ರೆಸ್ಯೂಮ್
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ. ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ. |
ನೌಕರಿಗಾಗಿ ರೆಸ್ಯೂಮ್ ಕಳಿಸುತ್ತಿರುವಿರಾ ? ಹಾಗಾದರೆ ಅನುಭವ, ನಿಮ್ಮ ಬಗ್ಗೆ ವಿವರಗಳನ್ನು ಬರೆಯುವಾಗ ಸ್ವಲ್ಪ ಜಾಗ್ರತೆ ವಹಿಸಬೇಕು. ಸ್ನೇಹಿತರ ರೆಸ್ಯೂಮ್ ಅನ್ನು ಕಾಪಿ ಮಾಡಬೇಡಿ. ಬಹಳಷ್ಟು ಜನ ಇಲ್ಲೇ ಸಿಕ್ಕಿ ಹಾಕಿಕೊಂಡು ಬಿಡುತ್ತಾರೆ. ಅದಕ್ಕೆಂದೇ ರೆಸ್ಯೂಮ್ ನಲ್ಲಿಯ ಪ್ರತಿಯೊಂದು ಭಾಗವನ್ನು ವಿವರವಾಗಿ ಪರಿಶೀಲಿಸಿಕೊಳ್ಳಬೇಕು.
ನೆಟ್ ವರ್ಕಿಂಗ್ ಅನ್ನು ಉದ್ಯೋಗಾನ್ವೇಷಣೆಗೆ ಮಾತ್ರ ಉಪಯೋಗಿಸಬೇಕು ಎಂದು ಭಾವಿಸಬೇಡಿ. ಉದ್ಯೋಗ ಜೀವನದ ಪ್ರತಿ ಹಂತದಲ್ಲೂ ನೆಟ್ ವರ್ಕ್ ನಿಮ್ಮ ಬೆಂಬಲಕ್ಕಿರುತ್ತದೆ. ನಿಮ್ಮ ಕೆರಿಯರ್ ಅಭಿವೃದ್ಧಿಯಲ್ಲೂ ನೆರವಾಗುತ್ತದೆ.
ರೆಸ್ಯೂಮ್ ಪೂರ್ಣಗೊಳಿಸುವಾಗ ಕೆಲವು ಅಂಶಗಳನ್ನು ತಪ್ಪದೆ ನೆನಪಿನಲ್ಲಿ ಇರಿಸಿಕೊಳ್ಳಬೇಕು. ಅವುಗಳು:
- ರೆಸ್ಯೂಮ್ ಅಸಂಪೂರ್ಣವಾಗಿರಬಾರದು. - ಎಂತಹ ತಪ್ಪುಗಳಿಗೂ ಅವಕಾಶ ಇರಬಾರದು. - ಆಯ್ಕೆ ಮಾಡಿಕೊಂಡ ವೆಬ್ ಸೈಟ್ ಬಗ್ಗೆ ತಿಳಿವಳಿಕೆ ಅತ್ಯಗತ್ಯ. - ಅರ್ಹತೆ ಇರುವ ಉದ್ಯೋಗವನ್ನೇ ಆಯ್ಕೆ ಮಾಡಿಕೊಳ್ಳಿ. - ಫೋಟೋಗಳು ಇತ್ತಿಚಿನದ್ದೇ ಆಗಿರಬೇಕು. - ದೃಢೀಕರಣ ಪತ್ರಗಳನ್ನೇ ವೆಬ್ ಸೈಟ್ ನಲ್ಲೂ ದಾಖಲಿಸಿ, ಇಲ್ಲವಾದರೆ ತೊಂದರೆ ತಪ್ಪಿದ್ದಲ್ಲ.
