ಸದಸ್ಯ:Ronson Rebello/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೈಕ್ರೋಸಾಫ್ಟ್ ಉತ್ಪನ್ನಗಳು

ಪ್ರಪಂಚಾದ್ಯಂತ ಬಹುಪಾಲು ಜನರು ಬಳಸುವುದು ಮೈಕ್ರೋಸಾಫ್ಟ್ ಕಂಪೆನಿಯವರ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು (ಆಪರೇಟಿಂಗ್ ಸಿಸ್ಟಮ್). ಇನ್ನು ದೈನಂದಿನ ಕಾರ್ಯಚಟುವಟಿಕೆಗಳಿಗೆ ಬಳಸುವುದು ಮೈಕ್ರೋಸಾಫ್ಟ್‌ನವರದೇ ಆದ ಆಫೀಸ್ ತಂತ್ರಾಂಶಗುಚ್ಛವನ್ನು. ಜನಸಾಮಾನ್ಯರಿಗೆ ಗಣಕಗಳಲ್ಲಿ ಮುಖ್ಯವಾಗಿ ಮಾಡಬೇಕಾದ ಎಲ್ಲ ಕೆಲಸಗಳನ್ನು ವಿಂಡೋಸ್ ಮತ್ತು ಆಫೀಸ್‌ಗಳನ್ನು ಬಳಸಿ ಮಾಡಬಹುದು. ಈ ಕೆಲಸಗಳು ಯಾವುವು? ಅವುಗಳಿಗೆ ಜನರು ಬಳಸುವ ತಂತ್ರಾಂಶಗಳು (ಸಾಫ್ಟ್‌ವೇರ್) ಯಾವುವು? ಒಂದು ಗಣಕವನ್ನು ನಡೆಸುವ ಮೇಲುಸ್ತುವಾರಿಗೆ ವಿಂಡೋಸ್. ಪತ್ರ, ಪುಸ್ತಕ, ಲೇಖನ, ಇತ್ಯಾದಿಗಳ ಬೆರಳಚ್ಚು ಮತ್ತು ಪುಟವಿನ್ಯಾಸಕ್ಕೆ ವರ್ಡ್. ಹಣಕಾಸು ಮತ್ತು ಇತರೆ ಲೆಕ್ಕ ವ್ಯವಹಾರಗಳಿಗೆ ಎಕ್ಸೆಲ್. ದತ್ತಾಂಶಗಳ (ಡಾಟಾಬೇಸ್) ಸಂಗ್ರಹಣೆ ಮತ್ತು ನಿರ್ವಹಣೆಗೆ ಆಕ್ಸೆಸ್. ವಿ-ಅಂಚೆ (ಇಮೈಲ್) ಕಳುಹಿಸಲು ಮತ್ತು ಸ್ವೀಕರಿಸಲು ಔಟ್‌ಲುಕ್. ಭಾಷಣ ಕೊಡಲು ಮತ್ತು ಜೊತೆಗೆ ಸ್ಲೈಡ್‌ಶೋ ಮಾಡಲು ಪವರ್‌ಪೋಯಿಂಟ್. ಈ ವರ್ಡ್, ಎಕ್ಸೆಲ್, ಆಕ್ಸೆಸ್, ಔಟ್‌ಲುಕ್ ಮತ್ತು ಪವರ್‌ಪೋಯಿಂಟ್ ಒಟ್ಟು ಸೇರಿ ಆಫೀಸ್ ತಂತ್ರಾಂಶಗುಚ್ಛ ಆಗಿದೆ.