ಸದಸ್ಯ:Baby Reshma
ಡಾ| ಎನ್.ಎಸ್ ಲಕ್ಷ್ಮೀ ನಾರಾಯಣ ಭಟ್ಟ
ಅವರು ೨೯.೧೦.೧೯೩೬ರಲ್ಲಿ ಶಿವಮೊಗ್ಗದಲ್ಲಿ ಜನಿಸಿದರು. ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ದುಡಿದಿದ್ದಾರೆ. ಇವರು ಶ್ರೇಷ್ಟ ಸಾಹಿತಿ, ಪ್ರೌಢ ವಿಮರ್ಶಕ, ಜನಪ್ರಿಯ ಭಾವಗೀತಕಾರ.
ಇವರ ಕವನ ಸಂಕಲನಗಳು ವೃತ್ತ, ಚಿತ್ರಕೂಟ, ಸುಳಿ. ಇವರ ಪ್ರಸಿದ್ಧ ಧ್ವನಿಸುರುಳಿಗಳು ದೀಪಿಕಾ, ಭಾವಸಂಗಮ, ಬಾರೋ ವಸಂತ, ಅಭಿನಂದನಾ ಇತ್ಯಾದಿ. ಮಕ್ಕಳ ಧ್ವನಿ ಸುರುಳಿಗಳು ನಂದನ, ಕಿನ್ನಾರಿ, ನವಿಲುಗರಿ, ಕಿಶೋರಿ ಮುಂತಾದವು. ಹತ್ತಾರು ಸಾಹಿತ್ಯ ಸಾಧಕರ ಜೀವನ ಘಟನೆಗಳ ಬಗೆಗೆ ಬೆಳಕು ಚೆಲ್ಲುವ ಸಾಹಿತ್ಯ ರತ್ನ ಸಂಪುಟ ಕೃತಿಯನ್ನು ರಚಿಸಿದ್ದಾರೆ.
೨೦೦೦ರಲ್ಲಿ, ಹೂಸ್ಟನ್ನಿನಲ್ಲಿ ನಡೆದ ಪ್ರಥಮ ಅಮೇರಿಕಾ ವಿಶ್ವ ಕನ್ನಡ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಾಹಿತ್ಯ ಅಕಾದಮಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಇವೆಲ್ಲಾವೂ ಇವರ ಸಾಹಿತ್ಯ ಸೇವೆಗೆ ಸಂದಿವೆ.