ಸಾಮಾಜಿಕ, ಔದ್ಯೋಗಿಕ ವೆಬ್ ಸೈಟ್ ಗಳು, ಸ್ನೇಹಹಸ್ತ ಚಾಚುವುದಕ್ಕಷ್ಟೇ ಅಲ್ಲ; ವೃತ್ತಿ ಜೀವನದಲ್ಲಿ ಹೆಜ್ಜೆ ಊರುವುದಕ್ಕೂ ನೆರವಾತ್ತವೆ. ಸದ್ಯದ ಸ್ಪರ್ಧಾ ಜಗತ್ತಿನಲ್ಲಿ ಇವುಗಳ ಪಾತ್ರ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಕೆಲವು ಸಂಸ್ಥೆಗಳು ಸಹ ಅಭ್ಯರ್ಥಿಗಳಿಗೆ ಈ ಸೈಟ್ ಗಳನ್ನು ಉಪಯೋಗಿಸುತ್ತಿವೆ. ಇವುಗಳನ್ನು ಉಪಯೋಗಿಸಿಕೊಳ್ಳುವುದು ಹೇಗೆ? ಯಾವ ತಪ್ಪು ಮಾಡುತ್ತಿರುವುದರಿಂದ ಸರಿಯಾದ ಅಭ್ಯರ್ಥಿ ಎಂದು ಉದ್ಯೋಗದಾತರು ನಿರ್ಧರಿಸಬೇಕಾದಾರೆ ಏನು ಮಾಡಬೇಕು ಎನ್ನುವುದರ ಬಗ್ಗೆ ತಜ್ಞರ ಸೂಚನೆಗಳನ್ನು ಪಾಲಿಸಿದರೆ ಪ್ರಯೋಜನ ದೊರೆಯಬಹುದು ಪಾಲಿಸಿ ನೋಡಿ.
ನಿಮ್ಮ ರೆಸ್ಯೂಮ್ ನಲ್ಲಿ ಹೆಚ್ಚು ಪುಟಗಳಿವೆಯೋ ಅಥವಾ ತುಂಬಾ ಸಣ್ಣದೇ ವೀಡಿಯೋ ರೆಕಾರ್ಡಿಂಗಾ? ಅಥವಾ ಚಿತ್ರಗಳ ಸಮೇತ ಇದೆಯೋ ಹೀಗೆ ಸ್ವರೂಪದಲ್ಲಿದೆ ಎನ್ನುವುದು ಮುಖ್ಯವಲ್ಲ. ಸಾಮಾಜಿಕ , ಔದ್ಯೋಗಿಕ ವೆಬ್ ಸೈಟ್ ಗಳಲ್ಲಿ ನಿಮ್ಮನ್ನು ನೀವು ದಾಖಲಿಸಿಕೊಳ್ಳುವುದು ಮುಖ್ಯ.
ಪ್ರತಿನಿತ್ಯ ಲಕ್ಷಂತರ ಮಂದಿ ಅಭ್ಯರ್ಥಿಗಳು ಈ ವೆಬ್ ಸೈಟ್ ಗಳಲ್ಲಿ ತಮ್ಮ ರೆಸ್ಯೂಮ್ ದಾಖಲಿಸುತ್ತಿದ್ದಾರೆ ಇಂತಹ ಸೈಟ್ ಗಳೆಲ್ಲದರಲ್ಲೂ ಪ್ರವೇಶಿಸುತ್ತಿದ್ದಾರೆ. ಆದರೆ ಅದರ ನಂತರ ಅವುಗಳನ್ನು ಆಗಾಗ ಪರಿಶೀಲಿಸುವ ಕೆಲಸ ಮಾತ್ರ ಮಾಡುತ್ತಿಲ್ಲ. ಈಮೇಲ್ಸ್ ಏನಾದರು ಬಂದಿದೆಯೇ, ರೆಸ್ಸೂಮ್ ನಲ್ಲಿ ಅಪ್ ಡೇಟ್ ಮಾಡಬೇಕಾದ ಅಗತ್ಯವೇನಾದರೂ ಇದೆಯೇ ಎನ್ನುವ ವಿಷಯಗಳ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಇದೆಲ್ಲದಕ್ಕೂ ಕಾರಣ ಅಭ್ಯರ್ಥಿಗೆ ಅವುಗಳ ಬಗ್ಗೆ ಪೂರ್ಣ ಮಟ್ಟದ ತಿಳಿವಳಿಕೆ ಇಲ್ಲದಿರುವುದು. ಅವುಗಳ ಬಗ್ಗೆ ತಿಳಿವಳಿಕೆ ಬೆಳೆಸಿಕೂಂಡರೆ ಮಾತ್ರ ಉದ್ಯೋಗ ಜೀವನಕ್ಕೆ ಪ್ರವೇಸಿಸುವುದು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅರೆಬರೆ ತಿಳಿವಳಿಕೆಯಿಂದ ಇವುಗಳಿಂದ ಬಯಸಿದ ಪ್ರಯೋಜನ ದೊರೆಯುವುದಿಲ್ಲ.
