ವಿಷಯಕ್ಕೆ ಹೋಗು

ಆವಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಹ್ರೀಷಿಯೇಸೀ ಕುಟುಂಬಕ್ಕೆ ಸೇರಿದ ಎಹ್ರೀಷಿಯಲೇವಿಸ್ ಎಂಬ ವೈಜ್ಞಾನಿಕ ಹೆಸರಿನ ಮರ. ಇದನ್ನು ಹಾಲಿಪ್ಪೆ, ಕರ್ಪುರ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ಭಾರತದ ಎಲ್ಲ ಕಡೆಗಳಲ್ಲೂ ಬೇಸಗೆಯಲ್ಲಿ ಎಲೆಗಳುದುರುವ ಕಾಡುಗಳಲ್ಲಿ ಕಂಡುಬರುತ್ತವೆ. ಸಮುದ್ರ ಮಟ್ಟಕ್ಕೆ 950-1000ಮೀ ಎತ್ತರದಲ್ಲಿ ಬಹು ಚೆನ್ನಾಗಿ ಬೆಳೆಯುತ್ತದೆ. ಸು. 12ಮೀ ಎತ್ತರಕ್ಕೆ ಬೆಳೆಯುತ್ತದೆ. ಸುತ್ತಳತೆ 1-1.5ಮೀಗಳಷ್ಟು ಎಲೆಗಳು ಅಂಡಾಕಾರ. ಹೂವುಗಳು ಬಿಳಿ. ಹಣ್ಣುಗಳು ಸಣ್ಣ. ಬಣ್ಣ ಕಿತ್ತಳೆ. ಮರ ಘನ ಅಡಿಗೆ 10 ಕೆಜಿ. ಗಳಷ್ಟು ತೂಕವಾಗಿದ್ದು ಹಳದಿ ಇಲ್ಲವೆ ಕಂದು ಮಿಶ್ರ ಬೂದು ಬಣ್ಣವಾಗಿರುತ್ತದೆ. ಕ್ಷಾಮ ಕಾಲದಲ್ಲಿ ಇದರ ಹಣ್ಣುಗಳನ್ನು ಜನರು ತಿನ್ನುವರು. ಇದರ ಎಲೆಗಳೆಂದರೆ ದನಗಳಿಗೆ ಬಹಳ ಪ್ರೀತಿ. ಮರದಿಂದ ವ್ಯವಸಾಯದ ಉಪಕರಣಗಳನ್ನೂ ಬೆಂಕಿಪೆಟ್ಟಿಗೆಗಳನ್ನೂ ತಯಾರಿಸುತ್ತಾರೆ. ಇದೊಂದು ಉತ್ತಮ ಔಷಧ ಸಸ್ಯ. ಎಲೆಗಳ ಕಷಾಯವನ್ನು ಉದರಸಂಬಂಧ ವ್ಯಾಧಿಗಳಿಗೂ ಕೆಮ್ಮಿಗೂ ಉಪಯೋಗಿಸುತ್ತಾರೆ. ಬೇರಿನ ಕಷಾಯವನ್ನು ಉಪದಂಶ (ಸಿಫಿಲಿಸ್), ಗೊನೊರಿಯ ಮತ್ತಿತರ ಮೇಹ ರೋಗಗಳಿಗೆ ಉಪಯೋಗಿಸುತ್ತಾರೆ. ಬತ್ತದ ಗದ್ದೆಗಳಿಗೆ ಹೊಂಗೆ ಎಲೆಯೊಡನೆ ಇದರ ಎಲೆಗಳನ್ನೂ ಬೆರೆಸಿ ಹೂತು ಹಸಿರು ಗೊಬ್ಬರ ತಯಾರಿಸುತ್ತಾರೆ.

"https://kn.wikipedia.org/w/index.php?title=ಆವಕ್&oldid=615110" ಇಂದ ಪಡೆಯಲ್ಪಟ್ಟಿದೆ