ವಿಷಯಕ್ಕೆ ಹೋಗು

ಸಂತ ಫ್ರಾನ್ಚಿಸ್ ಕ್ಸೇವಿಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ್ರಾನ್ಸಿಸ್ ಕ್ಸೇವಿಯರ್, ಎಸ್ಜೆ, (ಫ್ರಾನ್ಸಿಸ್ಕೊ ಡೆ ಜಾಸೊಸ ವೈ) ಒಬ್ಬ ಬಾಸ್ಕ್ ರೋಮನ್ ಕ್ಯಾಥೋಲಿಕ್ ಅವರು 7 ಏಪ್ರಿಲ್ 1506 ರಂದು ನವಾರ್ರೆ (ಸ್ಪೇನ್ ಭಾಗ) ರಾಜ್ಯದಲ್ಲಿ ಜನಿಸಿದರು. ಇವರು ಯೇಸುವಿನ ಸೊಸೈಟಿಯ ಸಹ-ಸ್ಥಾಪಕರು . ಲಯೋಲ ಸೇಂಟ್ ಇಗ್ನೇಷಿಯಸ್ ಒಡನಾಡಿ. ಅವರು ಮೊದಲ ಏಳು ಜೀಸ್ಯುಯಿಟ್ ಒಡನೆ ಬಡತನ ಮತ್ತು ಕನ್ಯತ್ವ ಪ್ರತಿಜ್ಞೆಯನ್ನು 1534 ನಲ್ಲಿ ಮಾಂಟ್ ಮಾರ್ಟ್ ನಲ್ಲಿ ತೆಗೆದುಕೊಂಡರು. ಅವರು ಏಷ್ಯಾ ಖಂಡದಲ್ಲಿ ಧರ್ಮ ಪ್ರಚಾರ ಮಾಡಿದರು.

ಪರಿಚಯ

[ಬದಲಾಯಿಸಿ]
  • ಅವರು ಮುಖ್ಯವಾಗಿ ಭಾರತದಲ್ಲಿ ಸುವಾರ್ತೆ ಕೆಲಸ ಪ್ರಭಾವಶಾಲಿಯಾಗಿದ್ದರು. ಅವರು ಅಲ್ಲಿಯವರೆಗೆ ಕ್ರಿಶ್ಚಿಯನ್ ಮಿಷನರಿಗಳು ಭೇಟಿ ನೀಡದಿರುವಂತಹ ಸ್ತಳಗಳಿಗೆ ಅಂದರೆ, ಜಪಾನ್, ಬೊರ್ನಿಯೊ, ಮಲುಕು ದ್ವೀಪಗಳು, ಮತ್ತು ಇತರ ಪ್ರದೇಶಗಳಲ್ಲಿ ಧರ್ಮ ಪ್ರಚಾರ ಮಾಡಿದರು. ಈ ಪ್ರದೇಶಗಳಲ್ಲಿ ಉತ್ತಮ ಪ್ರವರ್ತಕ ಎಂದು ಹೆಸರು ಮಾಡಲು ಸಾಧ್ಯವಾಗಲಿಲ್ಲ.
  • ಏಕೆಂದರೆ ಸ್ಥಳೀಯ ಭಾಷೆಗಳಲ್ಲಿ ಮಾತನಾಡಲು ಅವರಿಗೆ ಸಾಧ್ಯವಾಗದ ಕಾರಣ, ಅವರು ಭಾರತದಲ್ಲಿ ಗಳಿಸಿದ್ದ ಯಶಸ್ಸಿಗಿಂತ ಕಡಿಮೆ. ಕ್ಸೇವಿಯರ್ ಅವರಿಗೆ ಚೀನಾದಲ್ಲಿ ಬೋಧನೆ ಮಾಡಬೇಕೆಂಬ ಆಸೆ ತುಂಬ ಇತ್ತು. ಅದು ಅವರ ಒಂದು ಗುರಿಯು ಸಹ ಆಗಿತ್ತು. ಆದರೆ ಅವರು ಡಿಸೆಂಬರ್ 3, 1552 ಶ್ಯಾಂಗ್ ಚಿಹಾನ್ ದ್ವೀಪದಲಿ ನಿಧನರಾದರು.

