್ತವೆ. ೨. ವ್ಯಕ್ತಿಗಳಾಗಲೀ, ಜನಾನ್ಂಗಗಳಾಗಲೀ ಬೇರೆಬೇರೆ ಕಡೆಯಿಂದ ಪಡೆಯುವ ವರಮಾನದ ಬೆಲೆ, ಕಾಲ ಸರಿದಂತೆ ಹೆಚ್ಚಾಗುತ್ತದೆಯೇ ಅಥವಾ ಕಡಿಮೆಯಾಗುತ್ತದೆಯೇ ಎನ್ನುವುದನ್ನು ಸೂಚ್ಯಂಕಗಳು ತಿಳಿಸುತ್ತವೆ. ೩.ಹಣದ ಬೆಲೆ, ಹಿಂದೆ ಅಷ್ಟು ಇತ್ತು ಈಗ ಎಷ್ಟಿದೆ ಎನ್ನುವ ತಾರತಮ್ಯಗಳನ್ನು ಕಂಡುಹಿಡಿಯಲು ಚರಿತ್ರೆಕಾರರಿಗೆ ಸೂಚ್ಯಂಕಗಳು ಸಹಾಯಮಾಡುತ್ತವೆ. ೪.ಬೆಲೆಗಳ ಏರಿಳಿತಗಳಿಂದ ಕೈಗಾರಿಕೆಗೆ, ವ್ಯಾಪಾರಕ್ಕೆ ಯಾವ ರೀತಿಯ ಲಾಭ ಉಂಟಾಗಿದೆ ಎನ್ನುವುದನ್ನು ತಿಳಿಯಲು ಸೂಚ್ಯಂಕಗಳು ನೆರವಾಗುತ್ತದೆ.

ನೋಟು ನೀಡಿಕೆಯ ಕೆಲವು ಮುಖ್ಯ ಪದ್ದತಿಗಳೆಂದರೆ; ೧. ನಿರ್ದಿಷ್ಟ ನ್ಯಾಸ ರಕ್ಷಕ ಪದ್ಧತಿ, ೨. ಪರಮ ನ್ಯಾಸ ರಕ್ಷಕ ಪದ್ಧತಿ, ೩. ಶೇಕಡ ನಿಧಿ ಪದ್ದತಿ, ೪. ಕನಿಷ್ಟ ನಿಧಿ ಪದ್ಧತಿ,

೧. ನಿರ್ದಿಷ್ಟ ನ್ಯಾಸ ರಕ್ಷಕ ಪದ್ಧತಿ ; ಈ ಪದ್ಧತಿಯ ಉದ್ದೇಶವೇನೆಂದರೆ ದೇಶಕ್ಕೆ ಎಷ್ಟು ನೋಟುಗಳು ಬೇಕಾಗುತ್ತವೆಯೋ ಅಷ್ಟನ್ನು ಮಾತ್ರ ಚಲಾವಣೆಗ ತಂದರೆ, ಜನರು ನೋಟುಗಳನ್ನು ಚಿನ್ನಕ್ಕೆ ಪರಿವರ್ತಿಸುವುದಕ್ಕೆ ಇಷ್ಟಪಡುವುದಿಲ್ಲ. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ನೋಟುಗಳನ್ನು ಚಲಾವಣೆಗೆ ತಂದಾಗ ಈ ನೋಟುಗಳನ್ನು ಪರಿವರ್ತಿಸುವುದಕ್ಕೆ ಬೇಕಾಗುವಷ್ಟು ಚಿನ್ನವಿಟ್ಟುಕೊಂಡರೆ ಸುರಕ್ಷತೆ ಇರುತ್ತದೆ. ಇದರಿಂದ ಹಣ ದುಬ್ಬರಕ್ಕೆ ಅವಕಾಶವಿರುವುದಿಲ್ಲ. ಈ ಪದ್ಧತಿಯಲ್ಲಿ ಕೆಲವು ನ್ಯೂನತೆಗಳಿವೆ, ನೋಟಿನ ನೀಡಿಕೆಯನ್ನು ಅವುಗಳ ಬೇಡಿಕೆಗೆ ತಕ್ಕ ಹಾಗೆ ಹೊಂದಾಣಿಕೆ ಮಾಡುವುದು ಸುಲಭವಲ್ಲ.ವ್ಯಾಪಾರ ವ್ಯವಹಾರಗಳು ಹೆಚ್ಚಾದಂತೆ ಹಣದ ಬೇಡಿಕೆ ಹೆಚ್ಚಾಗುತ್ತದೆ. ಹೆಚ್ಚಾಗುವ ಬೇಡಿಕೆಯನ್ನು ಪೂರೈಸುವುದಕ್ಕೆ ಕೇಂದ್ರ ಬ್ಯಾಂಕಿನ ಬಳಿ, ಚಿನ್ನ ಇಲ್ಲದಿದ್ದರೆ ತುಂಬಾ ಕಷ್ಟವಾಗುತ್ತದೆ.

