ವಿಷಯಕ್ಕೆ ಹೋಗು

ಗಿನಿ ಖಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪಶ್ಚಿಮ ಆಫ್ರಿಕದ ಐವರಿ ಕೋಸ್ಟ್ ನಿಂದ ಗಬಾನ್ವರೆಗಿನ ಪ್ರದೇಶದ ಮಗ್ಗುಲಿಗೆ ಮತ್ತು ಪೂ.ರೇ. 7 ಡಿಗ್ರಿಯ ಪೂರ್ವಕ್ಕೆ ಇರುವ ದಕ್ಷಿಣ ಅಟ್ಲಾಂಟಿಕ್ ಸಾಗರ ಭಾಗ. ಬೆನಿನ್ ಕೊಲ್ಲಿಯಿಂದ ದಕ್ಷಿಣಕ್ಕೆ ಸಾಗಿ, ನೈಜರ್ ಮುಖಜಭೂಮಿಯಿಂದ ಪೂರ್ವಾಭಿಮುಖವಾಗಿ ಮುಂದುವರಿಯುವ ಕಡಲ ಕರೆ ಈ ಖಾರಿಯ ಮೂಲೆಯಿಂದ ಮುಂದಕ್ಕೆ ದಕ್ಷಿಣದ ಕಡೆಗೆ ತಿರುಗುತ್ತದೆ. ಖಾರಿಯ ಮೂಲೆಯಲ್ಲಿ-ಮುಖ್ಯ ಭೂಪ್ರದೇಶದಲ್ಲಿರುವ ಕ್ಯಾಮರೂನ್ ಪರ್ವತಕ್ಕೆ ಎದುರು-ಹಲವು ಜ್ವಾಲಾಮುಖೀಯ ದ್ವೀಪಗಳಿವೆ. ಆನೊವಾನ್ನಿಂದ ಫರ್ನಾಂಡೋ ಪೋ ವರೆಗೆ ಈ ದ್ವೀಪಗಳು ಈಶಾನ್ಯಕ್ಕೆ ಹಬ್ಬಿವೆ. ಈ ಖಾರಿಯ ಮೂಲೆಯಲ್ಲಿರುವುದೇ ಬಯಾಫ್ರಕೊಲ್ಲಿ. ಪಶ್ಚಿಮದ ಕಡೆಯಿಂದ ಹರಿದು ಬರುವ ಗಿನಿ ಉಷ್ಣೋದಕ ಪ್ರವಾಹ ಎಲ್ಲಿ ಹಿಂದಕ್ಕೆ ತಿರುಗಿ, ತಣ್ಣಗಿನ ದಕ್ಷಿಣ ಸಮಭಾಜಕೀಯ ಪ್ರವಾಹದೊಂದಿಗೆ ಸೇರುತ್ತದೆ. ಆದ್ದರಿಂದ ಈ ಖಾರಿಯ ಉತ್ತರ ದಕ್ಷಿಣ ಅಂಚುಗಳಲ್ಲಿಯ ಮೇಲ್ಪದರದ ನೀರಿನ ಉಷ್ಣತೆಯಲ್ಲಿ ವ್ಯತ್ಯಾಸಗಳುಂಟು. ಇದರಿಂದ ಕರಾವಳಿಯ ವಾಯುಗುಣದಲ್ಲೂ ಭಿನ್ನತೆಯಿರುತ್ತದೆ. ಕರಾವಳಿಯಿಂದ 30 ಕಿಮೀಗಳಿಂದಾಚೆಗೆ ಕಡಲು ಬಲು ಆಳವಾಗಿದೆ.