ಧರ್ಮ ಪ್ರಚಾರಕರಾಗಿ

[ಬದಲಾಯಿಸಿ]
  • ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರನ್ನು 25 ಅಕ್ಟೋಬರ್ 1619 ರಂದು ಪೋಪ್ ಪಾಲ್ V ರವರು ದೈವಭಕ್ತ ಎಂದು ಪರಿಗಣಿಸಿದರು. ತದ ನಂತರ ಪೋಪ್ ಗ್ರೆಗೊರಿ XV ಅವರು ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರನ್ನು,12 ಮಾರ್ಚ್ 1622ರಲ್ಲಿ ಸಂತರೆಂದು ಘೋಷಿಸಿದರು.1624ರಲ್ಲಿ ಇವರನ್ನು ನವಾರ್ರೆಯ(ಸ್ಯಾಂಟಿಯಾಗೊ ) ಸಹ ಪೋಷಕರಾಗಿ ಮಾಡಲಾಯಿತು.
  • ಸೇಂಟ್ ಪಾಲ್ ರಂತೆ ಇವರನ್ನು ಸಹ ಒಬ್ಬ ಮಹಾನ್ ಮಿಷನರಿ ಎಂದು ಪರಿಗಣಿಸಲಾಗಿದೆ. "ಇಂಡೀಸ್ ಧರ್ಮಪ್ರಚಾರಕ," ಮತ್ತು "ಜಪಾನ್ ಧರ್ಮಪ್ರಚಾರಕ" ಎಂದು ಕರೆಯಲಾಗುತ್ತದೆ. ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರನ್ನು ಸ್ಯಾನ್ ಫರ್ಮಿನ್ ಜೊತೆ ನವಾರ್ರೆಯ ಸಹ ಸಂತ ಎಂದು ಪರಿಗಣಿಸಿದ್ದಾರೆ. ನವಾರ್ರೆ ಡೇ (ಡಿಯಾ ಡೆ ನವಾರ) ಯನ್ನು (ಸ್ಪೇನ್) ಡಿಸೆಂಬರ್ 3, 1552 ರಂದು ಆಚರಿಸಲಾಗುತದೆ.
  • ಇದನ್ನು ಸೇಂಟ್ ಫ್ರಾನ್ಸಿಸ್ ಝೇವಿಯರ್ ಸಾವಿನ ವಾರ್ಷಿಕೋತ್ಸವ ಎಂದು ಗುರುತಿಸಿದ್ದಾರೆ. ಇದು ಈ ಮಹಾನ್ ವ್ಯಕ್ತಿಯ ಒಂದು ಕಿರು ಪರಿಚಯ. ಆದರೆ ಇವರು ಮಾಡಿರುವ ಕೆಲಸಗಳು ಅಪಾರ. ಈ ಮಹಾನ್ ಸಂತರ ದೇಹ ಇನ್ನು ಕೊಳೆಯದೆ ಹಾಗೆಯೆ ಉಳಿದಿದೆ. ಇವರ ದೇಹವನ್ನು ಗೋವದಲ್ಲಿರುವ "ಬೊಮ್ ಜೆಸು"ದೇವಾಲಯದಲ್ಲಿ ಹಾಗೆಯೆ ಸಂರಕ್ಷಿಸಿಡಾಲಾಗಿದೆ. ಹಲವಾರು ಪವಾಡಗಳು ಸಹ ಇಂದಿಗು ನಡೆಯುತ್ತಿದೆ. ದೇಶ ವಿದೇಶಗಳಿಂದ ಜನರು ಈ ಮಹಾನ್ ಸಂತನ ದರ್ಶನಕೋಸ್ಕರ ಬರುತ್ತಾರೆ.