ವಿಷಯಕ್ಕೆ ಹೋಗು

ಡೇವಿಡ್ ಗಾರ್ನೆಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗಾರ್ನೆಟ್, ಡೇವಿಡ್ ಇಂದ ಪುನರ್ನಿರ್ದೇಶಿತ)

ಡೇವಿಡ್ ಗಾರ್ನೆಟ್, (1892-1981). ಇಂಗ್ಲಿಷ್ ಕಾದಂಬರಿಕಾರ.

ಬದುಕು

[ಬದಲಾಯಿಸಿ]

ಹುಟ್ಟಿದ್ದು ಬ್ರೈಟನ್ನಲ್ಲಿ. ಪಿತಾಮಹ ರಿಚರ್ಡ್ ಗಾರ್ನೆಟ್ ಪ್ರಸಿದ್ಧ ಗ್ರಂಥಪಾಲ. ತಂದೆ ಎಡ್ವರ್ಡ್ ಗಾರ್ನೆಟ್ ನಾಟಕಕಾರ. ತಾಯಿ ಕಾನ್ಸಟೆನ್ಸ ರಷ್ಯನ್ ಕಾದಂಬರಿಗಳ ಅನುವಾದಕಿ. ಹೀಗಾಗಿ ಈತ ಸಾಹಿತ್ಯಕ ವಾತಾವರಣದಲ್ಲೇ ಬೆಳೆದ. ಈತನ ವಿದ್ಯಾಭ್ಯಾಸ ದಕ್ಷಿಣ ಕೆನ್ಸಿಂಗ್ಟನ್ನಿನ ರಾಯಲ್ ಕಾಲೇಜಿನಲ್ಲಿ ನಡೆಯಿತು. ಅಲ್ಲಿ ಐದು ವರ್ಷ ಸಸ್ಯವಿಜ್ಞಾನವನ್ನು ಅಭ್ಯಸಿಸಿದ. ಲಂಡನ್ನಿನ ಟ್ಯುಟೋರಿಯಲ್ ಕಾಲೇಜಿನ ವಿದ್ಯಾರ್ಥಿ ಯಾಗಿದ್ದಾಗ ಬ್ರಿಟಿಷರ ಕೈದಿಯಾಗಿದ್ದ ವಿನಾಯಕ ಸಾವರ್ಕರರನ್ನು ಬಿಡಿಸಲು ನಡೆದ ಗುಪ್ತಚರ್ಯೆಯಲ್ಲಿ ಈತ ಭಾಗವಹಿಸಿದ್ದ. 1919ರಲ್ಲಿ ಸೊಹೊನಲ್ಲಿ ಪುಸ್ತಕಗಳ ಅಂಗಡಿಯೊಂದನ್ನು ತೆರೆದ.

ಈತನ ಮೊದಲ ಪುಸ್ತಕ ಲೇಡಿ ಇನ್ಟು ಫಾಕ್ಸ್ (1923) ಒಂದು ಕಾದಂಬರಿ. ಇದರಲ್ಲಿ ಹೆಂಡತಿಯೊಬ್ಬಳು ನರಿಯಾಗಿ ಮಾರ್ಪಾಟಾದ ಘಟನೆಯೊಂದನ್ನವಲಂಬಿಸಿದಂತೆ ಕಲ್ಪಿತ ಕಥೆಯೊಂದನ್ನು ಹೆಣೆದಿದ್ದಾನೆ. ಈ ಕಾದಂಬರಿ ಈತನಿಗೆ ಹತಾರ್ನ್ಡನ್ ಮತ್ತು ಟೇಟ್ ಮೆಮೊರಿಯಲ್ ಬಹುಮಾನಗಳನ್ನು ತಂದುಕೊಟ್ಟಿತು (1923). ಎ ಮ್ಯಾನ್ ಇನ್ ದಿ ಜೂಂ (1924), ದಿ ಸೆಯ್ಲಲರ್ಸ್ ರಿಟರ್ನ್( 1925). ಗೊ ಷಿ ಮಸ್ಟ ! (1927), ನೊ ಲವ್ (1929), ದಿ ಗ್ರ್ಯಾಸ್ಹಾರ್ಪರ್ ಕಮ್ (1931)-ಇವು ಈತನ ಇತರ ಕಾದಂಬರಿಗಳು. ದಿ ಗೋಲ್ಡನ್ ಎಕೊ (1953) ಮತ್ತು ಫ್ಲವರ್ ಆಫ್ ದಿ ಫಾರೆಸ್ಟ್ (1955)-ಇವು ಈತನ ಆತ್ಮವೃತ್ತಗಳು. ಎ ಟೆರಿಬಲ್ ಡೆ (1932) ಎಂಬುದು ಸಣ್ಣಕತೆಗಳ ಸಂಕಲನ. 1952 ರಲ್ಲಿ ಈತನಿಗೆ ಸಿ.ಬಿ.ಇ ಪದವಿ ಲಭಿಸಿತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: