ಗಾರ್ಡಾ ಸರೋವರ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಗಾರ್ಡಾ ಸರೋವರ
[ಬದಲಾಯಿಸಿ]ಉತ್ತರ ಇಟಲಿಯಲ್ಲಿರುವ ಅತ್ಯಂತ ದೊಡ್ಡ ಸರೋವರ. ಇದಕ್ಕೆ ಬೆನಾಕೋ ಎಂದು ಹೆಸರುಂಟು. ವೆನೇಟ್ಸ್ಯಾ ಟ್ರಿಡೇಂಟೀನಾದ ದಕ್ಷಿಣಕ್ಕೆ, ಪ್ಯೆಮಾಂಟೆ ವಲಯದಲ್ಲಿದೆ. ಉದ್ದ 54 ಕಿಮೀ ಗರಿಷ್ಠ ಅಗಲ 16.8 ಕಿಮೀ ವಿಸ್ತೀರ್ಣ ಸು.350.ಚ.ಕಿ.ಮೀ. ಗರಿಷ್ಠ ಆಳ 335.5 ಮೀ ಇದು ಸಮುದ್ರ ಮಟ್ಟದಿಂದ 63.5 ಮೀ ಎತ್ತರದಲ್ಲಿದೆ. ಉತ್ತರದಲ್ಲಿ ಕಡಿದಾದ ಪರ್ವತಗಳೂ ದಕ್ಷಿಣದಲ್ಲಿ ಚಿಕ್ಕ ಗುಡ್ಡಗಳೂ ಇದನ್ನು ಸುತ್ತುವರಿದಿವೆ. ಈ ಸರೋವರಕ್ಕೆ ನೀರು ಪುರೈಕೆ ಉತ್ತರದ ಸಾರ್ಕೊ ತೊರೆಯಿಂದ; ಸರೋವರದ ನೀರು ಆಗ್ನೇಯದಲ್ಲಿಯ ಮಿನ್ಶಿಯೋ ನದಿಯ ಮೂಲಕ ಹೊರಹರಿಯುತ್ತದೆ. ಆಂಡೀಸ್ ನದಿಯ ದಕ್ಷಿಣ ಪಾತ್ರದ ಭಾಗವೇ ಗಾರ್ಡಾ ಸರೋವರ ಪ್ರದೇಶ ಎನ್ನಲಾಗಿದೆ. ಸದ್ಯದಲ್ಲಿ ಆಂಡೀಸ್ ನದಿ ಈ ಸರೋವರದಿಂದ ಪ್ರತ್ಯೇಕವಾಗಿ ದೂರದಲ್ಲಿ ಮಾಂಟೆಬಾಲ್ಡೊ ಕಡೆಗೆ ಹರಿಯುತ್ತದೆ. ಸರೋವರಕ್ಕೆ ಅಂಚು ಕಟ್ಟಿದಂತೆ ನೆಟ್ಟಿರುವ ಸಾಲು ಮರಗಳಿಂದ ಕೂಡಿರುವ ಸುತ್ತಣ ಪ್ರದೇಶ ಸುಂದರವಾಗಿದೆ. ಇದು ಪ್ರವಾಸಿಗಳನ್ನು ಆಕರ್ಷಿಸಿದೆ. ಪಶ್ಚಿಮ ಮತ್ತು ದಕ್ಷಿಣ ಕಡೆಯ ತೀರಪ್ರದೇಶದ ವಾಯುಗುಣ ಚಳಿಗಾಲದಲ್ಲೂ ಹಿತಕರ. ಈ ಸರೋವರದಲ್ಲಿ ಅನೇಕ ಬಗೆಯ ಮೀನುಗಳು ಹೇರಳವಾಗಿ ಸಿಕ್ಕುತ್ತವೆ. ಈ ಕಾರಣದಿಂದ ಸರೋವರದ ದಂಡೆಯ ಮೇಲೆ ಅನೇಕ ಪಟ್ಟಣಗಳು ಬೆಳೆದಿವೆ. ಪೆಸ್ಕ್ಯೇರಾ, ಡೆಸೆನ್ಸಾನೊ, ಸ್ಯಾಲೊ, ಗಾಗಾರ್ನನೊ, ರೀವಾ, ಗಾರ್ಡಾ, ಬಾರ್ಡೊಲಿನೊ - ಇವು ಮುಖ್ಯವಾದವು.