ವಿಷಯಕ್ಕೆ ಹೋಗು

ಪೂದತ್ತಾಳ್ವಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪೊಯ್ಗೈ ಆಳ್ವಾರರ ಸಮಕಾಲೀನರು. ಇವರ ಜನ್ಮಸ್ಥಳ ತಿರುಕ್ಕುಡಲ್ಮಲೈ. ಇವರ ಜನ್ಮದಿನೋತ್ಸವವನ್ನು ತುಲಾಮಾಸದ ಧನಿಷ್ಠಾ ನಕ್ಷತ್ರದ ದಿನ ಆಚರಿಸುತ್ತಾರೆ. ಇವರ ಜನ್ಮ ಮಾಧವೀ ಪುಷ್ಪವೊಂದರಲ್ಲಿ ಎಂದು ಗುರುಪರಂಪರಾಪ್ರಭಾವ ತಿಳಿಸುತ್ತದೆ. ಇವರು ರಚಿಸಿರುವ ಪ್ರಬಂಧಕ್ಕೆ ಎರಡನೆಯ ತಿರುವಂದಾದಿ ಎಂದು ಹೆಸರು. ಇದರಲ್ಲೂ ನೂರು ಬಿಡಿ ಪದ್ಯಗಳಿವೆ. ಇವರು ಶ್ರೀಮನ್ಮಹಾವಿಷ್ಣುವಿನ ಗದಾಂಶರೆಂದು ಪರಿಭಾವಿತರಾಗಿ ಪೂಜೆಗೊಳ್ಳುತ್ತಿದ್ದಾರೆ.