ನೀವು ಪ್ರವೇಶಿಸಬೇಕು ಎಂದು ನಿರ್ಧರಿಸಿರುವ ಕ್ಷೇತ್ರಕ್ಕೆ ತಜ್ಞರು, ಅನುಭುವಸ್ತರು ಆದಂತಹವರನ್ನು ಭೇಟಿ ಮಾಡುವುದಕ್ಕೆ ಈ ವೆಬ್ ಸೈಟ್ ಗಳು ಸಹಕರಿಸುತ್ತವೆ. ಸಂಸ್ಧೆಗಳು ಎಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿವೆ. ಮಾರುಕಟ್ಟೆಯ ಪರಿಸ್ಧಿತಿ ಹೇಗಿದೆ, ಕೆರಿಯರ್ ಯಾವ ವಿಧದಲ್ಲಿರುತ್ತದೆ ಮತ್ತಿತರ ವಿಷಯಗಳನ್ನು ತಿಳಿದುಕೊಳ್ಳಬಹುದು. ಅವರು ನೀಡುವ ಸೂಚನೆಗಳಿಂದ ನಿಮಗೆ ಬಹಳ ಪ್ರಯೋಜನ ದೊರೆಯುತ್ತದೆ. ನಿಮ್ಮ ಬಗ್ಗೆ ತಿಳಿದುಕೊಳ್ಳುವುದರಿಂದ ನಿಮ್ಮನ್ನು ಯಾವುದಾದರು ಸಂಸ್ಧೆಗೆ ರೆಫರ್ ಮಾಡಬಹುದು. ಅಷ್ಟೇ ಅಲ್ಲ; ನಿಮ್ಮಂತೆಯೇ ಉದ್ಯೋಗದ ಅನ್ವೇಷಣೆಯಲ್ಲಿರುವವರನ್ನು ಭೇಟಿ ಮಾಡಬಹುದು. ಮತ್ಯ್ತಾವ ಕ್ಷೇತ್ರಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆನ್ನುವುದನ್ನು ತಿಳಿದುಕೊಳ್ಳಿ.
ನೈಪುಣ್ಯತೆ ಹೆಚ್ಚಿಸಿಕೊಳ್ಳುವುದಕ್ಕೆ ಅವರೇನು ಮಾಡುತಿದ್ದಾರೆ ಕೇಳಿ ತಿಳಿದುಕೊಳ್ಳಬಹುದು. ಈ ಸೈಟ್ ಗಳ ಮುಖಾಂತರ ಉದ್ಯೋಗಾನ್ವೇಷಣೆ ಮಾಡುವವರನ್ನು ಉದ್ಯೋಗದಾತರು ಪರಿಗಣಿಸುವುದಿಲ್ಲ ಎನ್ನುವ ಸಂದೇಹಗಳನ್ನಿಟ್ಟುಕೊಳ್ಳಬೇಡಿ. ರೆಸ್ಯೂಮ್ ಅನ್ನು ಪದೆ ಪದೆ ಕಳಿಸಬಾರದು. ಒಂದು ಸಾರಿ ಕಳಿಸಿದ್ದನ್ನು ಪುನ್ಃ ಅಪ್ ಡೇಟ್ ಮಾಡಬೇಕು. ಕೆಲವರು ನೊತನ ಕೋರ್ಸ್ ಮುಗಿಸಿದ ತಕ್ಷಣ ಬೇರೆಂದು ಹೊಸ ರೆಸ್ಯೂಮ್ ಕಳಿಸುತ್ತಾರೆ. ಹೀಗೆ ಮಾಡುವುದರಿಂದ ವೃಥಾ ಸಮಯ ಹಾಳಗುತ್ತದೆಯೇ ವಿನಃ ಪ್ರಯೋಜನವೇನೂ ದೊರೆಯುವುದಿಲ್ಲ.ಏನಾದರು ಸಂದೇಶಗಳು ಬಂದಿವೆಯೇ ಎನ್ನುವುದಕ್ಕೆ ಅಗಿಂದಾಗ್ಗೆ ಇನ್ ಬಾಕ್ಸ್ ಗಮನಿಸುತ್ತಿರಬೇಕು.