ಸದಸ್ಯ:Yashmitha Bangera/sandbox
ಗೋಚರ
ಇಸ್ಮತ್ ಫಜೀರ್
ಬಂಟ್ವಾಳ ತಾಲೂಕಿನ ಪಜೀರು ಗ್ರಾಮದವರು. ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದಲ್ಲಿ ಡಿಪ್ಲೋಮಾ ಪಾಸು ಮಾಡಿಕೊಂಡವರು. ಸ್ವಂತ ಪ್ರಯೋಗಾಲಯದಲ್ಲಿ ವೃತ್ತಿ ನಿರತರು. ಹೀಗೆಂದರೆ ದೇಹ ಸಂಬಂಧಿ ದೋಷ ಹುಡುಕಿ ಹೇಳುವುದಕ್ಕೆ ಮೊದಲ ಆದ್ಯತೆ ಕೊಟ್ಟವರು. ಜೊತೆಗೆ ಸಾಮಾಜಿಕ ಸ್ವಾಸ್ಥ್ಯಕ್ಕೂ ಚಿಕಿತ್ಸೆ ಕೊಡಬೇಕೆಂದೇ ಪತ್ರಿಕೆ, ಬರೆಹಗಳೊಂದಿಗೆ ನಂಟು ಬೆಳೆಸಿಕೊಂಡವರು. ಪತ್ರಿಕೋದ್ಯಮ ಎಂ.ಎ ಪದವಿ ಕೂಡ ಗಳಿಸಿಕೊಂಡವರು.
ವಾರ್ತಾಭಾರತಿ, ಗೌರಿಲಂಕೇಶ, ಕರಾವಳಿ ಅಲೆ ಹಾಗೂ ಮದರಂಗಿ ಮೊದಲಾದ ದಿನ, ವಾರ, ಮಾಸಪತ್ರಿಕೆಗಳಲ್ಲಿ ವಿಚಾರ, ವಿಮರ್ಶೆ, ವಿಶೇಷ ವರದಿ ಇವರ ಬರಹಗಳು.
ಇಸ್ಮತ್ ಕೃತಿಕಾರರು ಕೂಡ. ವರದಕ್ಷಿಣೆ ವಿರುದ್ಧದ ಅಕ್ಷರ ಸಮರವೇ ಶಾಪದ ಕಣ್ಣೀರು ಇವರ ವೈದ್ಯಕೀಯ ಲೇಖನಗಳ ಸಂಕಲನವೇ ಆರೋಗ್ಯ ಸಿಂಚನ, ಟಿಪ್ಪು ಶಿವಾಜಿ ಹಾಗೂ ಜೌರಂಗಜೇಬರ ಧಾರ್ಮಿಕ ನೀತಿಯ ಕಿರು ಅಧ್ಯಯನವೇ ವಿಕೃತ ಇತಿಹಾಸದ ಬಲಿಪಶುಗಳು ಅಪರೂಪದ ಸಮಾಜ ಸೇವಕ ಹರೇಕಳ ಹಾಜಬ್ಬ, ದುರಂತ ನಾಯಕ ಮದನಿ ಮತ್ತು ಜನನಿಧಿ.