೨. ಪರಮ ನ್ಯಾಸ ರಕ್ಷಕ ಪದ್ಧತಿ : ಇದರಲ್ಲಿ ಕೇಂದ್ರ ಬ್ಯಾಂಕು ಹಣವನ್ನು ಚಲಾವಣೆಗೆ ತರಬೇಕಾದ ಪಕ್ಷದಲ್ಲಿ ಕೆಲವು ಮುಖ್ಯವಾದ ತತ್ವಗಳನ್ನು ಅನುಸರಿಸಬೇಕಾಗುತ್ತದೆ.ಇದರ ಪ್ರಕಾರ ಕೇಂದ್ರ ಬ್ಯಾಂಕು ನೋಟುಗಳನ್ನು ಒಂದು ಪರಮಾವಧಿ ಮಟ್ಟದವರೆಗೆ ಹೊರಡಿಸಬಹುದು. ಈ ಪದ್ಧತಿಯ ಪ್ರಕಾರ ಎಷ್ಟು ಪ್ರಮಾಣದ ಹಣವನ್ನು ಬೇಕಾದರೂ ಜಾರಿಗೆ ತರಬಹುದಾದರು ಕೂಡ, ನೋಟಿಗೆ ಬೆಂಬಲವಾಗಿ ಚಿನ್ನ ಅಗತ್ಯವಿರುವುದಿಲ್ಲವಾದ್ದರಿಂದ ಜನರಿಗೆ ಹಣದ ಬಗ್ಗೆ ಗೌರವವಿರುವುದಿಲ್ಲ. ಆದ್ದರಿಂದ ಕೇಂದ್ರ ಬ್ಯಾಂಕು ಚಿನ್ನವನ್ನು ಆಧಾರವಾಗಿಟ್ಟುಕೊಂಡು, ಹಣವನ್ನು ಚಲಾವಣೆ ಮಾಡುವುದರಷ್ಟು ಭದ್ರವಾಗಿ ಈ ಕ್ರಮವಿರುವುದಿಲ್ಲ.

೩. ಶೇಕಡ ನಿಧಿ ಪದ್ಧತಿ : ನೋಟು ಹೊರಡಿಸುವ ಪದ್ಧತಿಯಲ್ಲಿ ಬಹಳ ಆಕರ್ಷಕವಾದ ಪದ್ಧತಿ ಶೇಕಡನಿಧಿ ಪದ್ಧತಿ. ಇದರ ಪ್ರಕಾರ ನೋಟು ಚಲಾವಣೆಯು ನಿರ್ದಿಷ್ಟ ಪ್ರಮಾಣಕ್ಕಿಂತ ಕಡಿಮೆ ಇರಬಾರದು. ಸಾಧಾರಣವಾಗಿ ಈ ರಿಸರ್ವ್ ದರವನ್ನು ಶೇ. ೨೦ ರಿಂದ ೪೦ರವರೆಗೆ ನಿಗದಿ ಮಾಡಲಾಗುತ್ತದೆ.ಹೆಚ್ಚು ನೋಟುಗಳನ್ನು ಚಲಾವಣೆಗೆ ತರಬೇಕಾದರೆ ಹೆಚ್ಚು ಚಿನ್ನ ಕೇಂದ್ರ ಬ್ಯಾಂಕಿನಲ್ಲಿ ರಿಸರ್ವ್ ಆಗಿರಬೇಕಾಗುತ್ತದೆ.

೪. ಕನಿಷ್ಟ ನಿಧಿ ಪದ್ಧತಿ : ಈ ಪದ್ಧತಿಯ ಪ್ರಕಾರ ಎಷ್ಟು ನೋಟುಗಳನ್ನು ಬೇಕಾದರೂ ಚಿನ್ನ, ಸರ್ಕಾರಿಸಾಲಪತ್ರಗಳು ಹಾಗು ಇತರ ಸಾಲಪತ್ರಗಳ ಆಧಾರದ ಮೇಲೆ ಕೇಂದ್ರ ಬ್ಯಾಂಕು ಚಲಾವಣೆಗೆ ತರಬಹುದು. ಅಂದರೆ ಕೇಂದ್ರ ಬ್ಯಾಂಕು ಒಂದು ಕನಿಷ್ಟ ಪ್ರಮಾಣದಲ್ಲಿ ಚಿನ್ನ ಮತ್ತು ವಿದೇಶಿ ಸಾಲಪತ್ರಗಳನ್ನಿಟ್ಟುಕೊಂಡಿರಬೇಕು. ಈ ಪದ್ಧತಿಯಲ್ಲಿ ಹೆಚ್ಚಿನ ಅನುಕೂಲವೆಂದರೆ ನೋಟು ಚಲಾವಣೆಗೆ ಇರುವ ಸ್ಥಿತಿಸ್ಥಾಪಕತ್ವ. ನೋಟಿನ ನೀಡಿಕೆಯನ್ನು ಎಷ್ಟು ಬೇಕಾದರೂ ಹೆಚ್ಚಿಸಿಕೊಳ್ಳಬಹುದು.